Just In
- 48 min ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 53 min ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
- 1 hr ago ಬೈಕಿನಂತೆ ಮೈಲೇಜ್, ಹಿಂದೆಗಿಂತಲೂ ಬಲಿಷ್ಠವಾಗಿ ಸ್ವಿಫ್ಟ್ ಅಖಾಡಕ್ಕೆ: ಖರೀದಿಸಲು ಕ್ಯೂ ನಿಲ್ಲಲು ರೆಡಿಯಾಗಿರಿ!
- 2 hrs ago Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
Don't Miss!
- News ಬೆಂಗಳೂರು ನಮ್ಮ ಮೆಟ್ರೋ ಬೆಳಗ್ಗೆ 03:35ಕ್ಕೆ ಆರಂಭ: ಏಕೆ? ಕಾರಣ ಇಲ್ಲಿದೆ
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದಲ್ಲಿ ಬಿಡುಗಡೆಯಾಯ್ತು ಐಷಾರಾಮಿ ಮರ್ಸಿಡಿಸ್-ಎಎಂಜಿ ಜಿಎಲ್ಇ 53 ಕೂಪೆ
ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ತನ್ನ ಹೊಸ ಮರ್ಸಿಡಿಸ್-ಎಎಂಜಿ ಜಿಎಲ್ಇ 53 ಕೂಪೆ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ 2020ರ ಮರ್ಸಿಡಿಸ್-ಎಎಂಜಿ ಜಿಎಲ್ಇ 53 4 ಮ್ಯಾಟಿಕ್ ಪ್ಲಸ್ ಕೂಪೆ ಬೆಲೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.20 ಕೋಟಿಗಳಾಗಿದೆ.
ಮರ್ಸಿಡಿಸ್ ಬೆಂಝ್ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸುವ ಮೊದಲ ಎಎಂಜಿ 53 ಮಾದರಿಯಾಗಿದೆ. ಈ ಕೂಪೆ ಎಸ್ಯುವಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಈ ಹೊಸ ಐಷಾರಾಮಿ ಮರ್ಸಿಡಿಸ್ ಬೆಂಝ್ ಎಎಂಜಿ ಜಿಎಲ್ಇ 53 ಕೂಪೆ ಕಾರಿನಲ್ಲಿ 4 ಮ್ಯಾಟಿಕ್ ಪ್ಲಸ್ ಆಲ್-ವೀಲ್ ಡ್ರೈವ್ (ಎಡಬ್ಲ್ಯೂಡಿ) ಸಿಸ್ಟಂ ಅನ್ನು ಹೊಂದಿದೆ. ಹೊಸ 2020 ಮರ್ಸಿಡಿಸ್-ಎಎಂಜಿ ಜಿಎಲ್ಇ 53 4 ಮ್ಯಾಟಿಕ್ ಪ್ಲಸ್ ಭಾರತದಲ್ಲಿ ಜಿಎಲ್ಇ 43 ಎಎಂಜಿ ಕಾರಿನ ಉತ್ತರಾಧಿಕಾರಿಯಾಗಿದೆ
ಮರ್ಸಿಡಿಸ್-ಎಎಂಜಿ ಜಿಎಲ್ಇ 53 ಕೂಪೆಯಲ್ಲಿ 3.0 ಲೀಟರ್ ಆರು ಸಿಲಿಂಡರ್, ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ ಕಂಪನಿಯ 48-ವೋಲ್ಟ್ ಇಕ್ಯೂ ಬೂಸ್ಟ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬರುತ್ತದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ
ಈ ಎಂಜಿನ್ ಸುಮಾರು 435 ಬಿಹೆಚ್ಪಿ ಪವರ್ ಉತ್ಪಾದಿಸುವ ರೀತಿಯಲ್ಲಿ ಟ್ಯೂನ್ ಮಾಡಲಾಗಿದೆ. ಇನ್ನು ಇದು 520 ಎನ್ಎಂ ಟಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತದೆ. ಎಂಜಿನ್ ನೊಂದಿಗೆ ಎಲೆಕ್ಟ್ರಿಕ್ ಮೋಟರ್ ಅನ್ನು ನೀದಲಾಗಿದೆ.
ಇಕ್ಯೂ ಬೂಸ್ಟ್ ಹೆಚ್ಚುವರಿ 22 ಬಿಹೆಚ್ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 48-ವೋಲ್ಟ್ ಆನ್ಬೋರ್ಡ್ ಎಲೆಕ್ಟ್ರಿಕ್ ಸಿಸ್ಟಂನ್ನು ಸಹ ನೀಡುತ್ತದೆ. ಎಎಂಜಿ ಜಿಎಲ್ಇ 53 4 ಮ್ಯಾಟಿಕ್ ಪ್ಲಸ್ ಕೂಪೆಯಲ್ಲಿ ಸ್ಪೀಡ್ಶಿಫ್ಟ್ ಟಿಸಿಟಿ 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಅನ್ನು ನೀಡಲಾಗಿದೆ.
