ಹೊಸ ಆಡಿ ಆರ್‍ಎಸ್ 7 ಕಾರು ಬಿಡುಗಡೆ ದಿನಾಂಕ ಬಹಿರಂಗ

ಜರ್ಮನ್ ಮೂಲದ ಕಾರು ತಯಾರಕ ಕಂಪನಿಯಾದ ಆಡಿ ತನ್ನ ಹೊಸ ಆರ್‍ಎಸ್ 7 ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಆಡಿ ಕಂಪನಿಯು ಆರ್‍ಎಸ್ 7 ಸ್ಪೋರ್ಟ್‌ಬ್ಯಾಕ್‌ ಬಿಡುಗಡೆಗೊಳಿಸುವ ದಿನಾಂಕವನ್ನು ಬಹಿರಂಗಪಡಿಸಿದೆ.

ಹೊಸ ಆಡಿ ಆರ್‍ಎಸ್ 7 ಕಾರು ಬಿಡುಗಡೆ ದಿನಾಂಕ ಬಹಿರಂಗ

ಆಡಿ ಕಂಪನಿಯು ಆರ್‍ಎಸ್ 7 ಸ್ಪೋರ್ಟ್‌ಬ್ಯಾಕ್‌ಗಾಗಿ ಅಧಿಕೃತವಾಗಿ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಿದೆ. ಬಿಡುಗಡೆಯಾಗಲಿರುವ ಆಡಿ ಆರ್‍ಎಸ್ 7 ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಆನ್ ಲೈನ್ ಅಥವಾ ಡೀಲರ್ ಬಳಿ ಟೋಕನ್ ಮೊತ್ತ ರೂ.10 ಲಕ್ಷ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಹೊಸ ಆರ್‍ಎಸ್ 7 ಕಾರಿನಲ್ಲಿ 4.0-ಲೀಟರ್ ಟ್ವಿನ್ ಟರ್ಬೊ ವಿ 8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ.

ಹೊಸ ಆಡಿ ಆರ್‍ಎಸ್ 7 ಕಾರು ಬಿಡುಗಡೆ ದಿನಾಂಕ ಬಹಿರಂಗ

ಇದನ್ನು ಮೈಲ್ಡ್ ಹೈಬ್ರಿಡ್ ಸಿಸ್ಟಂನೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್ 600 ಬಿಹೆಚ್‍ಪಿ ಪವರ್ ಮತ್ತು 800 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಹಿಂದಿನ ಮಾದರಿ 560 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುಲಾಗುತ್ತಿತ್ತು. ಹೊಸ ಆರ್‍ಎಸ್ 7 ಕಾರಿನ ಎಂಜಿನ್ ನೊಂದಿಗೆ 8-ಸ್ಪೀಡ್ ಟಾರ್ಕ್ ಕರ್ನವಾಟರ್ ಅನ್ನು ಜೋಡಿಸಲಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ಆಡಿ ಆರ್‍ಎಸ್ 7 ಕಾರು ಬಿಡುಗಡೆ ದಿನಾಂಕ ಬಹಿರಂಗ

ಬ್ರ್ಯಾಂಡ್‌ನ ಆಡಿ ಕ್ವಾಟ್ರೋ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಮೂಲಕ ಎಲ್ಲಾ ಟಯರುಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ. ಈ ಆಡಿ ಆರ್‍ಎಸ್ 7 ಮಾದರಿಯು ಕೇವಲ 3.6 ಸೆಕೆಂಡುಗಳಲ್ಲಿ 100 ಕಿ.ಮೀ ಕ್ರಮಿಸುತ್ತದೆ. ಈ ಹೊಸ ಕಾರಿನಲ್ಲಿ ಲೋ ಸಿಲೂಯೆಟ್, ಬಾನೆಟ್, ಮುಂಭಾಗದ ಡೋರುಗಳು ಮತ್ತು ಅದರ ಬೂಟ್ ಲೀಡ್ ಗಳು ಸ್ಟ್ಯಾಂಡರ್ಡ್ ಎ7 ಮಾದರಿಗಳಂತಿದೆ.

