ಹೀಗಿರಲಿವೆ ನೋಡಿ ಕಿಯಾ ಕಾರ್ನಿವಾಲ್ ಕಾರಿನ ಸೀಟುಗಳು

ಹೊಸದಾಗಿ ಬಿಡುಗಡೆಯಾಗಲಿರುವ ಕಿಯಾ ಕಂಪನಿಯ ಕಾರ್ನಿವಾಲ್ ಎಂ‍‍ಪಿವಿಯು ಟೊಯೊಟಾ ಇನೊವಾ ಕ್ರಿಸ್ಟಾ ಕಾರಿಗೆ ಪೈಪೋಟಿ ನೀಡಲಿದೆ. ಕಾರ್ನಿವಾಲ್ ಎಂಪಿವಿಯ ಬಿಡುಗಡೆಯನ್ನು ಗ್ರಾಹಕರು ನಿರೀಕ್ಷಿಸುತ್ತಿದ್ದಾರೆ. ಈ ಬಹುನಿರೀಕ್ಷಿತ ಕಾರಿನ ಬಗ್ಗೆ ಕಿಯಾ ಮೋಟಾರ್ಸ್ ಹಲವಾರು ಮಾಹಿತಿಗಳನ್ನು ಬಹಿರಂಗಪಡಿಸಿದೆ.

ಹೀಗಿರಲಿವೆ ನೋಡಿ ಕಿಯಾ ಕಾರ್ನಿವಾಲ್ ಕಾರಿನ ಸೀಟುಗಳು

ಈಗ ಕಿಯಾ ಕಂಪನಿಯು ಈ ಕಾರಿನಲ್ಲಿರುವ ಸೀಟುಗಳ ಬಗೆಗಿನ ಮಾಹಿತಿಯನ್ನು ಬಹಿರಂಗಪಡಿಸಿದೆ. ಕಿಯಾ ಕಾರ್ನಿವಾಲ್ ಕಾರ್ ಅನ್ನು ನಾಲ್ಕು ಸೀಟರ್, ಏಳು ಸೀಟರ್ ಹಾಗೂ 8 ಸೀಟರ್‍‍ಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಇವುಗಳ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಹೀಗಿರಲಿವೆ ನೋಡಿ ಕಿಯಾ ಕಾರ್ನಿವಾಲ್ ಕಾರಿನ ಸೀಟುಗಳು

7 ಸೀಟರ್

ಇದರಲ್ಲಿರುವ ಎರಡನೇ ಸಾಲು 2 ಕ್ಯಾಪ್ಟನ್‍ ಸೀಟುಗಳನ್ನು ಹೊಂದಿರಲಿದೆ. ಕೊನೆಯ ಸಾಲಿನಲ್ಲಿ ಬೆಂಚ್ ಸೀಟುಗಳನ್ನು ನೀಡಲಾಗಿದೆ.

ಹೀಗಿರಲಿವೆ ನೋಡಿ ಕಿಯಾ ಕಾರ್ನಿವಾಲ್ ಕಾರಿನ ಸೀಟುಗಳು

7 ಸೀಟರ್ ವಿ‍ಐ‍‍ಪಿ

7 ಸೀಟರಿನ ವಿ‍ಐಪಿ ಮಾದರಿಯಲ್ಲಿ ಎರಡನೇ ಹಾಗೂ ಮೂರನೇ ಸಾಲಿನಲ್ಲಿ 2 ವಿ‍ಐ‍‍ಪಿ ಸೀಟುಗಳನ್ನು ನೀಡಲಾಗಿದೆ. ಕೊನೆಯ ಸಾಲಿನಲ್ಲಿ ಚಿಕ್ಕ ಸೀಟನ್ನು ನೀಡಲಾಗಿದ್ದು, 7 ಸೀಟರ್ ಆಗಿ ಬದಲಿಸಬಹುದು.

