ಹತ್ತು ಹೊಸ ನಗರಗಳಿಗೆ ಜೆಡ್ಎಸ್ ಇವಿ ಕಾರು ಮಾರಾಟ ಜಾಲ ವಿಸ್ತರಿಸಿದ ಎಂಜಿ ಮೋಟಾರ್

ದೇಶಾದ್ಯಂತ ಎಲೆಕ್ಟ್ರಿಕ್ ಕಾರುಗಳ ಮಾರಾಟ ಪ್ರಕ್ರಿಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಅತ್ಯತ್ತಮ ಮೈಲೇಜ್ ಪ್ರೇರಿತ ಕಾರು ಪೈಕಿ ಒಂದಾಗಿರುವ ಎಂಜಿ ಮೋಟಾರ್ ನಿರ್ಮಾಣದ ಜೆಡ್ಎಸ್ ಇವಿ ಎಸ್‌ಯುವಿ ಕಾರು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಜೆಡ್ಎಸ್ ಇವಿ ಕಾರು ಮಾರಾಟ ಜಾಲ ವಿಸ್ತರಿಸಿದ ಎಂಜಿ ಮೋಟಾರ್

2020ರ ದೆಹಲಿ ಆಟೋ ಎಕ್ಸ್‌ಪೋ ನಂತರ ಜೆಡ್ಎಸ್ ಇವಿ ಕಾರಿನ ವಿತರಣೆಯನ್ನು ಆರಂಭಿಸಿರುವ ಎಂಜಿ ಮೋಟಾರ್ ಕಂಪನಿಯು ಹ್ಯುಂಡೈ ಕೊನಾ ಇವಿ ಕಾರಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು ಮಾರಾಟ ವ್ಯಾಪ್ತಿಯನ್ನು ವಿಸ್ತರಣೆ ಮಾಡುತ್ತಿದೆ. ಆರಂಭದಲ್ಲಿ ದೇಶದ ಪ್ರಮುಖ 11 ನಗರಗಳಲ್ಲಿ ಜೆಡ್ಎಸ್ ಇವಿ ಮಾರಾಟ ಆರಂಭಿಸಿದ್ದ ಎಂಜಿ ಕಂಪನಿಯು ಇದೀಗ ಮತ್ತೆ 10 ಹೊಸ ನಗರಗಳಲ್ಲಿ ಜೆಡ್ಎಸ್ ಇವಿ ಮಾರಾಟ ವಿಸ್ತರಣೆ ಮಾಡಿದ್ದು, ಒಟ್ಟು 21 ನಗರಗಳಲ್ಲಿ ಜೆಡ್ಎಸ್ ಇವಿ ಖರೀದಿಗೆ ಲಭ್ಯವಿದೆ.

ಜೆಡ್ಎಸ್ ಇವಿ ಕಾರು ಮಾರಾಟ ಜಾಲ ವಿಸ್ತರಿಸಿದ ಎಂಜಿ ಮೋಟಾರ್

ಕರ್ನಾಟಕದಲ್ಲಿ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಖರೀದಿಗೆ ಲಭ್ಯವಿದ್ದು, ಸಾರ್ವಜನಿಕ ಚಾರ್ಜಿಂಗ್ ನಿಲ್ದಾಣಗಳ ಲಭ್ಯತೆ ಆಧಾರದ ಮೇಲೆ ಇವಿ ಕಾರುಗಳ ಮಾರಾಟ ವ್ಯಾಪ್ತಿಯನ್ನು ವಿಸ್ತರಣೆ ಮಾಡಲಾಗುತ್ತಿದೆ.

ಜೆಡ್ಎಸ್ ಇವಿ ಕಾರು ಮಾರಾಟ ಜಾಲ ವಿಸ್ತರಿಸಿದ ಎಂಜಿ ಮೋಟಾರ್

ಜೆಡ್ಎಸ್ ಎಲೆಕ್ಟ್ರಿಕ್ ಕಾರು ಸದ್ಯ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಎಕ್ಸೈಟ್ ಮಾದರಿಯ ಬೆಸ್ ವೆರಿಯೆಂಟ್ ಮಾದರಿಯಾಗಿ ಮತ್ತು ಎಕ್ಸ್‌ಕ್ಲೂಸಿವ್ ವೆರಿಯೆಂಟ್ ಹೈ ಎಂಡ್ ಮಾದರಿಯಾಗಿ ಮಾರಾಟವಾಗುತ್ತಿದೆ.

