Just In
- 50 min ago ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- 56 min ago Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
- 1 hr ago ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- 2 hrs ago ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
Don't Miss!
- News Bird Flu: ಮೊಟ್ಟೆ-ಕೋಳಿ ತಿನ್ನುವವರೇ ಹುಷಾರ್!- ಹೆಚ್ಚಾಗಿದೆ ಹಕ್ಕಿಜ್ವರ
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಡುಗಡೆಗೆ ಸಜ್ಜಾದ ಹೊಸ ಹ್ಯುಂಡೈ ಟಕ್ಸನ್ ಫೇಸ್ಲಿಫ್ಟ್ ಎಸ್ಯುವಿ
ಹುಂಡೈ ಕಂಪನಿಯು ತನ್ನ ಹೊಸ ಟಕ್ಸನ್ ಫೇಸ್ಲಿಫ್ಟ್ ಎಸ್ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. 2020ರ ಆಟೋ ಎಕ್ಸ್ ಪೋದಲ್ಲಿ ಎರಡನೇ ತಲೆಮಾರಿನ ಟಕ್ಸನ್ ಫೇಸ್ಲಿಫ್ಟ್ ಎಸ್ಯುವಿಯನ್ನು ಪ್ರದರ್ಶಿಸಲಾಗಿತ್ತು.
ಹ್ಯುಂಡೈ ಕಂಪನಿಯು ಸಾಂಟಾ ಎಫ್ಇ ಕಾರ್ ಅನ್ನು ಸ್ಥಗಿತಗೊಳಿಸಿದ ನಂತರ ಟಕ್ಸನ್ ಕಾರು ಹ್ಯುಂಡೈನ ಪ್ರಮುಖ ಎಸ್ಯುವಿಯಾಗಿದೆ. ಈ ಟಕ್ಸನ್ ಫೇಸ್ಲಿಫ್ಟ್ ಎಸ್ಯುವಿಯನ್ನು ಭಾರತದಲ್ಲಿ ಹ್ಯುಂಡೈ ಕಂಪನಿಯು ಈ ತಿಂಗಳ 14 ರಂದು ಬಿಡುಗಡೆಗೊಳಿಸಲಿದೆ ಎಂದು ವರದಿಗಳು ಪ್ರಕಟವಾಗಿದೆ. ಮುಂಬೈನಲ್ಲಿರುವ ಕೆಲವು ಡೀಲರ್ಗಳ ಪ್ರಕಾರ 2020ರ ಹೊಸ ಹ್ಯುಂಡೈ ಟಕ್ಸನ್ ಎಸ್ಯುವಿಯ ಬುಕ್ಕಿಂಗ್ಗಳನ್ನು ಆರಂಭಿಸಲಾಗಿದೆ. ರೂ.25,000 ಪಾವತಿಸಿ ಈ ಎಸ್ಯುವಿಯನ್ನು ಬುಕ್ಕಿಂಗ್ ಮಾಡಬಹುದಾಗಿದೆ. ಇದು ಫೇಸ್ಲಿಫ್ಟ್ ಆವೃತ್ತಿಯಾಗಿರುವ ಕಾರಣಕ್ಕೆ ಈ ಎಸ್ಯುವಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ಈ ಎಸ್ಯುವಿಯ ಮುಂಭಾಗ ಹಾಗೂ ಹಿಂಭಾಗದಲ್ಲಿರುವ ಬಂಪರ್, ಪೆಂಟಾ ಎಲ್ಇಡಿ ಪ್ರೊಜೆಕ್ಟರ್ ಹೆಡ್ಲೈಟ್ ಯುನಿಟ್, ಎಲ್ಇಡಿ ಟೇಲ್ಲೈಟ್, 18 ಇಂಚಿನ ಡೈಮಂಡ್ ಕಟ್ ವ್ಹೀಲ್ಗಳನ್ನು ಹೊಂದಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ
ಇನ್ನು ಹೊಸ ಟಕ್ಸನ್ ಫೇಸ್ಲಿಫ್ಟ್ ಎಸ್ಯುವಿಯ ಒಳಭಾಗದಲ್ಲಿ 10 ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, 8ವೇ ಪವರ್ಡ್ ಕೋ ಪ್ಯಾಸೆಂಜರ್ ಸೀಟ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಬ್ಲೂ ಲಿಂಕ್ ಕನೆಕ್ಟಿವಿಟಿ, ವೈರ್ಲೆಸ್ ಚಾರ್ಜಿಂಗ್, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಹೊಂದಿರುವ 8 ಇಂಚಿನ ಟಚ್ಸ್ಕ್ರೀನ್ ಇನ್ಫೋಟೆನ್ಮೆಂಟ್ ಸಿಸ್ಟಂಗಳಿವೆ.