ಹೀಗಿರಲಿವೆ ನೋಡಿ ಕಿಯಾ ಕಾರ್ನಿವಾಲ್ ಕಾರಿನ ಸೀಟುಗಳು

8 ಸೀಟರ್

8 ಸೀಟರ್ ಮಾದರಿಯ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟ್ ಹಾಗೂ ಕೊನೆಯ ಸಾಲಿನಲ್ಲಿ ಬೆಂಚ್ ಸೀಟ್‍‍ಗಳಿವೆ. ಇದರ ಜೊತೆಗೆ ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟ್ ಪಕ್ಕದಲ್ಲಿ ಚಿಕ್ಕ ಸೀಟ್ ಇರಲಿದೆ.

ಹೀಗಿರಲಿವೆ ನೋಡಿ ಕಿಯಾ ಕಾರ್ನಿವಾಲ್ ಕಾರಿನ ಸೀಟುಗಳು

9 ಸೀಟರ್

ಈ ಮಾದರಿಯಲ್ಲಿ ಪ್ರತಿ ಸಾಲಿನಲ್ಲೂ ಎರಡು ಕ್ಯಾಪ್ಟನ್ ಸೀಟ್‍‍ಗಳಿರುತ್ತವೆ. ಕೊನೆಯ ಸಾಲಿನಲ್ಲಿ ಚಿಕ್ಕ ಬೆಂಚ್ ಸೀಟ್ ಇರಲಿದೆ. ಈ ಬೆಂಚ್ ಸೀಟ್ ಅನ್ನು ಚಿಕ್ಕ ಮಕ್ಕಳಿಗಾಗಿ ನೀಡಲಾಗಿದೆ.

ಹೀಗಿರಲಿವೆ ನೋಡಿ ಕಿಯಾ ಕಾರ್ನಿವಾಲ್ ಕಾರಿನ ಸೀಟುಗಳು

ಕಿಯಾ ಕಾರ್ನಿವಾಲ್ ಕಾರ್ ಅನ್ನು ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. 7 ಸೀಟರ್ ಹಾಗೂ 8 ಸೀಟರ್‍‍ಗಳನ್ನು ಪ್ರೀಮಿಯಂ ಮಾದರಿಗಳಲ್ಲಿ, 7 ಸೀಟರ್ ಹಾಗೂ 9 ಸೀಟರ್‍‍‍ಗಳನ್ನು ಪ್ರೆಸ್ಟೀಜ್ ಮಾದರಿಯಲ್ಲಿ ಹಾಗೂ 7 ಸೀಟರಿನ ವಿಐ‍‍ಪಿ ಮಾದರಿಯನ್ನು ಲಿಮೊಸಿನ್‍ ಹೆಸರಿನಲ್ಲಿ ಮಾರಾಟ ಮಾಡಲಾಗುವುದು.

ಹೀಗಿರಲಿವೆ ನೋಡಿ ಕಿಯಾ ಕಾರ್ನಿವಾಲ್ ಕಾರಿನ ಸೀಟುಗಳು

ಪ್ರೀಮಿಯಂ ಮಾದರಿ

ಪ್ರೀಮಿಯಂ ಮಾದರಿಯಲ್ಲಿ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ, 4 ಸ್ಪೀಕರ್‍‍‍ಗಳ ಮ್ಯೂಸಿಕ್ ಸಿಸ್ಟಂ, ಸ್ಟೀಯರಿಂಗ್ ವ್ಹೀಲ್, ಕಂಟ್ರೋಲ್ ಸ್ವಿಚ್, ರೇರ್ ವೀವ್ ಕ್ಯಾಮರಾ, ಕ್ರೂಸ್ ಕಂಟ್ರೋಲ್, ಸ್ಮಾರ್ಟ್ ಕೀ ಹೊಂದಿರುವ ಪುಶ್ ಬಟನ್ ಸ್ಟಾರ್ಟ್, ಟಿಲ್ಟ್ ಟೆಲಿಸ್ಕೋಪಿಕ್ ಸ್ಟೀಯರಿಂಗ್ ವ್ಹೀಲ್, ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಸೈಡ್ ಮಿರರ್, ಪವರ್ ವಿಂಡೋ ಫೀಚರ್‍‍ಗಳಿವೆ.

