ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯೂ ಎಕ್ಸ್7 ಎಂ50ಡಿ ಪರ್ಫಾಮೆನ್ಸ್ ವೆರಿಯೆಂಟ್

ಬಿಎಂಡಬ್ಲ್ಯೂ ಇಂಡಿಯಾ ಕಂಪನಿಯು ಹೊಸ ಎಕ್ಸ್7 ಎಂ50ಡಿ ಎಸ್‌ಯುವಿಯ ರೇಂಜ್-ಟಾಪಿಂಗ್ ಡೀಸೆಲ್ ರೂಪಾಂತರವನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯೂ ಎಕ್ಸ್7 ಎಂ50ಡಿ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.63 ಕೋಟಿ ಗಳಾಗಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯೂ ಎಕ್ಸ್7 ಎಂ50ಡಿ ಪರ್ಫಾಮೆನ್ಸ್ ವೆರಿಯೆಂಟ್

ಹೊಸ ಬಿಎಂಡಬ್ಲ್ಯೂ ಎಕ್ಸ್7 ಎಂ50ಡಿ ಎಸ್‍ಯುವಿಯ ಮುಂಭಾಗ ಅಗ್ರೇಸಿವ್ ಲುಕ್ ಹೊಂದಿರುವ ಬಂಪರ್ ಅನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯಲ್ಲಿ ಹೊಸ ಮೆಶ್ ಗ್ರಿಲ್ನೊಂದಿಗೆ ದೊಡ್ಡ ಏರ್ ಟೇಕ್, ನವೀಕರಿಸಿದ ಫಾಗ್ ಲ್ಯಾಂಪ್, ಎಂ ಬ್ಯಾಡ್ಜ್, ಸಿರಿಯಂ ಗ್ರೇ ಒಆರ್‍ವಿಎಂ ಗಳನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ ಸ್ಪೋರ್ಟಿ ಎಕ್ಸಾಸ್ಟ್, 21 ಇಂಚಿನ ಎಂ-ಸ್ಟೈಲ್ ಲೈಟ್-ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯೂ ಎಕ್ಸ್7 ಎಂ50ಡಿ ಪರ್ಫಾಮೆನ್ಸ್ ವೆರಿಯೆಂಟ್

ಹೊಸ ಬಿಎಂಡಬ್ಲ್ಯೂ ಎಕ್ಸ್7 ಎಂ50ಡಿ ಹಲವಾರು ಫೀಚರ್ ಗಳನ್ನು ಹೊಂದಿದೆ. ಈ ಹೊಸ ಎಸ್‍ಯುವಿಯಲ್ಲಿ ಅಲ್ಕಾಂಟರಾ ಹೆಡ್ಲೈನರ್, ವರ್ನಾಸ್ಕಾ ಲೆದರ್ ಅಪ್ಹೋಲ್ಸ್ಟರಿ, ಎಂ ಮಲ್ಟಿಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಆಟೋಮ್ಯಾಟಿಕ್ ಡ್ರೈವಿಂಗ್ ಲೈಟ್, ಅಡಾಪ್ಟಿವ್ ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಆಟೋಮ್ಯಾಟಿಕ್ ಪವರ್ ಟೈಲ್ ಗೇಟ್ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯೂ ಎಕ್ಸ್7 ಎಂ50ಡಿ ಪರ್ಫಾಮೆನ್ಸ್ ವೆರಿಯೆಂಟ್

ಈ ಹೊಸ ಬಿಎಂಡಬ್ಯೂ ಎಕ್ಸ್7 ಎಂ50ಡಿ ಎಸ್‍ಯುವಿ 12.3-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋನೊಂದಿಗೆ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಾಗಿ ಪ್ರತ್ಯೇಕ ಡಿಸ್ ಪ್ಲೇಯನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯೂ ಎಕ್ಸ್7 ಎಂ50ಡಿ ಪರ್ಫಾಮೆನ್ಸ್ ವೆರಿಯೆಂಟ್

