ಹೊಸ ಇವಿ ಪಾಲಿಸಿ ನಂತರ ರಾಜಧಾನಿಯಲ್ಲಿ ಹೆಚ್ಚಳಗೊಂಡ ಎಲೆಕ್ಟ್ರಿಕ್ ವಾಹನ ಮಾರಾಟ

ದೇಶಾದ್ಯಂತ ಡೀಸೆಲ್ ಮತ್ತು ಪೆಟ್ರೋಲ್ ವಾಹನ ಬಳಕೆಯನ್ನು ತಗ್ಗಿಸಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ರಾಜಧಾನಿ ದೆಹಲಿಯಲ್ಲಿ ಜಾರಿಗೆ ತರಲಾಗಿರುವ ರಾಜ್ಯ ಇವಿ ವಾಹನ ನೀತಿಯು ಮಹತ್ವದ ಬದಲಾವಣೆಗೆ ಕಾರಣವಾಗಿದೆ.

ಹೊಸ ಇವಿ ಪಾಲಿಸಿ ನಂತರ ರಾಜಧಾನಿಯಲ್ಲಿ ಹೆಚ್ಚಳಗೊಂಡ ಎಲೆಕ್ಟ್ರಿಕ್ ವಾಹನ ಮಾರಾಟ

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಫೇಮ್ 2 ಯೋಜನೆಯನ್ನು ಜಾರಿಗೆ ತಂದಿದ್ದು, ಫೇಮ್ 2 ಯೋಜನೆಯ ಜೊತೆಗೆ ದೆಹಲಿ ಸರ್ಕಾರವು ಪ್ರತ್ಯೇಕವಾಗಿ ಇವಿ ವಾಹನ ನೀತಿಯನ್ನು ಅಳವಡಿಸಿಕೊಂಡಿದೆ. ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಕೇಂದ್ರ ಸರ್ಕಾರದ ಫೇಮ್ 2 ಯೋಜನೆ ಅಡಿಯಲ್ಲಿ ಪ್ರಯೋಜನಗಳ ಜೊತೆಗೆ ರಾಜ್ಯ ಸರ್ಕಾರ ಇವಿ ಪಾಲಿಸಿ ಅಡಿಯಲ್ಲೂ ಹೆಚ್ಚಿನ ಮಟ್ಟದ ಪ್ರಯೋಜನಗಳು ಅನ್ವಯವಾಗಲಿದ್ದು, ಹೊಸ ಇವಿ ಪಾಲಿಸಿ ನಂತರ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಭಾರೀ ಹೆಚ್ಚಳವಾಗಿದೆ.

ಹೊಸ ಇವಿ ಪಾಲಿಸಿ ನಂತರ ರಾಜಧಾನಿಯಲ್ಲಿ ಹೆಚ್ಚಳಗೊಂಡ ಎಲೆಕ್ಟ್ರಿಕ್ ವಾಹನ ಮಾರಾಟ

ದೆಹಲಿ ಸರ್ಕಾರವು ಹೊಸ ಇವಿ ಪಾಲಿಸಿ ಅಡಿ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ನೋಂದಣಿ ಶುಲ್ಕ ವಿನಾಯ್ತಿ, ರಸ್ತೆ ತೆರಿಗೆ ವಿನಾಯ್ತಿ ಸೇರಿದಂತೆ ಹಲವಾರು ಆಫರ್‌ಗಳನ್ನು ನೀಡುತ್ತಿದ್ದು, ಕೇಂದ್ರ ಸರ್ಕಾರ ಫೇಮ್ 2 ಯೋಜನೆ ಅಡಿಯಲ್ಲಿ ಜಿಎಸ್‌ಟಿ ವಿನಾಯ್ತಿ ಕೂಡಾ ಲಭ್ಯವಿದೆ.

ಹೊಸ ಇವಿ ಪಾಲಿಸಿ ನಂತರ ರಾಜಧಾನಿಯಲ್ಲಿ ಹೆಚ್ಚಳಗೊಂಡ ಎಲೆಕ್ಟ್ರಿಕ್ ವಾಹನ ಮಾರಾಟ

ಹೀಗಾಗಿ ರಾಜಧಾನಿ ದೆಹಲಿ ಒಂದರಲ್ಲೇ ಹೊಸ ಇವಿ ಪಾಲಿಸಿ ಜಾರಿ ನಂತರ ಎಲೆಕ್ಟ್ರಿಕ್ ವಾಹನ ಮಾರಾಟವು ಚುರುಕುಗೊಂಡಿದ್ದು, ಸುಮಾರು 15 ದಿನಗಳ ಅವಧಿಯಲ್ಲಿ ಬರೋಬ್ಬರಿ 3 ಸಾವಿರ ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳು ಮಾರಾಟಗೊಂಡಿರುವುದು ವರದಿಯಾಗಿದೆ.

