ಹೊಸ ಕ್ರೆಟಾ ಕಾರಿನ ಬಿಡುಗಡೆ ದಿನಾಂಕ ಖಚಿತಪಡಿಸಿದ ಹ್ಯುಂಡೈ

ಹ್ಯುಂಡೈ ಇಂಡಿಯಾ ಇತ್ತೀಚಿಗೆ ಮುಕ್ತಾಯವಾದ 2020ರ ಆಟೋ ಎಕ್ಸ್ ಪೋದಲ್ಲಿ ತನ್ನ ಹೊಸ ಕ್ರೆಟಾ ಎಸ್‍‍‍ಯುವಿಯನ್ನು ಅನಾವರಣಗೊಳಿಸಿತ್ತು. ಎರಡನೇ ತಲೆಮಾರಿನ ಹೊಸ ಹ್ಯುಂಡೈ ಕ್ರೆಟಾ ಎಸ್‍‍ಯುವಿ ಹೊಸ ಡಿಸೈನ್ ಅನ್ನು ಹೊಂದಿದೆ.

ಹೊಸ ಕ್ರೆಟಾ ಕಾರಿನ ಬಿಡುಗಡೆ ದಿನಾಂಕ ಖಚಿತಪಡಿಸಿದ ಹ್ಯುಂಡೈ

ರಶ್‍‍ಲೇನ್ ವರದಿಗಳ ಪ್ರಕಾರ, ಈ ಹೊಸ ಎಸ್‍‍ಯುವಿಯನ್ನು ಮಾರ್ಚ್ 17ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಹೊಸ ಕ್ರೆಟಾದ ಬುಕ್ಕಿಂಗ್‍‍ಗಳನ್ನು ಶೀಘ್ರದಲ್ಲಿಯೇ ಅಧಿಕೃತವಾಗಿ ಆರಂಭಿಸಲಾಗುವುದು. ದೇಶಾದ್ಯಂತವಿರುವ ಹ್ಯುಂಡೈ ಡೀಲರ್‍‍ಗಳು ಈಗಾಗಲೇ ಅನಧಿಕೃತವಾಗಿ ಬುಕ್ಕಿಂಗ್‍‍ಗಳನ್ನು ಆರಂಭಿಸಿದ್ದಾರೆ.

ಹೊಸ ಕ್ರೆಟಾ ಕಾರಿನ ಬಿಡುಗಡೆ ದಿನಾಂಕ ಖಚಿತಪಡಿಸಿದ ಹ್ಯುಂಡೈ

ರೂ.15,000 ಟೋಕನ್ ಹಣ ಪಡೆದು ಈ ಎಸ್‍‍ಯುವಿಯನ್ನು ಬುಕ್ಕಿಂಗ್ ಮಾಡಿಕೊಳ್ಳಲಾಗುತ್ತಿದೆ. ಹೊಸ ಹ್ಯುಂಡೈ ಕ್ರೆಟಾ ಎಸ್‍‍ಯುವಿಯ ವಿತರಣೆಯನ್ನು ಬಿಡುಗಡೆಯ ವೇಳೆಯಲ್ಲಿ ಆರಂಭಿಸಲಾಗುವುದು. ಈ ಮೊದಲೇ ಹೇಳಿದಂತೆ ಹೊಸ ಕ್ರೆಟಾ ಹೊಸ ವಿನ್ಯಾಸವನ್ನು ಹೊಂದಿರಲಿದೆ.

ಹೊಸ ಕ್ರೆಟಾ ಕಾರಿನ ಬಿಡುಗಡೆ ದಿನಾಂಕ ಖಚಿತಪಡಿಸಿದ ಹ್ಯುಂಡೈ

ಈ ಮಧ್ಯಮ ಗಾತ್ರದ ಎಸ್‍‍ಯುವಿಯನ್ನು 2019ರ ಬಿಜೀಂಗ್ ಮೋಟಾರ್ ಶೋದಲ್ಲಿ ಪ್ರದರ್ಶಿಸಲಾದ ಐ‍ಎಕ್ಸ್ 25 ಮಾದರಿಯ ವಿನ್ಯಾಸದ ಪ್ರೇರಣೆಯಿಂದ ತಯಾರಿಸಲಾಗಿದೆ. ಈ ಹೊಸ ಕಾರು ಹ್ಯುಂಡೈ ಕಂಪನಿಯ ಇತ್ತೀಚಿನ ಡಿಸೈನ್ ಲಾಂಗ್ವೇಜ್ ಅನ್ನು ಹೊಂದಿದೆ.

