ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಫೋರ್ಡ್ ರೇಂಜರ್

ಅಮೆರಿಕ ಮೂಲದ ಪೋರ್ಡ್ ಕಂಪನಿಯ ರೇಂಜರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಫೋರ್ಡ್ ಕಂಪನಿಯ ಈ ಜನಪ್ರಿಯ ರೇಂಜರ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಫೋರ್ಡ್ ರೇಂಜರ್

ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಲೈಫ್‌ಸ್ಟೈಲ್ ವಾಹನಗಳು ಉತ್ತಮ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ಇಸುಝು ಕಂಪನಿಯ ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕಪ್ ಟ್ರಕ್ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಮಹೀಂದ್ರಾ ಥಾರ್ ಕೂಡ ಲೈಫ್‌ಸ್ಟೈಲ್ ಮಾದರಿಯಲ್ಲಿಯು ಲಭ್ಯವಿರಲಿದೆ. ರೇಂಜರ್ ಪಿಕಪ್ ಟ್ರಕ್ ಎವರೆಸ್ಟ್ ಎಸ್‍ಯುವಿಯೊಂದಿಗೆ ಚಾಸಿಸ್ ಅನ್ನು ಹಂಚಿಕೊಳ್ಳುತ್ತದೆ, ಈ ಫೋರ್ಡ್ ರೇಂಜರ್ ಮಾದರಿಯು ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ಗಾಡಿವಾಡಿ ಬಹಿರಂಗಪಡಿಸಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಫೋರ್ಡ್ ರೇಂಜರ್

ಫಾರ್ಚೂನರ್ ಎಸ್‍ಯುವಿಯೊಂದಿಗೆ ತನ್ನ ಪ್ಲಾಟ್‌ಫಾರ್ಮ್ ಅನ್ನು ಹಂಚಿಕೊಳ್ಳುವ ಹಿಲಕ್ಸ್ ಪಿಕಪ್ ಟ್ರಕ್ ಅನ್ನು ಬಿಡುಗಡೆ ಮಾಡಲು ಟೊಯೊಟಾ ಕಂಪನಿಯು ಮುಂದಾಗಿದೆ ಎಂದು ಇತ್ತೀಚೆಗೆ ವರದಿಗಳು ಪ್ರಕಟವಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಫೋರ್ಡ್ ರೇಂಜರ್

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಇಸುಝು ಮೋಟಾರ್ಸ್ ತನ್ನ ಸರಣಿಯಲ್ಲಿರುವ ‘ಲೈಫ್‌ಸ್ಟೈಲ್ ವಾಹನಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಇನ್ನು ನವೀಕರಿಸಲಾಗಿಲ್ಲ. ಇದೀಗ ಇಸುಝು ಕಂಪನಿಯು ತನ್ನ ಜನಪ್ರಿಯ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವಲ್ಲಿ ನಿರತರಾಗಿದ್ದಾರೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಫೋರ್ಡ್ ರೇಂಜರ್

ಇನ್ನು ಫೋರ್ಡ್ ಕಂಪನಿಯು ರೇಂಜರ್ ಮಾದರಿಯ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ. ಅಲ್ಲದೇ ಈ ರೇಂಜರ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಲಾಗಿಲ್ಲ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಫೋರ್ಡ್ ರೇಂಜರ್

ಭಾರತದಲ್ಲಿ ಈ ರೇಂಜರ್ ಮಾದರಿಯನ್ನು ಬಿಡುಗಡೆಗೊಳಿಸಿದರೆ ಎಂಡೀವರ್ ಎಸ್‍ಯುವಿಯಲ್ಲಿರುವ 2.0-ಲೀಟರ್ ಟರ್ಬೊ-ಡೀಸೆಲ್ ಎಂಜಿನ್‌ ಅನ್ನು ಅಳವಡಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಫೋರ್ಡ್ ರೇಂಜರ್

ಈ ಎಂಜಿನ್ 168-ಬಿಎಚ್‌ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ನೊಂದಿಗೆ 10-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಿಸಲಾಗಿದೆ. ಇದರೊಂದಿಗೆ ಫೋರ್-ವ್ಹೀಲ್-ಡ್ರೈವ್ ಸಿಸ್ಟಂ ಅನ್ನು ಕೂಡ ಒಳಗೊಂಡಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಫೋರ್ಡ್ ರೇಂಜರ್

ಫೋರ್ಡ್ ರೇಂಜರ್ ಮಾದರಿಯನ್ನು ಆಫ್-ರೋಡ್ ಪ್ರಿಯರನ್ನು ಗುರಿಯಾಗಿಸಿ ಬಿಡುಗಡೆಗೊಳಿಸಬಹುದು. ಆದ್ದರಿಂದ ಟಾರ್ಕ್ ಬಗ್ಗೆ ಹೆಚ್ಚಿನ ಗಮನಹರಿಸಬಹುದು. ಫೋರ್-ವ್ಹೀಲ್-ಡ್ರೈವ್ ಸಿಸ್ಟಂನೊದಿಗೆ ಟೆರೈನ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಟಿಎಂಎಸ್), ಲಾಕಿಂಗ್ ಡಿಫರೆನ್ಷಿಯಲ್ಸ್, ಹಿಲ್- ಕ್ಲೈಂಬ್ ಅಸಿಸ್ಟ್, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ರೋಲ್‌ಓವರ್ ಮೆಟಿಗೇಷನ್ ಫೀಚರ್ ಗಳನ್ನು ಹೊಂದಿರಲಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಫೋರ್ಡ್ ರೇಂಜರ್

ಪೋರ್ಡ್ ರೇಂಜರ್ ಮಾದರಿಯಲ್ಲಿ ಎರಡು-ಸಾಲಿನ ಸೀಟಿಂಗ್ ವ್ಯವಸ್ಥೆಯನ್ನು ಹೊಂದಿದೆ. ಈ ಹೊಸ ರೇಂಜರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಇನ್ನು ಫೋರ್ಡ್ ಕಂಪನಿಯು ಖಚಿತಪಡಿಸಲಾಗಿಲ್ಲ.

Most Read Articles

Kannada
Read more on ಫೋರ್ಡ್ ford
English summary
Ford Ranger Spied In India. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X