ಹೊಸ ಇವಿ ಪಾಲಿಸಿ ನಂತರ ರಾಜಧಾನಿಯಲ್ಲಿ ಹೆಚ್ಚಳಗೊಂಡ ಎಲೆಕ್ಟ್ರಿಕ್ ವಾಹನ ಮಾರಾಟ

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು ದೆಹಲಿ ಸರ್ಕಾರವು ಕೈಗೊಂಡಿರುವ ಇವಿ ಪಾಲಿಸಿ ಭಾರೀ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದು, ಹೊಸ ಇವಿ ಪಾಲಿಸಿ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಸಬ್ಸಡಿ ಅನುಮೋದನೆಯನ್ನು ಸಹ ನೀಡಲಾಗಿದೆ.

ಹೊಸ ಇವಿ ಪಾಲಿಸಿ ನಂತರ ರಾಜಧಾನಿಯಲ್ಲಿ ಹೆಚ್ಚಳಗೊಂಡ ಎಲೆಕ್ಟ್ರಿಕ್ ವಾಹನ ಮಾರಾಟ

ಹೊಸ ಎಲೆಕ್ಟ್ರಿಕ್ ವಾಹನಗಳ ನೀತಿಯಡಿಯಲ್ಲಿ ಸಬ್ಸಿಡಿ ನೀಡಿರುವ ದೆಹಲಿ ಸರ್ಕಾರ ಕಳೆದ ವಾರವಷ್ಟೇ 45ಕ್ಕೂ ಹೆಚ್ಚು ಇ-ರಿಕ್ಷಾ, 12 ನಾಲ್ಕು ಚಕ್ರಗಳ ವಾಹನಗಳನ್ನು ಒಳಗೊಂಡಂತೆ 100ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನ ಮಾದರಿಗಳಿಗೆ ಸಬ್ಸಡಿ ಅನುಮೋದನೆ ನೀಡಲಾಗಿದ್ದು, ಪ್ರತ್ಯೇಕ ವೆಬ್‌ಸೈಟ್ ಮೂಲಕ ಸಬ್ಸಡಿ ವಾಹನಗಳ ಮಾಹಿತಿಯನ್ನು ಸಹ ಪ್ರಕಟಿಸಲಾಗುತ್ತಿದೆ.

ಹೊಸ ಇವಿ ಪಾಲಿಸಿ ನಂತರ ರಾಜಧಾನಿಯಲ್ಲಿ ಹೆಚ್ಚಳಗೊಂಡ ಎಲೆಕ್ಟ್ರಿಕ್ ವಾಹನ ಮಾರಾಟ

ಸಬ್ಸಡಿ ಯೋಜನೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಪ್ರತ್ಯೇಕ ವೆಬ್‌ಸೈಟ್ ತೆರೆಯಲಾಗಿದ್ದು, ಇಲ್ಲಿ ಇವಿ ವಾಹನ ಖರೀದಿ ಬಯಸುವ ಗ್ರಾಹಕರು ಸಂಪೂರ್ಣ ವಿವರಗಳನ್ನು ಪಡೆದುಕೊಳ್ಳಬಹುದು. ರೂ. 15 ಲಕ್ಷದೊಳಗಿನ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಮಟ್ಟದ ಸಬ್ಸಡಿ ಲಭ್ಯವಿದ್ದು, ರೂ. 15 ಲಕ್ಷ ಮೇಲ್ಪಟ್ಟ ಇವಿ ವಾಹನಗಳಿಗೆ ಸಬ್ಸಡಿಯಿಲ್ಲವಾದರೂ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕದಲ್ಲಿ ವಿನಾಯ್ತಿ ನೀಡಲಾಗಿದೆ.