ಹೊಸ ಕ್ರೆಟಾ ಕಾರಿನ ಬಿಡುಗಡೆ ದಿನಾಂಕ ಖಚಿತಪಡಿಸಿದ ಹ್ಯುಂಡೈ

2020ರ ಹ್ಯುಂಡೈ ಕ್ರೆಟಾ ದೊಡ್ಡ ಗಾತ್ರದ ಕಾಸ್ಕೆಡಿಂಗ್ ಗ್ರಿಲ್ ಅನ್ನು ಹೊಂದಿದೆ. ಈ ಎಸ್‍‍ಯುವಿ ಸಿ ಶೇಪಿನ ಎಲ್‍ಇ‍‍ಡಿ ಡಿಆರ್‍ಎಲ್‍‍ಗಳನ್ನು ಹೊಂದಿದೆ. ಇದರ ಸುತ್ತಲೂ ಎಲ್‍ಇ‍‍ಡಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳಿವೆ. ಫಾಗ್‍‍ಲ್ಯಾಂಪ್ ಹಾಗೂ ಸೆಂಟ್ರಲ್ ಏರ್ ಇನ್‍‍ಟೇಕ್‍‍ಗಳನ್ನು ಹೊಸ ವಿನ್ಯಾಸದ ಬಂಪರ್‍‍ಗಳ ಕೆಳಗೆ ಅಳವಡಿಸಲಾಗಿದೆ.

ಹೊಸ ಕ್ರೆಟಾ ಕಾರಿನ ಬಿಡುಗಡೆ ದಿನಾಂಕ ಖಚಿತಪಡಿಸಿದ ಹ್ಯುಂಡೈ

ಹೊಸ ಕ್ರೆಟಾ ಕಾರಿನ ಸೈಡ್ ಹಾಗೂ ರೇರ್ ಪ್ರೊಫೈಲ್‍‍ಗಳನ್ನು ಸಹ ಬದಲಿಸಲಾಗಿದೆ. ಈಗ ಇವುಗಳ ಸುತ್ತಲೂ ಶಾರ್ಪ್ ಆದ ಕ್ರೀಸ್‍‍ಗಳನ್ನು ನೀಡಲಾಗಿದೆ. ವ್ಹೀಲ್ ಆರ್ಕ್‍‍ಗಳ ಸುತ್ತಲಿರುವ ಶಾರ್ಪ್ ಕ್ರೀಸ್‍‍ಗಳಿಂದ ಈ ಎಸ್‍‍ಯುವಿ ಹೆಚ್ಚು ಮಸ್ಕ್ಯುಲರ್ ಹಾಗೂ ಸ್ಪೋರ್ಟಿಯಾಗಿ ಕಾಣುತ್ತದೆ.

ಹೊಸ ಕ್ರೆಟಾ ಕಾರಿನ ಬಿಡುಗಡೆ ದಿನಾಂಕ ಖಚಿತಪಡಿಸಿದ ಹ್ಯುಂಡೈ

ಹೊಸ ಎಸ್‍‍ಯುವಿಯ ಹಿಂಭಾಗದಲ್ಲಿಯೂ ಬದಲಾವಣೆ ಮಾಡಲಾಗಿದ್ದು, ಟೇಲ್‍‍ಲೈಟ್‍‍ಗಳು ಹೆಡ್‍‍ಲ್ಯಾಂಪ್ ಯುನಿಟ್‍‍ನಲ್ಲಿರುವಂತಹ ವಿನ್ಯಾಸವನ್ನು ಹೊಂದಿವೆ. ಬೂಟ್ ಲಿಡ್ ಮಧ್ಯದಲ್ಲಿ ತೆಳುವಾದ ಎಲ್‍ಇ‍‍ಡಿ ಸ್ಟ್ರಿಪ್ ಅನ್ನು ಅಳವಡಿಸಲಾಗಿದೆ.

