ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯು 3-ಸೀರಿಸ್ ಜಿಟಿ ಶ್ಯಾಡೋ ಎಡಿಷನ್

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ 3-ಸೀರಿಸ್ ಗ್ರ್ಯಾನ್ ಟ್ಯುರಿಸ್ಮೊ(ಜಿಟಿ) 'ಶ್ಯಾಡೋ ಎಡಿಷನ್' ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು 3-ಸೀರಿಸ್ ಜಿಟಿ 'ಶ್ಯಾಡೋ ಎಡಿಷನ್' ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.42.50 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯು 3-ಸೀರಿಸ್ ಜಿಟಿ ಶ್ಯಾಡೋ ಎಡಿಷನ್

ಬಿಎಂಡಬ್ಲ್ಯು 3-ಸೀರಿಸ್ ಜಿಟಿ 'ಶ್ಯಾಡೋ ಎಡಿಷನ್ ಅನ್ನು ಕಂಪನಿಯ ಚೆನ್ನೈ ಉತ್ಪಾದನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಈ ಹೊಸ ಬಿಎಂಡಬ್ಲ್ಯು ಕಾರು ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಲಭ್ಯವಿರಲಿದೆ. ಈ ಹೊಸ ಬಿಎಂಡಬ್ಲ್ಯು 3-ಸೀರಿಸ್ ಜಿಟಿ 'ಶ್ಯಾಡೋ ಎಡಿಷನ್ ಆಲ್ಪೈನ್ ವೈಟ್, ಮೆಲ್ಬೋರ್ನ್ ರೆಡ್ ಮೆಟಾಲಿಕ್, ಬ್ಲ್ಯಾಕ್ ಸಫೈರ್ ಮೆಟಾಲಿಕ್ ಮತ್ತು ಎಸ್ಟೊರಿಲ್ ಬ್ಲೂ ಮೆಟಾಲಿಕ್ ಬಣ್ಣಗಳಲ್ಲಿ ಲಭ್ಯವಿರುತ್ತದೆ.

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯು 3-ಸೀರಿಸ್ ಜಿಟಿ ಶ್ಯಾಡೋ ಎಡಿಷನ್

ಹೊಸ ಬಿಎಂಡಬ್ಲ್ಯು 3-ಸೀರಿಸ್ ಜಿಟಿ 'ಶ್ಯಾಡೋ ಎಡಿಷನ್' ಹಿಂದಿನ ಮಾದರಿಗೆ ಹೋಲುತ್ತದೆ. ಹೊಸ ಬಿಎಂಡಬ್ಲ್ಯು ಕಾರಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಹೊಸ ಬಿಎಂಡಬ್ಲ್ಯು 3-ಸೀರಿಸ್ ಕಾರಿನಲ್ಲಿ ಜೆಟ್ ಬ್ಲ್ಯಾಕ್ ಬಣ್ಣದ ಫಿನಿಶಿಂಗ್ ಹೊಂದಿರುವ 18 ಇಂಚಿನ ಅಲಾಯ್ ವ್ಹೀಲ್ ಅನ್ನು ಅಳವಡಿಸಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯು 3-ಸೀರಿಸ್ ಜಿಟಿ ಶ್ಯಾಡೋ ಎಡಿಷನ್

ಇನ್ನು ಈ ಹೊಸ ಬಿಎಂಡಬ್ಲ್ಯು 3-ಸೀರಿಸ್ ಜಿಟಿ 'ಶ್ಯಾಡೋ ಎಡಿಷನ್' ಮಾದರಿಯಲ್ಲಿ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಟೈಲ್‌ಲೈಟ್‌ಗಳನ್ನು ಹೊಂದಿದೆ. ಇನ್ನು ಈ ಹೊಸ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ರೆಡ್ ಹೈಲೈಟ್‌ನೊಂದಿಗೆ ಸೆನ್ಸಾಟೆಕ್ ಬ್ಲ್ಯಾಕ್ ಬಣ್ಣದ ಅಂಶಗಳನ್ನು ಒಳಗೊಂಡಿದೆ.

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯು 3-ಸೀರಿಸ್ ಜಿಟಿ ಶ್ಯಾಡೋ ಎಡಿಷನ್

