ರೆಟ್ರೋ ವಿನ್ಯಾಸದ ಹವಾಲ್ ಬಿ06 ಎಸ್‌ಯುವಿ ಅನಾವರಣಗೊಳಿಸಿದ ಜಿಡಬ್ಲ್ಯುಎಂ

ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ತನ್ನ ಸಹ ಬ್ರಾಂಡ್ ಹವಾಲ್ ನಿರ್ಮಾಣದ ಬಿ06 ರೆಟ್ರೋ ವಿನ್ಯಾಸದ ಎಸ್‌ಯುವಿ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಕಾರು ಮುಂದಿನ ಅಗಸ್ಟ್ ಹೊತ್ತಿಗೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಗೊಳ್ಳಲಿದೆ.

ರೆಟ್ರೋ ವಿನ್ಯಾಸದ ಹವಾಲ್ ಬಿ06 ಎಸ್‌ಯುವಿ ಅನಾವರಣಗೊಳಿಸಿದ ಜಿಡಬ್ಲ್ಯುಎಂ

ಚೀನಿ ಪ್ರಮುಖ ಆಟೋ ಉತ್ಪಾದನಾ ಕಂಪನಿಯಾಗಿರುವ ಗ್ರೇಟ್ ವಾಲ್ ಮೋಟಾರ್ಸ್ ಭಾರತದಲ್ಲೂ ವಿವಿಧ ಮಾದರಿಯ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಹವಾಲ್ ಬಿ06 ರೆಟ್ರೋ ಎಸ್‌ಯುವಿ ಮಾದರಿಯನ್ನು ಅಂತರ್‌ರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಚೀನಿ ಮಾರುಕಟ್ಟೆಯಲ್ಲಿ ಹಲವಾರು ಎಸ್‌ಯುವಿ ಮತ್ತು ಲೈಫ್ ಸ್ಟೈಲ್ ಪಿಕ್ಅಪ್ ವಾಹನಗಳ ಮಾರಾಟವನ್ನು ಹೊಂದಿರುವ ಜಿಡಬ್ಲ್ಯುಎಂ ಕಂಪನಿಯು ಮೊದಲ ಬಾರಿಗೆ ರೆಟ್ರೋ ವಿನ್ಯಾಸದ ಬಿ06 ಎಸ್‌ಯುವಿ ಸಿದ್ದಪಡಿಸಿದೆ.

ರೆಟ್ರೋ ವಿನ್ಯಾಸದ ಹವಾಲ್ ಬಿ06 ಎಸ್‌ಯುವಿ ಅನಾವರಣಗೊಳಿಸಿದ ಜಿಡಬ್ಲ್ಯುಎಂ

2.0-ಲೀಟರ್ ಪೆಟ್ರೋಲ್ ಎಂಜಿನ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿರುವ ಬಿ06 ಎಸ್‌ಯುವಿ ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದ್ದು, ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ಜಿ-ಕ್ಲಾಸ್ ಮಾದರಿಯಲ್ಲೇ ಹಲವು ವಿನ್ಯಾಸಗಳನ್ನು ಪಡೆದುಕೊಂಡಿದೆ.

ರೆಟ್ರೋ ವಿನ್ಯಾಸದ ಹವಾಲ್ ಬಿ06 ಎಸ್‌ಯುವಿ ಅನಾವರಣಗೊಳಿಸಿದ ಜಿಡಬ್ಲ್ಯುಎಂ

ಜಿಡಬ್ಲ್ಯುಎಂ ಕಂಪನಿಯಲ್ಲಿ ಹೊಸದಾಗಿ ನೇಮಕವಾಗಿರುವ ಡಿಸೈನರ್ ಫಿಲ್ ಶಿಮ್ಯೂನ್ಸ್ ಪರಿಕಲ್ಪನೆಯಲ್ಲಿ ಬಿ06 ಎಸ್‌ಯುವಿ ವಿನ್ಯಾಸ ಸಿದ್ದಗೊಂಡಿದ್ದು, ಡಿಸೈನರ್ ಫಿಲ್ ಶಿಮ್ಯೂನ್ಸ್ ಈ ಹಿಂದೆ ಲ್ಯಾಂಡ್ ರೋವರ್ ಗ್ಲೊಬಲ್ ಕಂಪನಿಯಲ್ಲಿ ಹಲವು ಕಾರು ಮಾದರಿಗಳನ್ನು ವಿನ್ಯಾಸದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ರೆಟ್ರೋ ವಿನ್ಯಾಸದ ಹವಾಲ್ ಬಿ06 ಎಸ್‌ಯುವಿ ಅನಾವರಣಗೊಳಿಸಿದ ಜಿಡಬ್ಲ್ಯುಎಂ

