ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಆಡಿ ಆರ್‍ಎಸ್ 7 ಕಾರು

ಜರ್ಮನ್ ಮೂಲದ ಕಾರು ತಯಾರಕ ಕಂಪನಿಯಾದ ಆಡಿ ತನ್ನ ಹೊಸ ಆರ್‍ಎಸ್ 7 ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಆಡಿ ಆರ್‍ಎಸ್ 7 ಕಾರನ್ನು ಮುಂದಿನ ಜುಲೈ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಆಡಿ ಆರ್‍ಎಸ್ 7 ಕಾರು

ಆಡಿ ಕಂಪನಿಯು ಹೊಸ ಆರ್ಎಸ್ 7 ಕಾರಿನ ಟೀಸರ್ ಅನ್ನು ವೆಬ್‌ಸೈಟ್‌ನಲ್ಲಿ ಬಿಡುಗಡೆಗೊಳಿಸಿದೆ. ಹೊಸ ಆರ್‍ಎಸ್ 7 ಕಾರಿನಲ್ಲಿ 4.0-ಲೀಟರ್ ಟ್ವಿನ್ ಟರ್ಬೊ ವಿ 8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಇದನ್ನು ಮೈಲ್ಡ್ ಹೈಬ್ರಿಡ್ ಸಿಸ್ಟಂನೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್ 600 ಬಿಹೆಚ್‍ಪಿ ಪವರ್ ಮತ್ತು 800 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಹಿಂದಿನ ಮಾದರಿ 560 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತಿತ್ತು.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಆಡಿ ಆರ್‍ಎಸ್ 7 ಕಾರು

ಹೊಸ ಆರ್‍ಎಸ್ 7 ಕಾರಿನ ಎಂಜಿನ್ ನೊಂದಿಗೆ 8-ಸ್ಪೀಡ್ ಟಾರ್ಕ್ ಕರ್ನವಾಟರ್ ಅನ್ನು ಜೋಡಿಸಲಾಗಿದೆ. ಬ್ರ್ಯಾಂಡ್‌ನ ಆಡಿ ಕ್ವಾಟ್ರೋ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಮೂಲಕ ಎಲ್ಲಾ ಟಯರುಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ.

MOST READ: ಸ್ಥಗಿತವಾಯ್ತು ಜನಪ್ರಿಯ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಆಡಿ ಆರ್‍ಎಸ್ 7 ಕಾರು

ಈ ಆಡಿ ಆರ್‍ಎಸ್ 7 ಮಾದರಿಯು ಕೇವಲ 3.6 ಸೆಕೆಂಡುಗಳಲ್ಲಿ 100 ಕಿ.ಮೀ ಕ್ರಮಿಸುತ್ತದೆ. ಈ ಹೊಸ ಕಾರಿನಲ್ಲಿ ಲೋ ಸಿಲೂಯೆಟ್, ಬಾನೆಟ್, ಮುಂಭಾಗದ ಡೋರುಗಳು ಮತ್ತು ಅದರ ಬೂಟ್ ಲೀಡ್ ಗಳು ಸ್ಟ್ಯಾಂಡರ್ಡ್ ಎ7 ಮಾದರಿಗಳಂತಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಆಡಿ ಆರ್‍ಎಸ್ 7 ಕಾರು

ಆರ್‍ಎಸ್ 7 ಕಾರು ದೊಡ್ಡ ಏರ್ ಟೆಕ್ ಮತ್ತು ಬ್ಲ್ಯಾಕ್ ಹನಿಕಾಂಬ್ ನೊಂದಿಗೆ ಆಗ್ರೇಸಿವ್ ಲುಕ್ ಅನ್ನು ಹೊಂದಿದೆ. ಹೊಸ ಆರ್‍ಎಸ್ 7 ಕಾರಿನ ಹಿಂಭಾಗದ ಬಂಪರ್ ನೊಂದಿಗೆ ದೊಡ್ಡ ಡಿಫ್ಯೂಸರ್ ಮತ್ತು 21 ಇಂಚಿನ ರಿಮ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಈ ಬ್ರ್ಯಾಂಡ್ 22 ಇಂಚಿನ ರಿಮ್‌ಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಒಂದು ಆಯ್ಕೆಯಾಗಿ ನೀಡುತ್ತದೆ.

MOST READ: 370 ಕಿ.ಮೀ ಮೈಲೇಜ್ ನೀಡಲಿದೆ ಮಹೀಂದ್ರಾದ ಹೊಸ ಎಲೆಕ್ಟ್ರಿಕ್ ಎಸ್‍ಯುವಿ

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಆಡಿ ಆರ್‍ಎಸ್ 7 ಕಾರು

ಹೊಸ ಆಡಿ ಆರ್‍ಎಸ್ 7 ಕಾರಿನ ಒಳಾಂಗಣದ ಡ್ಯಾಶ್‌ಬೋರ್ಡ್‌ನಲ್ಲಿ ಡ್ಯುಯಲ್ ಟಚ್‌ಸ್ಕ್ರೀನ್ ವಿನ್ಯಾಸ, ಅಲ್ಕಾಂಟರಾ ಅಪ್ಹೋಲ್ಸ್ಟರಿ ಮತ್ತು ದೊಡ್ಡ ಪ್ಯಾಡಲ್ ಶಿಫ್ಟರ್‌ಗಳನ್ನು ಹೊಂದಿರುವ ಆರ್ಎಸ್ ನಿರ್ದಿಷ್ಟ ಸ್ಟೀಯರಿಂಗ್ ವ್ಹೀಲ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಆಡಿ ಆರ್‍ಎಸ್ 7 ಕಾರು

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಾಲ್ಕು ಸೀಟಿನ ಆಡಿ ಆರ್‍ಎಸ್ 7 ಕಾರನ್ನು ಮಾರಾಟ ಮಾಡಲಾಗುತ್ತಿದೆ. ಆದರೆ ಭಾರತದಲ್ಲಿ 5 ಸೀಟುಗಳ ಕಾರನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಆಡಿ ಆರ್‍ಎಸ್ 7 ಕಾರು

ಹೊಸ ಆಡಿ ಆರ್‍ಎಸ್ 7 ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.75 ಕೋಟಿಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಆಡಿ ಆರ್‍ಎಸ್7 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮರ್ಸಿಡಿಸ್ ಬೆಂಝ್ ಎಎಂಜಿ ಇ63 ಮತ್ತು ಬಿಎಂಡಬ್ಲ್ಯು ಎಂ5 ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಆಡಿ ಆರ್‍ಎಸ್ 7 ಕಾರು

ಹೊಸ ಆಡಿ ಆರ್‍ಎಸ್ 7 ಕಾರು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಸ್ಪೋರ್ಟ್ಸ್ ಸೆಡಾನ್ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಬಹುದು ಎಂದು ನಿರೀಕ್ಷಿಸುತ್ತೆವೆ. ಆಡಿ ಆರ್‍ಎಸ್ 7 ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಪೋರ್ಟ್ಸ್ ಸೆಡಾನ್ ಗಳಲ್ಲಿ ಒಂದಾಗಿದೆ

Most Read Articles

Kannada
Read more on ಆಡಿ audi
English summary
Audi RS7 India Launch Scheduled For July. Read In Kannada.
Story first published: Wednesday, June 17, 2020, 12:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X