ವಿನೂತನ ಫೀಚರ್ಸ‌ಗಳೊಂದಿಗೆ 2020ರ ಬಿಎಂಡಬ್ಲ್ಯು ಎಕ್ಸ್1 ಬಿಡುಗಡೆ

ಬಿಎಂಡಬ್ಲ್ಯು ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಎಂಟ್ರಿ ಲೆವೆಲ್ ಐಷಾರಾಮಿ ಎಸ್‌ಯುವಿ ಆವೃತ್ತಿಯಾದ ಎಕ್ಸ್1 ನವೀಕೃತ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ಕಾರು ಮರ್ಸಿಡಿಸ್ ಬೆಂಝ್ ಜಿಎಲ್ಎ ಕಾರಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

ವಿನೂತನ ಫೀಚರ್ಸ‌ಗಳೊಂದಿಗೆ 2020ರ ಬಿಎಂಡಬ್ಲ್ಯು ಎಕ್ಸ್1 ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಹೊಸ ಬದಲಾವಣೆಗಳನ್ನು ಪಡೆದುಕೊಂಡಿರುವ 2020ರ ಎಕ್ಸ್1 ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 35.90 ಲಕ್ಷ ಬೆಲೆ ಪಡೆದುಕೊಂಡಿದ್ದು, ಎಸ್‌ಯುವಿ ಪ್ರಿಯರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ ಸ್ಪೋರ್ಟ್ಎಕ್ಸ್, ಎಕ್ಸ್‌ಲೈನ್ ಮತ್ತು ಎಂ ಸ್ಪೋರ್ಟ್ ವೆರಿಯೆಂಟ್‌ಗಳನ್ನು ಬಿಡುಗಡೆಗೊಳಿಸಿರುವುದು ಪ್ರಮುಖ ಆಕರ್ಷಣೆಯಾಗಿದೆ.

ವಿನೂತನ ಫೀಚರ್ಸ‌ಗಳೊಂದಿಗೆ 2020ರ ಬಿಎಂಡಬ್ಲ್ಯು ಎಕ್ಸ್1 ಬಿಡುಗಡೆ

ಸ್ಪೋರ್ಟ್ಎಕ್ಸ್ ಆವೃತ್ತಿಯು ಆರಂಭಿಕ ಆವೃತ್ತಿಯಾಗಿದ್ದಲ್ಲಿ ಎಂ ಸ್ಪೋರ್ಟ್ ವೆರಿಯೆಂಟ್ ಹೈ ಎಂಡ್ ಆವೃತ್ತಿಯಾಗಿ ಮಾರಾಟಗೊಳ್ಳಲಿದ್ದು, ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಆವೃತ್ತಿಯು ರೂ. 35.90 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯ ರೂ.42.90 ಲಕ್ಷ ಬೆಲೆ ಹೊಂದಿದೆ.

ವಿನೂತನ ಫೀಚರ್ಸ‌ಗಳೊಂದಿಗೆ 2020ರ ಬಿಎಂಡಬ್ಲ್ಯು ಎಕ್ಸ್1 ಬಿಡುಗಡೆ

ಇದರಲ್ಲಿ ಮತ್ತೊಂದು ಪ್ರಮುಖ ಬದಲಾವಣೆ ಅಂದರೆ, ಸ್ಪೋರ್ಟ್ಎಕ್ಸ್ ವೆರಿಯೆಂಟ್‌ನಲ್ಲಿ ಪೆಟ್ರೋಲ್ ಎಂಜಿನ್‌ ಮತ್ತು ಎಂ ಸ್ಪೋರ್ಟ್ ವೆರಿಯೆಂಟ್‌ನಲ್ಲಿ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಮಧ್ಯಮ ಕ್ರಮಾಂಕದ ಎಕ್ಸ್‌ಲೈನ್‌ನಲ್ಲಿ ಮಾತ್ರ ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಗಳು ಸಹ ಖರೀದಿಗೆ ಲಭ್ಯವಿವೆ.

ವಿನೂತನ ಫೀಚರ್ಸ‌ಗಳೊಂದಿಗೆ 2020ರ ಬಿಎಂಡಬ್ಲ್ಯು ಎಕ್ಸ್1 ಬಿಡುಗಡೆ

ಎಂಜಿನ್ ಸಾಮರ್ಥ್ಯ

ಬಿಎಸ್-6 ವೈಶಿಷ್ಟ್ಯತೆ ಹೊಂದಿರುವ ಹೊಸ 2.0-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 192-ಬಿಎಚ್‌ಪಿ ಮತ್ತು 280-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, 2.0-ಲೀಟರ್ ಡೀಸೆಲ್ ಮಾದರಿಯು 190-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು. ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಆಗಿ 7-ಸ್ಪೀಡ್ ಸ್ಟೆಪ್ಟೊನಿಕ್ ಸ್ಪೋರ್ಟ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದುಕೊಂಡಿದ್ದು, ಡೀಸೆಲ್ ಆವೃತ್ತಿಯಲ್ಲಿ 8-ಸ್ಪೀಡ್ ಸ್ಟೆಪ್ಟೊನಿಕ್ ಸ್ಪೋರ್ಟ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೀಡಲಾಗಿದೆ.

