ಬಿಡುಗಡೆಗೊಂಡ ಹೊಸ ತಲೆಮಾರಿನ ಜೀಪ್ ವ್ರಾಂಗ್ಲರ್ ರೂಬಿಕಾನ್

ಜೀಪ್ ಕಂಪನಿಯು ತನ್ನ ವ್ರಾಂಗ್ಲರ್ ರೂಬಿಕಾನ್ ವಾಹನವನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ವಾಹನದ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.68.94 ಲಕ್ಷಗಳಾಗಿದೆ. ಈ ವಾಹನಕ್ಕಾಗಿ ಹೆಚ್ಚಿನ ಸಂಖ್ಯೆಯ ಬುಕ್ಕಿಂಗ್‍‍ಗಳನ್ನು ಸ್ವೀಕರಿಸಿರುವುದಾಗಿ ಜೀಪ್ ಕಂಪನಿ ಹೇಳಿದೆ.

ಬಿಡುಗಡೆಗೊಂಡ ಹೊಸ ತಲೆಮಾರಿನ ಜೀಪ್ ವ್ರಾಂಗ್ಲರ್ ರೂಬಿಕಾನ್

ವ್ರಾಂಗ್ಲರ್ ರೂಬಿಕಾನ್ ವಾಹನವನ್ನು ಐದು ಡೋರ್‍‍ಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಈ ವಾಹನವನ್ನು ಭಾರತಕ್ಕೆ ಕಂಪ್ಲಿಟ್ಲಿ ಬಿಲ್ಟ್ ಯುನಿಟ್ (ಸಿಬಿಯು)ರೂಪದಲ್ಲಿ ಆಮದು ಮಾಡಿಕೊಳ್ಳಲಾಗುವುದು. ಜೀಪ್ ಕಂಪನಿಯು ವ್ರಾಂಗ್ಲರ್ ರೂಬಿಕಾನ್ ಅನ್ನು ಮಾರ್ಚ್ 15ರಿಂದ ವಿತರಿಸಲಾಗುವುದು ಎಂದು ಜೀಪ್ ಕಂಪನಿ ಹೇಳಿದೆ.

ಬಿಡುಗಡೆಗೊಂಡ ಹೊಸ ತಲೆಮಾರಿನ ಜೀಪ್ ವ್ರಾಂಗ್ಲರ್ ರೂಬಿಕಾನ್

ಜೀಪ್ ವ್ರಾಂಗ್ಲರ್ ರೂಬಿಕಾನ್ ಪ್ರಪಂಚದಲ್ಲಿರುವ ಐಕಾನಿಕ್ ಆಫ್ ರೋಡರ್‍‍ಗಳಲ್ಲಿ ಒಂದಾಗಿದೆ. ರೂಬಿಕಾನ್ ಹೆಸರನ್ನು ಅಮೆರಿಕದ ಕ್ಯಾಲಿಫೋರ್ನಿಯಾದ ಪ್ರಸಿದ್ಧ ರೂಬಿಕಾನ್ ಟ್ರೇಲ್ಸ್ ನಿಂದ ಪಡೆಯಲಾಗಿದೆ. ಪ್ರಪಂಚದ ಅಪ್ರತಿಮ 4x4 ಆಫ್-ರೋಡಿಂಗ್‍‍ಗಳಲ್ಲಿ ಒಂದಾಗಿದೆ.

ಬಿಡುಗಡೆಗೊಂಡ ಹೊಸ ತಲೆಮಾರಿನ ಜೀಪ್ ವ್ರಾಂಗ್ಲರ್ ರೂಬಿಕಾನ್

ಎಫ್‌ಸಿಎ ಇಂಡಿಯಾದ ಅಧ್ಯಕ್ಷ ಹಾಗೂ ಎಂಡಿ ಡಾ. ಪಾರ್ಥ ದತ್ತಾರವರು ಮಾತನಾಡಿ, ಭಾರತದ ಗ್ರಾಹಕರು ಸಾಮಾನ್ಯವಾಗಿ ಮುಂದೆ ಏನನ್ನು ಖರೀದಿಸಬೇಕೆಂಬುದನ್ನು ತಿಳಿದಿದ್ದಾರೆ. ವಿಶ್ವ ಮಾನ್ಯತೆ ಪಡೆದ ನಮ್ಮ ವಾಹನವನ್ನು ಖರೀದಿಸಲು ಅನೇಕರು ಕಾಯುತ್ತಿದ್ದಾರೆ. ವ್ರಾಂಗ್ಲರ್ ರೂಬಿಕಾನ್ ಅನೇಕರ ಗಮನವನ್ನು ತನ್ನತ್ತ ಸೆಳೆದಿದೆ.

ಬಿಡುಗಡೆಗೊಂಡ ಹೊಸ ತಲೆಮಾರಿನ ಜೀಪ್ ವ್ರಾಂಗ್ಲರ್ ರೂಬಿಕಾನ್

ನಾವು ಈಗಾಗಲೇ ನಮ್ಮ ಅಪ್ರತಿಮ ಆಫ್-ರೋಡರ್ ಖರೀದಿಸಲು ಸಿದ್ಧವಾಗಿರುವ ಉತ್ಸಾಹಿ ಗ್ರಾಹಕರ ಸಮೂಹವನ್ನು ಹೊಂದಿದ್ದೇವೆ. ರೂಬಿಕಾನ್ ವಾಹನವನ್ನು ಗ್ರಾಹಕರಿಗೆ ನಿರೀಕ್ಷೆಗಿಂತ ಬೇಗ ನೀಡಲಿದ್ದೇವೆ. ಜೀಪ್ ವ್ರಾಂಗ್ಲರ್ ಭಾರತದಲ್ಲಿ ನಮ್ಮ ಪ್ರಮುಖ ವಾಹನವಾಗಿದೆ. 2016ರಲ್ಲಿ ಬಿಡುಗಡೆಯಾದಾಗಿನಿಂದ ಭಾರತದ ಸಿಬಿಯು ಮಾರಾಟದಲ್ಲಿ ಸುಮಾರು 67%ನಷ್ಟು ಪಾಲನ್ನು ಹೊಂದಿದೆ ಎಂದು ಹೇಳಿದರು.

