2021ಕ್ಕೆ ಬಿಡುಗಡೆಯಾಗಲಿವೆ ನ್ಯೂ ಜನರೇಷನ್ ಆಲ್ಟೊ ಮತ್ತು ವಿಟಾರಾ ಎಸ್‌ಯುವಿ

ಬಿಎಸ್-6 ಎಮಿಷನ್ ಜಾರಿ ನಂತರ ಹೊಸ ಕಾರುಗಳ ಮಾರಾಟದಲ್ಲಿ ಭಾರೀ ಬದಲಾವಣೆ ಪರಿಚಯಿಸಿರುವ ಮಾರುತಿ ಸುಜುಕಿ ಬಜೆಟ್ ಕಾರುಗಳ ಮಾದರಿಗಳ ಮಾರಾಟದ ಮೇಲೆ ಹೆಚ್ಚು ಒತ್ತು ನೀಡುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ.

ಬಿಡುಗಡೆಯಾಗಲಿವೆ ನ್ಯೂ ಜನರೇಷನ್ ಆಲ್ಟೊ ಮತ್ತು ವಿಟಾರಾ ಎಸ್‌ಯುವಿ

ಹೊಸ ಎಮಿಷನ್ ಜಾರಿ ನಂತರ ಡೀಸೆಲ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ಮಾರುತಿ ಸುಜುಕಿ ಕಂಪನಿಯು ಪೆಟ್ರೋಲ್, ಪೆಟ್ರೋಲ್ ಸ್ಮಾರ್ಟ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಮೇಲೆ ಹೆಚ್ಚು ಒತ್ತು ನೀಡುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿದೆ. ಇದರಲ್ಲಿ ಹೊಸ ತಲೆಮಾರಿನ ಆಲ್ಟೊ ಸೇರಿದಂತೆ ಹೊಚ್ಚ ಹೊಸ ಕಾರು ಮಾದರಿಯಾದ ವಿಟಾರಾ ಎಸ್‌ಯುವಿ ಕೂಡಾ ಒಂದಾಗಿದೆ.

ಬಿಡುಗಡೆಯಾಗಲಿವೆ ನ್ಯೂ ಜನರೇಷನ್ ಆಲ್ಟೊ ಮತ್ತು ವಿಟಾರಾ ಎಸ್‌ಯುವಿ

ವಿಟಾರಾ ಬ್ರೆಝಾ ಕಾರುಗಳಿಂತಲೂ ವಿಭಿನ್ನವಾಗಿರುವ ವಿಟಾರಾ ಎಸ್‌ಯುವಿ ಕಾರು ಎಸ್ ಕ್ರಾಸ್‌ ಕಾರುಗಳಿಂತಲೂ ಹೆಚ್ಚಿನ ಮಟ್ಟದ ಐಷಾರಾಮಿ ಸೌಲಭ್ಯಗಳನ್ನು ಹೊಂದಿರಲಿದ್ದು, 2021ರ ಎರಡನೇ ತ್ರೈಮಾಸಿಕ ಅವಧಿಗೆ ಭಾರತದಲ್ಲಿ ಬಿಡುಗಡೆಗೊಳ್ಳಲಿದೆ.

ಬಿಡುಗಡೆಯಾಗಲಿವೆ ನ್ಯೂ ಜನರೇಷನ್ ಆಲ್ಟೊ ಮತ್ತು ವಿಟಾರಾ ಎಸ್‌ಯುವಿ

ಹೊಸ ಕಾರಿನ ಉತ್ಪಾದನಾ ಆವೃತ್ತಿಯನ್ನು ಈಗಾಗಲೇ ಭಾರತದಲ್ಲಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ನಡೆಸಲಾಗಿದ್ದು, ಹೊಸ ಕಾರಿನ ಡಿಸೈನ್‌ಗಳು ಎಸ್‌ಯುವಿ ಪ್ರಿಯರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಿಡುಗಡೆಯಾಗಲಿವೆ ನ್ಯೂ ಜನರೇಷನ್ ಆಲ್ಟೊ ಮತ್ತು ವಿಟಾರಾ ಎಸ್‌ಯುವಿ

