ಲಾಕ್‌ಡೌನ್‌ ನಡುವೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2020ರ ಮಹೀಂದ್ರಾ ಥಾರ್

ಐಕಾನಿಕ್ ಆಫ್-ರೋಡರ್ 2020ರ ಥಾರ್ ಅನ್ನು ಈ ವರ್ಷದ ಮಧ್ಯದಲ್ಲಿ ಬಿಡುಗಡೆಗೊಳಿಸುವುದಾಗಿ ಮಹೀಂದ್ರಾ ಕಂಪನಿಯು ಖಚಿತಪಡಿಸಿದೆ. ಮಹೀಂದ್ರಾ ಕಂಪನಿಯು ಈ ಥಾರ್ ಎಸ್‍ಯುವಿಯನ್ನು ಭಾರತೀಯ ಆಟೋಮೊಬೈಲ್ ಕೇತ್ರದ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಸ್ಪಾಟ್ ಟೆಸ್ಟ್ ನಡೆಸಿದ ಎಸ್‍ಯುವಿ ಎಂದು ಹೇಳಬಹುದು.

ಲಾಕ್‌ಡೌನ್‌ ನಡುವೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2020ರ ಮಹೀಂದ್ರಾ ಥಾರ್

ನಿಮಗೆ ಅಚ್ಚರಿಯಾಗಬಹುದು ಈ ಹೊಸ ಮಹೀಂದ್ರಾ ಥಾರ್ ಎಸ್‍ಯುವಿಯ ಸ್ಪಾಟ್ ಟೆಸ್ಟ್ ಸುಮಾರು ಮೂರು ವರ್ಷಗಳಿಂದ ಪ್ರಾರಂಭಿಸಿದೆ. ಈ ಮಹೀಂದ್ರಾ ಥಾರ್ ಸ್ಪಾಟ್ ಟೆಸ್ಟ್ ಸ್ಪೈ ಚಿತ್ರಗಳು ಸುಮಾರು ಮೂರು ವರ್ಷಗಳಿಂದ ಅಂತರ್ಜಾಲದಲ್ಲಿ ಸೋರಿಕೆಯಾಗಿದೆ ಎಂದು ರಶ್ಲೇನ್ ವರದಿಮಾಡಿದೆ. ಕರೋನಾ ಭೀತಿಯಿಂದ ಕೇಂದ್ರ ಸರ್ಕಾರವು ದೇಶಾದ್ಯಂತ ಲಾಕ್‌ಡೌನ್‌ ಮಾಡಲಾಗಿದೆ. ಮೂರನೇ ಹಂತದ ಲಾಕ್‌ಡೌನ್‌ ನಲ್ಲಿ ಕೆಲವು ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ.

ಲಾಕ್‌ಡೌನ್‌ ನಡುವೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2020ರ ಮಹೀಂದ್ರಾ ಥಾರ್

ಕೆಲವು ಷರತ್ತುಗಳೊಂದಿಗೆ ಕರ್ಖಾನೆಗಳನ್ನು ಪುನರ್‌ ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಮಹೀಂದ್ರಾ ಕಂಪನಿಯು ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಬ್ರಾಂಡ್‌ನ ಉತ್ಪಾದನಾ ಕೇಂದ್ರದ ಬಳಿ ಥಾರ್ ಎಸ್‍ಯುವಿಯ ಸ್ಪಾಟ್ ಟೆಸ್ಟ್ ಅನ್ನು ನಡೆಸಿದ್ದಾರೆ.

MOST READ: ಹೊಸ ಆಕ್ಟೀವಿಯಾ ಆರ್‍ಎಸ್ 245 ಕಾರಿನ ವಿತರಣೆಯನ್ನು ಆರಂಭಿಸಿದ ಸ್ಕೋಡಾ

ಲಾಕ್‌ಡೌನ್‌ ನಡುವೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2020ರ ಮಹೀಂದ್ರಾ ಥಾರ್

ಹೊಸ ಥಾರ್ ನಲ್ಲಿ ಹಲವಾರು ಹೊಸ ಫೀಚರ್ಸ್‍‍ಗಳನ್ನು ಅಳವಡಿಸಲಾಗುತ್ತಿದೆ. ಹೊಸ ಥಾರ್‍‍ನಲ್ಲಿ ಫ್ಲೋಟಿಂಗ್ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಇದು ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ವನ್ನು ಒಳಗೊಂಡಿದೆ ಎಂದು ನಿರೀಕ್ಷಿಸಲಾಗಿದೆ.

ಲಾಕ್‌ಡೌನ್‌ ನಡುವೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2020ರ ಮಹೀಂದ್ರಾ ಥಾರ್

2020ರ ಥಾರ್‍‍‍ನಲ್ಲಿರುವ ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ತನ್ನ ಬ್ರ್ಯಾಂಡ್‍ನ ಸರಣಿಯಲ್ಲಿರುವ ಟಿ‍ಯುವಿ 300 ಎಸ್‍‍ಯುವಿಯಲ್ಲಿರುವ ಕ್ಲಸ್ಟರ್‍ ಅನ್ನು ಹೋಲುವಂತಿದೆ. ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಡಿಜಿಟಲ್ ಡಿಸ್‍‍ಪ್ಲೇ ಯುನಿ‍‍ಟ್‍ನೊಂದಿಗೆ ಎರಡು ಅನಲಾಗ್ ಡಯಲ್‍ಗಳನ್ನು ಒಳಗೊಂಡಿದೆ.

