ಬಿಡುಗಡೆಯಾಯ್ತು 2020ರ ಲ್ಯಾಂಡ್ ರೋವರ್ ಡಿಫೆಂಡರ್

ಲ್ಯಾಂಡ್ ರೋವರ್ ಈ ವರ್ಷದ ಆರಂಭದಲ್ಲಿ ಅಮೇರಿಕಾದಲ್ಲಿ ಐಕಾನಿಕ್ ಡಿಫೆಂಡರ್ ಎಸ್‍‍ಯುವಿಯನ್ನು ಅನಾವರಣಗೊಳಿಸಿತ್ತು. ಈ ಎಸ್‍‍ಯುವಿಯು ಜಾಗತಿಕವಾಗಿ ಅನಾವರಣಗೊಂಡ ಬಳಿಕ 2020ರ ಲ್ಯಾಂಡ್ ರೋವರ್ ಡಿಫೆಂಡರ್ ಹೊಸ ಸಂಚಲವನ್ನು ಸೃಷ್ಟಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಎಸ್‍‍ಯುವಿಗೆ ಸಾಕಷ್ಟು ಬೇಡಿಕೆಯನ್ನು ಗಳಿಸಿದೆ.

ಬಿಡುಗಡೆಯಾಯ್ತು 2020ರ ಲ್ಯಾಂಡ್ ರೋವರ್ ಡಿಫೆಂಡರ್

2020ರ ಲ್ಯಾಂಡ್ ರೋವರ್ ಡಿಫೆಂಡರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ 2020ರ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.69.99 ಲಕ್ಷಗಳಾಗಿದೆ. ಲ್ಯಾಂಡ್ ರೋವರ್ ಡಿಫೆಂಡರ್ 110 ಲಾಂಗ್-ವ್ಹೀಲ್ ಬೇಸ್ ಮತ್ತು ಲ್ಯಾಂಡ್ ರೋವರ್ ಡಿಫೆಂಡರ್ 90 ಎಂಬ ಎರಡು ರೂಪಾಂತರದಲ್ಲಿ ಬಿಡುಗಡೆಗೊಳಿಸಲಿದೆ.

ಬಿಡುಗಡೆಯಾಯ್ತು 2020ರ ಲ್ಯಾಂಡ್ ರೋವರ್ ಡಿಫೆಂಡರ್

ಆರಂಭದಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ ಅನ್ನು ಸಿಬಿಯು (ಕಂಪ್ಲೀಟ್ ಬಿಲ್ಟ್ ಯುನಿಟ್) ಆಗಿ ದೇಶಿಯ ಮಾರುಕಟ್ಟೆಗೆ ಆಮದು ಮಾಡಿಕೊಳ್ಳಲಾಗುತ್ತದೆ. ನಂತರದಲಿ ಲ್ಯಾಂಡ್ ರೋವರ್ ಭಾರತದಲ್ಲಿ ಡಿಫೆಂಡರ್ ಸ್ಥಳೀಯವಾಗಿ ಜೋಡಣೆಯನ್ನು ಮಾಡಲು ಪ್ರಾರಂಭಿಸಲು ಯೋಜಿಸಿದೆ. ಇದನ್ನು ಸಿಕೆಡಿ(ಕಂಪ್ಲೇಟ್ಲಿ ನಾಕ್ ಡೌನ್)ಯುನಿ‍ಟ್‍ಗಳನ್ನು ಪಡೆಯಲು ಅವಕಾಶ ಮಾಡಿಕೊಟ್ಟಿತು.

ಬಿಡುಗಡೆಯಾಯ್ತು 2020ರ ಲ್ಯಾಂಡ್ ರೋವರ್ ಡಿಫೆಂಡರ್

ಹೊಸ ಡಿಫೆಂಡರ್ ಎಸ್‍ಯುವಿ ಲ್ಯಾಂಡ್ ರೋವರ್‍‍ನ ಹೊಸ ಟಿ7 ಎಕ್ಸ್ ಆರ್ಕಿಟೆಕ್ಚರ್ ಮೇಲೆ ನಿರ್ಮಾಣವಾಗಿದೆ. ಈ ಹೊಸ ಎಸ್‍ಯುವಿಯಲ್ಲಿ ಅಲ್ಯುಮಿನಿಯಂ ಮೊನೊಕಾಕ್ ಚಾಸೀಸ್ ಅಳವಡಿಸಲಾಗಿದೆ. ಈ ಚಾಸೀಸ್ ಹಳೆಯ ಮಾದರಿಯ ಎಸ್‍‍ಯುವಿನಲ್ಲಿರುವ ಚಾಸೀಸ್‍‍ಗಿಂತ ಹೆಚ್ಚಿನ ಪ್ರಮಾಣದ ಸ್ಥಿರತೆ ಹಾಗೂ ಕಡಿಮೆ ತೂಕವನ್ನು ಹೊಂದಿದೆ.

ಬಿಡುಗಡೆಯಾಯ್ತು 2020ರ ಲ್ಯಾಂಡ್ ರೋವರ್ ಡಿಫೆಂಡರ್

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍‍ಯುವಿಯನ್ನು 90 ಹಾಗೂ 110 ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಈ ಎರಡು ಮಾದರಿಗಳ ಪೈಕಿ 90 ಮಾದರಿಯು 3 ಡೋರ್ ಹೊಂದಿದ್ದರೆ, 110 ಮಾದರಿಯು 5 ಡೋರ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು 2020ರ ಲ್ಯಾಂಡ್ ರೋವರ್ ಡಿಫೆಂಡರ್

ಮೂರನೇ ಸಾಲಿನಲ್ಲಿರುವ ಸೀಟುಗಳನ್ನು ಮಡುಚಿದರೆ, 1,075 ಲೀಟರ್‍‍ನಷ್ಟು ಬೂಟ್ ಸ್ಪೇಸ್ ದೊರೆತರೆ, ಎರಡನೇ ಸಾಲಿನ ಸೀಟುಗಳನ್ನು ಮಡುಚುವುದರಿಂದ 2,380 ಲೀಟರ್‍‍ನಷ್ಟು ಬೂಟ್‍ ಸ್ಪೇಸ್ ಜಾಗ ಸಿಗಲಿದೆ.

ಬಿಡುಗಡೆಯಾಯ್ತು 2020ರ ಲ್ಯಾಂಡ್ ರೋವರ್ ಡಿಫೆಂಡರ್

ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍‍ಯುವಿ ಉತ್ತಮವಾದ ಆಫ್ ರೋಡ್ ಮಾದರಿಯಾಗಿರಲಿದೆ. ಈ ಹೊಸ ತಲೆಮಾರಿನ ಎಸ್‍‍ಯುವಿ ಹಲವಾರು ಹೊಸ ಫೀಚರ್‍‍ಗಳನ್ನು ಹೊಂದಿರಲಿದೆ. ಈ ಎಸ್‍‍ಯುವಿಯು 3,720 ಕೆ.ಜಿಯಷ್ಟು ತೂಕವನ್ನು ಎಳೆಯುವ ಸಾಮರ್ಥ್ಯವನ್ನು ಹೊಂದಿದೆ.

ಬಿಡುಗಡೆಯಾಯ್ತು 2020ರ ಲ್ಯಾಂಡ್ ರೋವರ್ ಡಿಫೆಂಡರ್

ಈ ಎಸ್‍‍ಯುವಿಯ ರೂಫ್‍‍ನ ತೂಕವು 300 ಕೆಜಿಯಷ್ಟಿದೆ. ಡಿಫೆಂಡರ್ 291 ಎಂಎಂನಷ್ಟು ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಯಾವುದೇ ರಸ್ತೆಯನ್ನೇ ಆಗಲಿ ಸರಾಗವಾಗಿ ದಾಟುವಂತಹ ಸಾಮರ್ಥ್ಯವನ್ನು ಹೊಂದಿದೆ.

ಬಿಡುಗಡೆಯಾಯ್ತು 2020ರ ಲ್ಯಾಂಡ್ ರೋವರ್ ಡಿಫೆಂಡರ್

2020ರ ಲ್ಯಾಂಡ್ ರೋವರ್ ಡಿಫೆಂಡರ್‍‍ನ 90 ಮತ್ತು 110 ಎರಡು ಮಾದರಿಗಳಲ್ಲಿಯು ಒಂದೇ ರೀತಿಯ ಎಂಜಿನ್ ಆಯ್ಕೆಯನ್ನು ಹೊಂದಿದೆ. ಇದು 2.0 ಲೀಟರ್ ನಾಲ್ಕು ಸಿಲಿಂಡರ್ ಬಿಎಸ್-6 ಪ್ರೇರಿತ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 292 ಬಿ‍‍ಹೆಚ್‍‍ಪಿ ಪವರ್ ಮತ್ತು 400 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು 2020ರ ಲ್ಯಾಂಡ್ ರೋವರ್ ಡಿಫೆಂಡರ್

ಆಫ್ ರೋಡ್ ಸಾಮರ್ಥ್ಯದ ಈ ಎಸ್‍‍ಯುವಿಯಲ್ಲಿ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಅಳವಡಿಸಲಾಗಿದೆ. ಇದರಲ್ಲಿರುವ ರೇರ್ ಲಾಕಿಂಗ್ ಡಿಫರೆನ್ಶಿಯಲ್ ಈ ಎಸ್‍‍ಯುವಿಯನ್ನು ಪೂರ್ಣ ಪ್ರಮಾಣದ ಆಫ್ ರೋಡ್ ವಾಹನವನ್ನಾಗಿಸಿದೆ. ಈ ಎಸ್‍‍ಯುವಿಯಲ್ಲಿ ಟೆರೇನ್ 2 ರೆಸ್ಪಾನ್ಸ್ ಸಿಸ್ಟಂ ಎಂಬ ಆಫ್ ರೋಡ್ ಟೆಕ್ನಾಲಜಿಯನ್ನು ಸಹ ಅಳವಡಿಸಲಾಗಿದೆ.

Most Read Articles

Kannada
English summary
New (2020) Land Rover Defender Launched In India At Rs 69.99 Lakh. Read in Kannada.
Story first published: Wednesday, February 26, 2020, 16:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X