ಜೆಡ್ಎಸ್ ಇವಿ ಕಾರು ಮಾರಾಟ ಜಾಲ ವಿಸ್ತರಿಸಿದ ಎಂಜಿ ಮೋಟಾರ್

ಜೆಡ್ಎಸ್ ಇವಿ ಕಾರಿನ ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಎಕ್ಸೈಟ್ ಆವೃತ್ತಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 20.58 ಲಕ್ಷ ಮತ್ತು ಟಾಪ್ ಎಂಡ್ ಆವೃತ್ತಿಗೆ ರೂ.23.58 ಲಕ್ಷ ನಿಗದಿ ಪಡಿಸಲಾಗಿದ್ದು, ಬಿಡುಗಡೆಯ ಸಂದರ್ಭದಲ್ಲಿ ಮೊದಲ ಬಾರಿಗೆ ಬುಕ್ ಮಾಡಿದ್ದ 1 ಸಾವಿರ ಗ್ರಾಹಕರಿಗೆ ಬರೋಬ್ಬರಿ ರೂ.1 ಲಕ್ಷ ಆಫರ್ ನೀಡಲಾಗಿತ್ತು. ಆದರೆ ಇದೀಗ ಯಾವುದೇ ಆಫರ್ ನೀಡುತ್ತಿಲ್ಲ.

ಜೆಡ್ಎಸ್ ಇವಿ ಕಾರು ಮಾರಾಟ ಜಾಲ ವಿಸ್ತರಿಸಿದ ಎಂಜಿ ಮೋಟಾರ್

ಬ್ಯಾಟರಿ ಸಾಮರ್ಥ್ಯ

ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎರಡು ವೆರಿಯೆಂಟ್‌ಗಳಲ್ಲೂ 44.5kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದೆ. ಈ ಮೂಲಕ ಒಂದು ಬಾರಿ ಪೂರ್ಣಪ್ರಮಾಣದಲ್ಲಿ ಚಾರ್ಜ್ ಮಾಡಿದ್ದಲ್ಲಿ ಗರಿಷ್ಠ 340 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಮೂಲಕ ಕೇವಲ 50 ನಿಮಿಷಗಳಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹತ್ತು ಹೊಸ ನಗರಗಳಿಗೆ ಜೆಡ್ಎಸ್ ಇವಿ ಕಾರು ಮಾರಾಟ ವಿಸ್ತರಿಸಿದ ಎಂಜಿ ಮೋಟಾರ್

ಭಾರತದಲ್ಲಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಇದುವರೆಗೆ ಸುಮಾರು 3 ಸಾವಿರಕ್ಕೂ ಅಧಿಕ ಬೇಡಿಕೆ ಪಡೆದುಕೊಂಡಿದ್ದು, ಸುಮಾರು 1 ಸಾವಿರ ಯುನಿಟ್‌ಗಳನ್ನು ಈಗಾಗಲೇ ಉತ್ಪಾದನೆ ಮಾಡಿದೆ. ಮುಂಬರುವ ದಿನಗಳಲ್ಲಿ ಉತ್ಪಾದನಾ ಪ್ರಮಾಣ ದ್ವಿಗುಣಗೊಳಿಸಲಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಲಾಗುತ್ತಿದೆ.

ಹತ್ತು ಹೊಸ ನಗರಗಳಿಗೆ ಜೆಡ್ಎಸ್ ಇವಿ ಕಾರು ಮಾರಾಟ ವಿಸ್ತರಿಸಿದ ಎಂಜಿ ಮೋಟಾರ್

ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ವೆರಿಯೆಂಟ್ 400 ಕಿ.ಮೀ ಅಧಿಕ ಮೈಲೇಜ್ ಪ್ರೇರಿತ ಬ್ಯಾಟರಿ ಸೌಲಭ್ಯವನ್ನು ಪಡೆದುಕೊಳ್ಳಲಿದ್ದು, ಮೈಲೇಜ್‌ಗೆ ತಕ್ಕಂತೆ ಕಾರಿನ ಬೆಲೆ ಕೂಡಾ ತುಸು ದುಬಾರಿಯಾಗಿರಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹತ್ತು ಹೊಸ ನಗರಗಳಿಗೆ ಜೆಡ್ಎಸ್ ಇವಿ ಕಾರು ಮಾರಾಟ ವಿಸ್ತರಿಸಿದ ಎಂಜಿ ಮೋಟಾರ್

ಜೆಡ್ಎಸ್ ಎಲೆಕ್ಟ್ರಿಕ್ ಕಾರು ಖರೀದಿಗೆ ಮುಂದಾಗುತ್ತಿರುವ ಬಹುತೇಕ ಗ್ರಾಹಕರು ಹೆಚ್ಚಿನ ಮಟ್ಟದ ಮೈಲೇಜ್ ರೇಂಜ್ ಹೊಂದಿರುವ ಮಾದರಿಯ ಖರೀದಿಗೆ ಬೇಡಿಕೆ ಸಲ್ಲಿಸುತ್ತಿದ್ದು, ಹೊಸ ಮಾದರಿಯನ್ನು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುವ ಯೋಜನೆ ರೂಪಿಸಿದೆ.

Most Read Articles

Kannada
English summary
MG ZS EV Launched In 10 New Cities. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X