ಮಾರುತಿ ಸುಜುಕಿ ಕಂಪನಿಯು ಈ ಹಿಂದಿನ ವಿಟಾರಾ ಗ್ರ್ಯಾಂಡ್ ಎಸ್‌ಯುವಿ ಮಾರಾಟದಲ್ಲಿ ಆದ ಹಿನ್ನಡೆಯನ್ನು ಹೊಸ ಕಾರಿನ ಮೂಲಕ ಸುಧಾರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು, ಹೊಸ ಕಾರಿನ ಮೂಲಕ ಹ್ಯುಂಡೈ ನೆಕ್ಸ್ಟ್ ಜನರೇಷನ್ ಕ್ರೆಟಾ, ಕಿಯಾ ಸೆಲ್ಟೊಸ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 500 ನೆಕ್ಸ್ಟ್ ಜನರೇಷನ್ ಕಾರುಗಳಿಗೆ ಈ ಕಾರು ತೀವ್ರ ಪೈಪೋಟಿ ನೀಡಲಿದೆ.

ಬಿಡುಗಡೆಯಾಗಲಿವೆ ನ್ಯೂ ಜನರೇಷನ್ ಆಲ್ಟೊ ಮತ್ತು ವಿಟಾರಾ ಎಸ್‌ಯುವಿ

ಮಿಡ್ ರೇಂಜ್ ಎಸ್‍ಯುವಿ ವೈಶಿಷ್ಟ್ಯತೆ ಹೊಂದಿರುವ ವಿಟಾರಾ ಕಾರು ಹತ್ತು ಹಲವು ಐಷಾರಾಮಿ ಫೀಚರ್ಸ್‌ಗಳನ್ನು ಹೊಂದಿದ್ದು, ಹೊಸ ಕಾರು ಮಾರುತಿ ಸುಜುಕಿ ಕಂಪನಿಗೆ ಮತ್ತಷ್ಟು ಜನಪ್ರಿಯತೆ ತಂದುಕೊಡಲಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ವಿಟಾರಾ ಕಾರು 5 ಸೀಟರ್ ಮತ್ತು 7 ಸೀಟರ್ ಆವೃತ್ತಿಯಲ್ಲಿ ಬರಲಿದೆ ಎನ್ನಲಾಗಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಬಗೆಗೆ ಯಾವುದೇ ನಿಖರ ಮಾಹಿತಿಗಳಿಲ್ಲ.

ಬಿಡುಗಡೆಯಾಗಲಿವೆ ನ್ಯೂ ಜನರೇಷನ್ ಆಲ್ಟೊ ಮತ್ತು ವಿಟಾರಾ ಎಸ್‌ಯುವಿ

ಇದಲ್ಲದೇ ಹೊಸ ರೂಪದ ವಿನ್ಯಾಸದೊಂದಿಗೆ ಬಿಡುಗಡೆಯಾಗಲು ಸಿದ್ದವಾಗಿರುವ ನ್ಯೂ ಜನರೇಷನ್ ಆಲ್ಟೊ ಕೂಡಾ ಭಾರೀ ಬದಲಾವಣೆಯೊಂದಿಗೆ ಭಾರತ ಪ್ರವೇಶಿಸಲಿದ್ದು, ಕಳೆದ ಎರಡು ವರ್ಷಗಳಿಂದ ಹೊಸ ತಲೆಮಾರಿನ ಆಲ್ಟೊ ಮಾದರಿಯ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಬಿಡುಗಡೆಯಾಗಲಿವೆ ನ್ಯೂ ಜನರೇಷನ್ ಆಲ್ಟೊ ಮತ್ತು ವಿಟಾರಾ ಎಸ್‌ಯುವಿ

