Just In
- 35 min ago ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- 35 min ago ಬರಲಿದೆ ಮತ್ತೊಂದು ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್: ಕಡಿಮೆ ಖರ್ಚಿನಲ್ಲಿ ಓಡಾಡಬಹುದು!
- 51 min ago ಮಾರುತಿ ಸ್ವಿಫ್ಟ್ ಖರೀದಿಸುತ್ತಿದ್ದೀರಾ? ಸ್ವಲ್ಪ ಕಾಯಿರಿ... ಹೊಸ ಸ್ವಿಫ್ಟ್ ಬರುತ್ತಿದೆ! 35 ಕಿ.ಮೀ ಮೈಲೇಜ್
- 1 hr ago ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
Don't Miss!
- News Lok Sabha Election: ಮತದಾನದ ದಿನ ಬಸ್ಗಳ ಟಿಕೆಟ್ ದರ ಹೆಚ್ಚಳ ಮಾಡದಂತೆ ಸೂಚನೆ
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Movies ತಾತನಿಗೆ ಧನ್ಯಾ ರಾಮ್ಕುಮಾರ್ ಟ್ರಿಬ್ಯೂಟ್; ಕಿಶನ್ ಜೊತೆ ಡ್ಯುಯೆಟ್
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Finance ಝಿಲಿಂಗೋನ ಸಹ-ಸಂಸ್ಥಾಪಕ ಹಾಗೂ ಮಾಜಿ ಸಿಒಒ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ ಅಂಕಿತಿ ಬೋಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರೋನಾ ವೈರಸ್ ಆರ್ಭಟದ ನಡುವೆಯೂ ಏರಿಕೆ ಕಂಡ ಎಂಪಿವಿ ಕಾರು ಮಾರಾಟ
ಕರೋನಾ ವೈರಸ್ ಕಾರಣದಿಂದಾಗಿ ಜಾರಿಗೊಳಿಸಲಾದ ಲಾಕ್‌ಡೌನ್ ನಿಂದಾಗಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಕಾರುಗಳ ಮಾರಾಟವು ತೀವ್ರ ಪ್ರಮಾಣದಲ್ಲಿ ಕುಸಿದಿತ್ತು. ಜೂನ್ ಮೊದಲ ವಾರದಲ್ಲಿ ಲಾಕ್‌ಡೌನ್ ತೆಗೆದುಹಾಕಿದ ನಂತರ ಕಾರುಗಳ ಮಾರಾಟವು ನಿಧಾನವಾಗಿ ಏರಿಕೆಯಾಗುತ್ತಿದೆ.
ಆದರೂ ಲಾಕ್‌ಡೌನ್‌ನಿಂದ ಉಂಟಾಗಿರುವ ನಷ್ಟದಿಂದ ಚೇತರಿಸಿಕೊಳ್ಳಲು ಆಟೋ ಮೊಬೈಲ್ ಉದ್ಯಮಕ್ಕೆ ಹಲವಾರು ತಿಂಗಳುಗಳು ಬೇಕಾಗುತ್ತವೆ. ಕಾರು ಕಂಪನಿಗಳು ತಮ್ಮ ಜುಲೈ ತಿಂಗಳ ಮಾರಾಟ ವರದಿಗಳನ್ನು ಬಿಡುಗಡೆಗೊಳಿಸುತ್ತಿವೆ. ಜುಲೈ ತಿಂಗಳ ಎಂಪಿವಿ ಸೆಗ್ ಮೆಂಟಿನ ಮಾರಾಟ ವರದಿಯನ್ನು ಸಹ ಬಿಡುಗಡೆಗೊಳಿಸಲಾಗಿದೆ. ಈ ವರದಿಯ ಪ್ರಕಾರ 2019ರ ಜುಲೈ ತಿಂಗಳಿಗೆ ಈ ವರ್ಷದ ಜುಲೈ ತಿಂಗಳಿನಲ್ಲಿ ಎಂಪಿವಿ ಕಾರುಗಳ ಮಾರಾಟ ಪ್ರಮಾಣವು 3%ನಷ್ಟು ಹೆಚ್ಚಾಗಿದೆ.
ಮಾರುತಿ ಸುಜುಕಿ ಕಂಪನಿಯ ಎರ್ಟಿಗಾ ಭಾರತದಲ್ಲಿ ಹೆಚ್ಚು ಮಾರಾಟವಾದ ಎಂಪಿವಿಯಾಗಿ ಹೊರಹೊಮ್ಮಿದೆ. ಜುಲೈ ತಿಂಗಳಿನಲ್ಲಿ 8,504 ಯುನಿಟ್ ಎರ್ಟಿಗಾ ಕಾರುಗಳು ಮಾರಾಟವಾಗಿವೆ. 4,360 ಯುನಿಟ್ ಮಾರಾಟದೊಂದಿಗೆ ಮಹೀಂದ್ರಾ ಬೊಲೆರೊ ಎರಡನೇ ಸ್ಥಾನದಲ್ಲಿದೆ. ರೆನಾಲ್ಟ್ ಟ್ರೈಬರ್ 3,076 ಯುನಿಟ್ ಮಾರಾಟದೊಂದಿಗೆಮೂರನೇ ಸ್ಥಾನದಲ್ಲಿದೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ
ಇದೇ ವೇಳೆ ಟೊಯೊಟಾ ಕಂಪನಿಯ ಇನೋವಾ ಕ್ರಿಸ್ಟಾ ಕಾರಿನ ಮಾರಾಟವು ಹಿಂದಿನ ವರ್ಷಕ್ಕಿಂತ 40%ನಷ್ಟು ಕುಸಿದಿದೆ. ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ 2,927 ಯುನಿಟ್‌ಗಳು ಜುಲೈ ತಿಂಗಳಿನಲ್ಲಿ ಮಾರಾಟವಾಗಿವೆ. ಈ ವರ್ಷ ಬಿಡುಗಡೆಯಾದ ಟೊಯೊಟಾ ವೆಲ್‌ಫೈರ್‌ನ ಒಟ್ಟು 16 ಯುನಿಟ್ ಗಳು ಮಾರಾಟವಾಗಿವೆ.
