ಅತ್ಯುತ್ತಮ ಆಫ್ ರೋಡ್ ಆಕ್ಸೆಸರಿಸ್ ಪಡೆದುಕೊಳ್ಳಲಿದೆ ನ್ಯೂ ಜನರೇಷನ್ ಥಾರ್

ಮಹೀಂದ್ರಾ ಕಂಪನಿಯು ತನ್ನ ಹೊಸ ತಲೆಮಾರಿನ ಥಾರ್ ಎಸ್‌ಯುವಿ ಮಾದರಿಯನ್ನ ಇದೇ ತಿಂಗಳು 2ರಂದು ಅಧಿಕೃತವಾಗಿ ಬಿಡುಗಡೆ ಮಾಡುವ ಸಿದ್ದತೆಯಲಿದ್ದು, ಹೊಸ ಕಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳ ಜೊತೆಗೆ ಅತ್ಯುತ್ತಮ ಆಫ್ ರೋಡ್ ಆಕ್ಸೆಸರಿಸ್‌ಗಳನ್ನು ಪಡೆದುಕೊಳ್ಳಲಿದೆ.

ಆಫ್ ರೋಡ್ ಆಕ್ಸೆಸರಿಸ್ ಪಡೆದುಕೊಳ್ಳಲಿದೆ ನ್ಯೂ ಜನರೇಷನ್ ಥಾರ್

ಆಫ್ ರೋಡ್ ಆಕ್ಸೆಸರಿಸ್‌ಗಳನ್ನು ಮಹೀಂದ್ರಾ ಕಂಪನಿಯೇ ಒದಗಿಸಲಿದ್ದು, ಆಸಕ್ತ ಗ್ರಾಹಕರು ಹೊಸ ಮಾದರಿಯ ಆಕ್ಸೆಸರಿಸ್‌ಗಳನ್ನು ಹೆಚ್ಚುವರಿ ದರದೊಂದಿಗೆ ಖರೀದಿ ಮಾಡಬಹುದಾಗಿದೆ. ಹೊಸ ಆಕ್ಸೆಸರಿಸ್ ಪಟ್ಟಿಯಲ್ಲಿ ಕಾರಿನ ಆಫ್ ರೋಡ್ ಕೌಶಲ್ಯಕ್ಕೆ ಪೂರಕವಾದ ತಾಂತ್ರಿಕ ಅಂಶಗಳನ್ನು ಒಳಗೊಂಡ ಪ್ಯಾಕೇಜ್ ಒದಗಿಸಲಾಗುತ್ತಿದ್ದು, ಸ್ಟ್ಯಾಂಡರ್ಡ್ ಫೀಚರ್ಸ್ ಹೊರತುಪಡಿಸಿ ಹೆಚ್ಚುವರಿ ಆಕ್ಸೆಸರಿಸ್ ಮೂಲಕ ಕಾರಿನ ಖದರ್ ಹೆಚ್ಚಿಸಬಹುದಾಗಿದೆ.

ಆಫ್ ರೋಡ್ ಆಕ್ಸೆಸರಿಸ್ ಪಡೆದುಕೊಳ್ಳಲಿದೆ ನ್ಯೂ ಜನರೇಷನ್ ಥಾರ್

ಆಫ್ ರೋಡ್ ಆಕ್ಸೆಸರಿಸ್‌ಗಳು ಥಾರ್ ಟಾಪ್ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದರೂ ಆಸಕ್ತ ಗ್ರಾಹಕರಿಗಾಗಿ ಪ್ರತ್ಯೇಕ ಆಕ್ಸೆಸರಿಸ್ ಪ್ಯಾಕೇಜ್ ನೀಡಲಾಗುತ್ತಿದ್ದು, ಅವಶ್ಯವಿರುವ ಫೀಚರ್ಸ್‌ಗಳೊಂದಿಗೆ ದುಬಾರಿ ಆಕ್ಸೆಸರಿಸ್‌ಗಳನ್ನು ಕೈಬಿಡಬಹುದಾಗಿದೆ.

ಆಫ್ ರೋಡ್ ಆಕ್ಸೆಸರಿಸ್ ಪಡೆದುಕೊಳ್ಳಲಿದೆ ನ್ಯೂ ಜನರೇಷನ್ ಥಾರ್

ಇದಕ್ಕಾಗಿಯೇ ಪ್ರತ್ಯೇಕ ಆಕ್ಸೆಸರಿಸ್ ಪ್ಯಾಕೇಜ್ ನೀಡುತ್ತಿರುವ ಮಹೀಂದ್ರಾ ಕಂಪನಿಯು ಥಾರ್ ಮಾಲೀಕತ್ವಕ್ಕೆ ಮತ್ತಷ್ಟು ಮೆರಗು ನೀಡುತ್ತಿದ್ದು, ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಸ್ಟೈಲಿಷ್, ಕಂಫರ್ಟ್, ಟೆಕ್ನಾಲಜಿ ಮತ್ತು ಸೆಫ್ಟಿ ಫೀಚರ್ಸ್‌ಗಳನ್ನು ನೀಡಲಾಗುತ್ತಿದೆ.

