Just In
- 51 min ago
ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಖರೀದಿ ಮೇಲೆ ಹೊಸ ವರ್ಷದ ಆಫರ್
- 1 hr ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 2 hrs ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 3 hrs ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
Don't Miss!
- News
ಕೊವ್ಯಾಕ್ಸಿನ್ ಬಗ್ಗೆ ಎಚ್ಚರ: ಲಸಿಕೆಯು ಯಾರಿಗೆ ಸೂಕ್ತ, ಯಾರಿಗೆ ಸೂಕ್ತವಲ್ಲ?
- Finance
34,000 ರುಪಾಯಿ ತನಕ ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ
- Sports
ಭಾರತ vs ಆಸ್ಟ್ರೇಲಿಯಾ: ಧೋನಿ ದಾಖಲೆ ಮುರಿದು 1000 ಟೆಸ್ಟ್ ರನ್ ಗಳಿಸಿದ ರಿಷಭ್ ಪಂತ್
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡ ನ್ಯೂ ಜನರೇಷನ್ ಹ್ಯುಂಡೈ ಐ20
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಬಹುನಿರೀಕ್ಷಿತ ಮೂರನೇ ತಲೆಮಾರಿನ ಐ20 ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್ಬ್ಯಾಕ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ.

ಹ್ಯುಂಡೈ ಮೋಟರ್ ಇಂಡಿಯಾ ಇತ್ತೀಚೆಗೆ ಬಿಡುಗಡೆ ಮಾಡಿದ ಮೂರನೇ ತಲೆಮಾರಿನ ಐ20 ಪ್ರೀಮಿಯಂ ಹ್ಯಾಚ್ಬ್ಯಾಕ್ಗಾಗಿ ಕೇವಲ 20 ದಿನಗಳಲ್ಲಿ 20,000 ಕ್ಕೂ ಹೆಚ್ಚು ಬುಕ್ಕಿಂಗ್ ಸ್ವೀಕರಿಸಿಕೊಂಡಿದೆ ಎಂದು ಇತ್ತೀಚೆಗೆ ವರದಿಯನ್ನು ಪ್ರಕಟಿಸಿದ್ದೇವೆ. ಇದೀಗ ಹೊಸ ಹ್ಯುಂಡೈ ಐ20 ಕಾರು ದಾಖಲೆಯ ಮಟ್ಟದ ಬುಕ್ಕಿಂಗ್ ಅನ್ನು ಪಡೆದುಕೊಂಡಿದೆ. ಈ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್ಬ್ಯಾಕ್ 25,000ಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಪಡೆದುಕೊಂಡು ಭರ್ಜರಿ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ.

ಆಯ್ದ ಕೆಲವು ಹ್ಯುಂಡೈ ಡೀಲರುಗಳು ಅಕ್ಟೋಬರ್ ಮಧ್ಯೆ ಹೊಸ ಐ20 ಕಾರಿಗಾಗಿ ಬುಕ್ಕಿಂಗ್ ಸ್ವೀಕರಿಸಲು ಪ್ರಾರಂಭಿಸಿದ್ದರೆ, ಕಂಪನಿಯು ಅಧಿಕೃತವಾಗಿ ಅಕ್ಟೋಬರ್ 27ರಂದು ದೇಶಾದ್ಯಂತ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದರು.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ನವೆಂಬರ್ 5 ರಂದು ಬಿಡುಗಡೆಯಾಗುವ ವೇಳೆ 10,000 ಪ್ರಿ-ಬುಕ್ಕಿಂಗ್ ಪಡೆದುಕೊಂಡಿತ್ತು. ಇನ್ನು ಬಿಡುಗಡೆಯಾದ ಬಳಿಕ 10,000 ಬುಕ್ಕಿಂಗ್ ಪಡೆದುಕೊಂಡಿದೆ. ಹೀಗೆ ಕೇವಲ 20 ದಿನಗಳಲ್ಲಿ 20,000 ಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿತ್ತು. ಇದೀಗ ನ್ಯೂ ಜನರೇಷನ್ ಹ್ಯುಂಡೈ ಐ20 ಕಾರು ಬುಕ್ಕಿಂಗ್ ನಲ್ಲಿ 25,000 ಗಡಿ ದಾಟಿದೆ.