ಹೊಸ ಕ್ರೆಟಾ ಕಾರಿನ ಬಿಡುಗಡೆ ದಿನಾಂಕ ಖಚಿತಪಡಿಸಿದ ಹ್ಯುಂಡೈ

ಹೊಸ ಹ್ಯುಂಡೈ ಕ್ರೆಟಾದಲ್ಲಿ ಕಿಯಾ ಸೆಲ್ಟೋಸ್‍‍ನಲ್ಲಿರುವಂತಹ ಎಂಜಿನ್ ಅನ್ನು ಅಳವಡಿಸಲಾಗಿದೆ. 1.5 ಲೀಟರಿನ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳು ಕ್ರಮವಾಗಿ 115 ಬಿ‍‍ಹೆಚ್‍‍ಪಿ ಪವರ್ ಹಾಗೂ ಕ್ರಮವಾಗಿ 144 ಎನ್‍ಎಂ ಹಾಗೂ 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತವೆ.

ಹೊಸ ಕ್ರೆಟಾ ಕಾರಿನ ಬಿಡುಗಡೆ ದಿನಾಂಕ ಖಚಿತಪಡಿಸಿದ ಹ್ಯುಂಡೈ

ಇದರ ಜೊತೆಗೆ 1.4 ಲೀಟರಿನ ಟಿ-ಜಿ‍‍ಡಿ‍ಐ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡಲಾಗುವುದು. ಈ ಎಂಜಿನ್ 140 ಬಿ‍‍ಹೆಚ್‍‍ಪಿ ಪವರ್ ಹಾಗೂ 242 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಲ್ಲಾ ಎಂಜಿನ್‍‍ಗಳಲ್ಲಿಯೂ 6 ಸ್ಪೀಡಿನ ಮ್ಯಾನುವಲ್ ಗೇರ್‍‍ಬಾಕ್ಸ್ ಜೋಡಿಸಲಾಗಿದೆ.

ಹೊಸ ಕ್ರೆಟಾ ಕಾರಿನ ಬಿಡುಗಡೆ ದಿನಾಂಕ ಖಚಿತಪಡಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಹೊಸ ಕ್ರೆಟಾ ಎಸ್‍‍ಯುವಿಯಲ್ಲಿ ಎಂಜಿನ್ ಹಾಗೂ ಮಾದರಿಗಳ ಆಧಾರದ ಮೇಲೆ ಸಿವಿಟಿ, ಟಾರ್ಕ್ ಕನ್ವರ್ಟರ್ ಹಾಗೂ 7 ಸ್ಪೀಡ್ ಡಿಸಿಟಿ ಎಂಬ ಮೂರು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಗಳನ್ನು ನೀಡಲಿದೆ.

ಹೊಸ ಕ್ರೆಟಾ ಕಾರಿನ ಬಿಡುಗಡೆ ದಿನಾಂಕ ಖಚಿತಪಡಿಸಿದ ಹ್ಯುಂಡೈ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

2020ರ ಹೊಸ ಹ್ಯುಂಡೈ ಕ್ರೆಟಾ ಎಸ್‍ಯುವಿ ದೇಶಿಯ ಮಾರುಕಟ್ಟೆಯಲ್ಲಿನ ಬಹು ನಿರೀಕ್ಷಿತ ವಾಹನಗಳಲ್ಲಿ ಒಂದಾಗಿದೆ. ಕಿಯಾ ಸೆಲ್ಟೋಸ್ ಬಿಡುಗಡೆಯಾಗುವವರೆಗೂ ಕ್ರೆಟಾ ಎಸ್‍‍ಯುವಿ ಮಧ್ಯಮ ಗಾತ್ರದ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗುತ್ತಿತ್ತು. ಹೊಸ ಕ್ರೆಟಾದ ಬಿಡುಗಡೆಯ ನಂತರ ಹೆಚ್ಚು ಮಾರಾಟವಾಗುವ ಸಾಧ್ಯತೆಗಳಿವೆ.

Most Read Articles

Kannada
English summary
New Hyundai Creta India launch date confirmed. Read in Kannada.
Story first published: Thursday, February 13, 2020, 12:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X