Just In
- 34 min ago
ಭಾರತದ ನಂತರ ಜಪಾನ್ ಮಾರುಕಟ್ಟೆಯಲ್ಲೂ ಬಿಡುಗಡೆಯಾಗುತ್ತಿದೆ ಹೋಂಡಾ ಹೈನೆಸ್ ಸಿಬಿ 350
- 10 hrs ago
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- 12 hrs ago
ಸಿವಿ ವಾಹನ ಮಾದರಿಗಳಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್ಸ್ಟೋನ್
- 12 hrs ago
ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ
Don't Miss!
- News
ಬೈಡನ್ ಪದಗ್ರಹಣಕ್ಕೆ ಸಕಲ ಸಿದ್ಧತೆ, ಮದುಮಗಳಂತೆ ಸಿಂಗಾರಗೊಳ್ಳುತ್ತಿದೆ ಸಂಸತ್
- Movies
ಸುದೀಪ್ ಜೊತೆ ಸಿನಿಮಾ: ರಕ್ಷಿತ್ ಶೆಟ್ಟಿ ಹೇಳಿದ್ದು ಹೀಗೆ
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, Live ಸ್ಕೋರ್: ಭಾರತದ ಆರಂಭಿಕ ವಿಕೆಟ್ ಪತನ
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮತ್ತಷ್ಟು ತಡವಾಗಲಿದೆ ಮಹೀಂದ್ರಾ ಎಕ್ಸ್ಯುವಿ300 ಪರ್ಫಾಮೆನ್ಸ್ ಮಾದರಿ ಬಿಡುಗಡೆ
ಮಹೀಂದ್ರಾ ಕಂಪನಿಯು ಎಕ್ಸ್ಯುವಿ300 ಕಾಂಪ್ಯಾಕ್ಟ್ ಎಸ್ಯುವಿಯ ಪರ್ಫಾಮೆನ್ಸ್ ಮಾದರಿಯನ್ನು ಆಟೋ ಎಕ್ಸ್ಪೋದಲ್ಲಿ ಪ್ರದರ್ಶಿಸಿತ್ತು. ಸ್ಪೋಟ್ಜ್ ಎಂದು ಕರೆಯಲ್ಪಡುವ ಈ ಪರ್ಫಾಮೆನ್ಸ್ ಮಾದಿರಿಯು ಬ್ರ್ಯಾಂಡ್ನ ಎಂಸ್ಟಾಲಿಯನ್ ಟಿ-ಜಿಡಿ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಹೊಸ ಟರ್ಬೋ-ಪೆಟ್ರೋಲ್ ಎಂಜಿನ್ ನೊಂದಿಗೆ ಎಕ್ಸ್ಯುವಿ 300 ಸ್ಪೋರ್ಟ್ಜ್ ಭಾರತದಲ್ಲಿ ಬಿಡುಗಡೆಯಾದಾಗ ತನ್ನ ಸರಣಿಯಲ್ಲಿ ಪವರ್ ಫುಲ್ ಎಸ್ಯುವಿಯಾಗಿರಲಿದೆ. ಈ ಹೊಸ ಮಹೀಂದ್ರಾ ಸ್ಪೋಟ್ಜ್ ಕಾಂಪ್ಯಾಕ್ಟ್ ಎಸ್ಯುವಿಯು ಮುಂದಿನ ವರ್ಷ ಬಿಡುಗಡೆಯಾಗಲಿದೆ ಎಂದು ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಬಹಿರಂಗವಾಗಿದೆ. ಮಹೀಂದ್ರಾ ಎಕ್ಸ್.ಯುವಿ 300 ಸ್ಪೋರ್ಟ್ಜ್ ಎಸ್ಯುವಿಯು ಈ ವರ್ಷದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕರೋನಾ ಸೋಂಕಿನ ಭೀತಿಯಿಂದ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.