MOST READ: ಅತಿ ಕಡಿಮೆ ನಿರ್ವಹಣೆಯ ಮಹೀಂದ್ರಾ ಟ್ರಿಯೊ ಜೊರ್ ಕಾರ್ಗೊ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆ

ಹೊಸ ಇವಿ ಪಾಲಿಸಿ ನಂತರ ರಾಜಧಾನಿಯಲ್ಲಿ ಹೆಚ್ಚಳಗೊಂಡ ಎಲೆಕ್ಟ್ರಿಕ್ ವಾಹನ ಮಾರಾಟ

ರೂ.15 ಲಕ್ಷದೊಳಗಿನ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಡಿ ಜೊತೆ ರಸ್ತೆ ಮತ್ತು ನೋಂದಣಿ ಶುಲ್ಕದಲ್ಲೂ ವಿನಾಯ್ತಿ ಲಭ್ಯವಿದ್ದಲ್ಲಿ ರೂ. 15 ಮೇಲ್ಪಟ್ಟ ವಾಹನಗಳಿಗೆ ಸಬ್ಸಡಿ ನೀಡಲಾಗುತ್ತಿಲ್ಲ. ಬದಲಾಗಿ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕದಲ್ಲಿ ವಿನಾಯ್ತಿ ನೀಡಿರುವುದು ಪ್ರಮುಖ ನಿರ್ಧಾರವಾಗಿದ್ದು, ಇಂಧನ ಆಧರಿತ ವಾಹನಗಳನ್ನು ಬಿಟ್ಟು ಇವಿ ವಾಹನಗಳನ್ನು ಅಳವಡಿಸಿಕೊಳ್ಳಲು ಹೊಸ ಯೋಜನೆ ಸಾಕಷ್ಟು ಸಹಕಾರಿಯಾಗಿವೆ.

ಹೊಸ ಇವಿ ಪಾಲಿಸಿ ನಂತರ ರಾಜಧಾನಿಯಲ್ಲಿ ಹೆಚ್ಚಳಗೊಂಡ ಎಲೆಕ್ಟ್ರಿಕ್ ವಾಹನ ಮಾರಾಟ

ಇನ್ನು ಹೊಸ ಇವಿ ನೀತಿ ಅಡಿ ಸಬ್ಸಡಿಗೆ ಅರ್ಹರಾಗಲು ಅಗಸ್ಟ್ 7ರಿಂದ ಈಚೆಗೆ ಖರೀದಿಸಿದ ವಾಹನಗಳಿಗೆ ಮಾತ್ರ ಸಬ್ಸಡಿ ಅನ್ವಯವಾಗಲಿದ್ದರೆ ಅಕ್ಟೋಬರ್ 15ರಿಂದ ಖರೀದಿ ಮಾಡಲಾದ ವಾಹನಗಳಿಗೆ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕ ವಿನಾಯ್ತಿ ಅನ್ವಯವಾಗಲಿದೆ.

MOST READ: ದೀಪಾವಳಿ ಆಫರ್: ಒಕಿನಾವ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್

ಹೊಸ ಇವಿ ಪಾಲಿಸಿ ನಂತರ ರಾಜಧಾನಿಯಲ್ಲಿ ಹೆಚ್ಚಳಗೊಂಡ ಎಲೆಕ್ಟ್ರಿಕ್ ವಾಹನ ಮಾರಾಟ

ಎಲೆಕ್ಟ್ರಿಕ್ ವಾಹನ ಖರೀದಿ ನಂತರ ಸಬ್ಸಡಿಗಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ ಮಾಡಬೇಕಿರುವ ಗ್ರಾಹಕರು ಪೂರ್ಣ ವಿವರಗಳನ್ನು ದೃಡಿಕರಿಸಬೇಕು. ಮಾಹಿತಿ ಸಲ್ಲಿಸಿದ ನಂತರ ಮೂರು ದಿನದೊಳಗಾಗಿ ವಾಹನ ಖರೀದಿ ಮಾಡಿದವರ ಖಾತೆಗೆ ಸಬ್ಸಡಿ ಹಣ ಜಮಾ ಆಗಲಿದ್ದು, ಇವಿ ಮಾರಾಟ ಮಳಿಗೆಗಳು ಸರ್ಕಾರದ ವೆಬ್‌ಸೈಟ್‌ನೊಂದಿಗೆ ಲಿಂಕ್‌ಗೊಂಡಿರುತ್ತವೆ.

Most Read Articles

Kannada
English summary
Over 3,000 Electric Vehicles Get Registered In Delhi. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X