ಹೊಸ ಜೀಪ್ ಕಂಪಾಸ್ ನೈಟ್ ಈಗಲ್ ಎಸ್‍ಯುವಿಯ ಟೀಸರ್ ಬಿಡುಗಡೆ

ಜೀಪ್ ಕಂಪನಿಯು ತನ್ನ ಕಪಾಸ್ ಎಸ್‍ಯುವಿಯ ಲಿಮಿಟೆಡ್ ಎಡಿಷನ್ ಆವೃತಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಲಿಮಿಟೆಡ್ ಎಡಿಷನ್ ಆವೃತ್ತಿಯನ್ನು 'ನೈಟ್ ಈಗಲ್' ಎಂಬ ಹೆಸರಿನಲ್ಲಿ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಹೊಸ ಜೀಪ್ ಕಂಪಾಸ್ ನೈಟ್ ಈಗಲ್ ಎಸ್‍ಯುವಿಯ ಟೀಸರ್ ಬಿಡುಗಡೆ

ಈ ನೈಟ್ ಈಗಲ್ ಲಿಮಿಟೆಡ್ ಎಡಿಷನ್ ಅನ್ನು ಕೇವಲ ಸೀಮಿತ ಸಮಯದವರೆಗೆ ಮಾತ್ರ ಮಾರಾಟ ಮಾಡುತ್ತಾರೆ. ಕಂಪನಿಯ ಪ್ರಕಾರ ಇದು ಕಂಪಾಸ್ ಎಸ್‍ಯುವಿಯ ಮೊದಲ ಲಿಮಿಟೆಡ್ ಎಡಿಷನ್ ಮಾದರಿಯಾಗಿದೆ. ಆದರೆ ಈ ಲಿಮಿಟೆಡ್ ಎಡಿಷನ್ ಮಾದರಿಯನ್ನು ಬ್ರೆಜಿಲ್ ಮತ್ತು ಇಂಗ್ಲೇಡ್ ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇದೇ ಹೆಸರಿನೊಂದಿಗೆ ಈ ಹಿಂದೆ ಬಿಡುಗಡೆ ಮಾಡಲಾಗಿತ್ತು.

ಹೊಸ ಜೀಪ್ ಕಂಪಾಸ್ ನೈಟ್ ಈಗಲ್ ಎಸ್‍ಯುವಿಯ ಟೀಸರ್ ಬಿಡುಗಡೆ

ಇನ್ನು ಬಿಡುಗಡೆಯಾಗಲಿರುವ ಈ ಹೊಸ ಜೀಪ್ ಕಂಪಾಸ್ ನೈಟ್ ಈಗಲ್ ಎಸ್‍ಯುವಿಯಲ್ಲಿ ಅತ್ಯಾಧುನಿಕ ‌ಸ್ಟ್ಯಾಂಡರ್ಡ್ ಫೀಚರುಗಳನ್ನು ಮತ್ತು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗುತ್ತದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಹೊಸ ಜೀಪ್ ಕಂಪಾಸ್ ನೈಟ್ ಈಗಲ್ ಎಸ್‍ಯುವಿಯ ಟೀಸರ್ ಬಿಡುಗಡೆ

ಈ ಜೀಪ್ ಕಂಪಾಸ್ ನೈಟ್ ಈಗಲ್ ಎಸ್‍ಯುವಿಯ ಫಾಗ್ ಲ್ಯಾಂಪ್ ಬೆಜೆಲ್ಗಳು, ಮುಂಭಾಗದ ಮೋನಿಕರ್ ಸುತ್ತಮುತ್ತಲಿನ ಪ್ರದೇಶ ಮತ್ತು 18 ಇಂಚಿನ ಅಲಾಯ್ ವ್ಹೀಲ್ ನಲ್ಲಿ ಬ್ಲ್ಯಾಕ್ ಬಣ್ಣದ ಫೀನಿಶಿಂಗ್ ಅನ್ನು ಹೊಂದಿದೆ.