ಹೀಗಿರಲಿವೆ ನೋಡಿ ಕಿಯಾ ಕಾರ್ನಿವಾಲ್ ಕಾರಿನ ಸೀಟುಗಳು

ಪ್ರೆಸ್ಟೀಜ್ ಮಾದರಿ

ಪ್ರೆಸ್ಟೀಜ್ ಮಾದರಿಯ ಕಾರುಗಳಲ್ಲಿ ಹಿಲ್ ಅಸಿಸ್ಟ್ ಕಂಟ್ರೋಲ್, ಏರ್‍‍ಬ್ಯಾಗ್, 4 ಪಾರ್ಕಿಂಗ್ ಸೆನ್ಸಾರ್, ಎಲ್‍ಇ‍‍ಡಿ ಪ್ರೊಜೆಕ್ಟರ್ ಹೆಡ್‍‍ಲೈಟ್, ಎಲ್‍ಇ‍‍ಡಿ ಪೊಸಿಷನ್ ಲೈಟ್, ಎಲ್‍ಇ‍‍ಡಿ ಫಾಗ್ ಲೈಟ್, ಎಲ್‍ಇ‍‍ಡಿ ಟೇಲ್ ಲೈಟ್, ಅಲ್ಟ್ರಾ ವಯೊಲೆಟ್‍‍ನಿಂದ ರಕ್ಷಣೆ ನೀಡಲು ಸ್ಮಾರ್ಟ್ ಪವರ್ ಡೆವಿಲ್ ಗೇಟ್, ಲ್ಯಾಪ್‍‍‍ಟಾಪ್ ಹಾಗೂ ಯು‍ಎಸ್‍‍ಬಿ ಚಾರ್ಜರ್ ಸೇರಿದಂತೆ ಹಲವಾರು ಫೀಚರ್‍‍ಗಳಿರಲಿವೆ.

ಹೀಗಿರಲಿವೆ ನೋಡಿ ಕಿಯಾ ಕಾರ್ನಿವಾಲ್ ಕಾರಿನ ಸೀಟುಗಳು

ಲಿಮೊಸಿನ್ ಮಾದರಿ

ಈ ಮಾದರಿಯ ಕಾರ್ನಿವಾಲ್ ಕಾರುಗಳಲ್ಲಿ ನಾಪಾ ಲೆದರ್ ಅಪ್‍‍ಹೋಲೆಸ್ಟರಿ, 18 ಇಂಚಿನ ಅಲಾಯ್ ವ್ಹೀಲ್, ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಹರ್ಮಾನ್ ಗಾರ್ಡನ್ ಸೌಂಡ್ ಸಿಸ್ಟಂ, 10.1 ಇಂಚಿನ ಟಿವಿ ಸ್ಕ್ರೀನ್ ಸೇರಿದಂತೆ ಹಲವಾರು ಫೀಚರ್‍‍ಗಳಿವೆ.

ಬಿ‍ಎಸ್ 6 ಎಂಜಿನ್

ಕಿಯಾ ಕಾರ್ನಿವಾಲ್ ಎಂಪಿವಿಯಲ್ಲಿ 2.2 ಲೀಟರಿನ ಬಿ‍ಎಸ್ 6 ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 201 ಬಿ‍‍ಹೆಚ್‍‍ಪಿ ಪವರ್ ಹಾಗೂ 440 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 8 ಸ್ಪೀಡಿನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಹೀಗಿರಲಿವೆ ನೋಡಿ ಕಿಯಾ ಕಾರ್ನಿವಾಲ್ ಕಾರಿನ ಸೀಟುಗಳು

ಬೆಲೆ

ಕಿಯಾ ಕಾರ್ನಿವಾಲ್ ಅನ್ನು ದೇಶಿಯ ಮಾರುಕಟ್ಟೆಯ ಎಂಪಿವಿ ಕಾರುಗಳ ಸೆಗ್‍‍‍ಮೆಂಟಿನಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಎಂಪಿವಿ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.25 ಲಕ್ಷಗಳಿಂದ ರೂ.30 ಲಕ್ಷಗಳಾಗಲಿದೆ.

Most Read Articles

Kannada
English summary
New Kia Carnival MPV car seating configuration details. Read in Kannada.
Story first published: Friday, January 17, 2020, 13:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X