ಹೊಸ ಸಿಟಿ ಕಾರಿನ ಉತ್ಪಾದನೆ ಬಳಿಕ ಬಿಡುಗಡೆಯ ದಿನಾಂಕ ನಿರ್ಧರಿಸಲಿರುವ ಹೋಂಡಾ

ವಾಹನ ಉತ್ಪಾದನಾ ಕಂಪನಿಯಾದ ಹೋಂಡಾ ತನ್ನ 2020ರ ಸಿಟಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಬಹುನಿರೀಕ್ಷಿತ ಹೊಸ ಹೋಂಡಾ ಸಿಟಿ ಕಾರಿನ ಬಿಡುಗಡೆಯು ವಿಳಂಭವಾಗಿದೆ.

ಹೊಸ ಸಿಟಿ ಕಾರಿನ ಉತ್ಪಾದನೆ ಬಳಿಕ ಬಿಡುಗಡೆಯ ದಿನಾಂಕ ನಿರ್ಧರಿಸಲಿರುವ ಹೋಂಡಾ

ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಕೆಗೊಳಿಸಿದ ಬಳಿಕ ಹೊಸ ಹೋಂಡಾ ಸಿಟಿ ಕಾರು ಬಿಡುಗಡೆಗೆ ಸಜ್ಜಾಗುತ್ತಿದೆ. ಹೋಂಡಾ ಕಂಪನಿಯು ತನ್ನ ಉತ್ಪಾದನಾ ಸ್ಥಾವರದಲ್ಲಿ ಹೋಂಡಾ ಸಿಟಿ ಉತ್ಪಾದನೆಯನ್ನು ಪುನಾರಂಭಿಸಲಿದೆ. ನಂತರದಲ್ಲಿ ಕಂಪನಿಯು ತನ್ನ 2020ರ ಸಿಟಿ ಕಾರಿನ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಲಿದೆ. ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳಲ್ಲಿ ಹೊಸ ಹೋಂಡಾ ಸಿಟಿ ಒಂದಾಗಿದೆ.

ಹೊಸ ಸಿಟಿ ಕಾರಿನ ಉತ್ಪಾದನೆ ಬಳಿಕ ಬಿಡುಗಡೆಯ ದಿನಾಂಕ ನಿರ್ಧರಿಸಲಿರುವ ಹೋಂಡಾ

ಹೋಂಡಾ ಕಾರ್ಸ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ರಾಜೇಶ್ ಗೋಯಲ್ ಅವರು ಆಟೋಕಾರ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ, ಕಂಪನಿಯ ಉತ್ಪಾದನೆಯನ್ನು ಪುನಾರಂಭಿಸಲು ಅನುಮತಿಯನ್ನು ಹೊಂದಿದ್ದೇವೆ. ಉತ್ಪಾದನೆಯನ್ನು ಪುನಾರಂಭಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.

MOST READ: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಮಾರುತಿ ಎಸ್-ಕ್ರಾಸ್ ಪೆಟ್ರೋಲ್ ಆವೃತ್ತಿ

ಹೊಸ ಸಿಟಿ ಕಾರಿನ ಉತ್ಪಾದನೆ ಬಳಿಕ ಬಿಡುಗಡೆಯ ದಿನಾಂಕ ನಿರ್ಧರಿಸಲಿರುವ ಹೋಂಡಾ

ಹೋಂಡಾ ಕಂಪನಿಯು ಹೋಂಡಾದಲ್ಲಿ ಗ್ರೇಟರ್ ನೋಯ್ಡಾ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಉತ್ಪಾದನಾ ಸೌಲಭ್ಯಗಳಿವೆ. ಸರ್ಕಾರದ ಇತ್ತೀಚಿನ ಮಾರ್ಗಸೂಚಿಗಳನ್ನು ಅನುಸರಿಸಿ ಸಾರಿಗೆ ಸೌಲಭ್ಯಗಳನ್ನು ಪುನರಾರಂಭಿಸಿದ ಕೂಡಲೇ ಕಾರ್ಮಿಕರು ಮರಳುವ ನಿರೀಕ್ಷೆಯಿದೆ. ಉತ್ಪಾದನೆಯು ನಂತರ ಪ್ರಾರಂಭಿಸುತ್ತೇವೆ ಎಂದು ಗೋಯಲ್ ಅವರು ಹೇಳಿದರು.

ಹೊಸ ಸಿಟಿ ಕಾರಿನ ಉತ್ಪಾದನೆ ಬಳಿಕ ಬಿಡುಗಡೆಯ ದಿನಾಂಕ ನಿರ್ಧರಿಸಲಿರುವ ಹೋಂಡಾ

ಹೊಸ ಹೋಂಡಾ ಸಿಟಿ 4,549 ಎಂಎಂ ಉದ್ದ, 1,784 ಎಂಎಂ ಅಗಲ, 1,489 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಹೊಸ ಹೋಂಡಾ ಸಿಟಿ ಪ್ರಸ್ತುತ ಮಾದರಿಗಿಂತ ಹೆಚ್ಚು ಉದ್ದ ಮತ್ತು ಅಗಲವನ್ನು ಹೊಂದಿದೆ.

