ಹೊಸ ಹ್ಯುಂಡೈ ಐ30 ಎನ್ ಪರ್ಫಾಮೆನ್ಸ್ ಕಾರಿನ ಟೀಸರ್ ಬಿಡುಗಡೆ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಈ ವರ್ಷದ ಆರಂಭದಲ್ಲಿ ಐ30 ಮತ್ತು ಐ30 ಎನ್ ಲೈನ್‌ನ ನವೀಕರಿಸಿದ ಆವೃತ್ತಿಯನ್ನು ಅನಾವರಣಗೊಳಿಸಿತ್ತು. ಇದೀಗ ಹ್ಯುಂಡೈ ತನ್ನ ಪರ್ಫಾಮೆನ್ಸ್ ಮಾದರಿ ಐ30 ಎನ್ ಲೈನ್‌ನ ಟೀಸರ್ ಚಿತ್ರಗಳನ್ನು ಬಿಡುಗಡೆಗೊಳಿಸಿದೆ.

ಹೊಸ ಹ್ಯುಂಡೈ ಐ30 ಎನ್ ಪರ್ಫಾಮೆನ್ಸ್ ಕಾರಿನ ಟೀಸರ್ ಬಿಡುಗಡೆ

ಪರ್ಫಾಮೆನ್ಸ್ ಮಾದರಿ ಐ30 ಎನ್ ಹಿಂದಿನ ಮಾದರಿಗಿಂತ ಹಲವು ವಿಷಯಗಳಲ್ಲಿ ಭಿನ್ನವಾಗಿದ ಎಂದು ಹ್ಯುಂಡೈ ಖಚಿತಪಡಿಸಿದೆ. ಟೀಸರ್ ಚಿತ್ರದಲ್ಲಿ ಹ್ಯುಂಡೈ ಐ30 ಎನ್ ಹೊಸದಾಗಿ ವಿನ್ಯಾಸಗೊಳಿಸಲಾದ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳನ್ನು ಒಳಗೊಂಡಿದೆ. ಜೊತೆಗೆ ಬೋಲ್ಡರ್ ಫ್ರಂಟ್ ಗ್ರಿಲ್, ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, ಅಪ್‌ಗ್ರೇಡ್ ರಿಯರ್ ಡಿಫ್ಯೂಸರ್ ಮತ್ತು ದೊಡ್ಡ ಎಕ್ಸಾಸ್ಟ್ ಔಟ್ ಲೆಟ್ ಗಳನ್ನು ಹೊಂದಿದೆ.

ಹೊಸ ಹ್ಯುಂಡೈ ಐ30 ಎನ್ ಪರ್ಫಾಮೆನ್ಸ್ ಕಾರಿನ ಟೀಸರ್ ಬಿಡುಗಡೆ

ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಹೊಸ ಹ್ಯುಂಡೈ ಐ30 ಎನ್ ಕಾರಿನಲ್ಲಿ 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಹಿಂದಿನ ಮಾದರಿಯಲ್ಲಿದ್ದ ಅದೇ ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಹ್ಯುಂಡೈ ಐ30 ಎನ್ ಪರ್ಫಾಮೆನ್ಸ್ ಕಾರಿನ ಟೀಸರ್ ಬಿಡುಗಡೆ

ಈ ಎಂಜಿನ್ 250 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಪರ್ಫಾರ್ಮೆನ್ಸ್ ಪ್ಯಾಕ್ 275 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಹೊಸದಾಗಿ ಅಭಿವೃದ್ಧಿಪಡಿಸಿದ 8-ಸ್ಪೀಡ್ ಡಿಸಿಟಿಗೆ ಜೋಡಿಸಲಾಗಿದೆ.

ಹೊಸ ಹ್ಯುಂಡೈ ಐ30 ಎನ್ ಪರ್ಫಾಮೆನ್ಸ್ ಕಾರಿನ ಟೀಸರ್ ಬಿಡುಗಡೆ

ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಹೊಂದಿರುವ ಎನ್ ಪರ್ಫಾಮೆನ್ಸ್ ವರ್ಗಾವಣೆ ಕಾರ್ಯಗಳನ್ನು ಹೊಂದಲು ಅನುಮೋದಿಸಲಾಗಿದೆ. ಈ ಹಾಟ್ ಹ್ಯಾಚ್‌ಬ್ಯಾಕ್ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಹೊಸ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ನೀಡಲಾಗುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ಹ್ಯುಂಡೈ ಐ30 ಎನ್ ಪರ್ಫಾಮೆನ್ಸ್ ಕಾರಿನ ಟೀಸರ್ ಬಿಡುಗಡೆ

ಭವಿಷ್ಯದಲ್ಲಿ ಇತರ ಮಾರುಕಟ್ಟೆಗಳಿಗೂ ಇದೇ ಮಾದರಿಯನ್ನು ಪರಿಚಯಿಸಲಾಗುತ್ತದೆ. ಈ ಹೊಸ ಗೇರ್‌ಬಾಕ್ಸ್ ಅಧಿಕ ವೇಗ ಮತ್ತು ಉತ್ತಮ ಅಕ್ಸಲೇರೆಷನ್ಗೆ ಸಹಾಯ ಮಾಡುತ್ತದೆ ಎಂದು ನಾವು ನಿರೀಕ್ಷಿಸಬಹುದು.