ಹೊಸ ಬಿಎಂಡಬ್ಲ್ಯು 3-ಸೀರಿಸ್ ಜಿಟಿ ಮಾದರಿಯಲ್ಲಿ ಅಲ್ಯೂಮಿನಿಯಂ ಡೋರ್ ಸಿಲ್ ಪ್ಲೇಟ್‌ಗಳು, ಲೋಗೋದೊಂದಿಗೆ ಸ್ಪೋರ್ಟ್ಸ್ ಲೆದರ್ ಸ್ಟೀರಿಂಗ್ ವೀಲ್, ಆಂಬಿಯೆಂಟ್ ಲೈಟಿಂಗ್‌ನ ಮೂಡ್-ಲಿಫ್ಟಿಂಗ್ ಬಣ್ಣಗಳು ಮತ್ತು ಏರ್-ಕಾನ್ ವೆಂಟ್‌ಗಳಲ್ಲಿ ಕ್ರೋಮ್ ಫ್ರಿಂಗಿಂಗ್‌ನಂತಹ ಫೀಚರ್ ಗಳನ್ನು ಹೊಂದಿದೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯು 3-ಸೀರಿಸ್ ಜಿಟಿ ಶ್ಯಾಡೋ ಎಡಿಷನ್

ಈ ಕಾರಿನ ಇಂಟಿರಿಯರ್ ನಲ್ಲಿ ಯುನಿವರ್ಸಲ್ ವೈರ್‌ಲೆಸ್ ಚಾರ್ಜಿಂಗ್, ಬಿಎಂಡಬ್ಲ್ಯುನ ಇತ್ತೀಚಿನ ಕನೆಕ್ಟಿವಿಟಿ ಕಾರ್ ಟೆಕ್, ಆನ್-ಬೋರ್ಡ್ ಡ್ರೈವರ್ ಮಾಹಿತಿಯೊಂದಿಗೆ ಹೊಸ ಐಡ್ರೈವ್ ಸಿಸ್ಟಂ, 8.7-ಇಂಚಿನ ಡಿಸ್ಪ್ಲೇ ಮತ್ತು ನ್ಯಾವಿಗೇಷನ್ ಸಿಸ್ಟಂ ಪ್ರೊಫೆಷನಲ್ ಪೊಸಿಶನಿಂಗ್ ಸಿಸ್ಟಂ-ಜಿಪಿಎಸ್), ಬಿಎಂಡಬ್ಲ್ಯು ಅಪ್ಲಿಕೇಶನ್ಸ್, ಪಾರ್ಕ್ ಡಿಸ್ಟೆನ್ಸ್ ಕಂಟ್ರೋಲ್, ರಿಯರ್ ವ್ಯೂ ಕ್ಯಾಮೆರಾ, ಆಪಲ್ ಕಾರ್ ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯು 3-ಸೀರಿಸ್ ಜಿಟಿ ಶ್ಯಾಡೋ ಎಡಿಷನ್

ಹೊಸ ಬಿಎಂಡಬ್ಲ್ಯು 3-ಸೀರಿಸ್ ಜಿಟಿ ಮಾದರಿಯಲ್ಲಿ 2.0-ಲೀಟರ್, ನಾಲ್ಕು ಸಿಲಿಂಡರ್, ಬಿಎಸ್-6 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 248 ಬಿಹೆಚ್‌ಪಿ ಪವರ್ ಮತ್ತು 350 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯು 3-ಸೀರಿಸ್ ಜಿಟಿ ಶ್ಯಾಡೋ ಎಡಿಷನ್

ಈ ಎಂಜಿನ್ ಅನ್ನು 8-ಸ್ಪೀಡ್ ಸ್ಟೆಪ್ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಪ್ಯಾಡಲ್ ಶಿಫ್ಟರ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ. ಈ ಕಾರು 6 ಸೆಕೆಂಡುಗಳಲ್ಲಿ 0 - 100 ಕಿಮೀ ವೇಗವನ್ನು ಕ್ರಮಿಸುತ್ತದೆ.

ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯು 3-ಸೀರಿಸ್ ಜಿಟಿ ಶ್ಯಾಡೋ ಎಡಿಷನ್

ಹೊಸ ಬಿಎಂಡಬ್ಲ್ಯು 3-ಸೀರಿಸ್ ಜಿಟಿ ಮಾದರಿಯಲ್ಲಿ ಸುರಕ್ಷತೆಗಾಗಿ ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (ಡಿಎಸ್ಸಿ), ಡೈನಾಮಿಕ್ ಟ್ರ್ಯಾಕ್ಷನ್ ಕಂಟ್ರೋಲ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ (ಸಿಬಿಸಿ), ಸೈಡ್-ಇಂಪ್ಯಾಕ್ಟ್ ಪ್ರೊಟೆಕ್ಷನ್, ಎಲೆಕ್ಟ್ರಾನಿಕ್ ವೆಹಿಕಲ್ ಇಮೊಬೈಲೈಸರ್, ಆರು ಏರ್‌ಬ್ಯಾಗ್‌ಗಳು ಮತ್ತು ಇಬಿಡಿ ಜೊತೆ ಎಬಿಎಸ್ ಅನ್ನು ನೀಡಲಾಗಿದೆ.

Most Read Articles

Kannada
English summary
BMW 3 Series Gran Turismo ‘Shadow Edition’ Launched In India. Read In Kannada.
Story first published: Wednesday, August 19, 2020, 17:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X