ಹೊಸ ಆಡಿ ಆರ್‍ಎಸ್ 7 ಕಾರು ಬಿಡುಗಡೆ ದಿನಾಂಕ ಬಹಿರಂಗ

ಆರ್‍ಎಸ್ 7 ಕಾರು ದೊಡ್ಡ ಏರ್ ಟೆಕ್ ಮತ್ತು ಬ್ಲ್ಯಾಕ್ ಹನಿಕಾಂಬ್ ನೊಂದಿಗೆ ಆಗ್ರೇಸಿವ್ ಲುಕ್ ಅನ್ನು ಹೊಂದಿದೆ. ಹೊಸ ಆರ್‍ಎಸ್ 7 ಕಾರಿನ ಹಿಂಭಾಗದ ಬಂಪರ್ ನೊಂದಿಗೆ ದೊಡ್ಡ ಡಿಫ್ಯೂಸರ್ ಮತ್ತು 21 ಇಂಚಿನ ರಿಮ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಈ ಬ್ರ್ಯಾಂಡ್ 22 ಇಂಚಿನ ರಿಮ್‌ಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಒಂದು ಆಯ್ಕೆಯಾಗಿ ನೀಡುತ್ತದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಬಿಎಸ್-6 ಮಹೀಂದ್ರಾ ಬೊಲೆರೊ

ಹೊಸ ಆಡಿ ಆರ್‍ಎಸ್ 7 ಕಾರು ಬಿಡುಗಡೆ ದಿನಾಂಕ ಬಹಿರಂಗ

ಹೊಸ ಆಡಿ ಆರ್‍ಎಸ್ 7 ಕಾರಿನ ಒಳಾಂಗಣದ ಡ್ಯಾಶ್‌ಬೋರ್ಡ್‌ನಲ್ಲಿ ಡ್ಯುಯಲ್ ಟಚ್‌ಸ್ಕ್ರೀನ್ ವಿನ್ಯಾಸ, ಅಲ್ಕಾಂಟರಾ ಅಪ್ಹೋಲ್ಸ್ಟರಿ ಮತ್ತು ದೊಡ್ಡ ಪ್ಯಾಡಲ್ ಶಿಫ್ಟರ್‌ಗಳನ್ನು ಹೊಂದಿರುವ ಆರ್ಎಸ್ ನಿರ್ದಿಷ್ಟ ಸ್ಟೀಯರಿಂಗ್ ವ್ಹೀಲ್ ಅನ್ನು ಒಳಗೊಂಡಿದೆ.

ಹೊಸ ಆಡಿ ಆರ್‍ಎಸ್ 7 ಕಾರು ಬಿಡುಗಡೆ ದಿನಾಂಕ ಬಹಿರಂಗ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಾಲ್ಕು ಸೀಟಿನ ಆಡಿ ಆರ್‍ಎಸ್ 7 ಕಾರನ್ನು ಮಾರಾಟ ಮಾಡಲಾಗುತ್ತಿದೆ. ಆದರೆ ಭಾರತದಲ್ಲಿ 5 ಸೀಟುಗಳ ಕಾರನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.

MOST READ: ಬಿಡುಗಡೆಗೆ ಮುನ್ನ ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಮಹೀಂದ್ರಾ ಥಾರ್

ಹೊಸ ಆಡಿ ಆರ್‍ಎಸ್ 7 ಕಾರು ಬಿಡುಗಡೆ ದಿನಾಂಕ ಬಹಿರಂಗ

ಆಡಿ ಆರ್‍ಎಸ್ 7 ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಪೋರ್ಟ್ಸ್ ಸೆಡಾನ್ ಗಳಲ್ಲಿ ಒಂದಾಗಿದೆ. ಹೊಸ ಆಡಿ ಆರ್‍ಎಸ್ 7 ಕಾರು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಸ್ಪೋರ್ಟ್ಸ್ ಸೆಡಾನ್ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಬಹುದು ಎಂದು ನಿರೀಕ್ಷಿಸುತ್ತೆವೆ.

ಹೊಸ ಆಡಿ ಆರ್‍ಎಸ್ 7 ಕಾರು ಬಿಡುಗಡೆ ದಿನಾಂಕ ಬಹಿರಂಗ

ಹೊಸ ಆಡಿ ಆರ್‍ಎಸ್ 7 ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.75 ಕೋಟಿಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಆಡಿ ಆರ್‍ಎಸ್7 ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮರ್ಸಿಡಿಸ್ ಬೆಂಝ್ ಎಎಂಜಿ ಇ63 ಮತ್ತು ಬಿಎಂಡಬ್ಲ್ಯು ಎಂ5 ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
Read more on ಆಡಿ audi
English summary
Audi RS7 Sportback India Launch Scheduled For 16 July: Details. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X