MOST READ: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕೊಡಿಯಾಕ್ ಎಸ್ಯುವಿ
ಈ ಹೊಸ ಮರ್ಸಿಡಿಸ್-ಎಎಂಜಿ ಜಿಎಲ್ಇ 53 ಕೂಪೆ ಕೇವಲ 5.3 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಇನ್ನು ಮರ್ಸಿಡಿಸ್-ಎಎಂಜಿ ಜಿಎಲ್ಇ 53 ಕೂಪೆ ವಿನ್ಯಾಸವು ಆಕರ್ಷಕವಾಗಿದೆ. ಮರ್ಸಿಡಿಸ್-ಎಎಂಜಿ ಜಿಎಲ್ಇ 53 ಕೂಪೆ ಪನಾಮೆರಿಕಾನಾ ಗ್ರಿಲ್ನೊಂದಿಗೆ ಲಂಬ ಕ್ರೋಮ್ ಸ್ಲ್ಯಾಟ್ಗಳನ್ನು ಹೊಂದಿದೆ.
ಈ ಕಾರಿನಲ್ಲಿ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಗಳೊಂದಿಗೆ ಸ್ವೀಪ್ಬ್ಯಾಕ್ ಎಲ್ಇಡಿ ಹೆಡ್ಲ್ಯಾಂಪ್ಗಳನ್ನು ಹೊಂದಿದೆ. ಈ ಕಾರಿನ ಮುಂಭಾಗದ ಏಪ್ರನ್ನಲ್ಲಿ ಸ್ಪೋರ್ಟಿ ಇನ್ಲೇಟ್ಸ್, ಪ್ರತಿಯೊಂದೂ ಸಿಲ್ವರ್ ಕ್ರೋಮ್ನಲ್ಲಿ ಎರಡು ಸೈಡ್ ಲೌವರ್ಗಳು ಮತ್ತು ಬ್ಲ್ಯಾಕ್ ಫ್ಲಿಕ್ಸ್ಗಳನ್ನು ಹೊಂದಿದೆ. ಎಎಮ್ಜಿ ಅಕ್ಷರಗಳನ್ನು ಹೊಂದಿರುವ 20 ಇಂಚಿನ ಲೈಟ್-ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್
ಮರ್ಸಿಡಿಸ್ 20 ರಿಂದ 22 ಇಂಚು ಗಾತ್ರದ ಆರು ಇತರ ವ್ಹೀಲ್ ಆಯ್ಕೆಗಳ ಆಯ್ಕೆಯನ್ನು ಸಹ ನೀಡುತ್ತದೆ. ಹಿಂಭಾಗದಲ್ಲಿ ಸಿಲ್ವರ್ ಕ್ರೋಮ್ನಲ್ಲಿ ನೀವು ಸ್ಟ್ರೈಕಿಂಗ್ ಡಿಫ್ಯೂಸರ್ ಮತ್ತು ಟ್ರಿಮ್ ಸ್ಟ್ರಿಪ್ ಅನ್ನು ಹೊಂದಿದೆ.
ಮರ್ಸಿಡಿಸ್-ಎಎಂಜಿ ಜಿಎಲ್ಇ 53 ಕೂಪೆಯ ಇಂಟಿರಿಯರ್ ಆಕರ್ಷಕವಾಗಿದೆ. ಇಂಟಿರಿಯರ್ ನಲ್ಲಿ ಕೆಂಪು ಕಾಂಟ್ರಾಸ್ಟ್ ಅಂಶಗಳನ್ನು ಹೊಂದಿದೆ. ಡ್ಯಾಶ್ಬೋರ್ಡ್ ಮತ್ತು ಡೋರ್ ಪ್ಯಾನೆಲ್ಗಳು ಕಾರ್ಬನ್ ಫೈಬರ್ ಅನ್ನು ಒಳಗೊಂಡಿದೆ. ಹೊಸ ತಲೆಮಾರಿನ 3-ಸ್ಪೋಕ್ ಎಎಮ್ಜಿ ಸ್ಟೀಯರಿಂಗ್ ವ್ಹೀಲ್ ಅನ್ನು ಅಲ್ಯೂಮಿನಿಯಂ ಶಿಫ್ಟ್ ಪ್ಯಾಡಲ್ಗಳೊಂದಿಗೆ ಹೊಂದಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು
ಇದರೊಂದಿಗೆ ದೊಡ್ಡ ಸಿಂಗಲ್ ಯುನಿಟ್ ಡಿಸ್ ಪ್ಲೇಯನ್ನು ಇನ್ಫೋಟೈನ್ಮೆಂಟ್ ಮತ್ತು ಇನ್ಸ್ಟ್ರುಮೆಂಟೇಶನ್ ಎಂದು ವಿಂಗಡಿಸಲಾಗಿದೆ. ಜಿಎಲ್ಇ 53 ಕೂಪೆ ಎಎಂಜಿ ರೈಡ್ ಕಂಟ್ರೋಲ್ ಪ್ಲಸ್ ಏರ್ ಸಸ್ಪೆಂಕ್ಷನ್ ಅನ್ನು ಹೊಂದಿದೆ. ಇದು ಕಂಫರ್ಟ್, ಸ್ಪೋರ್ಟ್ ಮತ್ತು ಸ್ಪೋರ್ಟ್ ಪ್ಲಸ್ ಎಂಬ ಮೂರು ಮೋಡ್ ಗಳನ್ನು ಒಳಗೊಂಡಿದೆ.
2020ರ ಮರ್ಸಿಡಿಸ್-ಎಎಂಜಿ ಜಿಎಲ್ಇ 53 ಕೂಪೆ ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಕ್ಸ್6 ಎಂ ಮತ್ತು ಪೋರ್ಷೆ ಕೇಯೆನ್ ಕೂಪೆ ಕಾರುಗಳಿಗೆ ಪೈಪೋಟಿ ನೀಡುತ್ತದೆ.