ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡ 2020ರ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್

ಲ್ಯಾಂಡ್ ರೋವರ್ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಐಷಾರಾಮಿ ಎಸ್‌ಯುವಿ ಆವೃತ್ತಿಯಾದ ಡಿಸ್ಕವರಿ ಸ್ಪೋರ್ಟ್ ಬಿಎಸ್-6 ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ಉನ್ನತೀಕರಿಸಿದ ಎಂಜಿನ್‌ನೊಂದಿಗೆ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡ 2020ರ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್

ದೇಶಾದ್ಯಂತ ಏಪ್ರಿಲ್ 1ರಿಂದ ಬಿಎಸ್-6 ಎಮಿಷನ್ ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಪ್ರಸ್ತುತ ಮಾರುಕಟ್ಟೆಯಲ್ಲಿ ವಾಹನ ಮಾದರಿಗಳನ್ನು ಹೊಸ ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸುತ್ತಿವೆ. ಇದೀಗ ಲ್ಯಾಂಡ್ ರೋವರ್ ಸಂಸ್ಥೆಯು ಸಹ ಹೊಸ ವಿನ್ಯಾಸ ಮತ್ತು ಉನ್ನತೀಕರಿಸಿದ ಎಂಜಿನ್‌ನೊಂದಿಗೆ 2020ರ ಡಿಸ್ಕವರಿ ಸ್ಪೋರ್ಟ್ ಬಿಡುಗಡೆ ಮಾಡಿದ್ದು, ಹೊಸ ಕಾರು ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡ 2020ರ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್

ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಡಿಸ್ಕವರಿ ಸ್ಪೋರ್ಟ್ ಎಸ್ ಮತ್ತು ಡಿಸ್ಕವರಿ ಸ್ಪೋರ್ಟ್ ಆರ್-ಡೈನಾಮಿಕ್ ಎಸ್‌ಇ ವೆರಿಯೆಂಟ್‌ಗಳನ್ನು ಖರೀದಿಸಬಹುದಾಗಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಎಸ್ ವೆರಿಯೆಂಟ್ ರೂ.57.06 ಲಕ್ಷಕ್ಕೆ ಆರ್-ಡೈನಾಮಿಕ್ ಎಸ್‌ಇ ವೆರಿಯೆಂಟ್ ರೂ. 60.89 ಲಕ್ಷ ಬೆಲೆ ಹೊಂದಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡ 2020ರ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್

ಲ್ಯಾಂಡ್ ರೋವರ್ ಇಂಡಿಯಾ ಸಂಸ್ಥೆಯು ಸದ್ಯ ಕಾರು ಉತ್ಪಾದನೆಗೆ ಹೊಸ ಪ್ಲ್ಯಾಟ್‌ಫಾರ್ಮ್ ನಿರ್ಮಾಣ ಮಾಡಿದ್ದು, ಆಧುನಿಕ ತಂತ್ರಜ್ಞಾನ ಪ್ರೇರಿತ ಪ್ರೀಮಿಯಂ ಟ್ರಾನ್ಸ್‌ವರ್ಸ್ ಆರ್ಕಿಟೆಕ್ಚರ್ ಪ್ಲ್ಯಾಟ್‌ಫಾರ್ಮ್ ಮೇಲೆ ಹೊಸ ಡಿಸ್ಕವರಿ ಸ್ಪೋರ್ಟ್ ಕಾರನ್ನು ಸಿದ್ದಪಡಿಸಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡ 2020ರ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್

ಪ್ರೀಮಿಯಂ ಟ್ರಾನ್ಸ್‌ವರ್ಸ್ ಆರ್ಕಿಟೆಕ್ಚರ್ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಎರಡನೇ ತಲೆಮಾರಿನ ಇವೋಕ್ ಕೂಡಾ ಒಂದಾಗಿದ್ದು, ಇದೀಗ ಎರಡನೇ ಕಾರು ಮಾದರಿಯಾಗಿ 2020ರ ಡಿಸ್ಕವರಿ ಸ್ಪೋರ್ಟ್ ಕೂಡಾ ಮಾರುಕಟ್ಟೆ ಪ್ರವೇಶಿಸಿದೆ. ಹೊಸ ಕಾರು 4,600 ಎಂಎಂ ಉದ್ದ, 2,069 ಎಂಎಂ ಅಗಲ, 1,724 ಎಂಎಂ ಎತ್ತರ ಮತ್ತು 2,741 ಎಂಎಂ ವೀಲ್ಹ್ ಬೆಸ್ ಹೊಂದಿದ್ದು, ಹಳೆಯ ಆವೃತ್ತಿಗಿಂತಲೂ ಹೊಸ ಆವೃತ್ತಿಯೂ ಗಾತ್ರದಲ್ಲಿ ತುಸು ಇಳಿಕೆ ಮಾಡಲಾಗಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡ 2020ರ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್

ಹೊಸ ಕಾರು ಹಳೆಯ ಆವೃತ್ತಿಗಿಂತ 7-ಎಂಎಂ ಕಡಿಮೆ ಉದ್ದ ಮತ್ತು 3 ಎಂಎಂ ಕಡಿಮೆ ಎತ್ತರ ಪಡೆದುಕೊಂಡಿದ್ದು, ಒಳಾಂಗಣ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ತರದೆ ಎಂಜಿನ್ ವಿಭಾಗದಲ್ಲಿನ ಉದ್ದಳತೆಯನ್ನು ಕಡಿತಗೊಳಿಸಲಾಗಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡ 2020ರ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್