MOST READ: ಹೊಸ ಹ್ಯುಂಡೈ ವೆನ್ಯೂ ಪೆಟ್ರೋಲ್ ಆವೃತ್ತಿಯ ಮೈಲೇಜ್ ಮಾಹಿತಿ ಬಹಿರಂಗ

ಲಾಕ್‌ಡೌನ್‌ ನಡುವೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2020ರ ಮಹೀಂದ್ರಾ ಥಾರ್

ಹೊಸ ಮಹೀಂದ್ರಾ ಥಾರ್‍‍ನ 4×4 ಲಿವರ್ ವಿಭಿನ್ನವಾಗಿದೆ. ಇದರಲ್ಲಿ 2ಡಬ್ಲ್ಯುಡಿ(ಆರ್‍‍ಡಬ್ಲ್ಯುಡಿ) ಹೈ, 4ಡಬ್ಲ್ಯುಡಿ ಹೈ ಮತ್ತು 4 ಡಬ್ಲ್ಯು ಡಿ ಲೋ ಎಂಬ ಮೂರು ಮೋಡ್‍‍ಗಳಿವೆ. 2020ರ ಮಹೀಂದ್ರಾ ಥಾರ್ ಎಸ್‍‍ಯುವಿಯನ್ನು ಸಾಫ್ಟ್ ಟಾಪ್ ಹಾಗೂ ಹಾರ್ಡ್ ಟಾಪ್ - ಎಂಬ ಎರಡು ಡೋರ್ ಬಾಡಿ ಸ್ಟೈಲ್‌ಗಳಲ್ಲಿ ನೀಡಲಾಗುವುದು.

ಲಾಕ್‌ಡೌನ್‌ ನಡುವೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2020ರ ಮಹೀಂದ್ರಾ ಥಾರ್

ಎಸ್‍‍ಯುವಿಯ ಹೊರಭಾಗವು ಜೀಪ್ ಶೈಲಿಯ ವಿನ್ಯಾಸವನ್ನು ಹೊಂದಿದ್ದರೆ, ಇಂಟಿರಿಯರ್ ಅನ್ನು ಹೆಚ್ಚು ಅಪ್‍‍ಡೇಟ್ ಮಾಡಲಾಗಿದೆ. ಮಾರುಕಟ್ಟೆಯಲ್ಲಿರುವ ಥಾರ್ 2.5 ಲೀಟರ್ ಡೀಸೆಲ್ ಬಿಎಸ್ 4 ಎಂಜಿನ್‌ ಹೊಂದಿದೆ. ಈ ಎಂಜಿನ್ 105 ಬಿ‍‍ಹೆಚ್‌ಪಿ ಪವರ್ ಹಾಗೂ 247 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಲಾಕ್‌ಡೌನ್‌ ನಡುವೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2020ರ ಮಹೀಂದ್ರಾ ಥಾರ್

ಹೊಸ ಥಾರ್ 120 ಬಿ‍‍ಹೆಚ್‌ಪಿ ಪವರ್ ಉತ್ಪಾದಿಸುವ 2.0 ಲೀಟರ್ ಡೀಸೆಲ್ ಬಿಎಸ್ 6 ಎಂಜಿನ್ ಹೊಂದಿರಲಿದೆ. ಹೊಸ ಫೀಚರ್, ದೊಡ್ಡ ಗಾತ್ರದ ಬಾಡಿ, ಬಲಶಾಲಿಯಾದ ಬಿಎಸ್ 6 ಡೀಸೆಲ್ ಎಂಜಿನ್ ಹೊಂದಲಿರುವ ಹೊಸ ಥಾರ್‌ನ ಬೆಲೆಯು ಮಾರುಕಟ್ಟೆಯಲ್ಲಿರುವ ಥಾರ್‌ಗಿಂತ ಹೆಚ್ಚಾಗುವ ಸಾಧ್ಯತೆಗಳಿವೆ.

ಲಾಕ್‌ಡೌನ್‌ ನಡುವೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2020ರ ಮಹೀಂದ್ರಾ ಥಾರ್

ಹೊಸ ಥಾರ್‍‍ನಲ್ಲಿ 5 ಸ್ಪೋಕ್ ವಿನ್ಯಾಸದ ದೊಡ್ಡ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ. ಅಲಾಯ್ ವ್ಹೀಲ್‍‍ಗಳಲ್ಲಿ 235 ಅಥವಾ 245 ಸೆಕ್ಷನ್ ಟಯರ್‍‍ಗಳನ್ನು ನೀಡಲಾಗುವುದು. ಹೊಸ ಥಾರ್ ಮಾರುಕಟ್ಟೆಯಲ್ಲಿರುವ ಥಾರ್‍‍ಗಿಂತ ಹೆಚ್ಚು ಬೆಲೆಯನ್ನು ಹೊಂದಿರಲಿದೆ. ಹೊ‍‍ಸ ಮಹೀಂದ್ರಾ ಎಸ್‍‍ಯುವಿಯು ಶೀಘ್ರದಲ್ಲೇ ಹೊಸ ಫೀಚರ್ಸ್‍‍ಗಳೊಂದಿಗೆ ಬಿಡುಗಡೆಯಾಗಲಿದೆ.

Most Read Articles

Kannada
English summary
2020 Mahindra Thar spied amid lockdown – Testing restarts. Read in Kannada.
Story first published: Thursday, May 7, 2020, 16:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X