ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಟ್ರಿ ಲೆವೆಲ್ ಐಷಾರಾಮಿ ಕಾರುಗಳಿವು

ಐಷಾರಾಮಿ ವಾಹನ ತಯಾರಕರ ಎಂಟ್ರಿ ಲೆವೆಲ್ ಮಾದರಿಗಳು ಯಾವಾಗಲೂ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಆಯ್ಕೆಗಳಾಗಿವೆ. ಏಕೆಂದರೆ ಕಾರು ತಯಾರಕರು ಐಷಾರಾಮಿ ಕಾರುಗಳನ್ನು ಖರೀದಿಸುವವರನ್ನು ಆಕರ್ಷಿಸಲು ತಮ್ಮ ಎಂಟ್ರಿ ಲೆವೆಲ್ ಕಾರುಗಳನ್ನು ಕೈಗೆಟುಕುವ ದರದಲ್ಲಿ ಪರಿಚಯಿಸುತ್ತಾರೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಟ್ರಿ ಲೆವೆಲ್ ಐಷಾರಾಮಿ ಕಾರುಗಳಿವು

ಜನಪ್ರಿಯ ಐಷಾರಾಮಿ ಕಾರು ತಯಾರಕರು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಕೈಗೆಟುಕುವ ಮಾದರಿಗಳನ್ನು ಪರಿಚಯಿಸುತ್ತಿದೆ. ಭಾರತದ ಮಾರುಕಟ್ಟೆಯಲ್ಲಿ ಐಷಾರಾಮಿ ಕಾರುಗಳು ಉತ್ತಮವಾಗಿ ಮಾರಾಟವಾಗುತ್ತಿವೆ. ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ 3 ಮುಂಬರುವ ಕೈಗೆಟುಕುವ ಎಂಟ್ರಿ ಲೆವೆಲ್ ಐಷಾರಾಮಿ ಕಾರುಗಳ ವಿವರಗಳು ಇಲ್ಲಿವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಟ್ರಿ ಲೆವೆಲ್ ಐಷಾರಾಮಿ ಕಾರುಗಳಿವು

ಆಡಿ ಕ್ಯೂ2

ಆಡಿ ಇಂಡಿಯಾ ತನ್ನ ಎಂಟ್ರಿ ಲೆವೆಲ್ ಎಸ್‌ಯುವಿ ಕ್ಯೂ2 ಅನ್ನು ಇದೇ ತಿಂಗಳ ಆರಂಭದಲ್ಲಿ ಬಿಡುಗಡೆಗೊಳಿಸಬೇಕಿತ್ತು. ಆದರೆ ಆಡಿ ತನ್ನ ಕ್ಯೂ2 ಎಸ್‍ಯುವಿಯ ಬಿಡುಗಡೆಯನ್ನು ಮುಂದೂಡಿಕೆ ಮಾಡಿದ್ದರು. ಈ ಹೊಸ ಆಡಿ ಕ್ಯೂ2 ಎಸ್‍ಯುವಿಯು ಇದೇ ವಾರದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಟ್ರಿ ಲೆವೆಲ್ ಐಷಾರಾಮಿ ಕಾರುಗಳಿವು

ಆಡಿ ಕ್ಯೂ2 ಎಸ್‍ಯುವಿಯಲ್ಲಿ 2.0-ಲೀಟರ್ ಟಿಎಸ್‌ಐ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 7-ಸ್ಪೀಡ್ ಡಿಎಸ್ಜಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಟ್ರಿ ಲೆವೆಲ್ ಐಷಾರಾಮಿ ಕಾರುಗಳಿವು

ಹೊಸ ಬಿಎಂಡಬ್ಲ್ಯು 2-ಸೀರಿಸ್ ಗ್ರ್ಯಾನ್ ಕೂಪೆ

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ 2-ಸೀರಿಸ್ ಗ್ರ್ಯಾನ್ ಕೂಪೆ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಬಿಎಂಡಬ್ಲ್ಯು ಕಂಪನಿಯು 2-ಸೀರಿಸ್ ಗ್ರ್ಯಾನ್ ಕೂಪೆ ಕಾರನ್ನು ಇತ್ತೀಚೆಗೆ ಪುಣೆಯಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಲಾಗಿತ್ತು.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಟ್ರಿ ಲೆವೆಲ್ ಐಷಾರಾಮಿ ಕಾರುಗಳಿವು

