ಕೇವಲ 5 ತಿಂಗಳ ಅವಧಿಯಲ್ಲಿ 65 ಸಾವಿರ ಬುಕ್ಕಿಂಗ್ ಪಡೆದುಕೊಂಡ ನ್ಯೂ ಜನರೇಷನ್ ಕ್ರೆಟಾ

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಹ್ಯುಂಡೈ ನ್ಯೂ ಜನರೇಷನ್ ಕ್ರೆಟಾ ಮಾದರಿಯು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆಗೆ ಕಾರಣವಾಗಿದ್ದು, ಬಿಡುಗಡೆಯಾದ 5 ತಿಂಗಳ ಅವಧಿಯಲ್ಲಿ ದಾಖಲೆ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ.

ಕೇವಲ 5 ತಿಂಗಳ ಅವಧಿಯಲ್ಲಿ 65 ಸಾವಿರ ಬುಕ್ಕಿಂಗ್ ಪಡೆದುಕೊಂಡ ನ್ಯೂ ಜನರೇಷನ್ ಕ್ರೆಟಾ

ಕ್ರೆಟಾ ಕಾರು ಮಾದರಿಯಲ್ಲಿ ಭಾರತದಲ್ಲಿ ಬಿಡುಗಡೆಗೊಂಡು 5 ವರ್ಷಗಳಲ್ಲಿ 5 ಲಕ್ಷ ಯುನಿಟ್ ಮಾರಾಟಗೊಂಡಿದ್ದು, ಕಳೆದ ಮಾರ್ಚ್ ತಿಂಗಳಿನಲ್ಲಿ ಎರಡನೇ ತಲೆಮಾರಿನ ಮಾದರಿಯು ಸಹ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ನ್ಯೂ ಜನರೇಷನ್ ಮಾದರಿಯು ಬಿಡುಗಡೆಯಾದ ಕೇವಲ 5 ತಿಂಗಳ ಅವಧಿಯಲ್ಲಿ ಬರೋಬ್ಬರಿ 65 ಸಾವಿರ ಬುಕ್ಕಿಂಗ್ ಪಡೆದುಕೊಂಡಿದ್ದು, ಇದರಲ್ಲಿ ಈಗಾಗಲೇ 40 ಸಾವಿರ ಯುನಿಟ್ ವಿತರಣೆ ಮಾಡಲಾಗಿದೆ.

ಕೇವಲ 5 ತಿಂಗಳ ಅವಧಿಯಲ್ಲಿ 65 ಸಾವಿರ ಬುಕ್ಕಿಂಗ್ ಪಡೆದುಕೊಂಡ ನ್ಯೂ ಜನರೇಷನ್ ಕ್ರೆಟಾ

ಹೊಸ ಕ್ರೆಟಾ ಕಾರು ಹಳೆಯ ತಲೆಮಾರಿನ ಆವೃತ್ತಿಗಿಂತಲೂ ಹೆಚ್ಚು ಬಲಿಷ್ಠ ವಿನ್ಯಾಸ, ಪ್ರೀಮಿಯಂ ಫೀಚರ್ಸ್ ಮತ್ತು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವುದು ಮತ್ತಷ್ಟು ಗ್ರಾಹಕನ್ನು ಸೆಳೆಯುತ್ತಿದೆ.

ಕೇವಲ 5 ತಿಂಗಳ ಅವಧಿಯಲ್ಲಿ 65 ಸಾವಿರ ಬುಕ್ಕಿಂಗ್ ಪಡೆದುಕೊಂಡ ನ್ಯೂ ಜನರೇಷನ್ ಕ್ರೆಟಾ

ಬಿಎಸ್-6 ಎಂಜಿನ್ ಸೇರಿದಂತೆ ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾಗಿರುವ ನ್ಯೂ ಜನರೇಷನ್ ಕ್ರೆಟಾ ಮಾದರಿಯು ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಕೇವಲ 5 ತಿಂಗಳ ಅವಧಿಯಲ್ಲಿ 65 ಸಾವಿರ ಬುಕ್ಕಿಂಗ್ ಪಡೆದುಕೊಂಡ ನ್ಯೂ ಜನರೇಷನ್ ಕ್ರೆಟಾ

ಹೊಸ ಕ್ರೆಟಾ ಕಾರು ದೆಹಲಿ ಎಕ್ಸ್‌ಶೋರೂಂ ಆರಂಭಿಕವಾಗಿ ರೂ. 9.99 ಲಕ್ಷ ಬೆಲೆ ಪಡೆದುಕೊಂಡಿದೆ. ಟಾಪ್ ಎಂಡ್ ಮಾದರಿಯು ರೂ. 17.20 ಲಕ್ಷ ಬೆಲೆ ಪಡೆದುಕೊಳ್ಳುವ ಮೂಲಕ ಕಿಯಾ ಸೆಲ್ಟೊಸ್‌ಗೆ ಸರಿಸಮನಾಗಿ ಮಾರುಕಟ್ಟೆ ಪ್ರವೇಶಿಸಿದೆ.

