Just In
- 15 min ago
ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಖರೀದಿ ಮೇಲೆ ಹೊಸ ವರ್ಷದ ಆಫರ್
- 1 hr ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 1 hr ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 2 hrs ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
Don't Miss!
- Sports
ಭಾರತ vs ಆಸ್ಟ್ರೇಲಿಯಾ: ಧೋನಿ ದಾಖಲೆ ಮುರಿದು 1000 ಟೆಸ್ಟ್ ರನ್ ಗಳಿಸಿದ ರಿಷಭ್ ಪಂತ್
- News
ಕಳಪೆ ಮಟ್ಟದಲ್ಲಿ ಲಸಿಕೆ ಅಭಿಯಾನ; ಎರಡು ರಾಜ್ಯಗಳಿಗೆ ಕೇಂದ್ರದ ತರಾಟೆ
- Finance
ಕಾರು ಖರೀದಿಗೆ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ ಬ್ಯಾಂಕ್ ಗಳಿವು
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹ್ಯಾಚ್ಬ್ಯಾಕ್ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಹೋಂಡಾ ಸಿಟಿ
ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಹೋಂಡಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಕ್ರಮಣಕಾರಿ ಮಾರುಕಟ್ಟೆ ತಂತ್ರಗಳನ್ನು ಅನುಸರಿಸುತ್ತಿದೆ. ಹೋಂಡಾ ಕಂಪನಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ಎಸ್ಯುವಿಗಳು ಮತ್ತು ಸೆಡಾನ್ಗಳನ್ನು ಬಿಡುಗಡೆಗೊಳಿಸಲು ಯೋಜಿಸಿದೆ.

ಇನ್ನು ಹೋಂಡಾ ಕಂಪನಿಯು ನ್ಯೂ ಜನರೇಷನ್ ಸಿವಿಕ್ ಸೆಡಾನ್ ಅನ್ನು ಇದೇ ತಿಂಗಳ 17ರಂದು ಜಾಗತಿಕವಾಗಿ ಪರಿಚಯಿಸಲಿದೆ. ಇದರ ನಡುವೆ ಕುತೂಹಲಕಾರಿ ಅಂಶವೆಂದರೆ ಹೋಂಡಾ ಕಂಪನಿಯ ಜನಪ್ರಿಯ ಸಿಟಿ ಮಾದರಿಯನ್ನು ಹ್ಯಾಚ್ಬ್ಯಾಕ್ ಆಗಿ ರೋಡ್ ಟೆಸ್ಟ್ ಗಳನ್ನು ನಡೆಸುತ್ತಿದೆ. ಇದನ್ನು ಇದೇ ತಿಂಗಳ 24ರಂದು ಅನಾವರಣಗೊಳಿಸಲಾಗುವುದು ಎಂದು ವರದಿಯಾಗಿದೆ.

ಹೋಂಡಾ ಸಿಟಿ ಹ್ಯಾಚ್ಬ್ಯಾಕ್ ಅನ್ನು ಚೀನಾದ ಮಾರುಕಟ್ಟೆಯಲ್ಲಿ ಗಿನಿಯಾ ಹ್ಯಾಚ್ ಆಗಿ ಮಾರಾಟ ಮಾಡುತ್ತಿತ್ತು. ಇನ್ನು ಹೊಸ ಸಿಟಿ ಹ್ಯಾಚ್ಬ್ಯಾಕ್ ಮಾದರಿಯನ್ನು ಥೈಲ್ಯಾಂಡ್ನಲ್ಲಿ ಅನಾವರಣಗೊಳಿಸಲಾಗುವುದು. ಈ ಹೊಸ ಮಾದರಿಯು ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ ಮಾರಾಟವಾಗಲಿದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಹೊಸ ಹೋಂಡಾ ಸಿಟಿ ಹ್ಯಾಚ್ಬ್ಯಾಕ್ನ ಪೇಟೆಂಟ್ ಚಿತ್ರಗಳು ಈಗಾಗಲೇ ಬಹಿರಂಗವಾಗಿವೆ. ಹಿಂದಿನ ಪ್ರೊಫೈಲ್ ಹೊರತುಪಡಿಸಿ, ಹೊಸ ಮಾದರಿಯು ಹೊಸದಾಗಿ ಬಿಡುಗಡೆಯಾದ ಸಿಟಿ ಸೆಡಾನ್ಗೆ ಹೋಲುತ್ತದೆ.

