ಬಿಡುಗಡೆಯಾಯ್ತು ಬಹುನಿರೀಕ್ಷಿತ ಮಾರುತಿ ಎಸ್-ಪ್ರೆಸ್ಸೊ ಸಿಎನ್‍ಜಿ ಆವೃತ್ತಿ

ಭಾರತದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಕಂಪನಿಯು ತನ್ನ ಹೊಸ ಎಸ್-ಪ್ರೆಸ್ಸೊ ಸಿಎನ್‍ಜಿ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಎಸ್-ಪ್ರೆಸ್ಸೊ ಸಿಎನ್‍ಜಿ ಆವೃತ್ತಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.84 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಮಾರುತಿ ಎಸ್-ಪ್ರೆಸ್ಸೊ ಸಿಎನ್‍ಜಿ ಆವೃತ್ತಿ

ಹೊಸ ಎಸ್-ಪ್ರೆಸ್ಸೊ ಸಿಎನ್‍ಜಿ 998 ಸಿಸಿ, 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಇದನ್ನು ಸಿಎನ್‍ಜಿಯಲ್ಲಿ ಚಾಲಿಯಿಸಲು ಟ್ಯೂನ್ ಮಾಡಲಾಗಿದೆ. ಪೆಟ್ರೋಲ್‌ನಲ್ಲಿ ಚಲಿಸುವಾಗ, ಎಂಜಿನ್ 5,500 ಆರ್‌ಪಿಎಂನಲ್ಲಿ 67 ಬಿಎಚ್‌ಪಿ ಪವರ್ ಮತ್ತು 3,500 ಆರ್‌ಪಿಎಂನಲ್ಲಿ 90 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಮಾರುತಿ ಎಸ್-ಪ್ರೆಸ್ಸೊ ಸಿಎನ್‍ಜಿ ಆವೃತ್ತಿ

ಹೊಸ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಡ್ಯುಯಲ್ ಇಂಟರ್ ಡಿಪೆಂಡೆಂಟ್ ಇಸಿಯು ಮತ್ತು ಸಿಎನ್‌ಜಿಗೆ ಟ್ಯೂನ್ ಮಾಡಲಾದ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ. ಈ ಕಾರು 55-ಲೀಟರ್ ಸಿಎನ್‌ಜಿ ಟ್ಯಾಂಕ್ ಅನ್ನು ಹೊಂದಿದೆ. ಈ ಕಾರು 31.2 ಕಿಮೀ ಮೈಲೇಜ್ ಅನ್ನು ನೀಡುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಡುಗಡೆಯಾಯ್ತು ಬಹುನಿರೀಕ್ಷಿತ ಮಾರುತಿ ಎಸ್-ಪ್ರೆಸ್ಸೊ ಸಿಎನ್‍ಜಿ ಆವೃತ್ತಿ

ಹೊಸ ಎಸ್-ಪ್ರೆಸ್ಸೊ ಸಿಎನ್‍ಜಿ ಆವೃತ್ತಿಯನ್ನು ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ ಬೇಸ್ ಸ್ಪೆಕ್ ಬೆಲೆಯು ರೂ.4.84 ಲಕ್ಷಗಳಾಗಿದೆ. ಇನ್ನು ಎಸ್-ಪ್ರೆಸ್ಸೊ ಟಾಪ್ ಸ್ಪೆಕ್ ವಿಎಕ್ಸ್‌ಐ(ಒ) ಮಾದರಿಯ ಬೆಲೆಯು ರೂ,5.13 ಲಕ್ಷಗಳಾದರೆ ಮಿಡ್ ಸ್ಪೆಕ್ ರೂಪಾಂತಗಳಾದ ಎಲ್‌ಎಕ್ಸ್‌ಐ(ಒ) ರೂ.4.90 ಲಕ್ಷ ಮತ್ತು ವಿಎಕ್ಸ್‌ಐ ರೂಪಾಂತರಗಳಿಗೆ ರೂ.5.07 ಲಕ್ಷ ಬೆಲೆ ಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಮಾರುತಿ ಎಸ್-ಪ್ರೆಸ್ಸೊ ಸಿಎನ್‍ಜಿ ಆವೃತ್ತಿ

ಮಾರುತಿ ಸುಜುಕಿ ತನ್ನ ಎಸ್-ಪ್ರೆಸ್ಸೊ ಸಿ‍ಎನ್‍‍ಜಿ ಆವೃತ್ತಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಾಗಿತ್ತು. ಇನ್ನು 2019ರಲ್ಲಿ ಬಿಡುಗಡೆಯಾದ ಪೆಟ್ರೋಲ್ ಆವೃತ್ತಿಯ ಎಸ್‍-ಪ್ರೆಸ್ಸೊ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ.

