ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿ

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಎಕ್ಸ್3 ಎಂ ಎಸ್‌ಯುವಿಯನ್ನು ಭಾರತಕ್ಕೆ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಬಿಎಂಡಬ್ಲ್ಯು ಕಂಪನಿಯು ಭಾರತದಲ್ಲಿ ಈ ಎಕ್ಸ್3 ಎಂ ಎಸ್‌ಯುವಿಯ ಸ್ಪಾಟ್ ಟೆಸ್ಟ್ ಅನ್ನು ಪುನಾರಂಭಿಸಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿ

ಬಿಎಂಡಬ್ಲ್ಯು ಕಂಪನಿಯು ಈ ಎಕ್ಸ್3 ಎಂ ಎಸ್‌ಯುವಿಯನ್ನು ಭಾರತದಲ್ಲಿ ಈ ವರ್ಷದ ಆರಂಭದಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಲು ಪ್ರಾರಂಭಿಸಿದ್ದರು. ಲಾಕ್ ಡೌನ್ ಸಡಿಲಿಕೆ ಬಳಿಕ ಮತ್ತೆ ಎಕ್ಸ್3 ಎಂ ಎಸ್‌ಯುವಿಯ ಸ್ಪಾಟ್ ಟೆಸ್ಟ್ ಅನ್ನು ಪುನಾರಂಭಿಸಿದೆ. ಈ ಎಸ್‍ಯುವಿಯು ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ರಶ್ಲೇನ್ ಬಹಿರಂಗಪಡಿಸಿದೆ. ಹೊಸ ಬಿಎಂಡಬ್ಲು ಎಕ್ಸ್3 ಎಂ ಎಸ್‌ಯುವಿಯನ್ನು ಮರೆಮಾಚಿ ಸ್ಪಾಟ್ ಟೆಸ್ಟ್ ಅನ್ನು ನಡೆಸಲಾಗಿದೆ. ಆದರೆ ಕೆಲವು ಫೀಚರ್ಸ್ ಗಳು ಬಹಿರಂಗಗೊಂಡಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿ

ಈ ಹೊಸ ಬಿಎಂಡಬ್ಲು ಎಕ್ಸ್3 ಎಂ ಎಸ್‌ಯುವಿಯ ಮುಂಭಾಗದಲ್ಲಿ ಕಿಡ್ನಿ ಗ್ರಿಲ್ ಅನ್ನು ಅಳವಡಿಸಲಾಗಿದೆ. ಇನ್ನು ಎಲ್ಇಡಿ ಡಿಆರ್ಎಲ್ ಅನ್ನು ಕೂಡ ಹೊಂದಿದೆ. ಇನ್ನು ಎಲ್ಇಡಿ ಟೈಲ್ ಲೈಟ್‌ಗಳ ಜೊತೆಗೆ ದೊಡ್ಡ 20 ಇಂಚಿನ ಅಲಾಯ್ ವ್ಹೀಲ್ ಅನ್ನು ಅಳವಡಿಸಲಾಗಿದೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿ

ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‌ಯುವಿಯನ್ನು ಸ್ಟ್ಯಾಂಡರ್ಡ್ ಮತ್ತು ಕಾಂಪಿಟೇಷನ್ ಎಂಬ ಎರಡು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಎರಡು ರೂಪಾಂತರಗಳ ಗ್ರಿಲ್ ಫ್ರೇಮ್‌ನಲ್ ವ್ಯತ್ಯಾಸವಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿ

ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿಯ ಸ್ಟ್ಯಾಂಡರ್ಡ್ ರೂಪಾಂತರದ ಗ್ರಿಲ್ ಸುತ್ತಲೂ ಕ್ರೋಮ್ ಫ್ರೇಮ್‌ವರ್ಕ್ ಅನ್ನು ಹೊಂದಿದ್ದರೆ, ಎಕ್ಸ್ 3 ಎಂ ಕಾಂಪಿಟೇಷನ್ ರೂಪಾಂತರದಲ್ಲಿ ಬ್ಲ್ಯಾಕ್ ಫ್ರೇಮ್ ಗ್ರಿಲ್ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿ

ಇನ್ನು ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿಯ ಸ್ಟ್ಯಾಂಡರ್ಡ್ ರೂಪಾಂತರದಲ್ಲಿ 20 ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿದ್ದರೆ, ಎಕ್ಸ್ 3 ಎಂ ಕಾಂಪಿಟೇಷನ್ ರೂಪಾಂತರದಲ್ಲಿ 21 ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿ

ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿಯಲ್ಲಿ 3.0 ಲೀಟರ್, 6 ಸಿಲಿಂಡರ್ ಟ್ವಿನ್ ಟರ್ಬೊ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 473 ಬಿಹೆಚ್‍ಪಿ ಪವರ್ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿ

ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿಯ ಸ್ಟ್ಯಾಂಡರ್ಡ್ ರೂಪಾಂತರವು ಕೇವಲ 4.2 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಮೀ ಕ್ರಮಿಸುತ್ತದೆ. ಇನ್ನು ಈ ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿಯು ಗಂಟೆಗೆ 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿ

ಹೊಸ ಬಿಎಂಡಬ್ಲ್ಯು ಎಕ್ಸ್3 ಎಂ ಎಸ್‍ಯುವಿಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಆಟೋಮ್ಯಾಟಿಕ್ ಹೈ ಬೀಮ್ ಅಸಿಸ್ಟ್, ಲೇನ್ ಡಿಪರ್ಚರ್ ಅಲರ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಎಮರ್ಜೆನ್ಸಿ ಬ್ರೇಕಿಂಗ್ ಫೀಚರ್ ಗಳನ್ನು ಹೊಂದಿದೆ.

Most Read Articles

Kannada
English summary
BMW X3 M SUV Resumes Testing Ahead of Launch in India. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X