ಇದೀಗ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿ ಸೇರಿರುವ ಫಿಲ್ ಶಿಮ್ಯೂನ್ಸ್ ಅವರು ಹವಾಲ್, ವಿಯೆ, ಓರಾ ಮತ್ತು ಗ್ರೆಟ್ ವಾಲ್ ಪಿಕ್‌ಅಪ್ ಹೊಸ ವಾಹನಗಳ ವಿನ್ಯಾಸದಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ಭಾರತದಲ್ಲೂ ಕೂಡಾ ಹೊಸ ಗ್ರೇಟ್ ವಾಲ್ ಮೋಟಾರ್ಸ್ ಹೊಸ ಕಾರುಗಳನ್ನು ಸದ್ದು ಮಾಡಲಿವೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ರೆಟ್ರೋ ವಿನ್ಯಾಸದ ಹವಾಲ್ ಬಿ06 ಎಸ್‌ಯುವಿ ಅನಾವರಣಗೊಳಿಸಿದ ಜಿಡಬ್ಲ್ಯುಎಂ

ಮಧ್ಯಮ ಗಾತ್ರದ ಐಷಾರಾಮಿ ಎಸ್‌ಯುವಿ ಆವೃತ್ತಿಯಾಗಿರುವ ಹವಾಲ್ ಹೊಸ ಕಾರುಗಳು ಭಾರೀ ನೀರಿಕ್ಷೆಯೊಂದಿಗೆ ದೇಶಿಯ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಎಸ್‌ಯುವಿ, ಸೆಡಾನ್, ಎಂಪಿವಿ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿ ಬಿಡುಗಡೆ ಮಾಡುತ್ತಿದೆ.

ರೆಟ್ರೋ ವಿನ್ಯಾಸದ ಹವಾಲ್ ಬಿ06 ಎಸ್‌ಯುವಿ ಅನಾವರಣಗೊಳಿಸಿದ ಜಿಡಬ್ಲ್ಯುಎಂ

ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಗಿದ್ದ ಎಫ್5, ಎಫ್7,ಎಫ್7 ಎಕ್ಸ್ ಮತ್ತು ಹೆಚ್9 ಎಸ್‌ಯುವಿ ಕಾರುಗಳಲ್ಲಿ ಎಫ್5 ಮತ್ತು ಎಫ್7 ಕಾರುಗಳು ಮೊದಲ ಹಂತದಲ್ಲಿ ಬಿಡುಗಡೆಯಾಗಲಿವೆಯೆಂತೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ರೆಟ್ರೋ ವಿನ್ಯಾಸದ ಹವಾಲ್ ಬಿ06 ಎಸ್‌ಯುವಿ ಅನಾವರಣಗೊಳಿಸಿದ ಜಿಡಬ್ಲ್ಯುಎಂ

ಭಾರತದಲ್ಲಿ 2021ಕ್ಕೆ ಅಧಿಕೃತವಾಗಿ ಕಾರು ಉತ್ಪಾದನೆಯನ್ನು ಆರಂಭಿಸಬೇಕಿದ್ದ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಇನ್ನಷ್ಟು ತಡವಾಗಿ ಉದ್ಯಮ ವ್ಯವಹಾರಕ್ಕೆ ಚಾಲನೆ ನೀಡಲಿದ್ದು, ಹವಾಲ್ ಎಫ್5 ಮತ್ತು ಎಫ್7 ಮಾದರಿಯನ್ನು ಮಧ್ಯಮ ಶ್ರೇಣಿಯ ಎಸ್‌ಯುವಿ ಆವೃತ್ತಿಯಾಗಿ ಮತ್ತು ಎಫ್7 ಎಕ್ಸ್ ಕೂಪೆ ಆವೃತ್ತಿಯನ್ನು ಮಧ್ಯಮ ಕ್ರಮಾಂಕದ ಐಷಾರಾಮಿ ಕಾರು ಮಾದರಿಯಾಗಿ ಬಿಡುಗಡೆಗೊಳಿಸಲಿದೆ.

Most Read Articles

Kannada
English summary
New Haval SUV Unveiled By Great Wall Motors Offers Stylish Retro Boxy Design Among Other Details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X