ಹೊಸ ಮಹೀಂದ್ರಾ ಬೊಲೆರೊ ಕಾರಿನ ವೈಶಿಷ್ಟ್ಯಗಳೇನು ಗೊತ್ತಾ?

ಭಾರತದ ಖ್ಯಾತ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಬೊಲೆರೊ ಎಸ್‌ಯುವಿಯನ್ನು ಬಿಎಸ್ 6 ಎಂಜಿನ್ ನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಕಾರಿನ ಆನ್-ರೋಡ್ ಬೆಲೆಯು ದೆಹಲಿಯಲ್ಲಿ ರೂ. 8.66 ಲಕ್ಷಗಳಾಗಿದೆ.

ಹೊಸ ಮಹೀಂದ್ರಾ ಬೊಲೆರೊ ಕಾರಿನ ವೈಶಿಷ್ಟ್ಯಗಳೇನು ಗೊತ್ತಾ?

ಹಳೆಯ ಬೊಲೆರೊಗೆ ಹೋಲಿಸಿದರೆ ಹೊಸ ಬೊಲೆರೊ ಕಾರಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಕಾರಿನ ಮುಂಭಾಗದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಹಳೆಯ ಬೊಲೆರೊಗೆ ಹೋಲಿಸಿದರೆ ಹೊಸ ಬೊಲೆರೊದಲ್ಲಿ ಯಾವ ಬದಲಾವಣೆಗಳನ್ನು ಮಾಡಲಾಗಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಹೊಸ ಮಹೀಂದ್ರಾ ಬೊಲೆರೊ ಕಾರಿನ ವೈಶಿಷ್ಟ್ಯಗಳೇನು ಗೊತ್ತಾ?

ಹೊರಭಾಗ

2020ರ ಹೊಸ ಮಹೀಂದ್ರಾ ಬೊಲೆರೊದಲ್ಲಿ ಹೊಸ ಗ್ರಿಲ್ ಜೊತೆಗೆ ರಿಫ್ರೆಶ್ ಮಾಡಲಾದ ಬಾನೆಟ್ ಅಳವಡಿಸಲಾಗಿದೆ. ಇದರ ಜೊತೆಗೆ ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ ಅಳವಡಿಸಲಾಗಿದೆ. ಪಾರ್ಕಿಂಗ್ ಲೈಟ್, ಇಂಟಿಗ್ರೇಟೆಡ್ ಬೀಮ್ ಲೈಟ್ ಗಳನ್ನು ಪ್ರತ್ಯೇಕವಾಗಿಡಲಾಗಿದೆ.

ಹೊಸ ಮಹೀಂದ್ರಾ ಬೊಲೆರೊ ಕಾರಿನ ವೈಶಿಷ್ಟ್ಯಗಳೇನು ಗೊತ್ತಾ?

ಮುಂಭಾಗದಲ್ಲಿರುವ ಬಂಪರ್‌ ಅನ್ನು ಪೂರ್ಣವಾಗಿ ಮರುವಿನ್ಯಾಸಗೊಳಿಸಲಾದೆ. ಹೊಸ ಏರ್‌ಡ್ಯಾಮ್ ಹಾಗೂ ಫಾಗ್‌ಲ್ಯಾಂಪ್ ಹೌಸಿಂಗ್ ಗಳನ್ನು ನೀಡಲಾಗಿದೆ. ಹೊಸ ಟೇಲ್‌ಲೈಟ್ ಅನ್ನು ಹೊರತುಪಡಿಸಿ ಹೆಚ್ಚಿನ ಬದಲಾವಣೆಗಳಾಗಿಲ್ಲ.

ಹೊಸ ಮಹೀಂದ್ರಾ ಬೊಲೆರೊ ಕಾರಿನ ವೈಶಿಷ್ಟ್ಯಗಳೇನು ಗೊತ್ತಾ?

ಇಂಟಿರಿಯರ್

ಹೊಸ ಕಾರಿನ ಇಂಟಿರಿಯರ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಬೀಜ್ ಬಣ್ಣದ ಡ್ಯಾಶ್‌ಬೋರ್ಡ್ ನೀಡಲಾಗಿದೆ. ಹೊಸ ಕಾರು 5 + 2 ಸೀಟ್ ಅನ್ನು ಹೊಂದಿದೆ. ಇದರಲ್ಲಿ ಎರಡು ಎದುರು ಬದುರಾಗಿರುವ ಜಂಪ್ ಸೀಟುಗಳಿವೆ.

ಹೊಸ ಮಹೀಂದ್ರಾ ಬೊಲೆರೊ ಕಾರಿನ ವೈಶಿಷ್ಟ್ಯಗಳೇನು ಗೊತ್ತಾ?

ಫೀಚರ್ಸ್

2020ರ ಹೊಸ ಬೊಲೆರೊ ಕಾರು ಡ್ಯುಯಲ್ ಏರ್‌ಬ್ಯಾಗ್, ಹೈಸ್ಪೀಡ್ ಅಲರ್ಟ್, ಡ್ರೈವರ್ ಹಾಗೂ ಕೋ-ಡ್ರೈವರ್ ಗಳಿಗಾಗಿ ಸೀಟ್ ಬೆಲ್ಟ್ ರಿಮೈಂಡರ್, ರೇರ್ ಪಾರ್ಕಿಂಗ್ ಸೆನ್ಸಾರ್‌ಗಳಂತಹ ಹಲವು ಹೊಸ ಫೀಚರ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದೆ. ಈ ಕಾರು 4 ಡೋರ್ ಪವರ್ ವಿಂಡೋಸ್, ಮ್ಯಾನುಯಲ್ ಹೆಚ್‌ವಿಎಸಿ ಹಾಗೂ ರೇರ್ ಸೆಂಟರ್ ಆರ್ಮ್‌ ರೆಸ್ಟ್‌ಗಳನ್ನು ಸಹ ಹೊಂದಿದೆ.

ಹೊಸ ಮಹೀಂದ್ರಾ ಬೊಲೆರೊ ಕಾರಿನ ವೈಶಿಷ್ಟ್ಯಗಳೇನು ಗೊತ್ತಾ?

ಎಂಜಿನ್

ಹೊಸ 2020ರ ಬೊಲೆರೊ ಕಾರಿನಲ್ಲಿ ಹಳೆಯ ಬೊಲೆರೊ ಕಾರಿನಲ್ಲಿದ್ದಂತಹ 1.5-ಲೀಟರ್ ಮೂರು ಸಿಲಿಂಡರ್ ಎಂಹಾಕ್ 75 ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಬಿಎಸ್ 6 ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಅಪ್ ಗ್ರೇಡ್ ಮಾಡಲಾಗಿದೆ.

ಹೊಸ ಮಹೀಂದ್ರಾ ಬೊಲೆರೊ ಕಾರಿನ ವೈಶಿಷ್ಟ್ಯಗಳೇನು ಗೊತ್ತಾ?

ಈ ಎಂಜಿನ್ 3,600 ಆರ್‌ಪಿಎಂನಲ್ಲಿ 75 ಬಿಹೆಚ್‌ಪಿ ಪವರ್ ಹಾಗೂ 1,600 - 2,200 ಆರ್‌ಪಿಎಂನಲ್ಲಿ 210 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನಲ್ಲಿ 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ.

Most Read Articles

Kannada
English summary
New Mahindra Bolero BS 6 features details. Read in Kannada.
Story first published: Thursday, March 26, 2020, 18:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X