ಮಹೀಂದ್ರಾ ಎಕ್ಸ್ಯುವಿ300 ಸ್ಪೋರ್ಟ್ಜ್ ಎಸ್ಯುವಿಯಲ್ಲಿ 1.2-ಲೀಟರ್, ಮೂರು ಸಿಲಿಂಡರ್, ಡೈರೆಕ್ಟ್-ಇಂಜೆಕ್ಷನ್, ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 129 ಬಿಹೆಚ್ಪಿ ಪವರ್ ಮತ್ತು 230 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಗ್ಲೋಬಲ್ ಎನ್ಸಿಎಪಿಯ ಸುರಕ್ಷತಾ ಟೆಸ್ಟ್ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಹಿಂದಿನ ಟರ್ಬೂ-ಪೆಟ್ರೋಲ್ ಎಂಜಿನ್ಗೆ ಹೋಲಿಸಿದರೆ, ಹೊಸ ಟಿ-ಜಿಡಿ ಎಂಜಿನ್ ಹೋಲಿಸಿದರೆ 20 ಬಿಹೆಚ್ಪಿ ಪವರ್ ಮತ್ತು 30 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟಿ-ಜಿಡಿಐ ಎಂಜಿನ್ ಅನ್ನು ಆರು-ಸ್ಪೀಡ್ ಮ್ಯಾನ್ಯುವಲ್ ಗೇರ್ಬಾಕ್ಸ್ಗೆ ಜೋಡಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಇನ್ನು ಬಾನೆಟ್ನ ಅಡಿಯಲ್ಲಿನ ಬದಲಾವಣೆಗಳ ಜೊತೆಗೆ ಎಕ್ಸ್ಯುವಿ300 ಸ್ಪೋರ್ಟ್ಜ್ ಮಾದರಿಯ ಸ್ಟ್ಯಾಂಡರ್ಡ್ ರೂಪಾಂತರವು ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಈ ಹೊಸ ಎಸ್ಯುವಿಯ ಬಾನೆಟ್ನಲ್ಲಿ ಹೊಸ ಗ್ರಾಫಿಕ್ಸ್ ಅನ್ನು ಹೊಂದಿದೆ.
MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್ಯುವಿ

ಮಹೀಂದ್ರಾ ಎಕ್ಸ್ಯುವಿ300 ಸ್ಪೋರ್ಟ್ಜ್ ಎಸ್ಯುವಿಯ ಡ್ಯಾಶ್ಬೋರ್ಡ್, ಸ್ಟೀಯರಿಂಗ್ ವ್ಹೀಲ್ ಮತ್ತು ಏರ್-ಕಾನ್ ಸೇರಿದಂತೆ ಕ್ಯಾಬಿನ್ನಾದ್ಯಂತ ಹೊಸ ರೆಡ್ ಎಕ್ಸೆಸ್ಟ್ ಗಳನ್ನು ಹೊಂದಿರುತ್ತದೆ.

ಇನ್ನು ಕೆಂಪು ಬಣ್ಣದ ಕಾಂಟ್ರಾಸ್ಟ್ ಹೊಲಿಗೆಯೊಂದಿಗೆ ನವೀಕರಿಸಿದ ಸೀಟುಗಳನ್ನು ಹೊಂದಿರುತ್ತದೆ. ಇನ್ನು ಇಂಟಿರಿಯರ್ ನಲ್ಲಿ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಂತಹ ಹೆಚ್ಚುವರಿ ಫೀಚರುಗಳನ್ನು ಹೊಂದಿರಲಿದೆ.
MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್ಯುವಿ

ಮಹೀಂದ್ರಾ ಎಕ್ಸ್ಯುವಿ300 ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಫೋರ್ಡ್ ಇಕೋಸ್ಪೋರ್ಟ್ ಮತ್ತು ಮಾರುತಿ ವಿಟಾರಾ ಬ್ರೆಝಾ ಕಾಂಪ್ಯಾಕ್ಟ್ ಎಸ್ಯುವಿಯುಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ಈ ಹೊಸ ಸ್ಪೋರ್ಟ್ಜ್ ಮಾದರಿಯು ಬಿಡುಗಡೆಯಾಗುವ ವೇಳೆಗೆ ಕಿಯಾ ಸೊನೆಟ್ ಮತ್ತು ನಿಸ್ಸಾನ್ ಮ್ಯಾಗ್ನೆಟ್ ನಂತಹ ಹೊಸ ಪ್ರತಿಸ್ಪರ್ಧಿಗಳಿರುತ್ತದೆ.

ಮಹೀಂದ್ರಾ ಎಕ್ಸ್ಯುವಿ300 ಸ್ಪೋರ್ಟ್ಜ್ ಎಸ್ಯುವಿಯ ಬಿಡುಗಡೆಯು ಕರೋನಾ ಸೋಂಕಿನ ಭೀತಿಯಿಂದ ಮತ್ತಷ್ಟು ವಿಳಂಬವಾಗಿದೆ. ಈ ಹೊಸ ಮಹೀಂದ್ರಾ ಎಕ್ಸ್ಯುವಿ300 ಸ್ಪೋರ್ಟ್ಜ್ ಪರ್ಫಾಮೆನ್ಸ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.