ಏಪ್ರಿಲ್‍‍ನಿಂದ ಏರಿಕೆಯಾಗಲಿದೆ ಟೋಲ್ ಶುಲ್ಕ

ಟೋಲ್‍‍ಗಳಲ್ಲಿ ಉಂಟಾಗುತ್ತಿದ್ದ ವಾಹನ ದಟ್ಟಣೆಯನ್ನು ಕಡಿಮೆಗೊಳಿಸುವ ಕಾರಣಕ್ಕೆ ಕೇಂದ್ರ ಸರ್ಕಾರವು ಫಾಸ್ಟ್ ಟ್ಯಾಗ್‍‍‍ಗಳನ್ನು ಕಡ್ಡಾಯಗೊಳಿಸಿದೆ. ಫಾಸ್ಟ್ ಟ್ಯಾಗ್‍‍ಗಳನ್ನು ಅಳವಡಿಸಿಕೊಂಡ ನಂತರವೂ ವಾಹನ ದಟ್ಟಣೆ ಕಡಿಮೆಯಾಗಿಲ್ಲ.

ಏಪ್ರಿಲ್‍‍ನಿಂದ ಏರಿಕೆಯಾಗಲಿದೆ ಟೋಲ್ ಶುಲ್ಕ

ಈಗ ಫಾಸ್ಟ್ ಟ್ಯಾಗ್‍‍ಗಳನ್ನು ಅಳವಡಿಸಿಕೊಂಡು ಶುಲ್ಕ ಪಾವತಿಸದೇ ವಂಚಿಸುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಫಾಸ್ಟ್ ಟ್ಯಾಗ್‍ ಯೋಜನೆಯನ್ನು ಸರಿಯಾಗಿ ಅಳವಡಿಸಲಾಗಿಲ್ಲ ಎಂಬ ಆರೋಪಗಳೂ ಸಹ ಕೇಳಿಬರುತ್ತಿವೆ. ಈಗ ಟೋಲ್ ಶುಲ್ಕವನ್ನು ಹೆಚ್ಚಿಸಲಾಗುವುದು ಎಂಬ ವರದಿಯಾಗಿದೆ.

ಏಪ್ರಿಲ್‍‍ನಿಂದ ಏರಿಕೆಯಾಗಲಿದೆ ಟೋಲ್ ಶುಲ್ಕ

ವರದಿಗಳ ಪ್ರಕಾರ, ಮುಂಬೈ ಹಾಗೂ ಪುಣೆ ನಗರಗಳ ನಡುವೆ ಇರುವ ಟೋಲ್‍‍ಗಳಲ್ಲಿನ ಶುಲ್ಕವನ್ನು ರೂ.40ರಿಂದ ರೂ.280ಗಳವರೆಗೆ ಹೆಚ್ಚಿಸಲಾಗುವುದು. ಇದರ ಜೊತೆಗೆ ಮುಂಬೈ ಹಾಗೂ ಲೋನಾವಾಲಾ ಟೋಲ್‍‍ಗಳ ಶುಲ್ಕವನ್ನು ಸಹ ಹೆಚ್ಚಿಸಲಾಗುವುದು.

ಏಪ್ರಿಲ್‍‍ನಿಂದ ಏರಿಕೆಯಾಗಲಿದೆ ಟೋಲ್ ಶುಲ್ಕ

ಈ ನಗರಗಳ ಮಧ್ಯೆ ಇರುವ ಟೋಲ್‍‍ಗಳ ಶುಲ್ಕವನ್ನು ರೂ.30ರಿಂದ ರೂ.210ರವರೆಗೆ ಏರಿಸಲಾಗುವುದು. ಸದ್ಯಕ್ಕೆ ಮುಂಬೈ - ಲೋನಾವಾಲಾ ನಡುವೆ ಸಂಚರಿಸುವ ಕಾರುಗಳಿಗೆ ರೂ.173 ಶುಲ್ಕ ವಿಧಿಸಲಾಗುತ್ತಿದೆ. ಬೆಲೆ ಏರಿಕೆಯ ನಂತರ ರೂ.203 ಶುಲ್ಕ ವಿಧಿಸಲಾಗುವುದು.

