ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಮರಾಜೋ ಆಟೋಮ್ಯಾಟಿಕ್ ಆವೃತ್ತಿ

ನ್ಯೂ ಜನರೇಷನ್ ಮಹೀಂದ್ರಾ ಥಾರ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಮೂಡಿಸಿದೆ. ಈ ಥಾರ್ ದೊಡ್ಡ ಯಶಸ್ಸನ್ನು ಕಂಡಿರುವುದರಿದರಿಂದ ಇದರ ಉತ್ಪಾದನೆಯನ್ನು ಮಹೀಂದ್ರಾ ಕಂಪನಿಯು ಹೆಚ್ಚಿಸುತ್ತಿದೆ. ಅಲ್ಲದೇ ಮಹೀಂದ್ರಾ ಕಂಪನಿಯು ಥಾರ್ ಎಸ್‍ಯುವಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಮರಾಜೋ ಆಟೋಮ್ಯಾಟಿಕ್ ಆವೃತ್ತಿ

ಇದರ ನಡುವೆ ಹೊಸ ತಲೆಮಾರಿನ ಎಕ್ಸ್‌ಯುವಿ 500, ಸ್ಕಾರ್ಪಿಯೋ, ಬಿಎಸ್-6 ಟಿಯುವಿ 300 ಮತ್ತು ಇತರ ಎಸ್‍ಯುವಿಗಳನ್ನು ಕೂಡ ಮಹೀಂದ್ರಾ ಕಂಪನಿಯು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ನಡುವೆ ಸದ್ದಿಲ್ಲದೇ ಮಹೀಂದ್ರಾ ಮರಾಜೋ ಆಟೋಮ್ಯಾಟಿಕ್ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡಿದೆ. ಥಾರ್ ಎಸ್‍ಯುವಿಯ ಜೊತೆಯಲ್ಲಿ ಮರಾಜೋ ಆಟೋಮ್ಯಾಟಿಕ್ ಆವೃತ್ತಿಯು ಸ್ಪಾಟ್ ಟೆಸ್ಟ್ ನಡೆಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಮರಾಜೋ ಆಟೋಮ್ಯಾಟಿಕ್ ಆವೃತ್ತಿ

ಮಹೀಂದ್ರಾ ಮರಾಜೋ ಎಂಪಿವಿಯು ಭಾರತದಲ್ಲಿ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬಿಡುಗಡೆಯಾಗಿತ್ತು. ಆದರೆ ಶೀಘ್ರದಲ್ಲೇ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಮರಾಜೋ ಎಂಪಿವಿಯು ಭಾರತದಲ್ಲಿ ಬಿಡುಗಡೆಯಾಗಲಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಮರಾಜೋ ಆಟೋಮ್ಯಾಟಿಕ್ ಆವೃತ್ತಿ

ಟೀಂ ಬಿಹೆಚ್‍ಪಿ ಬಹಿರಂಗಪಡಿಸಿದ ಮರಾಜೋ ಆಟೋಮ್ಯಾಟಿಕ್ ಎಂಪಿವಿ ಸ್ಪೈ ಚಿತ್ರಗಳಲ್ಲಿ ಸಾಮಾನ್ಯ ಆವೃತ್ತಿಗೆ ಹೋಲುವಂತಿದೆ. ಇದರ ಟೈಲ್‌ಗೇಟ್‌ನ ಕೆಳಗಿನ ಎಡ ಕಾರ್ನನರ್ ನಲ್ಲಿ ಆಟೋ-ಶಿಫ್ಟ್' ಬ್ಯಾಡ್ಜಿಂಗ್ ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಮರಾಜೋ ಆಟೋಮ್ಯಾಟಿಕ್ ಆವೃತ್ತಿ

ಮರಾಜೋ ಎಂಪಿವಿಯಲ್ಲಿ 1.5 ಲೀಟರಿನ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 3,500 ಆರ್‌ಪಿಎಂನಲ್ಲಿ 121 ಬಿಹೆಚ್‌ಪಿ ಪವರ್ ಹಾಗೂ 1750 ರಿಂದ 2500 ಆರ್‌ಪಿಎಂನಲ್ಲಿ 300 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿ ಅನ್ನು ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಮರಾಜೋ ಆಟೋಮ್ಯಾಟಿಕ್ ಆವೃತ್ತಿ

ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಬ್ರ್ಯಾಂಡ್ ಅದೇ ತೈಲ ಬರ್ನರ್ ಅನ್ನು ಬಳಸಬಹುದು. ಇನ್ನು ಕಂಪನಿಯು ಹೊಸ 1.5-ಲೀಟರ್ ಎಂಸ್ಟಾಲಿಯನ್ ಪೆಟ್ರೋಲ್ ಎಂಜಿನ್ ಅನ್ನು ಮರಾಜೋ ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಅಳವಡಿಸಲಿದೆ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಮರಾಜೋ ಆಟೋಮ್ಯಾಟಿಕ್ ಆವೃತ್ತಿ

ಈ ಎಂಜಿನ್ 161 ಬಿಹೆಚ್‌ಪಿ ಪವರ್ ಮತ್ತು 280 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಬಹುದು.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಮರಾಜೋ ಆಟೋಮ್ಯಾಟಿಕ್ ಆವೃತ್ತಿ

ಹೊಸ ಮರಾಜೋ ಎಂಪಿವಿಯಲ್ಲಿ ಯುಎಸ್‌ಬಿ, ಎಯುಎಕ್ಸ್, ಬ್ಲೂಟೂತ್ ಕನೆಕ್ಟಿವಿಟಿ, ರೇರ್ ಡಿಫೋಗರ್, ಅಲಾಯ್ ವ್ಹೀಲ್, ಎಲೆಕ್ಟ್ರಿಕ್ ಅಡ್ಜಸ್ಟ್ ವಿಂಗ್ ಮಿರರ್, ಡ್ರೈವರ್ ಸೀಟ್ ಹೈಟ್ ಅಡ್ಜಸ್ಟಬಲ್, ರಿಮೋಟ್ ಸೆಂಟ್ರಲ್ ಲಾಕಿಂಗ್, ಮಿಡ್ -ರೋ ಸೇಂಟ್ ಆರ್ಮ್‌ರೆಸ್ಟ್, ಹಿಂಭಾಗದಲ್ಲಿ ವೈಪರ್, ವಾಷರ್ ಹಾಗೂ ಸ್ಟೀಯರಿಂಗ್-ಮೌಂಟೆಡ್ ಕಂಟ್ರೋಲ್ಗಳನ್ನು ಹೊಂದಿರಲಿದೆ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಮರಾಜೋ ಆಟೋಮ್ಯಾಟಿಕ್ ಆವೃತ್ತಿ

ಮಹೀಂದ್ರಾ ಕಂಪನಿಯು ಭಾರತದಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಮರಾಜೋ ಎಂಪಿವಿಯನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ . ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಹೊಸ ಎಂಜಿನ್ ಆಯ್ಕೆಯು ಮಹೀಂದ್ರಾ ಮರಾಜೋ ಎಂಪಿವಿಗೆ ಮತ್ತಷ್ಟು ಬಲ ಬಂದಂತಾಗುತ್ತದೆ.

Most Read Articles

Kannada
English summary
Mahindra Marazzo MPV Spotted With 'Autoshift' Badging. Read In Kannada.
Story first published: Wednesday, November 11, 2020, 19:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X