ಸ್ಥಾನ | ಮಾದರಿ | ಜುಲೈ 2020 |
1 | ಮಾರುತಿ ಎರ್ಟಿಗಾ | 8,504 |
2 | ಮಹೀಂದ್ರಾ ಬೊಲೆರೋ | 4,360 |
3 | ರೆನಾಲ್ಟ್ ಟ್ರೈಬರ್ | 3,076 |
4 | ಟೊಯೊಟಾ ಇನೋವಾ ಕ್ರಿಸ್ಟಾ | 2,927 |
5 | ಮಾರುತಿ ಎಕ್ಸ್ ಎಲ್ 6 | 1,874 |
6 | ಕಿಯಾ ಕಾರ್ನೀವಾಲ್ | 232 |
7 | ದಟ್ಸನ್ ಗೋ ಪ್ಲಸ್ | 57 |
8 | ಮಹೀಂದ್ರಾ ಮರಾಜೋ | 20 |
9 | ಟೊಯೊಟಾ ವೆಲ್ ಫೈರ್ | 16 |
10 | ಮಹೀಂದ್ರಾ ಕ್ಸೈಲೋ | 0 |
11 | ಟಾಟಾ ಹೆಕ್ಸಾ | - |
12 | ಹೋಂಡಾ ಬಿಆರ್ - ವಿ | - |
13 | ರೆನಾಲ್ಟ್ ಲಾಡ್ಜಿ | - |
ಇನ್ನು ಮಹೀಂದ್ರಾ ಕಂಪನಿಯ ಎಂಪಿವಿ ಕಾರುಗಳ ಮಾರಾಟ ಪ್ರಮಾಣವು ಸಹ ಕುಸಿದಿದೆ. ಜುಲೈ ತಿಂಗಳಿನಲ್ಲಿ ಮಹೀಂದ್ರಾ ಮರಾಜೊದ ಕೇವಲ 20 ಯುನಿಟ್ ಗಳು ಮಾರಾಟವಾಗಿ, ಮಾರಾಟ ಪ್ರಮಾಣವು ಕಳೆದ ವರ್ಷಕ್ಕಿಂತ 98%ನಷ್ಟು ಕುಸಿದಿದೆ. ಜುಲೈ ತಿಂಗಳಿನಲ್ಲಿ ಮಹೀಂದ್ರಾ ಕ್ಸೈಲೋದ ಒಂದೇ ಒಂದು ಯುನಿಟ್ ಸಹ ಮಾರಾಟವಾಗಿಲ್ಲ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್
ಮಾರುತಿ ಎರ್ಟಿಗಾ, ಮಹೀಂದ್ರಾ ಬೊಲೆರೊ ಹಾಗೂ ರೆನಾಲ್ಟ್ ಟ್ರೈಬರ್ ಎಂಪಿವಿಗಳ ಮಾರಾಟವು ಏರಿಕೆಯಾಗಿದ್ದರೆ, ಮಹೀಂದ್ರಾ ಮರಾಜೊ, ಟೊಯೊಟಾ ವೆಲ್‌ಫೈರ್ ಹಾಗೂ ಮಹೀಂದ್ರಾ ಕ್ಸೈಲೋಗಳ ಮಾರಾಟವು ಕುಸಿದಿದೆ. ಗ್ರಾಹಕರು ಪ್ರೀಮಿಯಂ ಫೀಚರ್ ಹೊಂದಿರುವ ಎಂಪಿವಿಗಳ ಬದಲು ಕೈಗೆಟುಕುವ ಹಾಗೂ ಉತ್ತಮ ಫೀಚರ್ ಗಳನ್ನು ಹೊಂದಿರುವ ಎಂಪಿವಿಗಳಿಗೆ ಆದ್ಯತೆ ನೀಡುತ್ತಿರುವುದೇ ಇದಕ್ಕೆ ಕಾರಣ.
ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟವೂ ಸಹ ಕುಸಿದಿದೆ. ಪ್ರೀಮಿಯಂ ಸೆಡಾನ್ ಹಾಗೂ ಎಸ್‌ಯುವಿ ಕಾರುಗಳ ಮಾರಾಟವೂ ಕುಸಿತ ಕಂಡಿದೆ. ಐಷಾರಾಮಿ ಕಂಪನಿಗಳಾದ ಆಡಿ, ಬಿಎಂಡಬ್ಲ್ಯು ಹಾಗೂ ಮರ್ಸಿಡಿಸ್ ಬೆಂಝ್ ಗಳ ಮಾರಾಟವು ಸಹ ಗಣನೀಯವಾಗಿ ಕುಸಿದಿದೆ.
ಮೂಲ: ಆಟೋಪಂಡಿತ್ಸ್