ಹೊಸ ಮಾದರಿಯು ಬಿ-ಪಿಲ್ಲರ್ ಮತ್ತು ಹಿಂಭಾಗದಲ್ಲಿ ಅತಿದೊಡ್ಡ ನವೀಕರಣವನ್ನು ಮಾಡುವವರೆಗೆ ಸೆಡಾನ್ಗೆ ಹೋಲುತ್ತದೆ. ಈ ಸಿಟಿ ಹ್ಯಾಚ್ಬ್ಯಾಕ್ ನಯವಾದ ಟೈಲ್-ಲ್ಯಾಂಪ್ಗಳು ಮತ್ತು ಸ್ಪೋರ್ಟಿಯರ್ ರಿಯರ್ ಬಂಪರ್ ಅನ್ನು ಸ್ವೀಕರಿಸುತ್ತದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇನ್ನು ಹೊಸ ಹೋಂಡಾ ಸಿಟಿ ಹ್ಯಾಚ್ಬ್ಯಾಕ್ ಕ್ಯಾಬಿನ್ ಒಳಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯೊಂದಿಗೆ ದೊಡ್ಡ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂನ್ನು ಹೊಂದಿರುತ್ತದೆ. ಹೆಚ್ಚಿನ ಫೀಚರ್ ಗಳನ್ನು ಹೊಸ ಥೈಲ್ಯಾಂಡ್-ಸ್ಪೆಕ್ ಸಿಟಿ ಸೆಡಾನ್ನಿಂದ ಪಡೆಯಲಾಗುವುದು.

ಹೊಸ ಹೋಂಡಾ ಸಿಟಿ ಸೆಡಾನ್ 4,549 ಎಂಎಂ ಉದ್ದ, 1,784 ಎಂಎಂ ಅಗಲ, 1,489 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಹ್ಯಾಚ್ಬ್ಯಾಕ್ ಆವೃತ್ತಿಯು 4 ಮೀಟರ್ಗಿಂತಲೂ ಹೆಚ್ಚು ಉದ್ದವನ್ನು ಹೊಂದಿರುತ್ತದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಹ್ಯಾಚ್ಬ್ಯಾಕ್ ನಲ್ಲಿ ಥೈಲ್ಯಾಂಡ್-ಸ್ಪೆಕ್ ಸಿಟಿ ಸೆಡಾನ್ನಲ್ಲಿರುವಂತಹ 1.0-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 5,500 ಆರ್ಪಿಎಂನಲ್ಲಿ 122 ಬಿಹೆಚ್ಪಿ ಪವರ್ ಮತ್ತು 2,000 ಮತ್ತು 4,500 ಆರ್ಪಿಎಂ ನಡುವೆ 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನು ಹೊಸ ಹೋಂಡಾ ಸಿಟಿ ಹ್ಯಾಚ್ಬ್ಯಾಕ್ ನಲ್ಲಿ ಜಾಜ್ ನಲ್ಲಿರುವಂತೆ ಎಲೆಕ್ಟ್ರಿಕ್, ಹೈಬ್ರಿಡ್ ಮತ್ತು ಎಂಜಿನ್. ಎಂಬ ಮೂರು ಡ್ರೈವಿಂಗ್ ಮೋಡ್ ಗಳನ್ನು ಕೂಡ ನೀಡಬಹುದು. ಹೊಸ ಸಿಟಿ ಹ್ಯಾಚ್ಬ್ಯಾಕ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಹೆಚ್ಚಿನ ಮಾಹಿತಿಗಳು ಖಚಿತವಾಗಿಲ್ಲ.