ಅನಾವರಣಗೊಂಡ ಹೊಸ ಹವಾಲ್ ಎಸ್‌ಯುವಿಯ ರೇಖಾಚಿತ್ರ

ಹವಾಲ್ ಕಂಪನಿಯ ಉಪಾಧ್ಯಕ್ಷ ಹಾಗೂ ಜಾಗತಿಕ ವಿನ್ಯಾಸ ನಿರ್ದೇಶಕರಾದ ಫಿಲ್ ಸಿಮನ್ಸ್‌ರವರು ಕಂಪನಿಯ ಹೊಸ ಎಸ್‌ಯುವಿಯ ರೇಖಾಚಿತ್ರವನ್ನು ಅನಾವರಣಗೊಳಿಸಿದ್ದಾರೆ. ಫಿಲ್ ಸಿಮನ್ಸ್ ಈ ಹಿಂದೆ ಲ್ಯಾಂಡ್ ರೋವರ್‌ನ ವಿನ್ಯಾಸ ನಿರ್ದೇಶಕರಾಗಿದ್ದರು.

ಅನಾವರಣಗೊಂಡ ಹೊಸ ಹವಾಲ್ ಎಸ್‌ಯುವಿಯ ರೇಖಾಚಿತ್ರ

ಈ ರೇಖಾ ಚಿತ್ರಗಳಲ್ಲಿ ಹೊಸ ಹವಾಲ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ರೌಂಡ್ ಎಡ್ಜ್ ಇರುವ ಬಾಕ್ಸ್‌ಗಳ ರೂಪದಲ್ಲಿ ತೋರಿಸಲಾಗಿದೆ. ಮುಂಭಾಗವು ಮಧ್ಯದಲ್ಲಿ ನೇರವಾಗಿರುವ, ಬಾಗಿರುವ, ದೊಡ್ಡ ಗ್ರಿಲ್ ಸಿಸ್ಟಂ ಅನ್ನು ಹೊಂದಿದೆ. ರೌಂಡ್ ಶೇಪಿನ ಹೆಡ್‌ಲ್ಯಾಂಪ್ ಈ ಎಸ್‌ಯುವಿಗೆ ರೆಟ್ರೊ ಲುಕ್ ನೀಡುತ್ತದೆ.

ಅನಾವರಣಗೊಂಡ ಹೊಸ ಹವಾಲ್ ಎಸ್‌ಯುವಿಯ ರೇಖಾಚಿತ್ರ

ಕಾರಿನ ಬದಿಯಲ್ಲಿ ನೀಡಲಾಗಿರುವ ವಿಶಾಲವಾದ ಫೆಂಡರ್‌ಗಳು ಕಾರ್ ಅನ್ನು ಕ್ಲಾಸಿಯಾಗಿ ಕಾಣುವಂತೆ ಮಾಡುತ್ತವೆ. ಎಸ್‌ಯುವಿಯ ಹಿಂಭಾಗವನ್ನು ಮುಂಭಾಗದಂತೆಯೇ ವಿನ್ಯಾಸಗೊಳಿಸಲಾಗಿದೆ. ಹಿಂಭಾಗದಲ್ಲಿ ಎಲ್-ಶೇಪಿನ ಟೇಲ್ ಲೈಟ್‌ಗಳು ಹಾಗೂ ಟೇಲ್‌ಗೇಟ್‌ನಲ್ಲಿ ಶಾರ್ಪ್ ಕ್ರೀಸ್‌ಗಳಿವೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಅನಾವರಣಗೊಂಡ ಹೊಸ ಹವಾಲ್ ಎಸ್‌ಯುವಿಯ ರೇಖಾಚಿತ್ರ