ಹೊಸ ಹ್ಯುಂಡೈ ಐ30 ಎನ್ ಪರ್ಫಾಮೆನ್ಸ್ ಕಾರಿನ ಟೀಸರ್ ಬಿಡುಗಡೆ

ಮಾರುಕಟ್ಟೆಯಲ್ಲಿರುವ ಹ್ಯುಂಡೈ ಐ30 ಎನ್ ಕಾರು ಕೇವಲ 6.2 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಹೊಸ ಹ್ಯುಂಡೈ ಐ30 ಎನ್ ಕಾರಿನಲ್ಲಿ 19 ಇಂಚಿನ ಹೊಸ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಹೊಸ ಹ್ಯುಂಡೈ ಐ30 ಎನ್ ಪರ್ಫಾಮೆನ್ಸ್ ಕಾರಿನ ಟೀಸರ್ ಬಿಡುಗಡೆ

ಇನ್ನು ಹ್ಯುಂಡೈ ಕಂಪನಿಯು ಐ30 ಕಾರನ್ನು ಹ್ಯಾಚ್‌ಬ್ಯಾಕ್, ವ್ಯಾಗನ್ ಮತ್ತು ಫಾಸ್ಟ್‌ಬ್ಯಾಕ್ ಮೂರು ವಿಭಾಗದಲ್ಲಿ ಮಾರಾಟ ಮಾಡಲಾಗುತ್ತದೆ. ಹ್ಯುಂಡೈ ಐ30 ಕಾರು ಯುರೋಪಿನ ಮಾರುಕಟ್ಟೆಯಲ್ಲಿ 2007 ರಿಂದ ಮಾರಾಟದಲ್ಲಿದೆ.

ಹೊಸ ಹ್ಯುಂಡೈ ಐ30 ಎನ್ ಪರ್ಫಾಮೆನ್ಸ್ ಕಾರಿನ ಟೀಸರ್ ಬಿಡುಗಡೆ

ಯುರೋಪಿನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. 2008ರಲ್ಲಿ ಮಾರಾಟ ಹೆಚ್ಚಾದಾಗ ಜೆಕ್ ರಿಪಬ್ಲಿಕ್ ಉತ್ಪಾದನಾ ಘಟಕದಲ್ಲಿ ಈ ಕಾರಿನ ಉತ್ಪಾದನೆಯನ್ನು ಹೆಚ್ಚಿಸಿದ್ದರು. ಕಳೆದ ವರ್ಷ, ಎಚ್‌ಎಂಎಂಸಿ ಸ್ಥಾವರವು ಮೂರು ದಶಲಕ್ಷ ಯುನಿಟ್ ಗಳನ್ನು ಉತ್ಪಾದಿಸುವ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸಿದ್ದರು.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ಹ್ಯುಂಡೈ ಐ30 ಎನ್ ಪರ್ಫಾಮೆನ್ಸ್ ಕಾರಿನ ಟೀಸರ್ ಬಿಡುಗಡೆ

ಭಾರತೀಯ ಮಾರುಕಟ್ಟೆಗೆ ಸಂಬಂಧಿಸಿದಂತೆ, ಹ್ಯುಂಡೈ ತನ್ನ ಬಹುನಿರೀಕ್ಷಿತ ಹೊಸ ತಲೆಮಾರಿನ ಎಲೈಟ್ ಐ20 ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಹ್ಯುಂಡೈ ಎಲೈಟ್ ಐ20 ಕಾರಿನಲ್ಲಿ ಹಲವಾರು ಹೊಸ ಫೀಚರ್‌ಗಳನ್ನು ಹೊಂದಿರಲಿದೆ.

ಹೊಸ ಹ್ಯುಂಡೈ ಐ30 ಎನ್ ಪರ್ಫಾಮೆನ್ಸ್ ಕಾರಿನ ಟೀಸರ್ ಬಿಡುಗಡೆ

ಹೊಸ ತಲೆಮಾರಿನ ಐ20 ಕಾರುನ್ನು ಹಲವು ಬಾರಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಹೊಸ ಹ್ಯುಂಡೈ ಐ20 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳಲ್ಲಿ ಇದು ಕೂಡ ಒಂದಾಗಿದೆ.

Most Read Articles

Kannada
English summary
2021 Hyundai i30 N Teased For The First Time Ahead Of Launch. Read In Kannada.
Story first published: Thursday, September 17, 2020, 18:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X