ಇನ್ನು ಹೊಸ ಕಾರನಲ್ಲಿ ವಿನೂತನ ವಿನ್ಯಾಸದ ಎಲ್ಇಡಿ ಹೆಡ್‌ಲ್ಯಾಂಪ್, ಮರು ವಿನ್ಯಾಸಗೊಳಿಸಲಾದ ಎಲ್ಇಡಿ ಡಿಆರ್‌ಎಲ್ಎಸ್, ಹೊಸ ವಿನ್ಯಾದ ಎಲ್ಇಡಿ ಟೈಲ್‌ಲೈಟ್, ಮರುವಿನ್ಯಾಸಗೊಳಿಸಲಾದ ಫ್ರಂಟ್ ಬಂಪರ್ ಮತ್ತು ರಿಯರ್ ಬಂಪರ್ ಗ್ರಾಹಕರ ಗಮನಸೆಳೆಯಲಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡ 2020ರ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್

ಹಾಗೆಯೇ ಹೊಸ ಕಾರಿನ ಒಳಭಾಗದ ವಿನ್ಯಾಸದಲ್ಲೂ ಕೆಲವು ಗುರುತರ ಬದಲಾವಣೆಗಳನ್ನು ಮಾಡಲಾಗಿದ್ದು, ಫೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 10-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಜೊತೆ ಆಂಡ್ರಾಯಿಡ್ ಆಟೋ ಮತ್ತು ತ್ರೀ ಜೋನ್ ಕ್ಲೈಮೆಟ್ ಕಂಟ್ರೊಲ್ ಸೌಲಭ್ಯವಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡ 2020ರ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್

ಇದಲ್ಲದೇ ಬ್ರಾಂಡ್ ನ್ಯೂ ಸ್ಟೀರಿಂಗ್ ವೀಲ್ಹ್, ಫ್ಯೂಚರ್ ಟಚ್ ಮೌಂಟೆಡ್ ಕಂಟ್ರೋಲ್ಸ್, ವೈರ್‌ಲೆಸ್ ಚಾರ್ಜಿಂಗ್, 4ಜಿ ವೈಫೈ-ಹಾಟ್‌ಸ್ಪಾಟ್, ಮುಂಭಾಗದ ಆಸನಗಳಲ್ಲಿ ಮಸಾಜ್ ಫೀಚರ್ಸ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕಿಪ್ ವಾರ್ನಿಂಗ್ ಅಸಿಸ್ಟ್, ಜೆಎಲ್ಆರ್ ವಿಶೇಷತೆ ಗ್ರೌಂಡ್ ವ್ಯೂವ್ ಕ್ಯಾಮೆರಾ ಸೌಲಭ್ಯ ಈ ಕಾರಿನಲ್ಲಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡ 2020ರ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್

ಎಂಜಿನ್ ಸಾಮಾರ್ಥ್ಯ ಮತ್ತು ಪರ್ಫಾಮೆನ್ಸ್

ಎಸ್ ಮತ್ತು ಆರ್-ಡೈನಾಮಿಕ್ ಎಸ್‌ಇ ಎರಡು ವೆರಿಯೆಂಟ್‌ಗಳಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳ ಆಯ್ಕೆಯನ್ನು ನೀಡಲಾಗಿದ್ದು, ಎರಡು ಮಾದರಿಗಳಲ್ಲೂ ಸ್ಟ್ಯಾಂಡರ್ಡ್ ಆಗಿ 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಯುನಿಟ್ ಜೋಡಣೆ ಮಾಡಲಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡ 2020ರ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್

ಡೀಸೆಲ್ ಮಾದರಿಯು 2.0-ಲೀಟರ್ ಎಂಜಿನ್‌ನೊಂದಿಗೆ 177-ಬಿಎಚ್‌ಪಿ, 430-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದರೆ, ಪೆಟ್ರೋಲ್ ಮಾದರಿಯು 2.0-ಲೀಟರ್ ಎಂಜಿನ್‌ನೊಂದಿಗೆ 245-ಬಿಎಚ್‌ಪಿ, 365-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡ 2020ರ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್

ಇದರೊಂದಿಗೆ ಹೊಸ ಕಾರು ಆರು ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದ್ದು, ಗ್ರಾಹಕರು ಬೇಡಿಕೆಗೆ ಅನುಗುಣವಾಗಿ ಫ್ಯೂಜಿ ವೈಟ್, ಫೈರೆಂಜ್ ರೆಡ್ , ಸ್ಯಾಂಟೊರಿನಿ ಬ್ಲ್ಯಾಕ್, ಇಗರ್ ಗ್ರೇ, ಬೈರಾನ್ ಬ್ಲೂ ಮತ್ತು ಪೋರ್ಟೋಫಿನೋ ಬ್ಲ್ಯೂ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡ 2020ರ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್

ಈ ಬಾರಿ ಡಿಸ್ಕವರಿ ಸ್ಪೋಟ್ ಹೊಸ ಮಾದರಿಯು ಹೊಸ ವಿನ್ಯಾಸ ಮತ್ತು ಬಲಿಷ್ಠ ಎಂಜಿನ್‌ನೊಂದಿಗೆ ಮತ್ತಷ್ಟು ಸದ್ದು ಮಾಡಲಿದ್ದು, ಪ್ರತಿಸ್ಪರ್ಧಿ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದ್ದು, ಬಿಎಂಡಬ್ಲ್ಯು ಎಕ್ಸ್3, ಆಡಿ ಕ್ಯೂ5 ಮತ್ತು ಮರ್ಸಿಡಿಸ್ ಬೆಂಝ್ ಜಿಎಸ್‌ಜಿ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
2020 Land Rover Discovery Sport Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X