ಇನ್ನು ಈ ಹೊಸ ಎಸ್‌ಯುವಿಯಲ್ಲಿ ವಾಯ್ಸ್, ಟಚ್ ಮತ್ತು ಕೈಬಹಗಳನ್ನು ಗ್ರಹಿಸುವ ಸಾಫ್ಟ್‌ವೇರ್‌ನೊಂದಿಗೆ ಬಿಎಂಡಬ್ಲ್ಯು ಐಡ್ರೈವ್ ಸಿಸ್ಟಂ ಅನ್ನು ಹೊಂದಿದೆ. ಹೊಸ ಬಿಎಂಡಬ್ಲ್ಯೂ ಎಕ್ಸ್7 ಎಂ50ಡಿ ಎಸ್‍ಯುವಿಯಲ್ಲಿ 16-ಸ್ಪೀಕರ್ ಹಾರ್ಮನ್ ಕಾರ್ಡನ್ ಸಿಸ್ಟಂ , ವೈರ್‌ಲೆಸ್ ಚಾರ್ಜಿಂಗ್ ಮತ್ತು ಇತರ ಫೀಚರ್ ಗಳನ್ನು ಹೊಂದಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯೂ ಎಕ್ಸ್7 ಎಂ50ಡಿ ಪರ್ಫಾಮೆನ್ಸ್ ವೆರಿಯೆಂಟ್

ಹೊಸ ಬಿಎಂಡಬ್ಲ್ಯೂ ಎಕ್ಸ್7 ಎಂ50ಡಿ ಎಸ್‍ಯುವಿಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹಲವಾರು ಫೀಚರ್ ಗಳನ್ನು ಅಳವಡಿಸಲಾಗಿದೆ. ಇದರಲ್ಲಿ 9 ಏರ್‌ಬ್ಯಾಗ್‌ಗಳು, ಡೈನಾಮಿಕ್ ಬ್ರೇಕ್ ಕಂಟ್ರೋಲ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ಸ್ಟೆಬಿಲಿಟಿ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು 'ಎಂ ಲೋಗೊ' ಹೊಂದಿರುವ ನೀಲಿ-ಬಣ್ಣದ ಕಾಲಿಪರ್‌ಗಳನ್ನು ಹೊಂದಿರುವ ಎಂ ಸ್ಪೋರ್ಟ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯೂ ಎಕ್ಸ್7 ಎಂ50ಡಿ ಪರ್ಫಾಮೆನ್ಸ್ ವೆರಿಯೆಂಟ್

ಹೊಸ ಬಿಎಂಡಬ್ಲ್ಯೂ ಎಕ್ಸ್7 ಎಂ50ಡಿ ಎಸ್‍ಯುವಿಯಲ್ಲಿ ದೊಡ್ಡ 3.0-ಲೀಟರ್ ಇನ್-ಲೈನ್ ಸಿಕ್ಸ್-ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 4,400 ಆರ್‌ಪಿಎಂನಲ್ಲಿ 395 ಬಿಹೆಚ್‌ಪಿ ಪವರ್ ಮತ್ತು 2000 ಆರ್‌ಪಿಎಂನಲ್ಲಿ 760 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯೂ ಎಕ್ಸ್7 ಎಂ50ಡಿ ಪರ್ಫಾಮೆನ್ಸ್ ವೆರಿಯೆಂಟ್

ಈ ಎಂಜಿನ್ ಅನ್ನು 8-ಸ್ಪೀಡ್ ಸ್ಟೆಪ್ಟ್ರಾನಿಕ್ ಸ್ಪೋರ್ಟ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ, ವೇರಿಯಬಲ್ ಟಾರ್ಕ್ ವಿತರಣೆಯೊಂದಿಗೆ ಬಿಎಂಡಬ್ಲ್ಯುನ ಎಕ್ಸ್‌ಡ್ರೈವ್ ತಂತ್ರಜ್ಞಾನದ ಮೂಲಕ ಎಲ್ಲಾ ನಾಲ್ಕು ಟಯರುಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ.

ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಬಿಎಂಡಬ್ಲ್ಯೂ ಎಕ್ಸ್7 ಎಂ50ಡಿ ಪರ್ಫಾಮೆನ್ಸ್ ವೆರಿಯೆಂಟ್

ಬಿಎಂಡಬ್ಲ್ಯೂ ಎಕ್ಸ್7 ಎಂ50ಡಿ ಎಸ್‌ಯುವಿಯ ರೇಂಜ್-ಟಾಪಿಂಗ್ ಡೀಸೆಲ್ ರೂಪಾಂತರವಾಗಿದೆ. ಈ ಹೊಸ ಬಿಎಂಡಬ್ಲ್ಯೂ ಎಕ್ಸ್7 ಎಂ50ಡಿ ಎಸ್‌ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಜ್ ಜಿಎಲ್ಎಸ್ ಮತ್ತು ಆಡಿ ಕ್ಯೂ8 ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
New BMW X7 M50d Performance-Variant Launched In India. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X