ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದ ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು

ಮಾರುತಿ ಸುಜುಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಮಾರುತಿ ಸುಜುಕಿ ಕಂಪನಿಯು ವ್ಯಾಗನ್ಆರ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಅನ್ನು ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದ ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು

ಹರಿಯಾಣದ ಗುರುಗ್ರಾಮ್‌ನಲ್ಲಿ ಹೊಸ ವ್ಯಾಗನ್ಆರ್ ಎಲೆಕ್ಟ್ರಿಕ್ ಸ್ಪಾಟ್ ಟೆಸ್ಟ್ ಅನ್ನು ನಡಿಸಿದೆ. ಈ ಎಲೆಕ್ಟ್ರಿಕ್ ಕಾರು ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳನ್ನು ರಶ್ಲೇನ್ ಬಹಿರಂಗಪಡಿಸಿದೆ. ಹೊಸ ಮಾರುತಿ ಸುಜುಕಿ ವ್ಯಾಗನ್ಆರ್ ಎಲೆಕ್ಟ್ರಿಕ್ ಪ್ರೀಮಿಯಂ ‘ಎಕ್ಸ್‌ಎಲ್ 5' ಹ್ಯಾಚ್‌ಬ್ಯಾಕ್ ಅನ್ನು ಆಧರಿಸಿದೆ. ಈ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರನ್ನು ಹೆಚ್ಚಾಗಿ ಕರ್ಮಷಿಯಲ್ ಬಳಕೆಗೆ ಅನುಗುಣವಾಗಿ ಅಭಿವೃದ್ದಿಪಡಿಸಲಾಗುತ್ತದೆ. ಈ ಹೊಸ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದಲ್ಲಿ ಬಿಡುಗಡೆಗೊಳಿಸಬಹುದು.

ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದ ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು

ಮಾರುತಿ ಸುಜುಕಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಸಂಪೂರ್ಣವಾಗಿ ಮರೆಮಾಚಿ ಸ್ಪಾಟ್ ಟೆಸ್ಟ್ ಅನ್ನು ನಡೆಸಲಾಗಿದೆ. ಈ ಎಲೆಕ್ಟ್ರಿಕ್ ಕಾರು ಬಾಡಿಲೈನ್, ಬಂಪರ್ ಅಥವಾ ಕ್ರೀಸ್‌ಗಳು ಯಾವುದೂ ಸರಿಯಾಗಿ ಕಂಡು ಬಂದಿಲ್ಲ. ಆದರೆ ಈ ಎಲೆಕ್ಟ್ರಿಕ್ ಕಾರಿನಲ್ಲಿ 15 ಇಂಚಿನ ಅಲಾಯ್ ವ್ಹೀಲ್ ಅನ್ನು ಅಳವಡಿಸಲಾಗಿದೆ.

MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದ ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು

ಈ ಹೊಸ ಕಾರಿನ ಮುಂಭಾಗದಲ್ಲಿ ಕೆಲವು ನವೀಕರಣಗಳನ್ನು ನಡೆಸಲಾಗಿದೆ. ಈ ಹ್ಯಾಚ್‍ಬ್ಯಾಕ್ ನಲ್ಲಿ ಹೊಸ ಸ್ಪ್ಲಿಟ್ ಹೆಡ್‌ಲ್ಯಾಂಪ್ ವಿನ್ಯಾಸವನ್ನು ಒಳಗೊಂಡಿದ್ದು, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್(ಡಿಆರ್‌ಎಲ್) ಗಳನ್ನು ಮೇಲೆ ಇರಿಸಲಾಗಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದ ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು

ಇದರಲ್ಲಿ ಮುಖ್ಯವಾಗಿ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಟೈಯೆಗಲ್ ಹೌಸಿಂಗ್ ನಲ್ಲಿ ಇರಿಸಲಾಗಿದೆ. ಇನ್ನು ಮುಂಭಾಗದ ಬಂಪರಿನ ಕೆಳಭಾಗದಲ್ಲಿ ಫಾಂಗ್ ಲ್ಯಾಂಪ್ ಅನ್ನು ಅಳವಡಿಸಲಾಗಿದೆ. ಅತ್ಯಂತ ಗಮನಾರ್ಹವಾದ ವ್ಯತ್ಯಾಸವೆಂದರೆ ಗ್ರಿಲ್ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದ ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು

ಸೈಡ್ ಮತ್ತು ಹಿಂಭಾಗದ ಪ್ರೊಫೈಲ್ ಪ್ರಸ್ತುತ ಮಾದರಿಗೆ ಹೋಲುತ್ತದೆ. ಈ ಟಾಲ್ ಬಾಯ್ ಹ್ಯಾಚ್‍ಬ್ಯಾಕ್ ಹಿಂಭಾಗದಲ್ಲಿ ಟೇಲ್ ಲೈಟ್ ಅನ್ನು ಅಳವಡಿಸಲಾಗಿದೆ. ಈ ಹೊಸ ವ್ಯಾಗನ್ಆರ್ ಇಗ್ನಿಸ್ ಮಾದರಿಯಲ್ಲಿರುವಂತಹ 15 ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದ ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು

ಮಾರುತಿ ಸುಜುಕಿ ಕಂಪನಿಯು ವ್ಯಾಗನ್ಆರ್ ಎಲೆಕ್ಟ್ರಿಕ್ ಆವೃತ್ತಿಯ ಹೆಚ್ಚಿನ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಈ ಎಲೆಕ್ಟ್ರಿಕ್ ಆವೃತ್ತಿಯು ಉತ್ತಮ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದ ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು

ಸ್ಟ್ಯಾಂಡರ್ಡ್ ಚಾರ್ಜಿಂಗ್ ಬ್ಯಾಟರಿಗಳನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಏಳು-ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದ್ದರೆ, ವೇಗದ ಚಾರ್ಜಿಂಗ್ ಒಂದು ಗಂಟೆಯ ಸಮಯದಲ್ಲಿ 0 - 80 ಶೇಕಡಾ ಚಾರ್ಜ್ ಮಾಡಲು ಸಮರ್ಥವಾಗಿರುತ್ತದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದ ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು

ಮಾರುತಿ ಸುಜುಕಿ ವ್ಯಾಗನ್ಆರ್ ಎಲೆಕ್ಟ್ರಿಕ್ ಆವೃತ್ತಿಯು ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಈ ವ್ಯಾಗನ್ಆರ್ ಎಲೆಕ್ಟ್ರಿಕ್ ಆವೃತ್ತಿಯನ್ನು ಮುಂದಿನ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Maruti WagonR Electric Hatchback Spied Testing Once Again In India. Read In Kannada,
Story first published: Thursday, July 9, 2020, 15:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X