ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಬಿಡುಗಡೆ ದಿನಾಂಕ ಮಾಹಿತಿ ಬಹಿರಂಗ

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಇಸುಝು ಮೋಟಾರ್ಸ್ ತನ್ನ ಮೊದಲ ಬಿಎಸ್-6 ಡಿ-ಮ್ಯಾಕ್ಸ್ ಕಮರ್ಷಿಯಲ್ ಪಿಕ್ ಅಪ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಇದೀಗ ಇಸುಝು ತನ್ನ ಬಿಎಸ್-6 ಡಿ-ಮ್ಯಾಕ್ಸ್ ಕಮರ್ಷಿಯಲ್ ಪಿಕ್ ಅಪ್ ಟ್ರಕ್ ವಾಹನದ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ.

ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಬಿಡುಗಡೆ ದಿನಾಂಕ ಮಾಹಿತಿ ಬಹಿರಂಗ

ಬಿಎಸ್-6 ಡಿ-ಮ್ಯಾಕ್ಸ್ ಕಮರ್ಷಿಯಲ್ ಪಿಕ್ ಅಪ್ ಟ್ರಕ್ ಇದೇ ತಿಂಗಳ 14ರಂದು ಬಿಡುಗಡೆಯಾಗಲಿದೆ. ಇನ್ನು ಇಸುಝು ಬಿಎಸ್-6 ಡಿ-ಮ್ಯಾಕ್ಸ್ ಕಮರ್ಷಿಯಲ್ ಪಿಕ್ ಅಪ್ ಟ್ರಕ್ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇಸುಝು ಡಿ-ಮ್ಯಾಕ್ಸ್ ಪಿಕ್ ಅಪ್ ಟ್ರಕ್ ಕಮರ್ಷಿಯಲ್ ವಾಹನ ವಿಭಾಗದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಇಸುಝು ಕಂಪನಿಯ ಕಮರ್ಷಿಯಲ್ ಸರಣಿಯಲ್ಲಿರುವ ವಿವಿಧ ಮಾದರಿಗಳು ಉತ್ತಮವಾಗಿ ಮಾರಾಟವಾಗುತ್ತಿವೆ.

ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಬಿಡುಗಡೆ ದಿನಾಂಕ ಮಾಹಿತಿ ಬಹಿರಂಗ

1,710 ಕೆಜಿ ಹೊಂದಿರುವ ಇಸುಝು ಡಿ-ಮ್ಯಾಕ್ಸ್ ಪಿಕ್ ಅಪ್ ಟ್ರಕ್ ಲೋಡ್ ಸಾಮರ್ಥ್ಯವನ್ನು ಬದಲಾಯಿಸಲಾಗಿದೆ. ಟೀಸರ್ ವೀಡಿಯೋದಲ್ಲಿರುವುದು ಪರ್ಯಾಯವಾಗಿ ಇದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ‘ಸೂಪರ್ ಸ್ಟ್ರಾಂಗ್' ಎಂಬ ಡಿ-ಮ್ಯಾಕ್ಸ್ ಪಿಕ್‌ಅಪ್‌ನ ಹೊಸ ರೂಪಾಂತರವಾಗಿರಬಹುದು.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಬಿಡುಗಡೆ ದಿನಾಂಕ ಮಾಹಿತಿ ಬಹಿರಂಗ

ಮರುವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್‌ಗಳು ಮತ್ತು ಟ್ವೀಕ್ಡ್ ಇಂಟೀರಿಯರ್‌ಗಳನ್ನು ಹೊರತುಪಡಿಸಿ ಬಿಎಸ್ 6 ಮಾದರಿಯಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬರುವುದಿಲ್ಲ. ಹೊಸ ಇಸುಝು ಡಿ-ಮ್ಯಾಕ್ಸ್ ಪಿಕ್ ಅಪ್ ಟ್ರಕ್ ಮಾದರಿಯಲ್ಲಿ ಹಿಂದಿನ ಮಾದರಿಯಂತೆ 2.5-ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಹೊಂದಿರಲಿದೆ.

ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಬಿಡುಗಡೆ ದಿನಾಂಕ ಮಾಹಿತಿ ಬಹಿರಂಗ

ಈ ಎಂಜಿನ್ 3600 ಆರ್‌ಪಿಎಂನಲ್ಲಿ 134 ಬಿಹೆಚ್‌ಪಿ ಪವರ್ ಮತ್ತು 1800 ಆರ್‌ಪಿಎಂ ಮತ್ತು 2800 ಆರ್‌ಪಿಎಂ ನಡುವೆ 320 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಬಿಡುಗಡೆ ದಿನಾಂಕ ಮಾಹಿತಿ ಬಹಿರಂಗ

ಇಸುಝು ಡಿ-ಮ್ಯಾಕ್ಸ್ ಪಿಕ್ ಅಪ್ ಟ್ರಕ್ ನಲ್ಲಿ ಸಿಂಗಲ್ ಮತ್ತು ಡಬಲ್ ಕ್ಯಾಬ್ ರೂಪಾಂತರಗಳನ್ನು ಒಂದೆರಡು ಕಸ್ಟಮೈಸ್ ಆಯ್ಕೆಗಳೊಂದಿಗೆ ಹೊಂದಿತ್ತು. ಹೊಸ ಡಿ-ಮ್ಯಾಕ್ಸ್ ಪಿಕ್ ಅಪ್ ಟ್ರಕ್ ನಲ್ಲಿಯು ಇದೇ ರೀತಿಯ ಸಂರಚನೆಗಳಲ್ಲಿಯೂ ನೀಡಲಾಗುತ್ತದೆ.

ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಬಿಡುಗಡೆ ದಿನಾಂಕ ಮಾಹಿತಿ ಬಹಿರಂಗ

ಇತ್ತೀಚಿನ ವರದಿಗಳ ಪ್ರಕಾರ, ಕಂಪನಿಯು ಸೆಪ್ಟೆಂಬರ್‌ನಲ್ಲಿ ಬಿಎಸ್ 6 ಮಾದರಿಗಳನ್ನು ಡೀಲರುಗಳಿಗೆ ರವಾನಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರ, ಕಂಪನಿಯಿಂದ ಇದುವರೆಗೆ ಯಾವುದೇ ಮಾಹಿತಿಗಳು ಬಂದಿಲ್ಲ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಬಿಡುಗಡೆ ದಿನಾಂಕ ಮಾಹಿತಿ ಬಹಿರಂಗ

ಇಸುಝು ಕಂಪನಿಯು ಭಾರತದಲ್ಲಿ ಡಿ-ಮ್ಯಾಕ್ಸ್, ವಿ-ಕ್ರಾಸ್ ಮತ್ತು ಎಂಯು-ಎಕ್ಸ್ ಎಂಬ ಮೂರು ಮಾದರಿಗಳನ್ನು ನೀಡಿತು. ಡಿ-ಮ್ಯಾಕ್ಸ್ ವಾಣಿಜ್ಯ ಉದ್ದೇಶದ ಪಿಕ್-ಅಪ್ ಟ್ರಕ್ ಆಗಿದ್ದು, ಇದು ಒಂದೆರಡು ರೂಪಾಂತರಗಳಲ್ಲಿ ಲಭ್ಯವಿದೆ. ವಿ-ಕ್ರಾಸ್ ಖಾಸಗಿ ಬಳಕೆಗಾಗಿ ಮಾರಾಟವಾಗುವ ಪಿಕ್-ಅಪ್ ಟ್ರಕ್ ಮತ್ತು ಉತ್ತಮ ಆಫ್-ರೋಡ್ ಸಾಮರ್ಥ್ಯಗಳನ್ನು ಹೊಂದಿದೆ.

ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಬಿಡುಗಡೆ ದಿನಾಂಕ ಮಾಹಿತಿ ಬಹಿರಂಗ

ಇಸುಝು ತನ್ನ ಬಿಎಸ್-6 ಸರಣಿಯ ವಾಹನಗಳನ್ನು ಇನ್ನೂ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿಲ್ಲ. ತನ್ನ ಸರಣಿಯ ಮೊದಲ ಬಿಎಸ್-6 ಮಾಡರಿಯಾಗಿ ಡಿ-ಮ್ಯಾಕ್ಸ್ ಪಿಕ್ ಅಪ್ ಟ್ರಕ್ ಅನ್ನು ಬಿಡುಗಡೆಗೊಳಿಸಲಿದೆ, ಕಂಪನಿಯು ತನ್ನ ಸಾಲಿನಲ್ಲಿ ಪಿಕ್-ಅಪ್ ಮತ್ತು ಎಸ್‌ಯುವಿ ಮಾದರಿಯನ್ನು ಮಾತ್ರ ಹೊಂದಿದೆ, ಇದು ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆಯನ್ನು ಗಳಿಸಿದೆ.

Most Read Articles

Kannada
Read more on ಇಸುಝು isuzu
English summary
Isuzu BS6 D-Max Commercial Pick-Up India Launch Date Revealed. Read In Kannada.
Story first published: Saturday, October 10, 2020, 18:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X