ಹೋಂಡಾ ಅಮೇಜ್ ಮತ್ತು ಡಬ್ಲ್ಯುಆರ್-ವಿ ಮಾದರಿಗಳ ಎಕ್ಸ್‌ಕ್ಲೂಸಿವ್ ಎಡಿಷನ್ ಬಿಡುಗಡೆ

ಹೋಂಡಾ ಕಾರ್ಸ್ ಇಂಡಿಯಾ ತಮ್ಮ ಅಮೇಜ್ ಮತ್ತು ಡಬ್ಲ್ಯುಆರ್-ವಿ ಮಾದರಿಗಳಿಗಾಗಿ 'ಎಕ್ಸ್‌ಕ್ಲೂಸಿವ್ ಎಡಿಷನ್' ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಹೋಂಡಾ ಅಮೇಜ್ ಕಾರಿನ ಎಕ್ಸ್‌ಕ್ಲೂಸಿವ್ ಎಡಿಷನ್ ಬೆಲೆಯು ರೂ,7.96 ಲಕ್ಷಗಳಾದರೆ, ಡಬ್ಲ್ಯುಆರ್-ವಿ ಎಕ್ಸ್‌ಕ್ಲೂಸಿವ್ ಎಡಿಶನ್ ಬೆಲೆಯು ರೂ.9.70 ಲಕ್ಷಗಳಾಗಿದೆ.

ಹೋಂಡಾ ಅಮೇಜ್ ಮತ್ತು ಡಬ್ಲ್ಯುಆರ್-ವಿ ಮಾದರಿಗಳ ಎಕ್ಸ್‌ಕ್ಲೂಸಿವ್ ಎಡಿಷನ್ ಬಿಡುಗಡೆ

ಈ ಮೇಲಿನ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಪ್ರಕಾರವಾಗಿದೆ. ಹೋಂಡಾ ಅಮೇಜ್ ಮತ್ತು ಡಬ್ಲ್ಯುಆರ್-ವಿಗಳ ಹೊಸ ಸ್ಪೆಷಲ್ ಎಡಿಷನ್‌ಗಳು ಆಯಾ ಟಾಪ್-ಸ್ಪೆಕ್ 'ವಿಎಕ್ಸ್' ರೂಪಾಂತರಗಳನ್ನು ಆಧರಿಸಿವೆ. ಹೋಂಡಾ ಅಮೇಜ್ ಮತ್ತು ಡಬ್ಲ್ಯುಆರ್-ವಿ ಎಕ್ಸ್‌ಕ್ಲೂಸಿವ್ ಆವೃತ್ತಿಗಳನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೆರಡರನ್ನು ನೀಡಲಾಗಿದೆ.

ಹೋಂಡಾ ಅಮೇಜ್ ಮತ್ತು ಡಬ್ಲ್ಯುಆರ್-ವಿ ಮಾದರಿಗಳ ಎಕ್ಸ್‌ಕ್ಲೂಸಿವ್ ಎಡಿಷನ್ ಬಿಡುಗಡೆ

ಸ್ಪೆಷಲ್ ಎಡಿಷನ್‌ಗಳ ಹೋಂಡಾ ಅಮೇಜ್ ಮತ್ತು ಡಬ್ಲ್ಯುಆರ್-ವಿ ಎರಡೂ ಹೊಸ ಪ್ರೀಮಿಯಂ ಪ್ಯಾಕೇಜುಗಳು ಮತ್ತು ಫೀಚರ್ ಗಳನ್ನು ಹೊಂದಿವೆ. ಈ ಎರಡು ಸ್ಪೆಷಲ್ ಎಡಿಷನ್‌ಗಳು ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಹೋಂಡಾ ಅಮೇಜ್ ಮತ್ತು ಡಬ್ಲ್ಯುಆರ್-ವಿ ಮಾದರಿಗಳ ಎಕ್ಸ್‌ಕ್ಲೂಸಿವ್ ಎಡಿಷನ್ ಬಿಡುಗಡೆ

ಇದರಲ್ಲಿ ಮೊದಲಿಗೆ ಹೋಂಡಾ ಅಮೇಜ್ ಎಕ್ಸ್‌ಕ್ಲೂಸಿವ್ ಎಡಿಷನ್ ಬಗ್ಗೆ ಹೇಳುವುದಾದರೆ, ಕಾಂಪ್ಯಾಕ್ಟ್-ಸೆಡಾನ್ ಅರ್ಪಷಕ ವಿಂಡೋಗಳ ಸುತ್ತಲೂ ಕ್ರೋಮ್ ಮೋಲ್ಡಿಂಗ್ ಮತ್ತು ಫಾಂಗ್ ಲ್ಯಾಂಪ್ ಗಳ ಜೊತೆಗೆ ಕ್ರೋಮ್ ಅಲಂಕರಿಸಿದೆ. ಇನ್ನು ಫ್ರಂಟ್ ಫೂಟ್ ಲೈಟ್, ಕಾರಿನ ಸುತ್ತ ಸ್ಪೆಷಲ್ ಎಡಿಷನ್ ಲೋಗೋ ಮತ್ತು ಪ್ರೀಮಿಯಂ ಬ್ಲ್ಯಾಕ್ ಸ್ಯೂಡ್ ಸೀಟ್ ಅಪ್ಹೋಲ್ಸ್ಟರಿ ಅನ್ನು ಒಳಗೊಂಡಿದೆ.