ಹೊಸ ಜೀಪ್ ಕಂಪಾಸ್ ನೈಟ್ ಈಗಲ್ ಎಸ್‍ಯುವಿಯ ಟೀಸರ್ ಬಿಡುಗಡೆ

ಜೀಪ್ ಕಂಪಾಸ್ ನೈಟ್ ಈಗಲ್ ಕ್ಯಾಬಿನ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು. ಏರ್ ಕಾನ್ ವೆಂಟ್ಸ್ ಮತ್ತು ಸೆಂಟರ್ ಕನ್ಸೋಲ್ ಗಳು ಬ್ಲ್ಯಾಕ್ ಥೀಮ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ಜೀಪ್ ಕಂಪಾಸ್ ನೈಟ್ ಈಗಲ್ ಎಸ್‍ಯುವಿಯ ಟೀಸರ್ ಬಿಡುಗಡೆ

ಇನ್ನು ಈ ಎಸ್‌ಯುವಿಯಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಜೊತೆಗೆ 8.4-ಇಂಚಿನ ಯು-ಕನೆಕ್ಟ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿರುತ್ತದೆ. ಇನ್ನು ಟೀಸರ್ ವೀಡಿಯೋದಲ್ಲಿ ಟೈಲ್‌ಗೇಟ್‌ನಲ್ಲಿ ನೈಟ್ ಈಗಲ್ ಬ್ಯಾಡ್ಜಿಂಗ್ ಅನ್ನು ಪ್ರದರ್ಶಿಸಿದೆ.

ಹೊಸ ಜೀಪ್ ಕಂಪಾಸ್ ನೈಟ್ ಈಗಲ್ ಎಸ್‍ಯುವಿಯ ಟೀಸರ್ ಬಿಡುಗಡೆ

ಬ್ಲ್ಯಾಕ್ ಥೀಮ್ ಅನ್ನು ಹೊಂದಿರುವ ಈ ಎಸ್‍ಯುವಿಯ ಇಂಟಿರಿಯರ್ ನಲ್ಲಿ ಆಲ್-ಬ್ಲ್ಯಾಕ್ ಸೀಟ್ ಅನ್ನು ಒಳಗೊಂಡಿರಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಆಟೋಮ್ಯಾಟಿಕ್ ಕ್ಸೆನಾನ್ ಹೆಡ್‌ಲ್ಯಾಂಪ್, ರೈನ್ ಸೆನ್ಸಾರ್ ವೈಪರ್ ಮತ್ತು ಎಲೆಕ್ಟ್ರೋಕ್ರೊಮಿಕ್-ರೇರ್ ವ್ಯೂ ಮಿರರ್ ಜೊತೆಗೆ ವಾಯ್ಸ್ ಕಾಮೆಂಡ್ ಸಿಸ್ಟಂ ಅನ್ನು ಹೊಂದಿರಲಿದೆ.

MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಹೊಸ ಜೀಪ್ ಕಂಪಾಸ್ ನೈಟ್ ಈಗಲ್ ಎಸ್‍ಯುವಿಯ ಟೀಸರ್ ಬಿಡುಗಡೆ

ಇನ್ನು ಜೀಪ್ ಕಂಪಾಸ್ ನೈಟ್ ಈಗಲ್ ಎಸ್‍ಯುವಿಯಲ್ಲಿ ಎರಡು ಎಂನಿನ್ ಆಯ್ಕೆಗಳನ್ನು ಹೊಂದಿರಲಿದೆ. ಇದರಲ್ಲಿ 1.4-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಒಂದಾಗಿದೆ. ಈ ಎಂಜಿನ್ 160 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಜೀಪ್ ಕಂಪಾಸ್ ನೈಟ್ ಈಗಲ್ ಎಸ್‍ಯುವಿಯ ಟೀಸರ್ ಬಿಡುಗಡೆ

ಇದರೊಂದಿಗೆ 2.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 173 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡು ಎಂಜಿನ್ ಗಳೊಂದಿಗೆ 6-ಸ್ಫೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ. ಈ ಎಸ್‍ಯುವಿಯು ಭಾರತದಲ್ಲಿ ಮುಂದಿನ ವರ್ಷದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಜೀಪ್ jeep
English summary
Jeep Compass Night Eagle Limited Edition Models Teased Ahead Of Launch. Read In Kannada.
Story first published: Saturday, July 18, 2020, 12:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X