MOST READ: ದಕ್ಷಿಣ ಆಫ್ರಿಕಾಗೂ ಲಗೆಯಿಟ್ಟ ಮೇಡ್ ಇನ್ ಇಂಡಿಯಾ ಎಸ್-ಪ್ರೆಸ್ಸೊ

ಬಿಡುಗಡೆಯಾಯ್ತು ಬಹುನಿರೀಕ್ಷಿತ ಮಾರುತಿ ಎಸ್-ಪ್ರೆಸ್ಸೊ ಸಿಎನ್‍ಜಿ ಆವೃತ್ತಿ

ಎಸ್-ಪ್ರೆಸ್ಸೊ ಕಾರಿನಲ್ಲಿ ಮೈಕ್ರೋ ಎಸ್‌ಯುವಿ ವಿನ್ಯಾಸದೊಂದಿಗೆ ಆಕರ್ಷಕ ಗ್ರೌಂಡ್ ಕ್ಲಿಯೆರೆನ್ಸ್, 14-ಇಂಚಿನ ಸ್ಟೀಲ್ ವೀಲ್ಹ್, ಸ್ಲಿಕ್ ಫ್ರಂಟ್ ಗ್ರಿಲ್, ಕ್ರೋಮ್ ಇನ್ಸರ್ಟ್, ಹೆಡ್‌ಲ್ಯಾಂಪ್, ವಿಸ್ತರಿತ ಸೆಂಟರ್ ಏರ್ ಇನ್‌ಟೆಕ್, ಸಿ ಶೇಫ್ ಟೈಲ್‌ಗೆಟ್ ಸೌಲಭ್ಯವು ಕಾರಿನ ಅಂದಕ್ಕೆ ಮತ್ತಷ್ಟು ಮೆರಗು ನೀಡುತ್ತವೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಮಾರುತಿ ಎಸ್-ಪ್ರೆಸ್ಸೊ ಸಿಎನ್‍ಜಿ ಆವೃತ್ತಿ

ಎಸ್-ಪ್ರೆಸ್ಸೊ ಕಾರಿನ ಇಂಟಿರಿಯರ್‍‍‍ನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿದ್ದು, ಬಾಡಿ ಕಲರ್ ಡ್ಯಾಶ್‌ಬೋರ್ಡ್, ಸೆಂಟರ್ ಕನ್ಸೊಲ್‌ನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಇನ್ಸ್ ಟ್ರೂಮೆಂಟ್ ಡಿಸ್‌ಪ್ಲೇ, ಟಚ್ ಸ್ಕ್ರೀನ್ ಇನ್ಪೋಟೇನ್‍‍ಮೆಂಟ್ ಸಿಸ್ಟಂ, ಸ್ಮಾರ್ಟ್‌ಪ್ಲೇ ಸ್ಟುಡಿಯೋ ಸಿಸ್ಟಂ ಮತ್ತು ಆ್ಯಪಲ್ ಕಾರ್ ಪ್ಲೇ/ಆಂಡ್ರಾಯ್ಡ್ ಆಟೋ ಸೌಲಭ್ಯವಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಬಿಡುಗಡೆಯಾಯ್ತು ಬಹುನಿರೀಕ್ಷಿತ ಮಾರುತಿ ಎಸ್-ಪ್ರೆಸ್ಸೊ ಸಿಎನ್‍ಜಿ ಆವೃತ್ತಿ

ಇದರೊಂದಿಗೆ ಈ ಕಾರಿನಲ್ಲಿ ಎಸಿ ವೆಂಟ್ಸ್, ಸ್ಟಿಯರಿಂಗ್ ಮೌಟೆಂಡ್ ಕಂಟ್ರೋಲ್, ಮ್ಯಾನುವಲ್ ಹೊಂದಾಣಿಕೆಯ ರೇರ್ ವ್ಯೂ ಮಿರರ್, 12ವೊಲ್ಟ್ ಚಾರ್ಜಿಂಗ್ ಸ್ಯಾಕೆಟ್ ಮತ್ತು ಯುಎಸ್‌ಬಿ ಕನೆಕ್ಟ್ ಸಹ ಹೊಂದಿದೆ. ಹಲವಾರು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಮಾರುತಿ ಎಸ್-ಪ್ರೆಸ್ಸೊ ಸಿಎನ್‍ಜಿ ಆವೃತ್ತಿ

ಇನ್ನು ಎಸ್-ಪ್ರೆಸೊನಲ್ಲಿ ಕೀ ಲೆಸ್ ಎಂಟ್ರಿ, ಬ್ಲೂ‌ಥೂತ್ ಕನೆಕ್ಟಿವಿಟಿ, ಪವರ್ ವಿಂಡೋ, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಸ್ಪೀಡ್ ವಾರ್ನಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ನೀಡಲಾಗಿದೆ.

Most Read Articles

Kannada
English summary
Maruti S-Presso CNG variants launched. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X