ಹೋಂಡಾ ಅಮೇಜ್ ಮತ್ತು ಡಬ್ಲ್ಯುಆರ್-ವಿ ಮಾದರಿಗಳ ಎಕ್ಸ್‌ಕ್ಲೂಸಿವ್ ಎಡಿಷನ್ ಬಿಡುಗಡೆ

ಹೊಂಡಾ ಡಬ್ಲ್ಯುಆರ್-ವಿ ಎಕ್ಸ್‌ಕ್ಲೂಸಿವ್ ಎಡಿಷನ್ ನಲ್ಲಿ ಕ್ರೋಮ್ ನಿಂದ ಅಲಂಕರಿಸಿದೆ. ಹೊಂಡಾ ಡಬ್ಲ್ಯುಆರ್-ವಿ ಎಕ್ಸ್‌ಕ್ಲೂಸಿವ್ ಎಡಿಷನ್ ನಲ್ಲಿ ಲೋಗೋ ಮತ್ತು ಸ್ಯೂಡ್ ಸೀಟ್ ಕವರ್‌ಗಳನ್ನು ಸಹ ಒಳಗೊಂಡಿದೆ. ಇದಲ್ಲದೆ ಹೋಂಡಾ ಡಬ್ಲ್ಯುಆರ್-ವಿ ಸ್ಪೆಷಲ್ ಎಡಿಷನ್ ಬಾಡೀ ಬಾಡಿ ಗ್ರಾಫಿಕ್ಸ್‌ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೋಂಡಾ ಅಮೇಜ್ ಮತ್ತು ಡಬ್ಲ್ಯುಆರ್-ವಿ ಮಾದರಿಗಳ ಎಕ್ಸ್‌ಕ್ಲೂಸಿವ್ ಎಡಿಷನ್ ಬಿಡುಗಡೆ

ಇನ್ನು ಅಮೇಜ್ ಮತ್ತು ಡಬ್ಲ್ಯುಆರ್-ವಿ ಮಾದರಿಗಳ 'ಎಕ್ಸ್‌ಕ್ಲೂಸಿವ್ ಎಡಿಷನ್'ನಲ್ಲಿ 1.2-ಲೀಟರ್ ಐ-ವಿಟಿಇಸಿ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದರಿಂದಿಗೆ 1.5-ಲೀಟರ್ ಐ-ಡಿಟಿಇಸಿ ಡೀಸೆಲ್ ಎಂಜಿನ್ ಅನ್ನು ಕೂಡ ಆಳವಡಿಸಲಾಗಿದೆ.

ಹೋಂಡಾ ಅಮೇಜ್ ಮತ್ತು ಡಬ್ಲ್ಯುಆರ್-ವಿ ಮಾದರಿಗಳ ಎಕ್ಸ್‌ಕ್ಲೂಸಿವ್ ಎಡಿಷನ್ ಬಿಡುಗಡೆ

ಇದರಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ 89 ಬಿಹೆಚ್‍ಪಿ ಪವರ್ ಮತ್ತು 110 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಡೀಸೆಲ್ ಎಂಜಿನ್ 100 ಬಿಹೆಚ್‍ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಹೋಂಡಾ ಅಮೇಜ್ ಮತ್ತು ಡಬ್ಲ್ಯುಆರ್-ವಿ ಮಾದರಿಗಳ ಎಕ್ಸ್‌ಕ್ಲೂಸಿವ್ ಎಡಿಷನ್ ಬಿಡುಗಡೆ

ಹೋಂಡಾ ಅಮೇಜ್‌ನಲ್ಲಿನ ಸ್ಪೆಷಲ್ ಎಡಿಷನ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಆರು-ಸ್ಪೀಡ್ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಆದರೆ ಹೋಂಡಾ ಡಬ್ಲ್ಯುಆರ್-ವಿ ಎಡಿಷನ್ ನಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಮಾತ್ರ ನೀಡಲಾಗಿದೆ.

ಹೋಂಡಾ ಅಮೇಜ್ ಮತ್ತು ಡಬ್ಲ್ಯುಆರ್-ವಿ ಮಾದರಿಗಳ ಎಕ್ಸ್‌ಕ್ಲೂಸಿವ್ ಎಡಿಷನ್ ಬಿಡುಗಡೆ

ಹೊಂಡಾ ಅಮೇಜ್ ಮತ್ತು ಡಬ್ಲ್ಯುಆರ್-ವಿ ಎಕ್ಸ್‌ಕ್ಲೂಸಿವ್ ಎಡಿಷನ್ ನಲ್ಲಿ ಕಾಸ್ಮೆಟಿಕ್ ನವೀಕರಣಗಳ ಹೊರತಾಗಿ ಎರಡು ಕೂಡ ಸ್ಟ್ಯಾಂಡರ್ಡ್ ಮಾದರಿಗಳಿಗೆ ಹೋಲುತ್ತದೆ. ಎರಡೂ ಮಾದರಿಗಳು ಸ್ಟ್ಯಾಂಡರ್ಡ್ ವಿಎಕ್ಸ್ ರೂಪಾಂತರದಿಂದ ಎಲ್ಲಾ ಪೀಚರ್ ಗಳನ್ನು ಹೊಂದಿವೆ.

Most Read Articles

Kannada
English summary
Honda Amaze & WR-V ‘Exclusive Editions’ Launched. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X