ಬಿಡುಗಡೆಗೊಂಡ ಹೊಸ ತಲೆಮಾರಿನ ಜೀಪ್ ವ್ರಾಂಗ್ಲರ್ ರೂಬಿಕಾನ್

ಜೀಪ್ ವ್ರಾಂಗ್ಲರ್ ರೂಬಿಕಾನ್‍‍ನಲ್ಲಿ 2.0-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 265 ಬಿ‍‍ಹೆಚ್‍‍ಪಿ ಪವರ್ ಹಾಗೂ 400 ಎನ್‍ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 77.2:1 ಕ್ರಾಲ್ ರೇಶಿಯೊದೊಂದಿಗೆ ಎಂಟು-ವೇಗದ ಸ್ವಯಂಚಾಲಿತ ಟ್ರಾನ್ಸ್ ಮಿಷನ್ ಯುನಿಟ್ ಜೋಡಿಸಲಾಗಿದೆ.

ಬಿಡುಗಡೆಗೊಂಡ ಹೊಸ ತಲೆಮಾರಿನ ಜೀಪ್ ವ್ರಾಂಗ್ಲರ್ ರೂಬಿಕಾನ್

ಟರ್ಬೋಚಾರ್ಜರ್ ಅನ್ನು ಟ್ವಿನ್ -ಸ್ಕ್ರಾಲ್ ಲೋ-ಇನ್‍‍ಹರ್ಶಿಯಾ ಯುನಿಟ್‍‍ನಲ್ಲಿ ಅಳವಡಿಸಲಾಗಿದೆ. ಇದರಿಂದಾಗಿ ಎಂಜಿನ್ ಹೆಚ್ಚು ರೆಸ್ಪಾನ್ಸ್ ಮಾಡುತ್ತದೆ. ಇವುಗಳನ್ನು ನೇರವಾಗಿ ಸಿಲಿಂಡರ್‌ಗಳಲ್ಲಿ ಇರಿಸುವುದರಿಂದ ಸಿಲಿಂಡರ್‍‍ಗಳ ಬಾಳಿಕೆ ಹೆಚ್ಚುತ್ತದೆ. ಜೀಪ್ ವ್ರಾಂಗ್ಲರ್ ರೂಬಿಕಾನ್ ಹಲವಾರು ಫೀಚರ್ ಹಾಗೂ ಎಕ್ವಿಪ್‍‍ಮೆಂಟ್‍‍ಗಳನ್ನು ಹೊಂದಿದೆ.

ಬಿಡುಗಡೆಗೊಂಡ ಹೊಸ ತಲೆಮಾರಿನ ಜೀಪ್ ವ್ರಾಂಗ್ಲರ್ ರೂಬಿಕಾನ್

ಇವುಗಳಲ್ಲಿ ಹಲವಾರು ಸುರಕ್ಷತಾ ಎಕ್ವಿಪ್‍‍ಮೆಂಟ್, ಡ್ರೈವರ್ ಹಾಗೂ ಪ್ಯಾಸೆಂಜರ್‍‍ಗಳಿಗಾಗಿ ಏರ್‌ಬ್ಯಾಗ್‌, ಪಾರ್ಕ್ ಅಸಿಸ್ಟ್ ಸಿಸ್ಟಂ, ಎಲೆಕ್ಟ್ರಾನಿಕ್ ಸ್ಟಾಬಿಲಿಟಿ ಕಂಟ್ರೋಲ್, ಟ್ರೈಲರ್ ಸ್ವೇ ಕಂಟ್ರೋಲ್, ಎಬಿಎಸ್, ಹಿಲ್-ಸ್ಟಾರ್ಟ್ ಅಸಿಸ್ಟ್, ಹಿಲ್-ಡಿಸೆಂಟ್ ಕಂಟ್ರೋಲ್, ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ರೋಲ್ ಮಿಟಿಗೇಷನ್‍‍ಗಳು ಸೇರಿವೆ.

ಬಿಡುಗಡೆಗೊಂಡ ಹೊಸ ತಲೆಮಾರಿನ ಜೀಪ್ ವ್ರಾಂಗ್ಲರ್ ರೂಬಿಕಾನ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಜೀಪ್ ವ್ರಾಂಗ್ಲರ್ ರೂಬಿಕಾನ್, ಅಮೆರಿಕಾ ಮೂಲದ ಖ್ಯಾತ ಆಫ್-ರೋಡಿಂಗ್ ಕಂಪನಿಯು ವ್ರಾಂಗ್ಲರ್ ಸರಣಿಯಲ್ಲಿ ಬಿಡುಗಡೆಗೊಳಿಸಿರುವ ಟಾಪ್ ಎಂಡ್ ಮಾದರಿಯಾಗಿದೆ. ರೂಬಿಕಾನ್ ಮಾದರಿಯು ಪ್ರಪಂಚದಾದ್ಯಂತದ ಆಫ್-ರೋಡಿಂಗ್ ಸಾಮರ್ಥ್ಯಗಳಿಗೆ ಹೆಸರುವಾಸಿಯಾಗಿದೆ.

Most Read Articles

Kannada
English summary
Jeep Wrangler Rubicon Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X