ಇನ್ನು ನ್ಯೂ ಜನರೇಷನ್ ಹ್ಯುಂಡೈ ಐ20 ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಹೊಸ ಐ20 ಹೆಚ್ಚು ಸ್ಪೋರ್ಟಿ ಮತ್ತು ಬೋಲ್ಡ್ ಲುಕ್ ಅನ್ನು ಹೊಂದಿದೆ. ಹ್ಯುಂಡೈ ಐ20 ಹ್ಯಾಚ್ಬ್ಯಾಕ್ ಕಾರಿನ ಹಿಂದಿನ ಮಾದರಿಯು ಕೂಡ ಆಕರ್ಷಕ ಲುಕ್ ಅನ್ನು ಹೊಂದಿತ್ತು. ಹ್ಯಾಚ್ಬ್ಯಾಕ್ ವಿಭಾಗದಲ್ಲಿ ಹ್ಯುಂಡೈ ಐ20 ಗ್ರಾಹಕರನ್ನು ತನ್ನತ ಸೆಳೆಯುವಂತಹ ಆಕರ್ಷಕ ಲುಕ್ ಮತ್ತು ಸ್ಟೈಲಿಶ್ ನಿಂದ ಹೆಚ್ಚು ಜನಪ್ರಿಯವಾಗಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇನ್ನು ಈ ಹೊಸ ಹ್ಯುಂಡೈ ಐ20 ಕಾರಿನ ಮುಂಭಾಗದಲ್ಲಿರು ಕ್ಯಾಸ್ಕೇಡಿಂಗ್ ಗ್ರಿಲ್ ಅನ್ನು ಹೊಂದಿದೆ. ಹಿಂದಿನ ಐ20 ಮಾದರಿಗೆ ಹೋಲಿಸಿದರೆ ಹೆಡ್ ಲ್ಯಾಂಪ್ ಮತ್ತು ಸೈಡ್ ಫ್ರೋಪೈಲ್ ವಿನ್ಯಾಸವನ್ನು ನವೀಕರಿಸಲಾಗಿದೆ ದೊಡ್ಡ ಕ್ರೀಸ್ ಲೈನ್ ಗಳನ್ನು ಒಳಗೊಂಡಿದೆ.

ಹೊಸ ಹುಂಡೈ ಐ20 ಕಾರಿನ ಪಿಲ್ಲರ್ಗಳು ಬ್ಲ್ಯಾಕ್ ಬಣ್ಣವನ್ನು ಹೊಂದಿದೆ. ವಿಡಬ್ಲ್ಯೂ ಟೈಗನ್ನಲ್ಲಿ ಇರುವಂತಹ ಕೆಂಪು ಇಲ್ಇಡಿ ಡಿಆರ್ಎಲ್ ಸ್ಟಾಪ್ ಲೈಟ್ ಹಿಂಭಾಗದಲ್ಲಿ ಇಲ್ಇಡಿ ಟೇಲ್ಲೈಟ್ ಹೊಂದಿದೆ. ಇನ್ನು ಹೊಸ ಹ್ಯುಂಡೈ ಕಾರಿನ ಇಂಟಿರಿಯರ್ನಲ್ಲಿ 4 ಸ್ಫೋಕ್ ಸ್ಟೀಟಿಯರಿಂಗ್ ವ್ಹೀಲ್ ಅನ್ನು ಅಳವಡಿಸಲಾಗಿದೆ.

ಹೊಸ ಹ್ಯುಂಡೈ ಐ20 ಕಾರು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 1.2ಎಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 83 ಬಿಹೆಚ್ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇದರೊಂದಿಗೆ 1.0ಎಲ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 120 ಬಿಹೆಚ್ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5ಎಲ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿಯು ಕೂಡ ಲಭ್ಯವಿದೆ.