ಆಫ್ ರೋಡ್ ಆಕ್ಸೆಸರಿಸ್ ಪಡೆದುಕೊಳ್ಳಲಿದೆ ನ್ಯೂ ಜನರೇಷನ್ ಥಾರ್

ಇನ್ನು ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಈ ಬಾರಿ ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದು, ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಲಾಗಿದೆ. ಇದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಲಿದ್ದು, ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಆಫ್ ರೋಡ್ ಆಕ್ಸೆಸರಿಸ್ ಪಡೆದುಕೊಳ್ಳಲಿದೆ ನ್ಯೂ ಜನರೇಷನ್ ಥಾರ್

ಹೊಸ ಥಾರ್‌ನಲ್ಲಿ ಮರುವಿನ್ಯಾಸಗೊಳಿಸಲಾದ ಸೆವೆನ್ ಸ್ಲಾಟ್ ಗ್ರಿಲ್, ವೃತ್ತಾಕಾರದವಾದ ಹೆಡ್‌ಲ್ಯಾಂಪ್, 18-ಇಂಚಿನ ಆಕರ್ಷಕ ಅಲಾಯ್ ವೀಲ್ಹ್, ಡ್ಯುಯಲ್ ಬಂಪರ್, ಸ್ಕಫ್ ಪ್ಲೇಟ್, ಬಾಕ್ಸಿ ಮಾದರಿಯಲ್ಲಿ ಟೈಲ್ ಲೈಟ್‌ನೊಂದಿಗೆ ಮಾರ್ಡನ್ ಶೈಲಿ ಪಡೆದುಕೊಂಡಿದೆ.

ಆಫ್ ರೋಡ್ ಆಕ್ಸೆಸರಿಸ್ ಪಡೆದುಕೊಳ್ಳಲಿದೆ ನ್ಯೂ ಜನರೇಷನ್ ಥಾರ್

ಹೊಸ ಕಾರಿನ ಒಳಭಾಗದ ಸೌಲಭ್ಯಗಳು ಸಹ ಪ್ರಸ್ತುತ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಮಾರ್ಡನ್ ವಿನ್ಯಾಸಗಳನ್ನು ಹೊಂದಿದ್ದು, ಆಕರ್ಷಕ ಡ್ಯಾಶ್‌ಬೋರ್ಡ್‌ನೊಂದಿಗೆ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋಗೆ ಸರ್ಪೋಟ್ ಮಾಡಬಲ್ಲ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎಲ್ಲಾ ಮಾದರಿಯ ಹವಾಗುಣವನ್ನು ತಡೆಯಬಲ್ಲ ರೂಫ್ ಮೌಂಟೆಡ್ ಆಡಿಯೋ ಸ್ಪಿಕರ್ಸ್, ಮಲ್ಟಿ ಕಲರ್ ಇನ್ಫಾಮೆಷನ್ ಡಿಸ್‌ಪ್ಲೇ ಮತ್ತು ಸ್ಟೀರಿಂಗ್ ಮೌಟೆಂಟ್ ಕಂಟ್ರೋಲ್ ಸೌಲಭ್ಯ ನೀಡಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಆಫ್ ರೋಡ್ ಆಕ್ಸೆಸರಿಸ್ ಪಡೆದುಕೊಳ್ಳಲಿದೆ ನ್ಯೂ ಜನರೇಷನ್ ಥಾರ್

ಥಾರ್‌ ಹೊಸ ಆವೃತ್ತಿಯಲ್ಲಿ ಬಿಎಸ್-6 ಎಂಜಿನ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಡೀಸೆಲ್ ಮಾದರಿಯು 132-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಪೆಟ್ರೋಲ್ ಮಾದರಿಯು 152-ಬಿಎಚ್‌ಪಿ, 320-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಆಫ್ ರೋಡ್ ಆಕ್ಸೆಸರಿಸ್ ಪಡೆದುಕೊಳ್ಳಲಿದೆ ನ್ಯೂ ಜನರೇಷನ್ ಥಾರ್

ಇನ್ನುಳಿದಂತೆ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಸೆಫ್ಟಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಎರಡು ಎಂಜಿನ್ ಆಯ್ಕೆಗಳಲ್ಲೂ 4x4 ಡ್ರೈವ್ ಸಿಸ್ಟಂ, ಕ್ರೂಸ್ ಕಂಟ್ರೋಲ್, 255/65 18-ಇಂಚಿನ ಆಲ್ ಟೆರೆನ್ ಟೈರ್ಸ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ರೋಲ್ ಓವರ್ ಮಿಟಿಗೆಷನ್, ತ್ರೀ ಪಾಯಿಂಟ್ ಸಿಲ್ಟ್ ಬೆಲ್ಟ್, ರಿಯರ್ ವ್ಯೂ ಕ್ಯಾಮೆರಾ ಜೋಡಿಸಲಾಗಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಆಫ್ ರೋಡ್ ಆಕ್ಸೆಸರಿಸ್ ಪಡೆದುಕೊಳ್ಳಲಿದೆ ನ್ಯೂ ಜನರೇಷನ್ ಥಾರ್

ಮಾಹಿತಿಗಳ ಪ್ರಕಾರ, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ದರದಂತೆ ಆರಂಭಿಕವಾಗಿ ರೂ. 9.75 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.12.25 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿದ್ದು, ಆಫ್-ರೋಡ್ ಕೌಶಲ್ಯಕ್ಕೆ ಪೂರಕವಾದ ಹಲವಾರು ತಾಂತ್ರಿಕ ಅಂಶಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಳ್ಳಲಿದೆ.

Most Read Articles

Kannada
English summary
2020 Mahindra Thar Accessories List Leaked Ahead Of Launch. Read in Kannada.
Story first published: Thursday, October 1, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X