ಕರೋನಾ ವೈರಸ್ ಆರ್ಭಟದ ನಡುವೆಯೂ ಏರಿಕೆ ಕಂಡ ಎಂಪಿವಿ ಕಾರು ಮಾರಾಟ

ಕರೋನಾ ವೈರಸ್ ಕಾರಣದಿಂದಾಗಿ ಜಾರಿಗೊಳಿಸಲಾದ ಲಾಕ್‌ಡೌನ್‌ ನಿಂದಾಗಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಕಾರುಗಳ ಮಾರಾಟವು ತೀವ್ರ ಪ್ರಮಾಣದಲ್ಲಿ ಕುಸಿದಿತ್ತು. ಜೂನ್ ಮೊದಲ ವಾರದಲ್ಲಿ ಲಾಕ್‌ಡೌನ್‌ ತೆಗೆದುಹಾಕಿದ ನಂತರ ಕಾರುಗಳ ಮಾರಾಟವು ನಿಧಾನವಾಗಿ ಏರಿಕೆಯಾಗುತ್ತಿದೆ.

ಕರೋನಾ ವೈರಸ್ ಆರ್ಭಟದ ನಡುವೆಯೂ ಏರಿಕೆ ಕಂಡ ಎಂಪಿವಿ ಕಾರು ಮಾರಾಟ

ಆದರೂ ಲಾಕ್‌ಡೌನ್‌ನಿಂದ ಉಂಟಾಗಿರುವ ನಷ್ಟದಿಂದ ಚೇತರಿಸಿಕೊಳ್ಳಲು ಆಟೋ ಮೊಬೈಲ್ ಉದ್ಯಮಕ್ಕೆ ಹಲವಾರು ತಿಂಗಳುಗಳು ಬೇಕಾಗುತ್ತವೆ. ಕಾರು ಕಂಪನಿಗಳು ತಮ್ಮ ಜುಲೈ ತಿಂಗಳ ಮಾರಾಟ ವರದಿಗಳನ್ನು ಬಿಡುಗಡೆಗೊಳಿಸುತ್ತಿವೆ. ಜುಲೈ ತಿಂಗಳ ಎಂಪಿವಿ ಸೆಗ್ ಮೆಂಟಿನ ಮಾರಾಟ ವರದಿಯನ್ನು ಸಹ ಬಿಡುಗಡೆಗೊಳಿಸಲಾಗಿದೆ. ಈ ವರದಿಯ ಪ್ರಕಾರ 2019ರ ಜುಲೈ ತಿಂಗಳಿಗೆ ಈ ವರ್ಷದ ಜುಲೈ ತಿಂಗಳಿನಲ್ಲಿ ಎಂಪಿವಿ ಕಾರುಗಳ ಮಾರಾಟ ಪ್ರಮಾಣವು 3%ನಷ್ಟು ಹೆಚ್ಚಾಗಿದೆ.

ಕರೋನಾ ವೈರಸ್ ಆರ್ಭಟದ ನಡುವೆಯೂ ಏರಿಕೆ ಕಂಡ ಎಂಪಿವಿ ಕಾರು ಮಾರಾಟ

ಮಾರುತಿ ಸುಜುಕಿ ಕಂಪನಿಯ ಎರ್ಟಿಗಾ ಭಾರತದಲ್ಲಿ ಹೆಚ್ಚು ಮಾರಾಟವಾದ ಎಂಪಿವಿಯಾಗಿ ಹೊರಹೊಮ್ಮಿದೆ. ಜುಲೈ ತಿಂಗಳಿನಲ್ಲಿ 8,504 ಯುನಿಟ್ ಎರ್ಟಿಗಾ ಕಾರುಗಳು ಮಾರಾಟವಾಗಿವೆ. 4,360 ಯುನಿಟ್ ಮಾರಾಟದೊಂದಿಗೆ ಮಹೀಂದ್ರಾ ಬೊಲೆರೊ ಎರಡನೇ ಸ್ಥಾನದಲ್ಲಿದೆ. ರೆನಾಲ್ಟ್ ಟ್ರೈಬರ್ 3,076 ಯುನಿಟ್ ಮಾರಾಟದೊಂದಿಗೆಮೂರನೇ ಸ್ಥಾನದಲ್ಲಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕರೋನಾ ವೈರಸ್ ಆರ್ಭಟದ ನಡುವೆಯೂ ಏರಿಕೆ ಕಂಡ ಎಂಪಿವಿ ಕಾರು ಮಾರಾಟ

ಇದೇ ವೇಳೆ ಟೊಯೊಟಾ ಕಂಪನಿಯ ಇನೋವಾ ಕ್ರಿಸ್ಟಾ ಕಾರಿನ ಮಾರಾಟವು ಹಿಂದಿನ ವರ್ಷಕ್ಕಿಂತ 40%ನಷ್ಟು ಕುಸಿದಿದೆ. ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ 2,927 ಯುನಿಟ್‌ಗಳು ಜುಲೈ ತಿಂಗಳಿನಲ್ಲಿ ಮಾರಾಟವಾಗಿವೆ. ಈ ವರ್ಷ ಬಿಡುಗಡೆಯಾದ ಟೊಯೊಟಾ ವೆಲ್‌ಫೈರ್‌ನ ಒಟ್ಟು 16 ಯುನಿಟ್ ಗಳು ಮಾರಾಟವಾಗಿವೆ.