ಎಂಟ್ರಿ ಲೆವೆಲ್ ಬಿಎಂಡಬ್ಲ್ಯು 2-ಸೀರೀಸ್ ಗ್ರ್ಯಾನ್ ಕೂಪೆ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.33 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಬಿಎಂಡಬ್ಲ್ಯು 2-ಸೀರಿಸ್ ಗ್ರ್ಯಾನ್ ಕೂಪೆ ಕಾರನ್ನು ಭಾರತದಲ್ಲಿ 2020ರ ಹಬ್ಬದ ಸೀಸನ್ ನಲ್ಲಿ ಬಿಡುಗಡೆಯಾಗಬಹುದು ಎಂದು ವರದಿಗಳು ಪ್ರಕಟವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಟ್ರಿ ಲೆವೆಲ್ ಐಷಾರಾಮಿ ಕಾರುಗಳಿವು

ಈ ಎಂಟ್ರಿ ಲೆವೆಲ್ ಬಿಎಂಡಬ್ಲ್ಯು 2-ಸೀರಿಸ್ ಕಾರು ಫ್ರಂಟ್-ವ್ಹೀಲ್-ಡ್ರೈವ್ ಕಾನ್ಫಿಗರೇಶನ್ ಹೊಂದಿದೆ. ಈ ಹೊಸ ಬಿಎಂಡಬ್ಲ್ಯು 2-ಸೀರಿಸ್ ಗ್ರ್ಯಾನ್ ಕೂಪೆ ಕಾರು ಯುಕೆಎಲ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇನ್ನು ಎಫ್‌ಎಆರ್ ಪ್ಲಾಟ್‌ಫಾರ್ಮ್ ಅನ್ನು ಬಿಎಂಡಬ್ಲ್ಯು ಗ್ರೂಪ್‌ನ ಭಾಗವಾಗಿರುವ ಮಿನಿ ಬ್ರಾಂಡ್‌ನಿಂದ ಪಡೆಯಲಾಗಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಟ್ರಿ ಲೆವೆಲ್ ಐಷಾರಾಮಿ ಕಾರುಗಳಿವು

ಬಿಎಂಡಬ್ಲ್ಯು 2-ಸೀರಿಸ್ ಗ್ರ್ಯಾನ್ ಕೂಪೆ ಕಾರು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ ‘220 ಐ' 2.0-ಲೀಟರ್ ಪೆಟ್ರೋಲ್ ಎಂಜಿನ್, 192 ಬಿಹೆಚ್‌ಪಿ ಪವರ್ ಉತ್ಪಾದಿಸಿದರೆ, ‘220 ಡಿ' 2.0-ಲೀಟರ್ ಡೀಸೆಲ್ ಎಂಜಿನ್ 190 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಎರಡು ಎಂಜಿನ್ ಗಳೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಟ್ರಿ ಲೆವೆಲ್ ಐಷಾರಾಮಿ ಕಾರುಗಳಿವು

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್‍ಎ

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್ ತನ್ನ ಹೊಸ ಜಿಎಲ್‍‍ಎ ಎಸ್‍ಯುವಿಯನ್ನು ಇತ್ತೀಚೆಗೆ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಅಲ್ಲದೇ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡ ಜಿಎಲ್‍‍ಎ ಎಸ್‍ಯುವಿಯ ಬುಕ್ಕಿಂಗ್ ಅನ್ನು ಕೂಡ ಪ್ರಾರಂಭಿಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಟ್ರಿ ಲೆವೆಲ್ ಐಷಾರಾಮಿ ಕಾರುಗಳಿವು

ಎಂಟ್ರಿ ಲೆವೆಲ್ ಜಿಎಲ್‍ಎ ಎಸ್‍‍ಯುವಿಯು ಹೊಸ ಎಂಫ್‍ಎ-2 ಪ್ಲಾಟ್‍‍‍‍ಫಾರಂ ಅನ್ನು ಆಧರಿಸಿದೆ. ಈ ಹೊಸ ಜಿಎಲ್‍ಎ ಎಸ್‍‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.43 ಲಕ್ಷಗಳಾಗಿದೆ ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
3 New Entry-Level Luxury Cars Launching In India Soon. Read In Kannada.
Story first published: Monday, September 28, 2020, 20:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X