MOST READ: ಸದ್ಯಕ್ಕಿಲ್ಲ ಬಿಎಸ್-6 ಫೋರ್ಡ್ ಎಂಡೀವರ್ ಎಸ್‍ಯುವಿಯ ಬೆಲೆ ಏರಿಕೆ

ಹೊಸ ಸಿಟಿ ಕಾರಿನ ಉತ್ಪಾದನೆ ಬಳಿಕ ಬಿಡುಗಡೆಯ ದಿನಾಂಕ ನಿರ್ಧರಿಸಲಿರುವ ಹೋಂಡಾ

ಹೋಂಡಾ ಸಿಟಿ ಮಾದರಿಯು ಹೋಂಡಾ ಕಂಪನಿಯ ಸರಣಿಯ ಕಾರುಗಳಲ್ಲಿ ಹಲವು ವರ್ಷಗಳಿಂದ ಹೆಚ್ಚು ಮಾರಾಟವಾಗುವ ಕಾರು ಆಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ, ವರ್ನಾ ಮತ್ತು ಸಿಯಾಜ್ ಒಂದೇ ರೀತಿಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿವೆ.

ಹೊಸ ಸಿಟಿ ಕಾರಿನ ಉತ್ಪಾದನೆ ಬಳಿಕ ಬಿಡುಗಡೆಯ ದಿನಾಂಕ ನಿರ್ಧರಿಸಲಿರುವ ಹೋಂಡಾ

ಮಾರುಕಟ್ಟೆಯಲ್ಲಿರುವ 1.5-ಲೀಟರ್ ಎಸ್‌ಒಹೆಚ್‌ಸಿ ಎಂಜಿನ್‌ಗಿಂತಲೂ ಇದು ಹೆಚ್ಚು ಪವರ್ ಬ್ಯಾಂಡ್ ಹೊಂದಿರಲಿದೆ. ಹೊಸ ಸಿಟಿ ಕಾರಿನಲ್ಲಿ ಡ್ಯುಯಲ್ ಓವರ್‌ಹೆಡ್ ಕ್ಯಾಮ್ ಸೆಟಪ್‌ನೊಂದಿಗೆ ಹೊಸ 1.5-ಲೀಟರ್ ಪೆಟ್ರೋಲ್ ಎಂಜಿನ್(ಎಲ್ 15 ಬಿ) ನೀಡಲಾಗುತದೆ. ಈ ಹೊಸ ಎಂಜಿನ್ 119 ಬಿಎಚ್‌ಪಿ ಮತ್ತು ಸುಮಾರು 155 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಹೊಸ ಸಿಟಿ ಕಾರಿನ ಉತ್ಪಾದನೆ ಬಳಿಕ ಬಿಡುಗಡೆಯ ದಿನಾಂಕ ನಿರ್ಧರಿಸಲಿರುವ ಹೋಂಡಾ

ಹೊಸ ಹೋಂಡಾ ಸಿಟಿ ಕಾರಿನ ಇಂಟಿರಿಯರ್‍‍ನಲ್ಲಿ ಡ್ಯುಯಲ್ ಟೋನ್ ಸಿಸ್ಟಂ, ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಹೆಡ್‍‍‍ರೆಸ್ಟ್, ಡಿಜಿ‍ಟಲ್ ಇನ್ಸ್ ಟ್ರೂ‍‍ಮೆಂಟ್ ಕನ್ಸೋಲ್, ಹೊಸ ಟಚ್‍‍ಸ್ಕ್ರೀನ್ ಇನ್ಪೋಟೇನ್‍‍ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಹೊಸ ಸಿಟಿ ಕಾರಿನ ಉತ್ಪಾದನೆ ಬಳಿಕ ಬಿಡುಗಡೆಯ ದಿನಾಂಕ ನಿರ್ಧರಿಸಲಿರುವ ಹೋಂಡಾ

ಎಂಜಿ ಹೆಕ್ಟರ್ ಮತ್ತು ಕಿಯಾ ಸೆಲ್ಟೋಸ್‍‍ನಲ್ಲಿ ಕಂಡುಬರುವ ಕನೆಕ್ಟಿವಿಟಿ ತಂತ್ರಜ್ಞಾನಗಳನ್ನು ಅಳವಡಿಸುವ ಸಾಧ್ಯತೆಗಳಿವೆ. 2020ರ ಹೋಂಡಾ ಸಿಟಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸಿಯಾಜ್, ಟೊಯೊಟಾ ಯಾರಿಸ್ ಮತ್ತು ಹ್ಯುಂಡೈ ವರ್ನಾ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಹೋಂಡಾ honda
English summary
New Honda City launch date to be finalised once vehicle production resumes. Read In Kannada.
Story first published: Saturday, May 23, 2020, 18:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X