ಅನಾವರಣವಾಯ್ತು ಹೊಸ ಮರ್ಸಿಡಿಸ್-ಎಂಎಂಜಿ ಜಿಟಿ ಬ್ಲ್ಯಾಕ್ ಸೀರೀಸ್ ಸ್ಪೋರ್ಟ್ಸ್ ಕಾರು

ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿ ಮರ್ಸಿಡಿಸ್ ಬೆಂಝ್ ತನ್ನ ಹೊಸ ಮರ್ಸಿಡಿಸ್-ಎಂಎಂಜಿ ಜಿಟಿ ಬ್ಲ್ಯಾಕ್ ಸೀರೀಸ್ ಸ್ಪೋರ್ಟ್ಸ್ ಕಾರನ್ನು ಅನಾವರಣಗೊಳಿಸಿದೆ. ಈ ಹೊಸ ಮರ್ಸಿಡಿಸ್-ಎಂಎಂಜಿ ಜಿಟಿ ಬ್ಲ್ಯಾಕ್ ಸೀರೀಸ್ ಕಾರು ಪವರ್ ಫುಲ್ ವಿ8 ಎಂಜಿನ್ ಅನ್ನು ಒಳಗೊಂಡಿದೆ.

ಅನಾವರಣವಾಯ್ತು ಹೊಸ ಮರ್ಸಿಡಿಸ್-ಎಂಎಂಜಿ ಜಿಟಿ ಬ್ಲ್ಯಾಕ್ ಸೀರೀಸ್ ಸ್ಪೋರ್ಟ್ಸ್ ಕಾರು

ಮರ್ಸಿಡಿಸ್-ಎಂಎಂಜಿ ಜಿಟಿ ಬ್ಲ್ಯಾಕ್ ಸೀರೀಸ್ ಸ್ಪೋರ್ಟ್ಸ್ ಕಾರಿನಲ್ಲಿ ಟ್ವಿನ್-ಟರ್ಬೋಚಾರ್ಜ್ಡ್ 4.0-ಲೀಟರ್ ವಿ8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 730 ಬಿಹೆಚ್‍ಪಿ ಪವರ್ ಮತ್ತು 800 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಜಿಟಿ ಬ್ಲ್ಯಾಕ್ ಸೀರೀಸ್ ಸ್ಪೋರ್ಟ್ಸ್ ಕಾರು ತನ್ನ ಸರಣಿಯಲ್ಲಿರುವ ಜಿಟಿ ಆರ್ ಪ್ರೊ ಮಾದರಿಗಿಂತ 145 ಬಿಹೆಚ್‍ಪಿ ಪವರ್ ಮತ್ತು 100 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ಹೊಸ ಮರ್ಸಿಡಿಸ್-ಎಂಎಂಜಿ ಜಿಟಿ ಬ್ಲ್ಯಾಕ್ ಸೀರೀಸ್ ಸ್ಪೋರ್ಟ್ಸ್ ಕಾರು

ಹೊಸ ಎಂಜಿನ್ ಸಾಮಾನ್ಯ ಆವೃತ್ತಿಗಳಿಗಿಂತ ಭಿನ್ನವಾಗಿ ರೇಸಿಂಗ್-ಸ್ಪೆಕ್ ಫ್ಲಾಟ್-ಪ್ಲೇನ್ ಕ್ರ್ಯಾಂಕ್ಶಾಫ್ಟ್ ಅನ್ನು ಒಳಗೊಂಡಿದೆ. ಈ ಎಂಜಿನ್ ಹೆಚ್ಚಿನ ಪವರ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ ದೊಡ್ಡ ಟರ್ಬೊಗಳು, ಬೀಫಿಯರ್ಇಂಟರ್ ಕೂಲರ್ಮತ್ತು ಅಪ್‌ರೇಟೆಡ್ ಎಕ್ಸಾಸ್ಟ್ ಸಿಸ್ಟಂಗಳನ್ನು ಒಳಗೊಂಡಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು ಹೊಸ ಮರ್ಸಿಡಿಸ್-ಎಂಎಂಜಿ ಜಿಟಿ ಬ್ಲ್ಯಾಕ್ ಸೀರೀಸ್ ಸ್ಪೋರ್ಟ್ಸ್ ಕಾರು

