ವಿದೇಶಿ ಮಾರುಕಟ್ಟೆಗಳಿಗಾಗಿ ಹೈಬ್ರಿಡ್ ಎಕ್ಸ್‌ಪ್ಯಾಂಡರ್ ಅಭಿವೃದ್ದಿಪಡಿಸಿದ ಮಿಟ್ಸುಬಿಷಿ

ಜಪಾನ್ ವಾಹನ ತಯಾರಕ ಕಂಪನಿಯಾದ ಮಿಟ್ಸುಬಿಷಿ ಕಂಪನಿಯು ಮೊದಲ ಬಾರಿಗೆ ತನ್ನ ಎಂಪಿವಿ ಆವೃತ್ತಿಯಾದ ಎಕ್ಸ್‌ಪ್ಯಾಂಡರ್ ಮಾದರಿಯಲ್ಲಿ ಹೈಬ್ರಿಡ್ ಮಾದರಿಯ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಕಾರಿನ ಬಿಡುಗಡೆ ಕುರಿತು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ಬಹಿರಂಗಪಡಿಸಿದೆ.

ವಿದೇಶಿ ಮಾರುಕಟ್ಟೆಗಳಿಗಾಗಿ ಹೈಬ್ರಿಡ್ ಎಕ್ಸ್‌ಪ್ಯಾಂಡರ್ ಅಭಿವೃದ್ದಿಪಡಿಸಿದ ಮಿಟ್ಸುಬಿಷಿ

ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಕಾರು ಮಾರಾಟ ಜಾಲ ಹೊಂದಿರುವ ಮಿಟ್ಸುಬಿಷಿ ಕಂಪನಿಯು ಡೀಸೆಲ್ ಮತ್ತು ಹೈಬ್ರಿಡ್ ಕಾರು ಮಾದರಿಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ತನ್ನ ಜನಪ್ರಿಯ ಎಂಪಿವಿ ಕಾರು ಮಾದರಿಯಾದ ಎಕ್ಸ್‌ಪ್ಯಾಂಡರ್‌ನಲ್ಲೂ ಇದೀಗ ಹೈಬ್ರಿಡ್ ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ. ಭಾರತದಲ್ಲಿ ಸದ್ಯ ಈ ಕಾರು ಮಾರಾಟಕ್ಕೆ ಲಭ್ಯವಿಲ್ಲವಾದರೂ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಮಿಟ್ಸುಬಿಷಿ ಹೊಸ ಕಾರುಗಳ ಪಟ್ಟಿಯಲ್ಲಿದ್ದು, ಸದ್ಯ ಇಂಡೋನೇಷಿಯಾ ಮತ್ತು ಮಲೇಷಿಯಾದಲ್ಲಿ ಉತ್ತಮ ಬೇಡಿಕೆಯುಳ್ಳ ಕಾರು ಮಾದರಿಯಾಗಿದೆ.

ವಿದೇಶಿ ಮಾರುಕಟ್ಟೆಗಳಿಗಾಗಿ ಹೈಬ್ರಿಡ್ ಎಕ್ಸ್‌ಪ್ಯಾಂಡರ್ ಅಭಿವೃದ್ದಿಪಡಿಸಿದ ಮಿಟ್ಸುಬಿಷಿ

ಸದ್ಯ ಎಕ್ಸ್‌ಪ್ಯಾಂಡರ್ ಕಾರು ಮಾದರಿಯ ಡೀಸೆಲ್ ಮತ್ತು ಪೆಟ್ರೋಲ್ ಎರಡು ಮಾದರಿಗಳಲ್ಲೂ ಮಾರಾಟಕ್ಕೆ ಲಭ್ಯವಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ಹೊಸ ಕಾರು 1.5-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು ಸೆಲ್ಪ್ ಚಾರ್ಜ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ವಿದೇಶಿ ಮಾರುಕಟ್ಟೆಗಳಿಗಾಗಿ ಹೈಬ್ರಿಡ್ ಎಕ್ಸ್‌ಪ್ಯಾಂಡರ್ ಅಭಿವೃದ್ದಿಪಡಿಸಿದ ಮಿಟ್ಸುಬಿಷಿ

ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಪಜೆರೊ ಎಸ್‌ಯುವಿ ಕಾರು ಮಾದರಿಯನ್ನು ಹೊರತುಪಡಿಸಿ ಇನ್ನುಳಿದ ಕಾರು ಮಾರಾಟದಲ್ಲಿ ಅಷ್ಟಾಗಿ ಮುಂಚೂಣಿ ಹೊಂದಿರದ ಮಿಟ್ಸುಬಿಷಿ ಕಂಪನಿಯು ಹೊಸ ಬಂಡವಾಳ ಹೂಡಿಕೆಯೊಂದಿಗೆ ಬೃಹತ್ ಯೋಜನೆ ಚಾಲನೆ ನೀಡುತ್ತಿದ್ದು, ದೇಶದ ಅತಿ ದೊಡ್ಡ ವಾಹನ ಉತ್ಪಾದನಾ ಬಿಡಿಭಾಗಗಳ ಕಂಪನಿಯೊಂದು ಮಿಟ್ಸುಬಿಷಿ ಹೊಸ ಕಾರು ಉತ್ಪಾದನೆ ಮೇಲೆ ಹೂಡಿಕೆಗೆ ಒಪ್ಪಿಗೆ ಸೂಚಿಸಿದೆ.

