Just In
- 5 hrs ago
ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ ನ್ಯೂ ಜನರೇಷನ್ ಸ್ಕಾರ್ಪಿಯೋ
- 7 hrs ago
ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಯಮಹಾ ವೈಝಡ್ಎಫ್-ಆರ್25 ಬೈಕ್
- 7 hrs ago
ಮಾಲಿನ್ಯ ಉಂಟುಮಾಡುವ ವಾಹನಗಳಿಗೆ ಬ್ರೇಕ್ ಹಾಕಲು 'ಹಸಿರು ತೆರಿಗೆ' ಅಸ್ತ್ರ
- 9 hrs ago
ಒಂದೂವರೆ ವರ್ಷದಲ್ಲಿ ದಾಖಲೆ ಸಂಖ್ಯೆಯ ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್
Don't Miss!
- News
ಹಿರಿಯೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಹೊಸ ರೂಪ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Sports
ಅಪರೂಪದ ಖಾಯಿಲೆಗೆ ಭಾರತದ ಮಾಜಿ ಗೋಲ್ ಕೀಪರ್ ಪ್ರಶಾಂತ ಬಲಿ
- Movies
ರಾಜಮೌಳಿಯ RRR ಚಿತ್ರಕ್ಕೆ ಎದುರಾಗಿ ಅಜಯ್ ದೇವಗನ್ ಸಿನಿಮಾ?
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಸಿಟಿ ಸ್ಪೋರ್ಟ್ ಹೈಬ್ರಿಡ್ ಆವೃತ್ತಿಯನ್ನು ಬಿಡುಗಡೆಗೊಳಿಸಿದ ಹೋಂಡಾ
ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಹೋಂಡಾ ತನ್ನ ಹೊಸ ಸಿಟಿ ಹ್ಯಾಚ್ಬ್ಯಾಕ್ ಜೊತೆ ಸಿಟಿ ಇ:ಎಚ್ಇವಿ ಆವೃತ್ತಿಯನ್ನು ಥೈಲ್ಯಾಂಡ್ನಲ್ಲಿ ಪರಿಚಯಿಸಿದೆ. ಈ ಹೊಸ ಹೋಂಡಾ ಸಿಟಿ ಇ:ಎಚ್ಇವಿ ಸ್ಪೋರ್ಟ್ ಹೈಬ್ರಿಡ್ ಆವೃತ್ತಿಯಾಗಿದೆ.

ಥೈಲ್ಯಾಂಡ್ನಲ್ಲಿ ಪರಿಚಯಿಸಿದ ಹೋಂಡಾ ಸಿಟಿ ಇ:ಎಚ್ಇವಿ ಸ್ಪೋರ್ಟ್ ಹೈಬ್ರಿಡ್ ಮಲೇಷ್ಯಾದಲ್ಲಿ ಮಾರಾಟದಲ್ಲಿರುವ ಅದೇ ಆವೃತ್ತಿಯಾಗಿದೆ. ಇದು ಒಂದೇ ಪೂರ್ಣ-ಸ್ಪೆಕ್ ಆರ್ಎಸ್ ರೂಪಾಂತರವಾಗಿದೆ. ಹೋಂಡಾ ಸಿಟಿ ಪೆಟ್ರೋಲ್ ಆರ್ಎಸ್ ಮಾದರಿಗಿಂತ ಇ:ಎಚ್ಇವಿ ಸ್ಪೋರ್ಟ್ ಹೈಬ್ರಿಡ್ ಆರ್ಎಸ್ ಆವೃತ್ತಿ ದುಬಾರಿಯಾಗಿದೆ. ಈ ಹೊಸ ಹೋಂಡಾ ಸಿಟಿ ಇ:ಎಚ್ಇವಿ ಸ್ಪೋರ್ಟ್ ಹೈಬ್ರಿಡ್ ಆವೃತ್ತಿಯು ಆಕರ್ಷಕ ಲುಕ್ ಅನ್ನು ಹೊಂದಿದೆ.

ಹೊಸ ಹೋಂಡಾ ಸಿಟಿ ಇ:ಎಚ್ಇವಿ ಆವೃತ್ತಿಯಲ್ಲಿ ಹೋಂಡಾದ ಇಂಟೆಲಿಜೆಂಟ್ ಮಲ್ಟಿ-ಮೋಡ್ ಡ್ರೈವ್ (ಐ-ಎಂಎಂಡಿ) ಹೈಬ್ರಿಡ್ ಸಿಸ್ಟಂನ್ನು ಹೊಂದಿದೆ. ಈ ಹೈಬ್ರಿಡ್ ಸಿಸ್ಟಂ 108 ಬಿಹೆಚ್ಪಿ ಪವರ್ ಮತ್ತು 253 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಇದರೊಂದಿಗೆ 1.5 ಎಲ್ ಅಟ್ಕಿನ್ಸನ್-ಸೈಕಲ್ ಡಿಒಹೆಚ್ಸಿ ಐ-ವಿಟಿಇಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 98 ಬಿಹೆಚ್ಪಿ ಪವರ್ ಮತ್ತು 127 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜೊತೆಗೆ ಇಂಟಿಗ್ರೇಟೆಡ್ ಎಲೆಕ್ಟ್ರಿಕ್ ಮೋಟರ್ ಜನರೇಟರ್ ಮತ್ತು ಸ್ಟಾರ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ.

