ಅನಾವರಣವಾಯ್ತು 2021ರ ಹವಾಲ್ ಹೆಚ್2 ಎಸ್‍ಯುವಿ

ಚೀನಾದ ವಾಹನ ತಯಾರಕ ಕಂಪನಿಯಾದ ಗ್ರೇಟ್ ವಾಲ್ ಮೋಟಾರ್ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಹವಾಲ್ ಕಾನ್ಸೆಪ್ಟ್ ಹೆಚ್ ಅನ್ನು ಪ್ರದರ್ಶಿಸಿತ್ತು. ಗ್ರೇಟ್ ವಾಲ್ ಮೋಟಾರ್ ಕಂಪನಿಯು ಕಾನ್ಸೆಪ್ಟ್ ಹೆಚ್ ಅನ್ನು ಆಧರಿಸಿರುವ 2021 ಹವಾಲ್ ಹೆಚ್2 ಎಂದು ಕರೆಯಲ್ಪಡುವ ಎಸ್‍ಯುವಿಯನ್ನು ಅನಾವರಣಗೊಳಿಸಿದೆ.

ಅನಾವರಣವಾಯ್ತು 2021ರ ಹವಾಲ್ ಹೆಚ್2 ಎಸ್‍ಯುವಿ

ಎರಡನೇ ತಲೆಮಾರಿನ ಹವಾಲ್ ಹೆಚ್2 ಎಸ್‍ಯುವಿಯನ್ನು ಚೀನಾದಲ್ಲಿ ಹವಾಲ್ ಫಸ್ಟ್ ಲವ್ ಎಂದು ಬ್ರಾಂಡ್ ಮಾಡಲಾಗಿದೆ, ಚೀನಾದ ಇತರ ಹವಾಲ್ ಕಾರುಗಳಿಗೆ ಡಾಗೌ' ಮತ್ತು ‘ಬಿಗ್ ಡಾಗ್ ಎಂಬ ವಿಶಿಷ್ಟ ಹೆಸರುಗಳನ್ನು ನೀಡುವಲ್ಲಿ ಹೆಸರುವಾಸಿಯಾಗಿದೆ. ಹೊಸ ಹವಾಲ್ ಹೆಚ್2 ನೊಂದಿಗೆ ಗ್ರೇಟ್ ವಾಲ್ ಮೋಟಾರ್ಸ್ ಚೀನಾದ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಎಸ್‌ಯುವಿ ಖರೀದಿದಾರರನ್ನು ಗುರಿಯಾಗಿಸಲಿದೆ

ಅನಾವರಣವಾಯ್ತು 2021ರ ಹವಾಲ್ ಹೆಚ್2 ಎಸ್‍ಯುವಿ

ಹವಾಲ್ ಬ್ರ್ಯಾಂಡ್ ಗ್ರೇಟ್ ವಾಲ್ ಮೋಟಾರ್ ಉಪ-ಬ್ರ್ಯಾಂಡ್ ಆಗಿದೆ. ಹೆಚ್2 ಮಧ್ಯಮ ಗಾತ್ರದ ಎಸ್‍ಯುವಿಯಾಗಿದೆ. ಈ ಹವಾಲ್ ಹೆಚ್2 ಎಸ್‍ಯುವಿಯು ಹ್ಯುಂಡೈ ಕ್ರೆಟಾಗಿಂತ ಸ್ವಲ್ಪ ದೊಡ್ಡದಾಗಿದೆ. ಹಿಂದಿನ ತಲೆಮಾರಿನ ಹವಾಲ್ ಹೆಚ್2 ಎಸ್‍ಯುವಿಯನ್ನು 2014ರಲ್ಲಿ ಪರಿಚಯಿಸಲಾಯಿತು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಯ್ತು 2021ರ ಹವಾಲ್ ಹೆಚ್2 ಎಸ್‍ಯುವಿ

ಹೊಸ ತಲೆಮಾರಿನ ಹೆಚ್2 ಮಿಡ್ ಎಸ್‍ಯುವಿ ನ್ಯಾಸವು ಹವಾಲ್ ಕಾನ್ಸೆಪ್ಟ್ ಹೆಚ್‌ಗೆ ಹೋಲುತ್ತದೆ. ಉತ್ಪಾದನಾ-ಸ್ಪೆಕ್ ಹವಾಲ್ ಹೆಚ್2 ವಿನ್ಯಾಸವು ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ.