ವಿದೇಶಿ ಮಾರುಕಟ್ಟೆಗಳಿಗಾಗಿ ಹೈಬ್ರಿಡ್ ಎಕ್ಸ್‌ಪ್ಯಾಂಡರ್ ಅಭಿವೃದ್ದಿಪಡಿಸಿದ ಮಿಟ್ಸುಬಿಷಿ

ಹೊಸ ಮಾದರಿಯ ಕಾರುಗಳ ಬಿಡುಗಡೆಗಾಗಿ ಮೊದಲ ಹಂತದಲ್ಲಿ ರೂ.500 ಕೋಟಿ ಬಂಡವಾಳ ಹೂಡಿಕೆ ಮಾಡಲಾಗುತ್ತಿದ್ದು, ಹಂತ ಹಂತವಾಗಿ ಬಂಡವಾಳ ಪ್ರಮಾಣವನ್ನು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ.

ವಿದೇಶಿ ಮಾರುಕಟ್ಟೆಗಳಿಗಾಗಿ ಹೈಬ್ರಿಡ್ ಎಕ್ಸ್‌ಪ್ಯಾಂಡರ್ ಅಭಿವೃದ್ದಿಪಡಿಸಿದ ಮಿಟ್ಸುಬಿಷಿ

ಹೊಸ ಬಂಡವಾಳ ಹೂಡಿಕೆಯೊಂದಿಗೆ ಕಾರು ಉತ್ಪಾದನಾ ಸಾಮಾರ್ಥ್ಯವನ್ನು ಹೆಚ್ಚಿಸಲಿರುವ ಮಿಟ್ಸುಬಿಷಿ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿರುವ ಪಜೆರೊ ಸ್ಪೋರ್ಟ್ಸ್ ಮತ್ತು ಔಟ್‌ಲ್ಯಾಂಡರ್ ಜೊತೆಗೆ ಮತ್ತಷ್ಟು ಹೊಸ ಎಸ್‌ಯುವಿ ಮತ್ತು ಎಂಪಿವಿ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ವಿದೇಶಿ ಮಾರುಕಟ್ಟೆಗಳಿಗಾಗಿ ಹೈಬ್ರಿಡ್ ಎಕ್ಸ್‌ಪ್ಯಾಂಡರ್ ಅಭಿವೃದ್ದಿಪಡಿಸಿದ ಮಿಟ್ಸುಬಿಷಿ

ಮಾಹಿತಿಗಳ ಪ್ರಕಾರ, ಮಿಟ್ಸುಬಿಷಿ ಕಂಪನಿಯು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಒಟ್ಟು ನಾಲ್ಕು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದ್ದು, ಹೊಸ ಕಾರುಗಳಲ್ಲಿ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಸಹ ಸೇರಿದೆ.

ವಿದೇಶಿ ಮಾರುಕಟ್ಟೆಗಳಿಗಾಗಿ ಹೈಬ್ರಿಡ್ ಎಕ್ಸ್‌ಪ್ಯಾಂಡರ್ ಅಭಿವೃದ್ದಿಪಡಿಸಿದ ಮಿಟ್ಸುಬಿಷಿ

ಸಬ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೊಸ್ ಕಾರುಗಳಿಗೆ ಪೈಪೋಟಿ ಬಿಡುಗಡೆಯಾಗಲಿದ್ದರೆ ಎಂಪಿವಿ ಮಾದರಿಯು ಮಾರುತಿ ಸುಜುಕಿ ಎರ್ಟಿಗಾ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ವಿದೇಶಿ ಮಾರುಕಟ್ಟೆಗಳಿಗಾಗಿ ಹೈಬ್ರಿಡ್ ಎಕ್ಸ್‌ಪ್ಯಾಂಡರ್ ಅಭಿವೃದ್ದಿಪಡಿಸಿದ ಮಿಟ್ಸುಬಿಷಿ

ಇನ್ನುಳಿದ ಎರಡು ಕಾರುಗಳಲ್ಲಿ ಒಂದು 5 ಸೀಟರ್ ಐಷಾರಾಮಿ ಎಸ್‌ಯುವಿ ಮಾದರಿಯಾಗಿದ್ದರೆ ಫಾರ್ಚೂನರ್ ಕಾರಿಗೆ ಪೈಪೋಟಿಯಾಗಿ 7 ಸೀಟರ್ ಎಸ್‌ಯುವಿಯೊಂದು ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಯೋಜನೆ ಅಡಿ ಅಭಿವೃದ್ದಿಯಾದ ಮೊದಲ ಕಾರು ಇದೇ ವರ್ಷಾಂತ್ಯದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

Most Read Articles

Kannada
English summary
Mitsubishi Announced Hybrid Electric Xpander MPV Launch. Read in Kannada.
Story first published: Tuesday, July 28, 2020, 19:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X