ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು 6 ಸೀರೀಸ್ ಜಿಟಿ ಕಾರು

ಬಿಎಂಡಬ್ಲ್ಯೂ ಇಂಡಿಯಾ ತನ್ನ 6 ಸೀರೀಸ್ ಜಿಟಿ ಆವೃತ್ತಿಯನ್ನು ಅನಾವರಣಗೊಳಿಸಲಾಗಿದೆ. ಈ ಹೊಸ ಬಿಎಂಡಬ್ಲ್ಯೂ 6 ಸೀರೀಸ್ ಜಿಟಿ ಆವೃತ್ತಿಯು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದು.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು 6 ಸೀರೀಸ್ ಜಿಟಿ ಕಾರು

ಬಿಎಂಡಬ್ಲ್ಯೂ ಕಂಪನಿಯು 6 ಸೀರೀಸ್ ಗ್ರ್ಯಾನ್ ಟ್ಯುರಿಸ್ಮೊವನ್ನು ಸ್ಥಳೀಯವಾಗಿ 2018ರಲ್ಲಿ ಪರಿಚಯಿಸಿತು ಮತ್ತು ಪ್ರಸ್ತುತ ಮಾರುಕಟ್ಟೆಯಲ್ಲಿ ಈ ಕಾರು ಮೂರು ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಈ ಕಾರಿನ ಬೆಲೆಯು ಭಾರತೀಯ ಎಕ್ಸ್ ಶೋರೂಂ ಪ್ರಕಾರ ರೂ.64.90 ಲಕ್ಷವಾಗಿದ್ದರೆ ಸ್ಪೋರ್ಟ್ ಟ್ರಿಮ್‌ಗೆ ರೂ.75.89 ಲಕ್ಷಗಳಾಗಿದೆ. ಬಿಎಂಡಬ್ಲ್ಯು ಅಮೆರಿಕಾಮಾರುಕಟ್ಟೆಗಳಲ್ಲಿ 6 ಸೀರಿಸ್ ಕಾರನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ, ಆದರೆ ಇದು ಭಾರತದಲ್ಲಿ ಮಾರಾಟದಲ್ಲಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು 6 ಸೀರೀಸ್ ಜಿಟಿ ಕಾರು

ಬಿಎಂಡಬ್ಲ್ಯೂ 6 ಸೀರಿಸ್ ಗ್ರ್ಯಾಮ್ ಟ್ಯುರಿಸ್ಮೊ(ಜಿಟಿ) ಕಾರನ್ನು ಹಲವಾರು ನವೀಕರಣಗಳನ್ನು ನಡೆಸಿ ಬಿಡುಗಡೆಗೊಳಿಸಲಾಗಿದೆ. ಈ ಹೊಸ ಬಿಎಂಡಬ್ಲ್ಯೂ ಕಾರಿನಲ್ಲಿ ಹೊಸ ರೂಫ್ ಲೈನ್ ಹೊಂದಿದ್ದರೆ, 3 ಮೀಟರ್‌ಗಿಂತ ಹೆಚ್ಚಿನದಾದ ವ್ಹೀಲ್ ಬೇಸ್ಉದ್ದದೊಂದಿಗೆ ಬದಲಾಗದೆ ಉಳಿದಿವೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು 6 ಸೀರೀಸ್ ಜಿಟಿ ಕಾರು

2021 ಬಿಎಂಡಬ್ಲ್ಯು 6 ಸೀರೀಸ್ ಜಿಟಿ ಕಾರಿನ ಹೊರಭಾಗದಲ್ಲಿ ನವೀಕರಿಸಿದ ಕಿಡ್ನಿ ಗ್ರಿಲ್ ಮತ್ತು ಹೆಡ್‌ಲ್ಯಾಂಪ್, ಮರುವಿನ್ಯಾಸಗೊಳಿಸಲಾದ ಮುಂಭಾಗ ಮತ್ತು ಹಿಂಭಾಗದ ಏಪ್ರನ್‌ಗಳು ಮತ್ತು ಬ್ಯುಸಿಯರ್ ಏರ್ ಟೆಕ್ ಅನ್ನು ಹೊಂದಿದೆ.ಇನ್ನು ಫ್ರೇಮ್‌ಲೆಸ್ ವಿಂಡೋಗಳು,

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು 6 ಸೀರೀಸ್ ಜಿಟಿ ಕಾರು

ಇನ್ನು ಈ ಹೊಸ ಕಾರಿನಲ್ಲಿ ದೊಡ್ಡ ಟೈಲ್‌ಗೇಟ್ ಮತ್ತು 120 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಹಿಂಭಾಗದ ಸ್ಪಾಯ್ಲರ್ ಅನ್ನು ಆಟೋಮ್ಯಾಟಿಕ್ ಆಗಿ ವಿಸ್ತರಿಸುವುದನ್ನು ನೀವು ಸುಲಭವಾಗಿ ನೋಡಬಹುದು. ಹಿಂದಿನ ರೇರ್ ಸೀಟ್ ಮಡಚಬಹುದಾಗಿರುವುದರಿಂದ ಬೂಟ್‌ಸ್ಪೇಸ್ ಸಾಮರ್ಥ್ಯ 600 ರಿಂದ 1000 ಲೀಟರ್‌ಗಳವರೆಗೆ ಇರುತ್ತದೆ.

