ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿ

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಹೊಸ ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಮೊದಲ ಬಾರಿಗೆ 2018ರ ಬೀಜಿಂಗ್ ಮೋಟಾರ್ ಶೋನಲ್ಲಿ ಕಾನ್ಸೆಪ್ಟ್ ಎಸ್‍ಯುವಿಯಾಗಿ ಪ್ರದರ್ಶಿಸಲಾಗಿತ್ತು.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿ

ಚೀನಾ ದೇಶದಲ್ಲಿ ಉತ್ಪಾದಿಸುವ ಮೊದಲ ಬಿಎಂಡಬ್ಲ್ಯ ಎಲೆಕ್ಟ್ರಿಕ್ ಎಸ್‍ಯುವಿ ಇದಾಗಿದೆ. ಈ ಹೊಸ ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿಯು ಮೂರನೇ ತಲೆಮಾರಿನ ಎಕ್ಸ್3 ಎಸ್‌ಯುವಿಯನ್ನು ಆಧರಿಸಿದೆ. ಈ ಹೊಸ ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ಬಿಎಂಡಬ್ಲ್ಯುನ ಐದನೇ ತಲೆಮಾರಿನ ಇಡ್ರೈವ್ ಸಿಸ್ಟಂ ಅನ್ನು ಹೊಂದಿರಲಿದೆ. ಈ ಎಸ್‍ಯುವಿಯಲ್ಲಿ 286 ಬಿಹೆಚ್‌ಪಿ ಪವರ್ ಉತ್ಪಾದಿಸಬಲ್ಲ ಮೋಟಾರ್ ಅನ್ನು ಅಳವಡಿಸಿದೆ. ಈ ಬಿಎಂಡಬ್ಲ್ಯು ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿಯು ಡಬ್ಲ್ಯುಎಲ್‌ಟಿಪಿ 458 ಕಿ.ಮೀ ರೇಂಜ್ ಅನ್ನು ನೀಡಲಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ಬಿಎಂಡಬ್ಲ್ಯು ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿಯು ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಚೀನಾದ ಶೆನ್ಯಾಂಗ್ ಲಿಯಾನಿಂಗ್‌ನಲ್ಲಿರುವ ಬಿಎಂಡಬ್ಲ್ಯು ಮತ್ತು ಚೀನಾದ ಕಾರು ತಯಾರಕ ಕಂಪನಿಯಾದ ಬ್ರಿಲಿಯನ್ಸ್‌ನ ಜಂಟಿ-ಉದ್ಯಮ ಘಟಕದಲ್ಲಿ ಈ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಉತ್ಪಾದಿಸಲಾಗುತ್ತಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿ

ಈ ಬಿಎಂಡಬ್ಲ್ಯು ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ಫ್ರಂಟ್ ಗ್ರಿಲ್, ಲಂಬವಾದ ಏರ್ ಡಕ್ಸ್, ಹೊಸ ಸೈಡ್ ಸಿಲ್ಸ್ ಮತ್ತು ಹಿಂಭಾಗದ ಬಂಪರ್ ಅನ್ನು ಒಳಗೊಂಡಿವೆ. ಇನ್ನು ಈ ಎಸ್‍ಯುವಿಯ ಗ್ರಿಲ್, ಸಿಲ್ಸ್ ಮತ್ತು ಹಿಂಭಾಗದ ಬಂಪರ್ ನಲ್ಲಿ ನೀಲಿ ಬಣ್ಣದ ಅಂಶಗಳನ್ನು ಒಳಗೊಂಡಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿ

ಈ ಹೊಸ ಬಿಎಂಡಬ್ಲ್ಯು ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 19 ಇಂಚಿನ ವ್ಹೀಲ್ ಅನ್ನು ಅಳವಡಿಸಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯ ಹಿಂಭಾಗದ ಎಲೆಕ್ಟ್ರಿಕ್ ಮೋಟಾರ್ 286 ಬಿಹೆಚ್‌ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ಬಿಎಂಡಬ್ಲ್ಯು ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 74 ಕಿ.ವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇನ್ನು ಡಿಸಿ ರ‍್ಯಾಪಿಡ್‌ ಚಾರ್ಜರ್‌ನೊಂದಿಗೆ ಬ್ಯಾಟರಿಯು 34 ನಿಮಿಷಗಳಲ್ಲಿ 80% ವರೆಗೆ ಚಾರ್ಜ್ ಆಗುತ್ತದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿ

ಇದರೊಂದಿಗೆ ಬಿಎಂಡಬ್ಲ್ಯು ತನ್ನ 8 ಸೀರಿಸ್ ಗೋಲ್ಡನ್ ಥಂಡರ್ ಕಾರನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಈ ಹೊಸ ಬಿಎಂಡಬ್ಲ್ಯು 8 ಸೀರಿಸ್ ಗೋಲ್ಡನ್ ಥಂಡರ್ ಕಾರನ್ನು ಈ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಬಿಡುಗಡೆಗೊಳಿಸಲಿದೆ.

MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿ

ಬಿಎಂಡಬ್ಲ್ಯು ಕಂಪನಿಯು ಜರ್ಮನಿಯ ಡಿಂಗೋಲ್ಫಿಂಗ್ ಸ್ಥಾವರದಲ್ಲಿ ಈ ಗೋಲ್ಡನ್ ಥಂಡರ್ ಮಾದರಿಗಳನ್ನು ತಯಾರಿಸಲಿದೆ. ಈ ಹೊಸ 8 ಸೀರಿಸ್ ಗೋಲ್ಡನ್ ಥಂಡರ್ ಕಾರಿನಲ್ಲಿ ಚಿನ್ನದ ಲೇಪನವನ್ನು ಮಾಡಿದ್ದಾರೆ. ಈ ಕಾರಿನ ಹೆಚ್ಚಿನ ಬಾಡಿವರ್ಕ್ ಫ್ರೋಜನ್ ಬ್ಲ್ಯಾಕ್ ಮೆಟಾಲಿಕ್ ಅಥವಾ ಸಫೈರ್ ಬ್ಲ್ಯಾಕ್ ಮೆಟಾಲಿಕ್ ನಲ್ಲಿ ಫಿನಿಶಿಂಗ್ ಮಾಡಲಾಗಿದೆ.

ಅನಾವರಣವಾಯ್ತು ಹೊಸ ಬಿಎಂಡಬ್ಲ್ಯು ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿ

ಇನ್ನು ಹೊಸ ಬಿಎಂಡಬ್ಲ್ಯು ಐಎಕ್ಸ್3 ಎಲೆಕ್ಟ್ರಿಕ್ ಎಸ್‍ಯುವಿ ಕೇವಲ 6.8 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಈ ಹೊಸ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಎಸ್‍ಯುವಿಯು ಮುಂದಿನ ವರ್ಷದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
BMW IX3 Electric SUV Unveiled Details. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X