ಸ್ಥಾನ ಮಾದರಿ ಜುಲೈ 2020
1 ಮಾರುತಿ ಎರ್ಟಿಗಾ 8,504
2 ಮಹೀಂದ್ರಾ ಬೊಲೆರೋ 4,360
3 ರೆನಾಲ್ಟ್ ಟ್ರೈಬರ್ 3,076
4 ಟೊಯೊಟಾ ಇನೋವಾ ಕ್ರಿಸ್ಟಾ 2,927
5 ಮಾರುತಿ ಎಕ್ಸ್ ಎಲ್ 6 1,874
6 ಕಿಯಾ ಕಾರ್ನೀವಾಲ್ 232
7 ದಟ್ಸನ್ ಗೋ ಪ್ಲಸ್ 57
8 ಮಹೀಂದ್ರಾ ಮರಾಜೋ 20
9 ಟೊಯೊಟಾ ವೆಲ್ ಫೈರ್ 16
10 ಮಹೀಂದ್ರಾ ಕ್ಸೈಲೋ 0
11 ಟಾಟಾ ಹೆಕ್ಸಾ -
12 ಹೋಂಡಾ ಬಿಆರ್ - ವಿ -
13 ರೆನಾಲ್ಟ್ ಲಾಡ್ಜಿ -
ಕರೋನಾ ವೈರಸ್ ಆರ್ಭಟದ ನಡುವೆಯೂ ಏರಿಕೆ ಕಂಡ ಎಂಪಿವಿ ಕಾರು ಮಾರಾಟ

ಇನ್ನು ಮಹೀಂದ್ರಾ ಕಂಪನಿಯ ಎಂಪಿವಿ ಕಾರುಗಳ ಮಾರಾಟ ಪ್ರಮಾಣವು ಸಹ ಕುಸಿದಿದೆ. ಜುಲೈ ತಿಂಗಳಿನಲ್ಲಿ ಮಹೀಂದ್ರಾ ಮರಾಜೊದ ಕೇವಲ 20 ಯುನಿಟ್ ಗಳು ಮಾರಾಟವಾಗಿ, ಮಾರಾಟ ಪ್ರಮಾಣವು ಕಳೆದ ವರ್ಷಕ್ಕಿಂತ 98%ನಷ್ಟು ಕುಸಿದಿದೆ. ಜುಲೈ ತಿಂಗಳಿನಲ್ಲಿ ಮಹೀಂದ್ರಾ ಕ್ಸೈಲೋದ ಒಂದೇ ಒಂದು ಯುನಿಟ್ ಸಹ ಮಾರಾಟವಾಗಿಲ್ಲ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕರೋನಾ ವೈರಸ್ ಆರ್ಭಟದ ನಡುವೆಯೂ ಏರಿಕೆ ಕಂಡ ಎಂಪಿವಿ ಕಾರು ಮಾರಾಟ

ಮಾರುತಿ ಎರ್ಟಿಗಾ, ಮಹೀಂದ್ರಾ ಬೊಲೆರೊ ಹಾಗೂ ರೆನಾಲ್ಟ್ ಟ್ರೈಬರ್ ಎಂಪಿವಿಗಳ ಮಾರಾಟವು ಏರಿಕೆಯಾಗಿದ್ದರೆ, ಮಹೀಂದ್ರಾ ಮರಾಜೊ, ಟೊಯೊಟಾ ವೆಲ್‌ಫೈರ್‌ ಹಾಗೂ ಮಹೀಂದ್ರಾ ಕ್ಸೈಲೋಗಳ ಮಾರಾಟವು ಕುಸಿದಿದೆ. ಗ್ರಾಹಕರು ಪ್ರೀಮಿಯಂ ಫೀಚರ್ ಹೊಂದಿರುವ ಎಂಪಿವಿಗಳ ಬದಲು ಕೈಗೆಟುಕುವ ಹಾಗೂ ಉತ್ತಮ ಫೀಚರ್ ಗಳನ್ನು ಹೊಂದಿರುವ ಎಂಪಿವಿಗಳಿಗೆ ಆದ್ಯತೆ ನೀಡುತ್ತಿರುವುದೇ ಇದಕ್ಕೆ ಕಾರಣ.

ಕರೋನಾ ವೈರಸ್ ಆರ್ಭಟದ ನಡುವೆಯೂ ಏರಿಕೆ ಕಂಡ ಎಂಪಿವಿ ಕಾರು ಮಾರಾಟ

ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟವೂ ಸಹ ಕುಸಿದಿದೆ. ಪ್ರೀಮಿಯಂ ಸೆಡಾನ್ ಹಾಗೂ ಎಸ್‌ಯುವಿ ಕಾರುಗಳ ಮಾರಾಟವೂ ಕುಸಿತ ಕಂಡಿದೆ. ಐಷಾರಾಮಿ ಕಂಪನಿಗಳಾದ ಆಡಿ, ಬಿಎಂಡಬ್ಲ್ಯು ಹಾಗೂ ಮರ್ಸಿಡಿಸ್ ಬೆಂಝ್ ಗಳ ಮಾರಾಟವು ಸಹ ಗಣನೀಯವಾಗಿ ಕುಸಿದಿದೆ.

ಮೂಲ: ಆಟೋಪಂಡಿತ್ಸ್

Most Read Articles

Kannada
English summary
MPV segment sales increased in July 2020. Read in Kannada.
Story first published: Tuesday, August 4, 2020, 18:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X