ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಹೋಂಡಾ ಕಂಪನಿಯು ಹೆಚ್‌ಆರ್-ವಿ ಕಾಂಪ್ಯಾಕ್ಟ್ ಕ್ರಾಸ್‌ಒವರ್ ಅನ್ನು 2013ರಲ್ಲಿ ಮೊದಲ ಬಾರಿಗೆ ಜಪಾನ್‌ನಲ್ಲಿ ಬಿಡುಗಡೆಗೊಳಿಸಿತ್ತು. ಅದೇ ವರ್ಷದಲ್ಲಿ ಈ ಹೆಚ್‌ಆರ್-ವಿ ಮಧ್ಯಮ ಗಾತ್ರದ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಹೋಂಡಾ ಕಂಪನಿಯು ಯೋಜನೆ ರೂಪಿಸಿತು.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಆದರೆ ಹೋಂಡಾ ಕಂಪನಿಯು ಹೆಚ್‌ಆರ್-ವಿ ಮಧ್ಯಮ ಗಾತ್ರದ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದು ತುಂಬಾ ದುಬಾರಿ ಎಂದು ಪರಿಗಣಿಸಿದ್ದರು. ಇದೇ ಕಾರಣದಿಂದ ಅಂದು ಹೋಂಡಾ ಕಂಪನಿಯು ಹೆಚ್‌ಆರ್-ವಿ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ನಿರ್ಧಾರದಿಂದ ಹಿಂದೆ ಸರಿದರು. ಆದರೆ ಇಂದು ಭಾರತೀಯ ಮಾರುಕಟ್ಟೆಯು ಭಾರೀ ಬೆಳವಣಿಗೆಯನ್ನು ಕಂಡಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ನಂತಹ ಕ್ರಾಸ್‌ಒವರ್‌ಗಳು ಉತ್ತಮ ಯಶಸ್ವಿಯನ್ನು ಸಾಧಿಸಿದೆ. ಇದರಿಂದ ಹೋಂಡಾ ಕಂಪನಿಯು ಭಾರತದಲ್ಲಿ ಹೊಸ ಹೆಚ್‌ಆರ್-ವಿ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

MOST READ: ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಇದೀಗ ಹೋಂಡಾ ಕಂಪನಿಯು ತನ್ನ ಹೊಸ ತಲೆಮಾರಿನ ಹೆಚ್‌ಆರ್-ವಿ ಮಧ್ಯಮ ಗಾತ್ರದ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೋಂಡಾ ಕಂಪನಿಯು ಹೆಚ್‌ಆರ್-ವಿ ಎಸ್‍ಯುವಿಯ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಆದರೆ ಹೋಂಡಾ ಕಂಪನಿಯು ಹೊಸ ಹೆಚ್‌ಆರ್-ವಿ ಎಸ್‍ಯುವಿಯನ್ನು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದ್ದರು. ಇದೀಗ ಈ ಎಸ್‍ಯುವಿಯ ಬಿಡುಗಡೆಯನ್ನು ಮುಂದಿನ ವರ್ಷದ ಮೇ ತಿಂಗಳಿಗೆ ಮುಂದೂಡಲಾಗಿದೆ ಎಂದು ವರದಿಗಳು ಪ್ರಕಟವಾಗಿದೆ.

MOST READ: ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಈ ಹೊಸ ಹೆಚ್‌ಆರ್-ವಿ ಎಸ್‍ಯುವಿಯು 4,400 ಎಂಎಂ ಉದ್ದ, 1,790 ಎಂಎಂ ಅಗಲ ಮತ್ತು 1,590 ಎಂಎಂ ಎತ್ತರವನ್ನು ಹೊಂದಿದೆ. ಇನ್ನು 2,610 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಹೊಸ ಹೆಚ್‌ಆರ್-ವಿ ಎಸ್‍ಯುವಿ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಇದರೊಂದಿಗೆ ಮೈಲ್ಡ್ -ಹೈಬ್ರಿಡ್ ತಂತ್ರಜ್ಞಾನದ ಆಯ್ಕೆಯನ್ನು ನೀಡಲಾಗಿದೆ. ಹೋಂಡಾ ಕಾರುಗಳ ಸರಣಿಯಲ್ಲಿ ಹೆಚ್‌ಆರ್-ವಿ ಎಸ್‍ಯುವಿಯು ಸಿಆರ್-ವಿ ಗಿಂತ ಕೆಳಗಿನ ಸ್ಥಾನದಲ್ಲಿರುತ್ತದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಈ ಎಸ್‍ಯುವಿಯನು ಜಪಾನ್ ಮಾರುಕಟ್ಟೆಯಲ್ಲಿ ವೆಝೆಲ್ ಎನ್ನುವ ಹೆಸರಿನಲ್ಲಿ ಮಾರಾಟವಾಗುತ್ತಿದೆ. ಭಾರತೀಯ ಮಾರುಕಟ್ಟೆಗಾಗಿ ಹೆಸರು ಬದಲಾಯಿಸಿರುವ ಹೋಂಡಾ ಸಂಸ್ಥೆಯು ಜಾಝ್ ಕಾರಿನ ಪ್ಲಾಟ್‍‍‍ಫಾರ್ಮ್‍‍ನಲ್ಲೇ ಹೊಸ ಎಸ್‍ಯುವಿಯನ್ನು ಅಭಿವೃದ್ದಿಗೊಳಿಸಿ ಹೆಚ್‌ಆರ್-ವಿ ಹೆಸರಿನಲ್ಲಿ ಬಿಡುಗಡೆಗೊಳಿಸಬಹುದು.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಹಲವಾರು ಪ್ರೀಮಿಯಂ ಫೀಚರುಗಳನ್ನು ಹೊಂದಿರುವ ಹೋಂಡಾ ಹೆಚ್‍ಆರ್-ವಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ರೆನಾಲ್ಟ್ ಕ್ಯಾಪ್ಚರ್ ಮತ್ತು ಜೀಪ್ ಕಂಪಾಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಹೋಂಡಾ honda
English summary
Honda HRV mid-size SUV still being considered for India. Read In Kannada.
Story first published: Monday, July 27, 2020, 20:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X