ಮುಂಗಾರು ಸರ್ವೀಸ್ ಯೋಜನೆ ಘೋಷಿಸಿದ ಮಾರುತಿ ಸುಜುಕಿ

ಭಾರತದ ನಂ 1 ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ತನ್ನ ಗ್ರಾಹಕರಿಗಾಗಿ ಮಾನ್ಸೂನ್ ಅಭಿಯಾನವನ್ನು ಘೋಷಿಸಿದೆ. ಈ ಯೋಜನೆಯಡಿಯಲ್ಲಿ ಮಳೆಗಾಲದ ಪ್ರಯಾಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಕಾರುಗಳನ್ನು ಸಿದ್ದಪಡಿಸಲಾಗುವುದು.

ಮುಂಗಾರು ಸರ್ವೀಸ್ ಯೋಜನೆ ಘೋಷಿಸಿದ ಮಾರುತಿ ಸುಜುಕಿ

ಇದಕ್ಕಾಗಿ ಕಂಪನಿಯು ದೇಶಾದ್ಯಂತ ವಾಹನಗಳ ತಪಾಸಣೆ ನಡೆಸಲು ಕ್ಯಾಂಪ್ ಗಳನ್ನು ತೆರೆಯಲಿದೆ. ಮಾರುತಿ ಸುಜುಕಿ ಕಂಪನಿಯ ತರಬೇತಿ ಪಡೆದ ತಾಂತ್ರಿಕ ಸಿಬ್ಬಂದಿ ಹಾಗೂ ಪರಿಣಿತರು ಮಳೆಗಾಲದ ಪ್ರಯಾಣಕ್ಕೆ ತಕ್ಕಂತೆ ಕಾರುಗಳನ್ನು ಸಿದ್ದಪಡಿಸಲಿದ್ದಾರೆ. ಮಾರುತಿ ಕಂಪನಿಯ ಟೆಕ್ನಿಷಿಯನ್ ಗಳು ಕಾರಿನಲ್ಲಿರುವ ದೋಷಗಳನ್ನು ಸರಿಪಡಿಸಿ ಗ್ರಾಹಕರಿಗೆ ಮಳೆಗಾಲದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಿದ್ದಾರೆ.

ಮುಂಗಾರು ಸರ್ವೀಸ್ ಯೋಜನೆ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯ ಗ್ರಾಹಕರು ಜುಲೈ 31ರವರೆಗೆ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಮಳೆಗಾಲದಲ್ಲಿ ಕಾರುಗಳ ಕಾರ್ಯಕ್ಷಮತೆಯನ್ನು ಕಾಪಾಡುವುದು ಅವಶ್ಯಕವಾಗಿರುವ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಕಂಪನಿಯು ಈ ಮಾನ್ಸೂನ್ ಅಭಿಯಾನವನ್ನು ಆಯೋಜಿಸಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಮುಂಗಾರು ಸರ್ವೀಸ್ ಯೋಜನೆ ಘೋಷಿಸಿದ ಮಾರುತಿ ಸುಜುಕಿ

ಈ ಅಭಿಯಾನದಲ್ಲಿ ಮುಖ್ಯವಾಗಿ ನೀರು ಹೆಚ್ಚು ನುಗ್ಗುವ ಸಾಧ್ಯತೆಗಳಿರುವ ಕಾರಿನ ಭಾಗಗಳನ್ನು ಬದಲಿಸುವ ಅಥವಾ ಸರಿಪಡಿಸುವತ್ತ ಗಮನ ಹರಿಸಲಾಗುವುದು. ಈ ಬಿಡಿಭಾಗಗಳಲ್ಲಿ ವೈಪರ್ ಬ್ಲೇಡ್‌, ಬ್ರೇಕ್ ಪ್ಯಾಡ್‌, ಬ್ರೇಕ್ ಫ್ಲೂಯಿಡ್ ಮುಂತಾದವುಗಳು ಸೇರಿವೆ.

ಮುಂಗಾರು ಸರ್ವೀಸ್ ಯೋಜನೆ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಅಸಲಿ ಉಪಕರಣ ಹಾಗೂ ಬಿಡಿಭಾಗಗಳನ್ನು ಮಾತ್ರ ಖರೀದಿಸುವಂತೆ ತನ್ನ ಗ್ರಾಹಕರಿಗೆ ಸಲಹೆ ನೀಡಿದೆ. ಅಸಲಿ ಬಿಡಿಭಾಗಗಳಿಂದ ಕಾರಿನ ಪರ್ಫಾಮೆನ್ಸ್ ಹೆಚ್ಚುವುದರ ಜೊತೆಗೆ, ನಿರ್ವಹಣಾ ವೆಚ್ಚವು ಕಡಿಮೆಯಾಗಲಿದೆ ಎಂದು ಕಂಪನಿ ಹೇಳಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮುಂಗಾರು ಸರ್ವೀಸ್ ಯೋಜನೆ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಕಾರುಗಳನ್ನು ಗುತ್ತಿಗೆ ಮೇಲೆ ನೀಡುವ ಹೊಸ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಲ್ಲಿ ಮಾರುತಿಯ ನೆಕ್ಸಾ ಹಾಗೂ ಅರೆನಾ ಡೀಲರ್ ಗಳಿಂದ ಮಾರಾಟವಾಗುವ ಕಾರುಗಳು ಸೇರಿವೆ.

ಮುಂಗಾರು ಸರ್ವೀಸ್ ಯೋಜನೆ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಕಾರ್ ಲೀಸ್ ಸೇವೆಯು ಚಂದಾದಾರಿಕೆ ಯೋಜನೆಯಾಗಿ ಕಾರ್ಯನಿರ್ವಹಿಸಲಿದೆ. ಈ ಯೋಜನೆಯಡಿಯಲ್ಲಿ ಗ್ರಾಹಕರಿಗೆ 24 ತಿಂಗಳು, 36 ತಿಂಗಳು ಹಾಗೂ 48 ತಿಂಗಳುಗಳವರೆಗೆ ಚಂದಾದಾರಿಕೆ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ನೀಡಲಾಗುತ್ತದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಮುಂಗಾರು ಸರ್ವೀಸ್ ಯೋಜನೆ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಕೆಲ ದಿನಗಳ ಹಿಂದಷ್ಟೇ, ತನ್ನ ಜೂನ್ ತಿಂಗಳ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿತ್ತು. ಈ ವರದಿಯ ಪ್ರಕಾರ ಮಾರುತಿ ಸುಜುಕಿ ಕಂಪನಿಯು ಜೂನ್‌ ತಿಂಗಳಿನಲ್ಲಿ 52,300 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದು, ಮಾರಾಟದಲ್ಲಿ 53.7%ನಷ್ಟು ಕುಸಿತವಾಗಿದೆ ಎಂದು ಹೇಳಲಾಗಿದೆ.

Most Read Articles

Kannada
English summary
Monsoon car service campaign by Maruti Suzuki. Read in Kannada.
Story first published: Saturday, July 4, 2020, 16:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X