ಮೈಕ್ರೊ ಎಸ್‌ಯುವಿ ವೈಶಿಷ್ಟ್ಯತೆ ಹೊಂದಲಿರುವ ನ್ಯೂ ಜನರೇಷನ್ ಆಲ್ಟೊ ಕಾರು ಮಾದರಿಯು ಸಹ 2021ರ ಆರಂಭದಲ್ಲಿ ಬಿಡುಗಡೆಯಾಗಲಿದ್ದು, ಎಂಜಿನ್ ಆಯ್ಕೆಯಲ್ಲೂ ಮಹತ್ವದ ಬದಲಾವಣೆ ಪಡೆದುಕೊಳ್ಳಲಿದೆ.

ಬಿಡುಗಡೆಯಾಗಲಿವೆ ನ್ಯೂ ಜನರೇಷನ್ ಆಲ್ಟೊ ಮತ್ತು ವಿಟಾರಾ ಎಸ್‌ಯುವಿ

ಸದ್ಯ ಮಾರುಕಟ್ಟೆಯಲ್ಲಿನ ಟಾಪ್ 10 ಕಾರುಗಳ ಮಾರಾಟದಲ್ಲಿ ಬರೋಬ್ಬರಿ ಏಳು ಕಾರು ಮಾದರಿಗಳು ಮಾರುತಿ ಸುಜುಕಿ ನಿರ್ಮಾಣದ ಕಾರುಗಳಾಗಿದ್ದು, ಬಿಡುಗಡೆಯಾಗಲಿರುವ ಹೊಸ ಕಾರುಗಳ ಮೂಲಕ ಮತ್ತಷ್ಟು ಜನಪ್ರಿಯತೆ ಸಾಧಿಸುವ ತವಕದಲ್ಲಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಬಿಡುಗಡೆಯಾಗಲಿವೆ ನ್ಯೂ ಜನರೇಷನ್ ಆಲ್ಟೊ ಮತ್ತು ವಿಟಾರಾ ಎಸ್‌ಯುವಿ

ಮಾಲಿನ್ಯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಹಲವು ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿರುವುದೇ ಮಾರುತಿ ಸುಜುಕಿ ಡೀಸೆಲ್ ಎಂಜಿನ್ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಕಡಿಮೆ ಸಾಮರ್ಥ್ಯದ ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿವೆ.

ಬಿಡುಗಡೆಯಾಗಲಿವೆ ನ್ಯೂ ಜನರೇಷನ್ ಆಲ್ಟೊ ಮತ್ತು ವಿಟಾರಾ ಎಸ್‌ಯುವಿ

ಬಿಎಸ್-4 ಡೀಸೆಲ್ ಮಾದರಿಗಳನ್ನು ಬಿಎಸ್-6 ನಿಯಮ ಅನುಸಾರ ಉನ್ನತೀಕರಣವು ಕಾರುಗಳ ಬೆಲೆಯಲ್ಲಿ ಸಾಕಷ್ಟು ದುಬಾರಿಯಾಗಲಿದ್ದು, ಈ ಹಿನ್ನಲೆಯಲ್ಲಿ ಬಹುತೇಕ ಕಾರು ಕಂಪನಿಗಳು ಎಂಟ್ರಿ ಲೆವಲ್ ಕಾರುಗಳಲ್ಲಿ ಡೀಸೆಲ್ ಕಾರುಗಳನ್ನು ಸ್ಥಗಿತಗೊಳಿಸಿ ಪೆಟ್ರೋಲ್ ಮತ್ತು ಸಿಎನ್‌ಜಿ ಕಾರುಗಳನ್ನು ಹೆಚ್ಚಿಸುತ್ತಿವೆ.

Most Read Articles

Kannada
English summary
New Gen Alto And Suzuki Vitara SUV Global Debut In Next Year. Read in Kannada.
Story first published: Monday, September 28, 2020, 23:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X