ಏಪ್ರಿಲ್‍‍ನಿಂದ ಏರಿಕೆಯಾಗಲಿದೆ ಟೋಲ್ ಶುಲ್ಕ

ಸದ್ಯಕ್ಕೆ ಮಿನಿ ಬಸ್ಸುಗಳಿಗೆ ರೂ.266 ಶುಲ್ಕ ವಿಧಿಸಲಾಗುತ್ತಿದೆ. ಏಪ್ರಿಲ್‍‍ನಿಂದ ರೂ.315 ವಿಧಿಸಲಾಗುವುದು. ಟೂ ಆಕ್ಸೆಲ್ ಟ್ರಕ್‍‍ಗಳ ಶುಲ್ಕವನ್ನು ರೂ.370ರಿಂದ ರೂ.435ಗಳಿಗೆ, ಬಸ್ಸುಗಳ ಶುಲ್ಕವನ್ನು ರೂ.506ರಿಂದ ರೂ.597ಗಳಿಗೆ ಹಾಗೂ ಟ್ರಕ್‍‍ಗಳ ಶುಲ್ಕವನ್ನು ರೂ.876ರಿಂದ ರೂ.1,035ಗಳಿಗೆ ಹೆಚ್ಚಿಸಲಾಗುವುದು.

ಏಪ್ರಿಲ್‍‍ನಿಂದ ಏರಿಕೆಯಾಗಲಿದೆ ಟೋಲ್ ಶುಲ್ಕ

ಮುಂಬೈ - ಲೋನಾವಾಲಾ ಟೋಲ್‍‍ನಂತೆಯೇ ಮುಂಬೈ - ಪುಣೆ ಟೋಲ್‍‍ಗಳ ಶುಲ್ಕವನ್ನು ಸಹ ಹೆಚ್ಚಿಸಲಾಗುವುದು. ಈ ಟೋಲ್‍‍ನಲ್ಲಿ ಕಾರುಗಳಿಗೆ ಸದ್ಯಕ್ಕೆ ರೂ.230 ಶುಲ್ಕವನ್ನು ವಿಧಿಸಲಾಗುತ್ತಿದೆ. ಬೆಲೆ ಹೆಚ್ಚಳದ ನಂತರ ರೂ.270 ಶುಲ್ಕವನ್ನು ವಿಧಿಸಲಾಗುವುದು.

ಏಪ್ರಿಲ್‍‍ನಿಂದ ಏರಿಕೆಯಾಗಲಿದೆ ಟೋಲ್ ಶುಲ್ಕ

ಮಿನಿ ಬಸ್ಸುಗಳ ಟೋಲ್ ಶುಲ್ಕವನ್ನು ರೂ.420ಗಳಿಗೆ ಹೆಚ್ಚಿಸಲಾಗುವುದು. ಟೂ ಆಕ್ಸೆಲ್ ಟ್ರಕ್‍‍ಗಳ ಬೆಲೆಯನ್ನು ರೂ.87ನಷ್ಟು ಹೆಚ್ಚಿಸಲಾಗುವುದು. ಬಸ್ಸುಗಳ ಟೋಲ್ ಶುಲ್ಕವನ್ನು ರೂ.675ಗಳಿಂದ ರೂ.797ಗಳಿಗೆ ಹೆಚ್ಚಿಸಲಾಗುವುದು.

ಏಪ್ರಿಲ್‍‍ನಿಂದ ಏರಿಕೆಯಾಗಲಿದೆ ಟೋಲ್ ಶುಲ್ಕ

ಟ್ರಕ್‍‍ಗಳ ಟೋಲ್ ಶುಲ್ಕವನ್ನು ರೂ.1,168ಗಳಿಂದ ರೂ.1,380ಗಳಿಗೆ ಹೆಚ್ಚಿಸಲಾಗುವುದು. ಟೋಲ್ ಶುಲ್ಕದಲ್ಲಿನ ಹೆಚ್ಚಳವು ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಆಘಾತವನ್ನುಂಟು ಮಾಡಿದೆ. ಟೋಲ್ ಶುಲ್ಕದಲ್ಲಿನ ಹೆಚ್ಚಳವು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.

ಏಪ್ರಿಲ್‍‍ನಿಂದ ಏರಿಕೆಯಾಗಲಿದೆ ಟೋಲ್ ಶುಲ್ಕ

ಟೋಲ್‍‍ಗಳಲ್ಲಿ ಶುಲ್ಕವನ್ನು ಹೈವೇಗಳನ್ನು ಅಭಿವೃದ್ಧಿಪಡಿಸಲು ವಿಧಿಸಲಾಗುತ್ತದೆ. ಆದರೆ ಟೋಲ್ ಶುಲ್ಕ ಸಂಗ್ರಹಿಸಲು ಗುತ್ತಿಗೆ ಪಡೆಯುವ ಕಂಪನಿಗಳು ಕೇವಲ ಲಾಭಕ್ಕಾಗಿ ಕಾರ್ಯ ನಿರ್ವಹಿಸುತ್ತಿವೆ. ಯಾವುದೇ ಅಭಿವೃದ್ಧಿಯನ್ನು ಮಾಡುತ್ತಿಲ್ಲ.

Most Read Articles

Kannada
English summary
Mumbai - Pune- Lonavala Toll will get hike from April 1. Read in Kannada.
Story first published: Thursday, February 27, 2020, 16:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X