ಅನಾವರಣವಾಯ್ತು 2021ರ ಹವಾಲ್ ಹೆಚ್2 ಎಸ್‍ಯುವಿ

ಇದು ದೊಡ್ಡ, ಕ್ರೋಮ್ಡ್-ಓವರ್ ಮೆಶ್ ಗ್ರಿಲ್ ಮತ್ತು ಟಿ-ಆಕಾರದ ಎಲ್ಇಡಿ ಡಿಆರ್ಎಲ್ (ಡೇಟೈಮ್ ರನ್ನಿಂಗ್ ಲ್ಯಾಂಪ್ಸ್) ಹೊಂದಿರುವ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಅನ್ನು ಹೊಂದಿದೆ. ಮುಂಭಾಗದ ಬಂಪರ್ ನಲ್ಲಿ ಲಂಬವಾಗಿ ಜೋಡಿಸಲಾದ ಹೆಚ್ಚುವರಿ ಎಲ್ಇಡಿ ಲೈಟ್ ಗೈಡ್ ಗಳನ್ನು ಒಳಗೊಂಡಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಅನಾವರಣವಾಯ್ತು 2021ರ ಹವಾಲ್ ಹೆಚ್2 ಎಸ್‍ಯುವಿ

ಹೊಸ ತಲೆಮಾರಿನ ಹವಾಲ್ ಹೆಚ್2 ಎಸ್‍ಯುವಿಯಲ್ಲಿ ಡ್ಯುಯಲ್-ಟೋನ್ 18-ಇಂಚಿನ ಅಲಾಯ್ ವ್ಹೀಲ್ ಮತ್ತು ಕಾನ್ಸೆಪ್ಟ್ ಹೆಚ್ 19 ಇಂಚಿನ ವ್ಹೀಲ್ ಗಳನ್ನು ಹೊಂದಿದೆ. ಎಸ್‍ಯುವಿ ಮಸ್ಕ್ಯುಲರ್ ಸೈಡ್ ಪ್ರೊಫೈಲ್, ಟಿ-ಆಕಾರದ ಎಲ್ಇಡಿ ಟೈಲ್-ಲ್ಯಾಂಪ್ಸ್, ರೂಫ್-ಇಂಟಿಗ್ರೇಟೆಡ್ ಸ್ಪಾಯ್ಲರ್ ಮತ್ತು ರಿಯರ್ ಡಿಫ್ಯೂಸರ್ ಹೊಂದಿದೆ.

ಅನಾವರಣವಾಯ್ತು 2021ರ ಹವಾಲ್ ಹೆಚ್2 ಎಸ್‍ಯುವಿ

ಎರಡನೇ ತಲೆಮಾರಿನ ಹವಾಲ್ ಹೆಚ್2 ಎಸ್‍ಯುವಿಯ ಇಂಟಿರಿಯರ್ ಕಾನ್ಸೆಪ್ಟ್ ಹೆಚ್‌ಗೆ ಹೋಲುತ್ತದೆ, ಇದು ಫ್ರೀಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದೆ. ಇನ್ನು ಪನೋರಮಿಕ್ ಸನ್‌ರೂಫ್, ಹೆಡ್ಸ್-ಅಪ್ ಡಿಸ್ ಪ್ಲೇ ಗೇರ್ ಸೆಲೆಕ್ಟರ್‌ಗಾಗಿ ರೋಟರಿ ಡಯಲ್, ಲೆದರ್ ಸೀಟುಗಳು, ಮಲ್ಟಿ-ಫಂಕ್ಷನಲ್ ಸ್ಟೀಯರಿಂಗ್ ವ್ಹೀಲ್ ಮತ್ತು ಕ್ಲೈಮೆಂಟ್ ಕಂಟ್ರೋಲ್ ಗಳನ್ನು ಒಳಗೊಂಡಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಅನಾವರಣವಾಯ್ತು 2021ರ ಹವಾಲ್ ಹೆಚ್2 ಎಸ್‍ಯುವಿ

ಹೊಸ ಹವಾಲ್ ಹೆಚ್2 ಎಸ್‍ಯುವಿ ಮಾಡ್ಯುಲರ್ ಲೆಮನ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು 4.2 ಮೀಟರ್ ಮತ್ತು 5.1 ಮೀಟರ್ ಉದ್ದದ ಅಳತೆಯ ವಾಹನಗಳಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಅನಾವರಣವಾಯ್ತು 2021ರ ಹವಾಲ್ ಹೆಚ್2 ಎಸ್‍ಯುವಿ

ಚೀನಾದ ಮಾರುಕಟ್ಟೆಯಲ್ಲಿ, ಎರಡನೇ ತಲೆಮಾರಿನ ಹವಾಲ್ ಎಚ್ 2 1.5 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 150 ಬಿಹೆಚ್‌ಪಿ ಪವರ್ ಮತ್ತು 210 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಹೊಂದಿದೆ.

Most Read Articles

Kannada
English summary
2021 Haval H2 SUV Unveiled. Read In Kannada.
Story first published: Tuesday, September 29, 2020, 19:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X