Just In
- 12 min ago
ಭಾರತದ ನಂತರ ಜಪಾನ್ ಮಾರುಕಟ್ಟೆಯಲ್ಲೂ ಬಿಡುಗಡೆಯಾಗುತ್ತಿದೆ ಹೋಂಡಾ ಹೈನೆಸ್ ಸಿಬಿ 350
- 10 hrs ago
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- 11 hrs ago
ಸಿವಿ ವಾಹನ ಮಾದರಿಗಳಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್ಸ್ಟೋನ್
- 11 hrs ago
ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ
Don't Miss!
- Movies
ಸುದೀಪ್ ಜೊತೆ ಸಿನಿಮಾ: ರಕ್ಷಿತ್ ಶೆಟ್ಟಿ ಹೇಳಿದ್ದು ಹೀಗೆ
- News
ವಿಶ್ವದಾದ್ಯಂತ ಕೊರೊನಾಗೆ ಬಲಿಯಾದವರ ಸಂಖ್ಯೆ 2 ಕೋಟಿ ದಾಟಿದೆ!
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್ ಪಂದ್ಯ, 2ನೇ ದಿನ, Live ಸ್ಕೋರ್
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಕಿಯಾ ಸೊರೆಂಟೊ ಎಸ್ಯುವಿ
ಕಿಯಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಿದ ಮೊದಲ ಎಸ್ಯುವಿಯಾದ ಸೆಲ್ಟೋಸ್ ಹೊಸ ಸಂಚಲನವನ್ನು ಮೂಡಿಸಿತು. ಕಿಯಾ ಸೆಲ್ಟೋಸ್ ಎಸ್ಯುವಿ ಭಾರತೀಯ ಮಾರುಕಟ್ಟೆಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಕಿಯಾ ಸೆಲ್ಟೋಸ್ ಎಸ್ಯುವಿ ಹಲವಾರು ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಇದರ ನಂತರ ಕಿಯಾ ಮೋಟಾರ್ಸ್ ಕಂಪನಿಯು ಕಾರ್ನಿವಲ್ ಪ್ರೀಮಿಯಂ ಎಂಪಿವಿಯನ್ನು ಬಾರತಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದರು. ಇನ್ನು ಮುಂದಿನ ತಿಂಗಳು ಕಿಯಾ ಮೋಟಾರ್ಸ್ ಕಂಪನಿಯು ಹೊಸ ಸೊನೆಟ್ ಕಾಂಪ್ಯಾಕ್ಟ್ ಎಸ್ಯುವಿಯನ್ನು ಬಿಡುಗಡೆಗೊಳಿಸಲಿದೆ. ಕಿಯಾ ಮೋಟಾರ್ಸ್ ತನ್ನ ಎಸ್ಯುವಿ ಪೋರ್ಟ್ಫೋಲಿಯೊವನ್ನು ಬಲಪಡಿಸುತ್ತಿದೆ.

ಕಿಯಾ ಮೋಟಾರ್ಸ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸೊರೆಂಟೊ ಎಸ್ಯುವಿಯನ್ನು ಬಿಡುಗಡೆಗೊಳಿಸಲಿದೆ. ಈ ಕಿಯಾ ಸೊರೆಂಟೊ ಎಸ್ಯುವಿಯನ್ನು 2020ರ ಮಾರ್ಚ್ ತಿಂಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದರು.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಕಿಯಾ ಮೋಟಾರ್ಸ್ ಕಂಪನಿಯು ಆರು ತಿಂಗಳಿಗೊಮ್ಮೆ ಒಂದು ಹೊಸ ಮಾದರಿಯನ್ನು ಬಿಡುಗಡೆ ಮಾಡುವಂತೆ ಕಾಣುತ್ತದೆ. ಮುಂದಿನ ಒಂದು ವರ್ಷದೊಳಗೆ ಸೊರೆಂಟೊವನ್ನು ಪರಿಚಯಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ಕಿಯಾ ಸೊರೆಂಟೊ ಎಸ್ಯುವಿಯಲ್ಲಿ ಕ್ರೋಮ್ನಲ್ಲಿ ಅಲಂಕರಿಸಲ್ಪಟ್ಟ ಟೈಗರ್ ನೋಸ್ ಫ್ರಂಟ್ ಗ್ರಿಲ್, ಸ್ಲೀಕರ್ ಎಲ್ಇಡಿ ಹೆಡ್ಲ್ಯಾಂಪ್ಗಳು ಮತ್ತು ಆಕರ್ಷಕವಾದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಅನ್ನು ಹೊಂದಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್ಆರ್-ವಿ ಎಸ್ಯುವಿ

ಇದರೊಂದಿಗೆ ಈ ಎಸ್ಯುವಿಯಲ್ಲಿ ಫಾಗ್ ಲ್ಯಾಂಪ್ಗಳೊಂದಿಗೆ ಸ್ಪೋರ್ಟಿಯರ್ ಫ್ರಂಟ್ ಬಂಪರ್, ಶಾರ್ಟರ್ ಓವರ್ಹ್ಯಾಂಗ್ಸ್, ವಿಶಾಲ ಏರ್ ಇನ್ಲೆಟ್, ಲಂಬವಾಗಿರುವ ಎಲ್ಇಡಿ ಟೈಲ್ ಲ್ಯಾಂಪ್ಗಳು ಮತ್ತು ಇತರ ಬದಲಾವಣೆಗಳ ನಡುವೆ ಹಿಂಭಾಗದ ಬಂಪರ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ.

ಇನ್ನು ಹೊಸ ಕಿಯಾ ಸೊರೆಂಟೊ ಎಸ್ಯುವಿಯ ಕ್ಯಾಬಿನ್ ನಲ್ಲಿ ದೊಡ್ಡ 10.12-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಅಪ್ಮಾರ್ಕೆಟ್ ಫಿನಿಶ್ಗಳೊಂದಿಗೆ ಲೇಯರ್ಡ್ ಡ್ಯಾಶ್ಬೋರ್ಡ್, ಎಸಿ ವೆಂಟ್ಸ್ ಗಳೊಂದಿಗೆ ಸೆಂಟ್ರಲ್ ಕನ್ಸೋಲ್ ಮತ್ತು 12.3-ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.
MOST READ: ಸ್ಥಗಿತಗೊಂಡಿಲ್ಲ ಫೋಕ್ಸ್ವ್ಯಾಗನ್ ಕಾರಿನ ಈ ಮಾದರಿಗಳು

2020ರ ಕಿಯಾ ಸೊರೆಂಟೊ ಎಸ್ಯುವಿಯಲ್ಲಿ 1.49 ಕಿಲೋವ್ಯಾಟ್ ಲಿಥಿಯಂ-ಐಯಾನ್ ಪಾಲಿಮರ್ ಬ್ಯಾಟರಿ ಪ್ಯಾಕ್ ಮತ್ತು 44.2 ಕಿಲೋವ್ಯಾಟ್ ಎಲೆಕ್ಟ್ರಿಕ್ ಮೋಟರ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 1.6-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಹೊಸ ಕಿಯಾ ಸೊರೆಂಟೊ ಎಸ್ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಜೀಪ್ ಕಂಪಾಸ್, ಹ್ಯುಂಡೈ ಟ್ಯೂಸನ್, ಫೋಕ್ಸ್ ವ್ಯಾಗನ್ ಟಿ-ರಾಕ್ ಮತ್ತು ಸ್ಕೋಡಾ ಕರೋಕ್ ಎಸ್ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.