Just In
- 4 min ago ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡುತ್ತವೆ!
- 2 hrs ago Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- 14 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 15 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
Don't Miss!
- News Karnataka Dam Water Level: ಏಪ್ರಿಲ್ 20ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ವಿವರ ಇಲ್ಲಿದೆ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Movies Amruthadhaare ; ಪಾರ್ಥ ಮತ್ತು ಅಪೇಕ್ಷಾ ಪ್ರೀತಿ, ಕೆಂಡಾಮಂಡಲಗೊಂಡ ಶಕುಂತಲಾ..!
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಆಡಿ ಎಸ್5 ಸ್ಪೋರ್ಟ್ಬ್ಯಾಕ್
ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ಕಂಪನಿಯು ತನ್ನ ಹೊಸ ಎಸ್5 ಸ್ಪೋರ್ಟ್ಬ್ಯಾಕ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ಆಡಿ ಎಸ್5 ಸ್ಪೋರ್ಟ್ಬ್ಯಾಕ್ ನಾಲ್ಕು ಡೋರಿನ ಕೂಪ್ ಆಗಿದೆ.
ಇತ್ತೀಚೆಗೆ ಆಡಿ ಕಂಪನಿಯು ತನ್ನ ಕ್ಯೂ2 ಎಸ್ಯುವಿಯ ವರ್ಚುವಲ್ ಲಾಂಚ್ ಸಂದರ್ಭದಲ್ಲಿ ಎಸ್5 ಸ್ಪೋರ್ಟ್ಬ್ಯಾಕ್ ಮಾದರಿಯ ಟೀಸರ್ ಚಿತ್ರ ಪ್ರದರ್ಶಿಸಿತ್ತು, ಹೊಸ ಆಡಿ ಎಸ್5 ಸ್ಪೋರ್ಟ್ಬ್ಯಾಕ್ ಈ ವರ್ಷದ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಬಹುದು ಎಂದು ವರದಿಗಳಾಗಿದೆ. ಇತ್ತೀಚಿಗೆ ಬಿಡುಗಡೆಗೊಳಿಸಿದ ಟೀಸರ್ ಚಿತ್ರದಲ್ಲಿ ಎಸ್5 ಸ್ಪೋರ್ಟ್ಬ್ಯಾಕ್ ಕಾರಿನ ಸಂಪೂರ್ಣ ವಿನ್ಯಾಸ ಬಹಿರಂಗವಾಗಿಲ್ಲದಿದ್ದರೂ ಕೆಲವು ಮಾಹಿತಿಗಳು ಬಹಿರಂಗವಾಗಿವೆ.
ಟೀಸರ್ ಚಿತ್ರದಲ್ಲಿ ಹೊಸ ಆಡಿ ಎಸ್5 ಸ್ಪೋರ್ಟ್ಬ್ಯಾಕ್ ದೊಡ್ಡ ಸಿಂಗಲ್-ಫ್ರೇಮ್ ಗ್ರಿಲ್ ಅನ್ನು ಹೊಂದಿದೆ. ಆಡಿ ಎಸ್5 ಸ್ಪೋರ್ಟ್ಬ್ಯಾಕ್ ಕಾರಿನಲ್ಲಿ ಹನಿಕ್ಯೂಬ್ ಮಾದರಿಯೊಂದಿಗೆ ದೊಡ್ಡ ಸಿಂಗಲ್-ಫ್ರೇಮ್ ಗ್ರಿಲ್ ಅನ್ನು ಹೊಂದಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ
ಇನ್ನು ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ಗಳೊಂದಿಗೆ ನಯವಾದ ಎಲ್ಇಡಿ ಹೆಡ್ಲ್ಯಾಂಪ್ಗಳಿಂದ ಸುತ್ತುವರೆದಿದೆ. ಇದಲ್ಲದೆ ಹೆಡ್ಲ್ಯಾಂಪ್ಗಳು ಬ್ಲೂ ಸಿಗ್ನೇಚರ್ ಅಂಶಗಳನ್ನು ಹೊಂದಿದೆ.
ಇನ್ನು 19 ಇಂಚಿನ 5-ಆರ್ಮ್-ಪೈಲಾನ್ ವಿನ್ಯಾಸ ವ್ಹೀಲ್ ಗಳೊಂದಿಗೆ ರೂಫ್ ರೈಲ್ ನೋಡಿದಾಗ ಎಸ್5 ಸ್ಪೋರ್ಟ್ಬ್ಯಾಕ್ ಮಾದರಿ ಎಂದು ಖಚಿತವಾಗುತ್ತದೆ. ಬ್ಲ್ಯಾಕ್ ಒಆರ್ವಿಎಂ ಕೂಡ ಒಳಗೊಂಡಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು
ಹೊಸ ಆಡಿ ಎಸ್5 ಸ್ಪೋರ್ಟ್ಬ್ಯಾಕ್ ಸ್ಪೋರ್ಟ್ ಸಸ್ಪೆಂಕ್ಷನ್ ಅನ್ನು ಹೊಂದಿದೆ. ಇನ್ನು ಈ ಹೊಸ ಸ್ಪೋರ್ಟ್ಬ್ಯಾಕ್ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಆಡಿ ಡ್ರೈವ್ ಸೆಲೆಕ್ಟ್ ಜೊತೆಗೆ ಕಂಫರ್ಟ್, ಆಟೋ, ಡೈನಾಮಿಕ್ ಮತ್ತು ಇಂಡಿವಿಚ್ಯೂಯಲ್ ಎಂಬ ನಾಲ್ಕು ವಿಭಿನ್ನ ಮೋಡ್ ಗಳಿವೆ.
ಆಡಿ ಕಂಪನಿಯು ಹೊಸ ಆಡಿ ಎಸ್5 ಸ್ಪೋರ್ಟ್ಬ್ಯಾಕ್ ಮಾದರಿಯಲ್ಲಿ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಹೊಸ ಆಡಿ ಎಸ್5 ಸ್ಪೋರ್ಟ್ಬ್ಯಾಕ್ ಮಾದರಿಯಲ್ಲಿ 3.0-ಲೀಟರ್ ಟಿಎಫ್ಎಸ್ಐ ಎಂಜಿನ್ ಅನ್ನು ಹೊಂದಿರುತ್ತದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್ಲಿಫ್ಟ್
ಈ ಎಂಜಿನ್ 349 ಬಿಹೆಚ್ಪಿ ಪವರ್ ಮತ್ತು 500 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತದೆ. ಈ 3.0-ಲೀಟರ್ ಟಿಎಫ್ಎಸ್ಐ ಎಂಜಿನ್ ನೊಂದಿಗೆ 8-ಸ್ಪೀಡ್ ಟಿಪ್ಟ್ರೋನಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.
ಹೊಸ ಆಡಿ ಎಸ್5 ಸ್ಪೋರ್ಟ್ಬ್ಯಾಕ್ ಮಾದರಿಯು ಕೇವಲ 4.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಆಡಿ ಕಂಪನಿಯು ಈ ವರ್ಷದ ನವೆಂವರ್ ತಿಂಗಳಲ್ಲಿ ತನ್ನ ಬಹುನಿರೀಕ್ಷಿತ ಎಸ್5 ಸ್ಪೋರ್ಟ್ಬ್ಯಾಕ್ ಮಾದರಿಯನು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.