ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಹೊಸ ಎಕ್ಸ್7 ಡಾರ್ಕ್ ಶ್ಯಾಡೋ ಲಿಮಿಟೆಡ್ ಎಡಿಷನ್ ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿಯು ಲಿಮಿಟೆಡ್ ಎಡಿಷನ್ ಆಗಿರುವುದರಿಂದ ವಿಶ್ವಾದ್ಯಂತ ಕೇವಲ 500 ಯುನಿಟ್ ಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ.

ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಇನ್ನು ಈ ಹೊಸ ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಮಾದರಿಯ ಉತ್ಪಾದನೆಯನ್ನು ಅಮೇರಿಕದ ಸ್ಪಾರ್ಟನ್‌ಬರ್ಗ್ ನಲ್ಲಿ ಮುಂದಿನ ತಿಂಗಳು ಪ್ರಾರಂಭವಾಗಲಿದೆ. ಈ ಲಿಮಿಟೆಡ್ ಎಡಿಷನ್ ಮಾದರಿಯಲ್ಲಿ ಬಿಎಂಡಬ್ಲ್ಯು ಎಕ್ಸ್7 ನೀಡಲಾಗಿರುವ ಎಲ್ಲಾ ಎಂಜಿನ್ ಆಯ್ಕೆಗಳನ್ನು ನೀಡಬಹುದು. ಈ ಲಿಮಿಟೆಡ್ ಎಡಿಷನ್ ಮಾದರಿಯಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಹೊಂದಿದೆ. ಆದರೆ ಲಿಮಿಟೆಡ್ ಎಡಿಷನ್ ಮಾದರಿಯಲ್ಲಿ ಯಾಂತ್ರಿಕವಾಗಿ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲ.

ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿಯು ಫ್ರೋಜನ್ ಆರ್ಕ್ಟಿಕ್ ಗ್ರೇ ಮೆಟಾಲಿಕ್ ಬಣ್ಣದ ಆಯ್ಕೆಯನ್ನು ಹೊಂದಿದೆ. ಈ ಲಿಮಿಟೆಡ್ ಎಡಿಷನ್ ಎಸ್‍ಯುವಿಯಲ್ಲಿ ಬಿ ಮತ್ತು ಸಿ ಕಾಲಮ್‌ಗಳ ಕವರ್‌ಗಳು ಹೈ ಗ್ಲೋಸ್ ಶ್ಯಾಡೋ ಲೈನ್ ಫಿನಿಶ್ ಅನ್ನು ಒಳಗೊಂಡಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಇನ್ನು ಈ ಎಸ್‍ಯುವಿಯಲ್ಲಿ ಬ್ರ್ಯಾಂಡ್‌ನ ಸಿಗ್ನೇಚರ್ ಕಿಡ್ನಿ ಗ್ರಿಲ್, ಏರ್ ಬ್ರೀಥರ್‌ಗಳು ಮತ್ತು ಎಕಾಸ್ಟ್ ಸಿಸ್ಟಂನ ಟೈಲ್‌ಪೈಪ್ ಕವರ್‌ಗಳನ್ನು ಬ್ಲ್ಯಾಕ್ ಕ್ರೋಮ್ ಫಿನಿಶಿಂಗ್ ಅನ್ನು ಹೊಂದಿದೆ. ಇನ್ನು ಈ ಲಿಮಿಟೆಡ್ ಎಡಿಷನ್ ಎಂ ಸ್ಪೋರ್ಟ್ಸ್ ಪ್ಯಾಕೇಜ್‌ನ ಆಪ್ಟಿಮೈಸ್ಡ್ ಬಾಡಿವರ್ಕ್ ಅಂಶಗಳನ್ನು ಹೊಂದಿದೆ.

ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿಯು ಪರ್ಫಾಮೆನ್ಸ್ ಟಯರುಗಳೊಂದಿಗೆ ಜೆಟ್ ಬ್ಲ್ಯಾಕ್ ಮ್ಯಾಟ್ ಫಿನಿಶ್ ಶಾಡ್‌ನೊಂದಿಗೆ ವಿ-ಸ್ಪೋಕ್ ವಿನ್ಯಾಸದ ವಿಭಿನ್ನ ಬಂಪರ್‌ಗಳು, ಏರ್ ಡ್ಯಾಮ್, ಸೈಡ್ ಸ್ಕರ್ಟ್‌ಗಳು ಮತ್ತು 22 ಇಂಚಿನ ಎಂ ಲೈಟ್-ಅಲಾಯ್ ವ್ಹೀಲ್‌ಗಳನ್ನು ಒಳಗೊಂಡಿವೆ.

MOST READ: ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಮೊದಲೇ ಹೇಳಿದಂತೆ ಲಿಮಿಟೆಡ್ ಎಡಿಷನ್ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ. ಈ ಬಿಎಂಡಬ್ಲ್ಯು ಎಕ್ಸ್7 ಮಾದರಿಯಲ್ಲಿ 3.0-ಲೀಟರ್, ಇನ್-ಲೈನ್ ಸಿಕ್ಸ್-ಸಿಲಿಂಡರ್, ಟ್ವಿನ್-ಟರ್ಬೊ ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ.

ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಈ ಎಂಜಿನ್ 264 ಬಿಹೆಚ್‌ಪಿ ಪವರ್ ಮತ್ತು 620 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಬಿಎಂಡಬ್ಲ್ಯು ಎಕ್ಸ್7 ಮಿಡ್ ಸ್ಪೆಕ್ ಮಾದರಿಯಲ್ಲಿ 3.0-ಲೀಟರ್, ಇನ್ಲೈನ್-ಸಿಕ್ಸ್, ಟ್ವಿನ್-ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಈ ಎಂಜಿನ್ 339 ಬಿಹೆಚ್‍ಪಿ ಪವರ್ ಮತ್ತು 450 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಟಾಪ್ ಸ್ಪೆಕ್ ನಲ್ಲಿ ಕ್ವಾಡ್-ಟರ್ಬೊ ಹೊಂದಿರುವ 3.0-ಲೀಟರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 395 ಬಿಹೆಚ್‍ಪಿ ಪವರ್ ಮತ್ತು 760 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಬಿಎಂಡಬ್ಲ್ಯು ಎಕ್ಸ್7 ಬ್ರ್ಯಾಂಡ್‌ನ ಪ್ರಮುಖ ಎಸ್‍ಯುವಿಗಳಲ್ಲಿ ಒಂದಾಗಿದೆ. ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿಯಲ್ಲಿ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿ ಲಿಮಿಟೆಡ್ ಎಡಿಷನ್ ಅನ್ನು ಅನಾವರಣಗೊಳಿಸಿದ್ದಾರೆ. ಈ ಲಿಮಿಟೆಡ್ ಎಡಿಷನ್ ನಲ್ಲಿ ಕೆಲವು ಹೆಚ್ಚುವರಿ ಫೀಚರುಗಳನ್ನು ಅಳವಡಿಸಬಹುದು.

Most Read Articles

Kannada
English summary
BMW X7 Dark Shadow Edition Unveiled. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X