ವಿನೂತನ ಫೀಚರ್ಸ‌ಗಳೊಂದಿಗೆ 2020ರ ಬಿಎಂಡಬ್ಲ್ಯು ಎಕ್ಸ್1 ಬಿಡುಗಡೆ

ಈ ಮೂಲಕ ಪ್ರತಿಸ್ಪರ್ಧಿ ಮರ್ಸಿಡಿಸ್ ಬೆಂಝ್ ಜಿಎಲ್ಎ ಆವೃತ್ತಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಆಕರ್ಷಕ ಬೆಲೆ ಹೊಂದಿರುವ ಎಕ್ಸ್1 ಮಾದರಿಯು ಬಿಎಸ್-6 ಎಂಜಿನ್ ಮಾತ್ರವಲ್ಲದೆ ವಿನ್ಯಾಸದಲ್ಲೂ ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದೆ.

ವಿನೂತನ ಫೀಚರ್ಸ‌ಗಳೊಂದಿಗೆ 2020ರ ಬಿಎಂಡಬ್ಲ್ಯು ಎಕ್ಸ್1 ಬಿಡುಗಡೆ

ಹೊಸ ಕಾರಿನ ಮುಂಭಾಗದಲ್ಲಿ ಈ ಬಾರಿ ದೊಡ್ಡಗಾತ್ರದ ಸಿಗ್ನಿಚೆರ್ ಗ್ರಿಲ್ ಜೋಡಣೆ ಮಾಡಲಾಗಿದ್ದು, ಸ್ಲಿಕ್ ಮಾದರಿಯ ಎಲ್ಇಡಿ ಹೆಡ್‌ಲ್ಯಾಂಪ್, ಇಂಟ್ರಾಗ್ರೆಟೆಡ್ ಎಲ್ಇಡಿ ಡಿಆರ್‌ಎಸ್, ಮರುವಿನ್ಯಾಸಗೊಳಿಸಲಾದ ಎಲ್ಇಡಿ ಟೈಲ್‌ಲೈಟ್ ಮತ್ತು ದೊಡ್ಡ ಗಾತ್ರ ಏರ್ ಇನ್‌ಟೆಕ್ ಸೌಲಭ್ಯವನ್ನು ನೀಡಲಾಗಿದೆ.

ವಿನೂತನ ಫೀಚರ್ಸ‌ಗಳೊಂದಿಗೆ 2020ರ ಬಿಎಂಡಬ್ಲ್ಯು ಎಕ್ಸ್1 ಬಿಡುಗಡೆ

ಜೊತೆಗೆ ಹೊಸ ಕಾರಿನ ಅಲಾಯ್ ಚಕ್ರಗಳ ವಿನ್ಯಾಸದಲ್ಲೂ ಬದಲಾವಣೆಗಳಾಗಿದ್ದು, ಈ ಹಿಂದಿನಂತೆಯೇ ಟ್ವಿನ್ ಎಕ್ಸಾಸ್ಟ್ ಪೈಪ್ಸ್ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರಿಯರ್ ವ್ಯೂವ್ ಕ್ಯಾಮೆರಾ ಸೌಲಭ್ಯವಿದೆ.

ವಿನೂತನ ಫೀಚರ್ಸ‌ಗಳೊಂದಿಗೆ 2020ರ ಬಿಎಂಡಬ್ಲ್ಯು ಎಕ್ಸ್1 ಬಿಡುಗಡೆ

ಹೊಸ ಕಾರಿನಲ್ಲಿ ಒಳಭಾಗದ ವಿನ್ಯಾಸವು ಕೂಡಾ ಸಾಕಷ್ಟು ಬದಲಾವಣೆಗೊಂಡಿದ್ದು, ವೈರ್ ಲೆಸ್ ಚಾರ್ಜಿಂಗ್ ಸಾಕೆಟ್, ಸ್ಮಾರ್ಟ್‌ಫೋನ್ ಕನೆಕ್ವಿಟಿ ಜೊತೆಗೆ ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, 16 ವಿವಿಧ ಬಣ್ಣಗಳ ಆ್ಯಂಬಿಯೆಂಟ್ ಲೈಟಿಂಗ್, ಕೀ ಲೆಸ್ ಎಂಟ್ರಿ, ಪನೊರಮಿಕ್ ಸನ್‌ರೂಫ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದೆ.

ವಿನೂತನ ಫೀಚರ್ಸ‌ಗಳೊಂದಿಗೆ 2020ರ ಬಿಎಂಡಬ್ಲ್ಯು ಎಕ್ಸ್1 ಬಿಡುಗಡೆ

ಲಭ್ಯವಿರುವ ಬಣ್ಣಗಳು

ಗ್ರಾಹಕರ ಬೇಡಿಕೆಯೆಂತೆ ಹೊಸ ಎಕ್ಸ್1 ಮಾದರಿಯು ಒಟ್ಟು 12 ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಆಲ್ಪೈನ್ ವೈಟ್, ಬ್ಲ್ಯಾಕ್, ಬ್ಲ್ಯಾಕ್ ಸಾಫೈರ್, ಗ್ಲೆಸಿಯರ್ ವೈಟ್, ಮಿನರಲ್ ವೈಟ್, ಮಿನರಲ್ ಗ್ರೇ, ಸ್ಪಾರ್ಕಿಂಗ್ ಬ್ರೌನ್, ಸ್ಪಾರ್ಕಿಂಗ್ ಸ್ಟೋಮ್, ಮೆಡೆಟೆರಿಯನ್ ಬ್ಲೂ, ಸನ್‌ಸೆಟ್ ಆರೇಂಜ್, ಜುಕೊರೊ ಬಿಜ್ ಮತ್ತು ಸ್ಪೋರ್ಮ್ ಬೇ ಮೆಟಾಲಿಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

Most Read Articles

Kannada
English summary
New BMW X1 launched in india. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X