ಈ ಮರ್ಸಿಡಿಸ್-ಎಂಎಂಜಿ ಜಿಟಿ ಬ್ಲ್ಯಾಕ್ ಸೀರೀಸ್ ಸ್ಪೋರ್ಟ್ಸ್ ಕಾರು ಕೇವಲ 3.2 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಇನ್ನು 9.0 ಸೆಕೆಂಡಿನಲ್ಲಿ 0 ದಿಂದ 200 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ಅನಾವರಣವಾಯ್ತು ಹೊಸ ಮರ್ಸಿಡಿಸ್-ಎಂಎಂಜಿ ಜಿಟಿ ಬ್ಲ್ಯಾಕ್ ಸೀರೀಸ್ ಸ್ಪೋರ್ಟ್ಸ್ ಕಾರು

ಈ ಹೊಸ ಬ್ಲ್ಯಾಕ್ ಸೀರೀಸ್ ಸ್ಪೋರ್ಟ್ಸ್ ಕಾರಿನಲ್ಲಿ 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಅಳವಡಿಸಿದೆ. ಈ ಗೇರ್‌ಬಾಕ್ಸ್ ಅನ್ನು ಉತ್ತಮ ಶಿಫ್ಟಿಂಗ್ ಪ್ರತಿಕ್ರಿಯೆಗಾಗಿ ನವೀಕರಿಸಿದೆ.

MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಅನಾವರಣವಾಯ್ತು ಹೊಸ ಮರ್ಸಿಡಿಸ್-ಎಂಎಂಜಿ ಜಿಟಿ ಬ್ಲ್ಯಾಕ್ ಸೀರೀಸ್ ಸ್ಪೋರ್ಟ್ಸ್ ಕಾರು

ಈ ಕಾರಿನಲ್ಲಿ ರೂಫ್ ಮತ್ತು ಟೈಲ್‌ಗೇಟ್ ಅನ್ನು ಹೊರತು ಇತರ ಹೆಚ್ಚಿನ ಅಂಶಗಳನ್ನು ಕಾರ್ಬನ್ ಫೈಬರ್ ನಿಂದ ತಯಾರಿಸಲಾಗಿದೆ. ಇದರಿಂದ ಜಿಟಿ ಪ್ರೊ ಮಾದರಿಗಿಂತ ಹೊಸ ಜಿಟಿ ಬ್ಲ್ಯಾಕ್ ಸೀರೀಸ್ ಸ್ಪೋರ್ಟ್ಸ್ ಕಾರಿನ ತೂಕದಲ್ಲಿ ಇಳಿಕೆ ಕಂಡಿರಬಹುದು.

ಅನಾವರಣವಾಯ್ತು ಹೊಸ ಮರ್ಸಿಡಿಸ್-ಎಂಎಂಜಿ ಜಿಟಿ ಬ್ಲ್ಯಾಕ್ ಸೀರೀಸ್ ಸ್ಪೋರ್ಟ್ಸ್ ಕಾರು

ಇನ್ನು ಮರ್ಸಿಡಿಸ್ ಬೆಂಝ್ ಕಂಪನಿಯು ಈ ವರ್ಷದ ಮೇ ತಿಂಗಳಲ್ಲಿ 2020ರ ಎಎಂಜಿ ಜಿಟಿ-ಆರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. 2020ರ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ-ಆರ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.48 ಕೋಟಿಗಳಾಗಿದೆ.

MOST READ: ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಅನಾವರಣವಾಯ್ತು ಹೊಸ ಮರ್ಸಿಡಿಸ್-ಎಂಎಂಜಿ ಜಿಟಿ ಬ್ಲ್ಯಾಕ್ ಸೀರೀಸ್ ಸ್ಪೋರ್ಟ್ಸ್ ಕಾರು

2020ರ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ-ಆರ್ ಕಾರಿನಲ್ಲಿ ಅದೇ 4.0-ಲೀಟರ್ ಬೈ-ಟರ್ಬೊ ವಿ 8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 577 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಜೊತೆಗೆ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಅನಾವರಣವಾಯ್ತು ಹೊಸ ಮರ್ಸಿಡಿಸ್-ಎಂಎಂಜಿ ಜಿಟಿ ಬ್ಲ್ಯಾಕ್ ಸೀರೀಸ್ ಸ್ಪೋರ್ಟ್ಸ್ ಕಾರು

ಇನ್ನು ಹೊಸ ಮರ್ಸಿಡಿಸ್-ಎಂಎಂಜಿ ಜಿಟಿ ಬ್ಲ್ಯಾಕ್ ಸೀರೀಸ್ ಸ್ಪೋರ್ಟ್ಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಮುಂದಿನ ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಪೋರ್ಟ್ಸ್ ಕಾರನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.

Most Read Articles

Kannada
English summary
Mercedes-AMG GT Black Series Unveiled. Read In Kannada
Story first published: Thursday, July 16, 2020, 17:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X