ಪೆಟ್ರೋಲ್ ಎಂಜಿನ್ಗೆ ಜೋಡಿಯಾಗಿರುವ ಸಿಂಗಲ್-ಸ್ಪೀಡ್ ಟ್ರಾನ್ಸ್ಮಿಷನ್ ಇದೆ, ಇದು ಹೆಚ್ಚಿನ ವೇಗದಲ್ಲಿ ನೇರ ಡ್ರೈವ್ ನೀಡುತ್ತದೆ. ಹೊಸ ಸಿಟಿ ಸ್ಪೋರ್ಟ್ ಹೈಬ್ರಿಡ್ 27.8 ಕಿ.ಮೀ.ನಷ್ಟು ಉತ್ತಮ ಮೈಲೇಜ್ ಅನ್ನು ನೀಡುತ್ತದೆ ಎಂದು ಹೇಳಿಕೊಂಡಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಪೆಟ್ರೋಲ್ ಆರ್ಎಸ್ ಮಾದರಿಗೆ ಹೋಲಿಸಿದರೆ, ಹೊಸ ಹೋಂಡಾ ಸಿಟಿ ಆರ್ಎಸ್ ಹೈಬ್ರಿಡ್ ಆವೃತ್ತಿಯಲ್ಲಿ ಸ್ಟೀರಿಂಗ್ ವ್ಹೀಲ್ ಪ್ಯಾಡಲ್ಸ್, 7 ಇಂಚಿನ ಇನ್ಸ್ ಟ್ರೂಮೆಂಟ್ ಕನ್ಸೋಲ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮುಂತಾದ ಹೆಚ್ಚುವರಿ ಫೀಚರ್ ಗಳನ್ನು ಪಡೆಯುತ್ತದೆ.

ಈ ಹೊಸ ಸಿಟಿ ಹೈಬ್ರಿಡ್ ಆವೃತಿಯಲ್ಲಿ ಎಮರ್ಜನ್ಸಿ ಬ್ರೇಕಿಂಗ್ ನಂತಹ ಸುರಕ್ಷತಾ ಫೀಚರ್ ಗಳೊಂದಿಗೆ ಹೋಂಡಾ ಸೆನ್ಸಿಂಗ್ ಸೂಟ್ ಅನ್ನು ಸಹ ಪಡೆಯುತ್ತದೆ. ಇದರಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪಿಂಗ್ ಅಸಿಸ್ಟ್, ಲೇನ್ ಸೆಂಟರಿಂಗ್ ಅಸಿಸ್ಟ್ ಮತ್ತು ಆಟೋಮ್ಯಾಟಿಕ್ ಹೈ-ಬೀಮ್. ಇದು ಹೋಂಡಾದ ಲೇನ್ವಾಚ್ ಬ್ಲೈಂಡ್ ಸ್ಪಾಟ್ ಕ್ಯಾಮೆರಾವನ್ನು ಸಹ ಪಡೆಯುತ್ತದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಸ್ಟೈಲಿಂಗ್ ವಿಷಯದಲ್ಲಿ, ಹೋಂಡಾ ಸಿಟಿ ಇ ಎಚ್ಇವಿ ಸ್ಪೋರ್ಟಿ ಸ್ಟೈಲಿಂಗ್ ಅನ್ನು ಹೊಂದಿದೆ. ಇದರಲ್ಲಿ ಹನಿಕಾಬ್ ಗ್ರಿಲ್, ಕಾರ್ಬನ್ ಫೈಬರ್-ಲುಕ್ ಫ್ರಂಟ್ ಬಂಪರ್ ಲಿಪ್ ಮತ್ತು ಸ್ಟೈಲಿಶ್ ಫಾಗ್-ಲ್ಯಾಂಪ್, ಹಿಂಭಾಗದ ಡಿಫ್ಯೂಸರ್, ಕಪ್ಪು ಬೂಟ್ ಲಿಡ್ ಸ್ಪಾಯ್ಲರ್ ಮತ್ತು 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ಅನ್ನು ಹೊಂದಿದೆ.

ಇನ್ನು ಈ ಹೊಸ ಇ:ಎಚ್ಇವಿ ಆವೃತ್ತಿಯಲ್ಲಿ ಎಲ್ಇಡಿ ಲೈಟಿಂಗ್ ಸಿಸ್ಟಮ್, ರಿಮೋಟ್ ಎಂಜಿನ್ ಸ್ಟಾರ್ಟ್ನೊಂದಿಗೆ ಕೀಲೆಸ್ ಎಂಟ್ರಿ, ಪುಶ್-ಬಟನ್ ಸ್ಟಾರ್ಟ್, ಸ್ವಯಂಚಾಲಿತ ಎಸಿ, 8 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ರಿವರ್ಸ್ ಕ್ಯಾಮೆರಾ, ಆರು ಏರ್ಬ್ಯಾಗ್ ಮತ್ತು ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಹೊಂದಿದೆ.