ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ರೇಂಜ್ ರೋವರ್ ಡಿಸ್ಕವರಿ ಸ್ಪೋರ್ಟ್

ಲ್ಯಾಂಡ್ ರೋವರ್ ಇಂಡಿಯಾ ಕಂಪನಿಯು ತನ್ನ ಹೊಸ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಎಸ್‍‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಕಂಪನಿಯು ಫೆಬ್ರವರಿ 13ರಂದು ಭಾರತದಲ್ಲಿ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ರೇಂಜ್ ರೋವರ್ ಡಿಸ್ಕವರಿ ಸ್ಪೋರ್ಟ್

ಕಳೆದ ವರ್ಷ ಎರಡನೇ ತಲೆಮಾರಿನ ಡಿಸ್ಕವರಿ ಸ್ಪೋರ್ಟ್ ಎಸ್‍ಯುವಿಯನ್ನು ಅನಾವರಣಗೊಳಿಸಿತ್ತು. ಈ ಹೊಸ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಎಸ್‍‍ಯುವಿಯನ್ನು 2.0 ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲಿದೆ. ಆದರೆ ಮೊದಲು ಲ್ಯಾಂಡ್ ರೋವರ್ ಇಂಡಿಯಾ ತನ್ನ ಎರಡನೇ ತಲೆಮಾರಿನ ರೇಂಜ್ ರೋವರ್ ಇವೊಕ್ ಎಸ್‍‍ಯುವಿಯನ್ನು ಜನವರಿ 30ರಿಂದ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ರೇಂಜ್ ರೋವರ್ ಡಿಸ್ಕವರಿ ಸ್ಪೋರ್ಟ್

ರೇಂಜ್ ರೋವರ್ ಇವೊಕ್ ಎಸ್‍‍ಯುವಿ ಬಿಡುಗಡೆಯಾದ ಬಳಿಕ ಫೆಬ್ರವರಿ 13ರಂದು ಭಾರತದಲ್ಲಿ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಎಸ್‍‍ಯುವಿಯನ್ನು ಬಿಡುಗಡೆಗೊಳಿಸುತ್ತದೆ. ಕಳೆದ ವರ್ಷದ ಮೇ ತಿಂಗಳಲ್ಲಿ ರೇಂಜ್ ರೋವರ್ ಡಿಸ್ಕವರಿ ಸ್ಪೋರ್ಟ್ ಅನ್ನು ಅನಾವರಣಗೊಳಿಸಿತ್ತು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ರೇಂಜ್ ರೋವರ್ ಡಿಸ್ಕವರಿ ಸ್ಪೋರ್ಟ್

ಈ ಎಸ್‍ಯುವಿಯ ಮುಂಭಾಗ ಮತ್ತು ಹಿಂಭಾಗದಲ್ಲಿ ನವೀಕರಿಸಿದ ಬಂಪರ್, ಡೈನಾಮಿಕ್ ಟರ್ನ್ ಇಂಡಿಕೇಟರ್‍‍ಗಳೊಂದಿಗೆ ಹೊಸ ಹೆಡ್‍‍ಲ್ಯಾಂಪ್‍ಗಳು, ನವೀಕರಿಸಿದ ಎಲ್ಇಡಿ ಟೇಲ್ ಲೈಟ್‍ಗಳು ಮತ್ತು ನವೀಕರಿಸಿದ ಗ್ರಿಲ್ ಅನ್ನು ಅಳವಡಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ರೇಂಜ್ ರೋವರ್ ಡಿಸ್ಕವರಿ ಸ್ಪೋರ್ಟ್