ಕೇವಲ 5 ತಿಂಗಳ ಅವಧಿಯಲ್ಲಿ 65 ಸಾವಿರ ಬುಕ್ಕಿಂಗ್ ಪಡೆದುಕೊಂಡ ನ್ಯೂ ಜನರೇಷನ್ ಕ್ರೆಟಾ

ನ್ಯೂ ಜನರೇಷನ್ ಕ್ರೆಟಾ ಕಾರು ಗ್ರಾಹಕರ ಬೇಡಿಕೆಯೆಂತೆ ಒಟ್ಟು 5 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಬಿಎಸ್-6 ವೈಶಿಷ್ಟ್ಯತೆಯ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಕೇವಲ 5 ತಿಂಗಳ ಅವಧಿಯಲ್ಲಿ 65 ಸಾವಿರ ಬುಕ್ಕಿಂಗ್ ಪಡೆದುಕೊಂಡ ನ್ಯೂ ಜನರೇಷನ್ ಕ್ರೆಟಾ

1.5-ಲೀಟರ್ ಪೆಟ್ರೋಲ್ ಆವೃತ್ತಿಯು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.5-ಲೀಟರ್ ಡೀಸೆಲ್ ಮಾದರಿಯು ಸಹ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಕೇವಲ 5 ತಿಂಗಳ ಅವಧಿಯಲ್ಲಿ 65 ಸಾವಿರ ಬುಕ್ಕಿಂಗ್ ಪಡೆದುಕೊಂಡ ನ್ಯೂ ಜನರೇಷನ್ ಕ್ರೆಟಾ

ಇದಲ್ಲದೆ ಹ್ಯುಂಡೈ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಕ್ರೆಟಾ ಕಾರಿನಲ್ಲಿ ಹೊಸದಾಗಿ 7 ಸೀಟರ್ ಮಾದರಿಯನ್ನು ಸಹ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಸಾಮಾನ್ಯ ಕಾರಿನ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲೇ ಮೂರು ಸಾಲಿನ ಆಸನ ಸೌಲಭ್ಯವನ್ನು ಪಡೆದುಕೊಳ್ಳಲಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಕೇವಲ 5 ತಿಂಗಳ ಅವಧಿಯಲ್ಲಿ 65 ಸಾವಿರ ಬುಕ್ಕಿಂಗ್ ಪಡೆದುಕೊಂಡ ನ್ಯೂ ಜನರೇಷನ್ ಕ್ರೆಟಾ

2+3+2 ಆಸನ ಸೌಲಭ್ಯ ಪಡೆದುಕೊಳ್ಳಲಿರುವ 7 ಸೀಟರ್ ಕ್ರೆಟಾ ಮಾದರಿಯು ಸಾಮಾನ್ಯ ಕಾರಿನಲ್ಲಿರುವಂತೆಯೇ ಎಂಜಿನ್ ಆಯ್ಕೆ ಹೊಂದಿಲಿದ್ದು, ಹೊಸ ಕಾರು ತುಸು ದುಬಾರಿ ಬೆಲೆ ಹೊಂದಿರಲಿದೆ. ಮುಂಬರುವ ಅಕ್ಟೋಬರ್ ಅಥವಾ ನವೆಂಬರ್ ಹೊತ್ತಿಗೆ ಹೊಸ ಕಾರು ಬಿಡುಗಡೆಯಾಗಲಿದ್ದು, ದುಬಾರಿ ಬೆಲೆಯ ಎಂಪಿವಿ ಕಾರುಗಳಿಗೆ ಹೊಸ ಕಾರು ಪೈಪೋಟಿ ನೀಡಲಿದೆ.

Most Read Articles

Kannada
English summary
2020 Hyundai Creta Crosses 65,000 Bookings In Just Five Month. Read in Kannada.
Story first published: Friday, August 14, 2020, 12:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X