ಇದರ ಜೊತೆಗೆ ಹ್ಯುಂಡೈನ ಐಬ್ಲೂ ಹಾಗೂ ವಾಯ್ಸ್ ಕಮಾಂಡ್ಗಳಿವೆ. ಕ್ಯಾಬಿನ್ನಲ್ಲಿ ಎಸಿ ವೆಂಟ್ಗಳನ್ನು ಹೊಂದಿರುವ ಡ್ಯುಯಲ್ ಟೋನ್ ಡ್ಯಾಶ್ಬೋರ್ಡ್ಗಳನ್ನು ನೀಡಲಾಗಿದೆ. ಹೊಸ ಎಸ್ಯುವಿ 360 ಡಿಗ್ರಿಯ ಕ್ಯಾಮರಾ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಹಾಗೂ ಪನೋರಾಮಿಕ್ ಸನ್ರೂಫ್ಗಳನ್ನು ಹೊಂದಿದೆ.
MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್ವ್ಯಾಗನ್ ಟಿ-ರಾಕ್ ಎಸ್ಯುವಿ
ಹೊಸ ಹ್ಯುಂಡೈ ಟಕ್ಸನ್ ಫೇಸ್ಲಿಫ್ಟ್ ಎಸ್ಯುವಿಯನ್ನು ಜಿಎಲ್ 2 ಡಬ್ಲ್ಯುಡಿ, ಜಿಎಲ್ಎಸ್ 2 ಡಬ್ಲ್ಯುಡಿ ಹಾಗೂ ಜಿಎಲ್ಎಸ್ 4 ಡಬ್ಲ್ಯುಡಿ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಜಿಎಲ್ ಹಾಗೂ ಜಿಎಲ್ಎಸ್ ಮಾದರಿಗಳನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ನಲ್ಲಿ ಮಾರಾಟ ಮಾಡಲಾಗುವುದು.
ಈ ಎಸ್ಯುವಿಯಲ್ಲಿ ಇಕೊ, ಸ್ಮಾರ್ಟ್ ಹಾಗೂ ಪ್ರೊ ಎಂಬ ಮೂರು ವಿಧದ ಡ್ರೈವಿಂಗ್ ಮೋಡ್ಗಳಿವೆ. ಹೊಸ ಟಕ್ಸನ್ ಎಸ್ಯುವಿ ಪಾರ್ಕಿಂಗ್ ಸೆನ್ಸಾರ್, ಇಎಸ್ಸಿ, ಹಿಲ್ ಡಿಸೆಂಟ್ ಕಂಟ್ರೋಲ್, ಹಿಲ್ ಅಸಿಸ್ಟ್, ಪಡಲ್ ಲ್ಯಾಂಪ್, ಕಾರ್ನರಿಂಗ್ ಲ್ಯಾಂಪ್, ಪವರ್ಡ್ ಟೇಲ್ಗೇಟ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಹಾಗೂ ಡೈನಾಮಿಕ್ ಸ್ಟಾಬಿಲಿಟಿ ಕಂಟ್ರೋಲ್ನಂತಹ ಹಲವಾರು ಫೀಚರ್ಗಳನ್ನು ಹೊಂದಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್ಲಿಫ್ಟ್
2020ರ ಹ್ಯುಂಡೈ ಟಕ್ಸನ್ ಫೇಸ್ಲಿಫ್ಟ್ 2.0 ಲೀಟರಿನ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 182 ಬಿಹೆಚ್ಪಿ ಪವರ್ ಹಾಗೂ 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು 2.0 ಲೀಟರಿನ ಪೆಟ್ರೋಲ್ ಎಂಜಿನ್ 150 ಬಿಹೆಚ್ಪಿ ಪವರ್ ಹಾಗೂ 192 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಈ ಎಂಜಿನ್ನಲ್ಲಿ 6 ಸ್ಪೀಡಿನ ಆಟೋಮ್ಯಾಟಿಕ್ ಗೇರ್ಬಾಕ್ಸ್ ಜೋಡಿಸಲಾಗಿದೆ. ಯಾವುದೇ ಮಾದರಿಗಳಲ್ಲೂ ಮ್ಯಾನುವಲ್ ಟ್ರಾನ್ಸ್ ಮಿಷನ್ ನೀಡುತ್ತಿಲ್ಲ. ಇನ್ನು ಬಿಎಸ್ 6 ಎಂಜಿನ್ 2020ರ ಹ್ಯುಂಡೈ ಟಕ್ಸನ್ ಫೇಸ್ಲಿಫ್ಟ್ ಎಸ್ಯುವಿಯ ಬೆಲೆಯು ಬಿಎಸ್ 4 ಆವೃತ್ತಿಗೆ ಹೆಚ್ಚಾಗಿರಲಿದೆ.