ಹೊಸ ರೇಂಜ್ ರೋವರ್ ಡಿಸ್ಕವರಿ ಸ್ಪೋರ್ಟ್ ಇಂಟಿರಿಯರ್‍‍‍ನಲ್ಲಿ ಮೊದಲ ತಲೆಮಾರಿನ ಮಾದರಿಗೆ ಹೋಲಿಸಿದರೆ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಇಂಟಿರಿಯರ್‍‍ನಲ್ಲಿ ಹೊಸ ಫೀಚರ್ಸ್‍‍ಗಳು, ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ ಎಲೆಕ್ಟ್ರಿಕ್ ರಿಕ್ಲೈನಿಂಗ್ ಸೀಟುಗಳು, ಇಂಟೆಲಿಜೆಂಟ್ ಸೀಟ್ ಫೋಲ್ಡ್ ಮತ್ತು ಫೋರ್ ಜೋನ್ ಕ್ಲೈಮೆಟ್ ಕಂಟ್ರೋಲ್ ಅನ್ನು ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ರೇಂಜ್ ರೋವರ್ ಡಿಸ್ಕವರಿ ಸ್ಪೋರ್ಟ್

ಇದರೊಂದಿಗೆ ಹೊಸ ಡಿಸ್ಕವರಿ ಸ್ಪೋರ್ಟ್ ಎಸ್‍ಯುವಿಯ ಇಂಟಿರಿಯರ್‍‍ನಲ್ಲಿ 12.3 ಇಂಚಿನ ಇನ್ಸ್ ಟ್ರೂಮೆಂಟ್ ಕನ್ಸೋಲ್, ಆ್ಯಪಲ್ ಕಾರ್‍‍ಪ್ಲೇ‍ಯೊಂದಿಗೆ 10.25 ಇಂಚಿನ ಟಚ್‍ಪ್ರೊ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಮತ್ತು ಅಂಡ್ರಾಯ್ಡ್ ಆಟೋ, ವಾಯ್ಸ್ ಕಂಟ್ರೋಲ್ ಸೇರಿದಂತೆ ಹಲವಾರು ಐಷಾರಾಮಿ ಫೀಚರ್ಸ್‍ಗಳನ್ನು ಅಳವಡಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ರೇಂಜ್ ರೋವರ್ ಡಿಸ್ಕವರಿ ಸ್ಪೋರ್ಟ್

ಇದರ ಜೊತೆಗೆ ಪನೊರಾಮಿಕ್ ಸನ್‍‍ರೂಫ್, ಕ್ಯಾಬಿನ್ ಏರ್ ಅಯಾನೈಜೆಷನ್, 360 ಡಿಗ್ರಿ ಕ್ಯಾಮರಾ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಹಾಗೂ ರಿಮೋಟ್‍‍ಗಳಿವೆ. ತನ್ನ ಸಾಮರ್ಥ್ಯದಿಂದಾಗಿ ಆಫ್‍‍ರೋಡ್‍‍ಗಳಲ್ಲಿಯೇ ಉತ್ತಮವಾದ ವಾಹನವೆನಿಸಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ರೇಂಜ್ ರೋವರ್ ಡಿಸ್ಕವರಿ ಸ್ಪೋರ್ಟ್

ರೇಂಜ್ ರೋವರ್ ಡಿಸ್ಕವರಿ ಸ್ಪೋರ್ಟ್ ಎಸ್‍ಯುವಿನಲ್ಲಿ 2.0 ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಈ ಎಂಜಿನ್‍ಗಳು 150 ಬಿ‍ಹೆಚ್‍‍ಪಿ ಯಿಂದ 250 ಬಿ‍ಹೆಚ್‍‍ಪಿವರೆಗೆ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ಮತ್ತು ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಕೂಡ ಅಳವಡಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ರೇಂಜ್ ರೋವರ್ ಡಿಸ್ಕವರಿ ಸ್ಪೋರ್ಟ್

ರೇಂಜ್ ರೋವರ್ ಡಿಸ್ಕವರಿ ಸ್ಪೋರ್ಟ್ ಎಸ್‍ಯುವಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮರ್ಸಿಡಿಸ್ ಬೆಂಝ್ ಜಿಎಲ್‍‍ಸಿ-ಕ್ಲಾಸ್, ವೋಲ್ವೋ ಎಕ್ಸ್‌ಸಿ 60, ಬಿಎಂಡಬ್ಲ್ಯು ಎಕ್ಸ್ 3 ಮತ್ತು ಆಡಿ ಕ್ಯೂ 5 ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
New-gen Land Rover Discovery Sport India launch on 13 February. Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X