ಇದರ ಜೊತೆಗೆ ಕಾರಿನ ಸುತ್ತಲೂ ಬಾಡಿ ಕ್ಲಾಡಿಂಗ್ ನೀಡಲಾಗಿದೆ. ಈ ರೇಖಾ ಚಿತ್ರಗಳಲ್ಲಿ ಎಸ್‌ಯುವಿಯ ಇಂಟಿರಿಯರ್ ಕ್ಯಾಬಿನ್, ಎಂಜಿನ್ ಹಾಗೂ ಟ್ರಾನ್ಸ್‌ಮಿಷನ್ ಸಿಸ್ಟಂ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಚೀನಾದಲ್ಲಿ ಟೆಸ್ಟ್ ರನ್‌ಗಳಿಗಾಗಿ ಗುರುತಿಸಲಾಗಿದ್ದ ಈ ಎಸ್‌ಯುವಿಯ ಇಂಟಿರಿಯರ್ ಅನ್ನು ಬಿಡುಗಡೆಗೊಳಿಸಲಾಗಿದೆ.

ಅನಾವರಣಗೊಂಡ ಹೊಸ ಹವಾಲ್ ಎಸ್‌ಯುವಿಯ ರೇಖಾಚಿತ್ರ

ಇಂಟಿರಿಯರ್‌, ಡ್ಯಾಶ್‌ಬೋರ್ಡ್ ಹಾಗೂ ದೊಡ್ಡ ಗಾತ್ರದ ಇನ್ಫೋಟೇನ್‌ಮೆಂಟ್ ಸಿಸ್ಟಂಗಳನ್ನು ಹೊಂದಿದೆ. ಈ ಗಾತ್ರದ ಇನ್ಫೋಟೈನ್‌ಮೆಂಟ್ ಸಿಸ್ಟಂಗಳನ್ನು ಮಾರಾಟ ಮಾದರಿಯಲ್ಲಿ ನೀಡಲಾಗುತ್ತದೆಯೇ ಇಲ್ಲವೇ ಎಂಬುದು ದೃಢಪಟ್ಟಿಲ್ಲ. ಕಂಪನಿಯು ಈ ಎಸ್‌ಯುವಿಯಲ್ಲಿ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸುವ ನಿರೀಕ್ಷೆಗಳಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಅನಾವರಣಗೊಂಡ ಹೊಸ ಹವಾಲ್ ಎಸ್‌ಯುವಿಯ ರೇಖಾಚಿತ್ರ

ಈ ಹೊಸ ಎಸ್‌ಯುವಿಯನ್ನು ಹವಾಲ್‌ನ ಎಫ್-ಸೀರೀಸ್‌‌ಗೆ ಬದಲು ಪ್ರತ್ಯೇಕವಾದ ಎಸ್‌ಯುವಿ ಮಾದರಿಯಾಗಿ ಬಿಡುಗಡೆಗೊಳಿಸಲಾಗುವುದು. ಬಾಕ್ಸ್ ಶೇಪ್ ಲುಕ್‌ನಿಂದಾಗಿ ಈ ಎಸ್‌ಯುವಿ ಮಾದರಿ ಹಾಗೂ ಉತ್ಪಾದನಾ ಹಂತದಲ್ಲಿರುವ ಇತರ ಹವಾಲ್ ಹೆಚ್ 5 ಮಾದರಿಗಳು ಹೆಚ್ಚು ಜನಪ್ರಿಯವಾಗಿಲ್ಲ.

ಅನಾವರಣಗೊಂಡ ಹೊಸ ಹವಾಲ್ ಎಸ್‌ಯುವಿಯ ರೇಖಾಚಿತ್ರ

ಹವಾಲ್‌ನ ಹೊಸ ಎಸ್‌ಯುವಿ ಮಾದರಿಯನ್ನು ಈ ವರ್ಷದ ಕೊನೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಚೀನಾದ ಪ್ರಮುಖ ಕಾರು ತಯಾರಕ ಕಂಪನಿಯಾದ ಗ್ರೇಟ್ ವಾಲ್ ಮೋಟಾರ್ಸ್, ಹವಾಲ್ ಬ್ರಾಂಡ್ ಮೂಲಕ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಲು ಮುಂದಾಗಿದೆ.

Most Read Articles

Kannada
English summary
New Haval SUV design sketches revealed by Great Wall Motors. Read in Kannada.
Story first published: Sunday, May 31, 2020, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X