MOST READ: ಹೊಸ ಆಕ್ಟೀವಿಯಾ ಆರ್‍ಎಸ್ 245 ಕಾರಿನ ಮಾರಾಟವನ್ನು ಪುನಾರಂಭಿಸಿದ ಸ್ಕೋಡಾ

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು 6 ಸೀರೀಸ್ ಜಿಟಿ ಕಾರು

2021 ಬಿಎಂಡಬ್ಲ್ಯು 6 ಸೀರೀಸ್ ಜಿಟಿ ಕಾರಿನ ಎಂ-ಸ್ಪೋರ್ಟ್ ರೂಪಾಂತರವು ಪ್ಯಾಕೇಜ್ ಟ್ರೆಪೆಜಾಯಿಡಲ್ ಎಕ್ಸಾಸ್ಟ್ ಪೈಪ್‌ಗಳು ಸೇರಿದಂತೆ ಹೊಸ ವಿನ್ಯಾಸ ಅಂಶಗಳನ್ನು ಒಳಗೊಂಡಿದೆ. ಈ ಹೊಸ ಬಿಎಂಡಬ್ಲ್ಯು 6 ಸೀರೀಸ್ ಜಿಟಿ ಕಾರಿನ ಇಂಟಿರಿಯರ್ ನಲ್ಲಿ 12.3-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ, ಬಿಎಂಡಬ್ಲ್ಯು ಲೈವ್ ಕಾಕ್‌ಪಿಟ್ ಪ್ರೊಫೆಷನಲ್, ಮೌಂಟಡ್ ಕಂಟ್ರೋಲ್, ಲೆದರ್ ಸ್ಟೀಯರಿಂಗ್ ವ್ಹೀಲ್, ಸೆಂಟರ್ ಕನ್ಸೋಲ್‌ನಲ್ಲಿ ಹೊಸ ಬಟನ್ ಗಳು ಮತ್ತು ಎಲೆಕ್ಟ್ರಾನಿಕ್ ಆಗಿ ಹೊಂದಾಣಿಕ ಮಾಡಬಹುದಾದ ಮುಂಭಾಗದ ಸೀಟುಗಳನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು 6 ಸೀರೀಸ್ ಜಿಟಿ ಕಾರು

2021 ಬಿಎಂಡಬ್ಲ್ಯು 6 ಸೀರಿಸ್ ಕಾರಿನಲ್ಲಿ ನಾಲ್ಕು ಮಾದರಿಯ ಕ್ಲೈಮೆಂಟ್ ಕಂಟ್ರೋಲ್, ಬೋವರ್ಸ್ ಮತ್ತು ವಿಲ್ಕಿನ್ಸ್ ಆಡಿಯೋ, ಆಂಬಿಯೆಂಟ್ ಲೈಟಿಂಗ್ ಮತ್ತು ಇತರ ಫೀಚರ್ ಗಳನ್ನು ಹೊಂದಿದೆ. ಈ ಹೊಸ ಸೆಡಾನ್ ನಲ್ಲಿ ಪ್ರಮುಖ ಮಾದರಿ ಅಂದರೆ ಹೈಬ್ರಿಡ್ ಎಂಜಿನ್ ಅನ್ನು ಹೊಂದಿದೆ. ಹೆಚ್ಚಿನ ಇಂಧನ ಕಾರ್ಯಕ್ಷಮತೆಯನ್ನು ಮತ್ತು ಪವರ್ ಅನ್ನು ನೀಡಲು ಜನರೇಟರ್ ಮತ್ತು ಸ್ಟಾರ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ.

MOST READ: ಭಾರತದಲ್ಲಿ ಬಿಡುಗಡೆಯಾಯ್ತು ಅತಿ ವೇಗದ ಹೊಸ ಮರ್ಸಿಡಿಸ್ ಎಎಂಜಿ ಜಿಟಿ-ಆರ್ ಕಾರು

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು 6 ಸೀರೀಸ್ ಜಿಟಿ ಕಾರು

ಭಾರತದಲ್ಲಿ ಬಿಡುಗಡೆಯಾಗಲಿರುವ 2021 ಬಿಎಂಡಬ್ಲ್ಯು 6 ಸೀರಿಸ್ ಕಾರು 48 ವಿ ಮೈಲ್ಡ್-ಹೈಬ್ರಿಡ್ ಎಂಜಿನ್ ಅನ್ನು ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ. ಇದರಲ್ಲಿ 2.0-ಲೀಟರ್ ಇನ್ಲೈನ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 258 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 2.0-ಲೀಟರ್ ಡೀಸೆಲ್ 620 ಡಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 400 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು 6 ಸೀರೀಸ್ ಜಿಟಿ ಕಾರು

ಇದರೊಂದಿಗೆ 3.0-ಲೀಟರ್ ಇನ್ಲೈನ್-ಆರು ಪೆಟ್ರೋಲ್ ಅನ್ನು ಅಳವಡಿಸಲಾಗಿದೆ ಈ ಎಂಜಿನ್ 333 ಬಿಹೆಚ್‍ಪಿ ಪವರ್ ಮತ್ತು 450 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 3.0-ಲೀಟರ್ ಡೀಸೆಲ್ ಎಂಜಿನ್340 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು 6 ಸೀರೀಸ್ ಜಿಟಿ ಕಾರು

ಈ ಎಲ್ಲಾ ಎಂಜಿನ್ ಗಳನ್ನು 8-ಸ್ಪೀಡ್ ಸ್ಟೆಪ್ಟ್ರಾನಿಕ್ ಗೇರ್ ಬಾಕ್ಸ್ ನೊಂದಿಗೆ ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ. ಈ ಹೊಸ ಬಿಎಂಡಬ್ಲ್ಯೂ 6 ಸೀರಿಸ್ ಕೇವಲ 5.3 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

Most Read Articles

Kannada
English summary
India-Bound 2021 BMW 6 Series GT Revealed With Mild Hybrid Powertrain. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X